ಬೆಂಗಳೂರು, ಮೇ. 26: ಚಿತ್ರರಂಗದಲ್ಲಿ ತಮ್ಮದೇ ಅಭಿಮಾನಿ ಬಳಗವನ್ನು ಹೊಂದಿರುವ ಹಾಗೂ ಸದ್ಯ ರಾಜಕೀಯ ವಿಚಾರಗಳಿಗಾಗಿ ಹೆಚ್ಚು ಸುದ್ದಿಯಲ್ಲಿರುವ ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಟ್ವಿಟರ್ನಲ್ಲಿ 1 ಮಿಲಿಯನ್ ಫಾಲೋವರ್ಸ್ ಇದ್ದಾರೆ.
ಸಿನಿಮಾ ರಂಗದಲ್ಲಿ ತಮ್ಮ ನಟನೆ, ನಿರ್ದೇಶನದ ಮೂಲಕ ಅಭಿಮಾನಿಗಳ ಮನಗೆದ್ದಿರುವ ರಿಯಲ್ ಸ್ಟಾರ್ ಉಪೇಂದ್ರ, ಬಹುದೊಡ್ಡ ಅಭಿಮಾನಿ ಬಳಗ ಹೊಂದಿದ್ದಾರೆ. ರಾಜಕೀಯ ಕ್ಷೇತ್ರದ ಬಗೆಗೂ ಒಲವು ತೋರಿರುವ ಉಪ್ಪಿ, ಪ್ರಜಾಕಿಯ ಮೂಲಕ ಹೊಸ ಬದಲಾವಣೆ ಮೂಡಿಸೋ ನಿರೀಕ್ಷೆ ಹುಟ್ಟಿಸಿ ಹಲವರ ಮನಗೆದ್ದಿದ್ದಾರೆ.
ಹೀಗಾಗಿ ಸಾಮಾಜಿಕ ಜಾಲತಾಣ ಟ್ವಿಟರ್ ನಲ್ಲಿ ಸದಾ ಸಕ್ರಿಯರಾಗಿರುವ ಉಪೇಂದ್ರ, ನಟ ಸುದೀಪ್ ನಂತರದ ಸ್ಥಾನದಲ್ಲಿ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. ಹೀಗಾಗಿ ಸದ್ಯ ಕಿಚ್ಚ ಸುದೀಪ್ ಟ್ವಿಟರ್ನಲ್ಲಿ 2 ಮಿಲಿಯನ್ಗೂ ಹೆಚ್ಚು ಫಾಲೋವರ್ಸ್ ಹೊಂದಿದ್ದಾರೆ. ಈಗ ಉಪ್ಪಿ 1 ಮಿಲಿಯನ್ ಫಾಲೋವರ್ಸ್ ಹೊಂದುವ ಮೂಲಕ ಎರಡನೆ ಸ್ಥಾನದಲ್ಲಿ ಇದ್ದಾರೆ. ಲಾಕ್ಡೌನ್ನಲ್ಲಿ ಉಪ್ಪಿ ಸಮಾಜ ಸೇವೆಗೆ ಜನ ಮನಸೋತಿದ್ದಾರೆ. ತಮ್ಮನ್ನು ಹಿಂಬಾಲಿಸುತ್ತಿರುವವರಿಗೆ ಉಪೇಂದ್ರ ಕೃತಜ್ಞತೆ ಸಲ್ಲಿಸಿದ್ದಾರೆ.