- ಸಿಎಂ ಬದಲಾವಣೆ, ಅಧಿಕಾರ ಹಂಚಿಕೆ (upcoming budget by siddaramaiah) ಗಾಸಿಪ್‌ಗಳಿಗೆ ಪರೋಕ್ಷವಾಗಿ ಬ್ರೇಕ್ ಹಾಕಿದ ಸಿಎಂ
- ಮುಂದಿನ ಬಜೆಟ್ ಕೂಡ ನಾನೇ ಮಂಡಿಸ್ತೇನೆ ಎಂದ ಸಿಎಂ ಸಿದ್ದರಾಮಯ್ಯ
- ಪವರ್ ವಿಚಾರ ಮುಖ್ಯ ಅಲ್ಲ. ಶ್ರಮಕ್ಕೆ ಫಲ ಸಿಗುತ್ತದೆ ಎಂದು ಪ್ರತಿಫಲದ ಮಂತ್ರ ಪಠಿಸಿದ ಡಿಕೆಶಿ
Bengaluru: ರಾಜ್ಯ ಕಾಂಗ್ರೆಸ್‌ನಲ್ಲಿ ಕಳೆದ ಕೆಲವು ವಾರಗಳಿಂದ ಸಿಎಂ (upcoming budget by siddaramaiah) ಬದಲಾವಣೆ,
ನವೆಂಬರ್ ಕ್ರಾಂತಿ, ಅಧಿಕಾರ ಹಂಚಿಕೆ, ಪಕ್ಷದ ಒಳಕಿಚ್ಚು ಎಂಬ ಚರ್ಚೆಗಳು ವೇಗ ಪಡೆದಿದ್ದವು.
ರಾಜ್ಯ ರಾಜಕೀಯದಲ್ಲಿ ವಿವಿಧ ಊಹಾಪೋಹಗಳು ಹಬ್ಬುತ್ತಿದ್ದಂತೆಯೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನೇರವಾಗಿ ಪ್ರತಿಕ್ರಿಯಿಸದೇ ಪರೋಕ್ಷವಾಗಿ ಬಹು ದೊಡ್ಡ ಸಂದೇಶವನ್ನು ನೀಡಿದ್ದಾರೆ.

ಬೆಂಗಳೂರಿನಲ್ಲಿ ನಡೆದ ಹಾವನೂರು ವರದಿ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ (upcoming budget by siddaramaiah) ಮಾತನಾಡಿದ
ಅವರು, “ಮುಂದಿನ ಬಜೆಟ್ ನಾನೇ ಮಂಡಿಸ್ತೇನೆ” ಎಂಬ ಹೇಳಿಕೆ ಮೂಲಕ, ತಮ್ಮ ಮುಂದಿನ ರಾಜಕೀಯ ಸ್ಥಾನಮಾನವನ್ನು ಬಹುತೇಕ
ಸ್ಪಷ್ಟಪಡಿಸಿದ್ದಾರೆ. ಈ ಹೇಳಿಕೆ ಕಾಂಗ್ರೆಸ್ ಸರ್ಕಾರದ ಒಳಗಿನ ನಾಯಕತ್ವ ಬದಲಾವಣೆ ಚರ್ಚೆಗೂ, ಅಧಿಕಾರ ಹಂಚಿಕೆ ಗೊಂದಲಕ್ಕೂ ಒಂದು
ರೀತಿಯಲ್ಲಿ ಕಡಿವಾಣ ಹಾಕಿದಂತಾಗಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ, ಪರಿಶಿಷ್ಟ ಜಾತಿ ಹಿನ್ನೆಲೆಯಿಂದ ಬಂದ ಹಾವನೂರು ಸೇರಿದಂತೆ ತಮ್ಮ ಸ್ವಂತ ಜೀವನದ ಅನುಭವಗಳನ್ನು
ಹಂಚಿಕೊಂಡರು. ಪರಿಶಿಷ್ಟ ಜಾತಿಯಲ್ಲಿ ಹುಟ್ಟಿದಾಗ ನಿಂದನೆ ಮತ್ತು ಅವಮಾನ ಅನಿವಾರ್ಯ. ನನಗೂ ಅದು ಅನುಭವವಾಗಿದೆ ಎಂದು
ಹೇಳಿದ್ದಾರೆ.
ಹಣಕಾಸು ಸಚಿವರಾಗಿದ್ದಾಗ ತಾವು ಎದುರಿಸಿದ ಟೀಕೆಗಳನ್ನು ನೆನಪಿಸಿಕೊಂಡ ಸಿಎಂ, ನೂರು ಕುರಿ ಲೆಕ್ಕ ಹಾಕಲು ಬರಲ್ವಂತೆ ಎಂದರು.
ಆದರೆ ನಾನು ಸವಾಲಾಗಿ ಸ್ವೀಕರಿಸಿದ್ದೆ ಎಂದು ಹೇಳಿದರು. ಇನ್ನು 17ನೆಯ ಬಜೆಟ್ ಕೂಡ ನಾನೇ ಮಂಡಿಸುತ್ತೇನೆ ಎಂದು ಮುಖ್ಯಮಂತ್ರಿಯಾಗಿ ತಾನೇ ಮುಂದುವರೆಯುತ್ತೇನೆ ಎಂಬ ಸಂದೇಶ ನೀಡಿದ್ದಾರೆ.
ಇನ್ನು ನಂತರದಲ್ಲಿ ಮಾತನಾಡಿದ ಡೆಪ್ಯುಟಿ ಸಿಎಂ ಡಿ.ಕೆ. ಶಿವಕುಮಾರ್ ಅವರು ನಾನು ಇಲ್ಲಿ ಪರ್ಮನೆಂಟ್ ಅಲ್ಲ.
2028ರಲ್ಲಿ ಕಾಂಗ್ರೆಸ್ ಮತ್ತೆ ಗೆಲ್ಲಬೇಕು ಅಧಿಕಾರಕ್ಕಿಂತ ಪಕ್ಷ ಮುಖ್ಯ ಎಂದು ಹೇಳಿದ್ದಾರೆ. ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಹಿಂದೆ ಸರಿಯಲು ತಾವು
ಬಯಸಿದ್ದರೂ, ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿಯರಿಂದ ಮುಂದುವರೆಯುವ ಸೂಚನೆ ಬಂದಿತ್ತು ಎಂದು ಹೇಳಿದ್ದಾರೆ.
ನಾನು ಅಧಿಕಾರದಲ್ಲಿರೋದು ಮುಖ್ಯ ಅಲ್ಲ, ಹೊಸವರಿಗೆ ಅವಕಾಶ ಕೊಡಬೇಕು ಎಂದು ಮಾತನಾಡಿ ತ್ಯಾಗಭಾವ ತೋರಿದ್ದಾರೆ.
ಒಟ್ಟಿನಲ್ಲಿ 2028 ಚುನಾವಣೆ ಮೊದಲು ಕಾಂಗ್ರೆಸ್ ನಾಯಕತ್ವ ಸ್ಪಷ್ಟವಾಗಲು ಪ್ರಯತ್ನಿಸುತ್ತಿರುವುದು ಈ ಭಾಷಣಗಳಿಂದ ಗೋಚರವಾಗಿದೆ.
ರಾಜ್ಯ ರಾಜಕೀಯದ ಮುಂದಿನ ಹೆಜ್ಜೆ ಯಾವ ದಿಕ್ಕಿನಲ್ಲಿ ಸಾಗುತ್ತದೆ ಎಂಬ ಕುತೂಹಲ ಮುಂದುವರಿದರೂ, ಸಿಎಂ ಸಿದ್ದರಾಮಯ್ಯ ಅವರು ಸಿಎಂ
ಸ್ಥಾನದಲ್ಲಿಯೇ ಮುಂದುವರಿಯುವ ಸೂಚನೆಯಂತೂ ಸ್ಪಷ್ಟಗೊಂಡಿದೆ.
ಇದನ್ನು ಓದಿ : ಬೆಂಗಳೂರಿನಲ್ಲಿ ಟ್ರಾಫಿಕ್ ದಂಡಕ್ಕೆ ಮತ್ತೆ 50% ರಿಯಾಯಿತಿ: ವಾಹನ ಸವಾರರಿಗೆ ರಾಜ್ಯ ಸರ್ಕಾರದಿಂದ ಬಿಗ್ ಆಫರ್