- 2027ರೊಳಗೆ ಸಿಲ್ಕ್‌ಬೋರ್ಡ್–ಕೆಆರ್ ಪುರಂ ಮಾರ್ಗ (upgrade bengaluru outerring roads) ವೇಗದ ಪ್ರಯಾಣಕ್ಕೆ ಸಿದ್ಧ
- ಟ್ರಾಫಿಕ್ ಸಮಸ್ಯೆಯಿಂದ ನಗರದ ಹೊರಗೆ ಹೋಗುವ ಮಾತುಗಳನ್ನಾಡುತ್ತಿದ್ದ ಐಟಿ ಕಂಪನಿಗಳಿಗೆ ಹೊಸ ಭರವಸೆ
- ಬೆಂಗಳೂರೂ ಐಟಿ ಕಾರಿಡಾರ್ ಅಭಿವೃದ್ಧಿಗೆ ಸರ್ಕಾರ ಬರೋಬ್ಬರಿ 400 ಕೋಟಿ ರೂ. ಘೋಷಣೆ
Bengaluru: ಬೆಂಗಳೂರು ಎಂದರೆ ಟ್ರಾಫಿಕ್… ಟ್ರಾಫಿಕ್ ಎಂದರೆ ಸಿಲ್ಕ್‌ಬೋರ್ಡ್! (Silkboard) ಈ ಮಾತು (upgrade bengaluru outerring roads) ಬಹಳ ವರ್ಷಗಳಿಂದ ಬೆಂಗಳೂರಿನ ಐಟಿ ಉದ್ಯೋಗಿಗಳ ನೋವಿನ ನುಡಿಯಾಗಿದೆ.
ಬೆಳಗ್ಗೆ ಕೆಲಸಕ್ಕೆ ಹೊರಟರೂ ಟ್ರಾಫಿಕ್‌ನಲ್ಲಿ (Traffic) ಗಂಟೆಗಟ್ಟಲೆ ಸಿಲುಕಬೇಕು, ಸಂಜೆ ಮನೆಗೆ ಬರಲು ಮತ್ತೊಮ್ಮೆ ಅದೇ ಹಾಡು.

ವಿಶೇಷವಾಗಿ ಸಿಲ್ಕ್‌ಬೋರ್ಡ್ ಜಂಕ್ಷನ್ (Silkboard Junction) , ಕೆಆರ್ ಪುರಂ, ಔಟರ್ ರಿಂಗ್ ರೋಡ್ (Outer Ring Road) ಪ್ರದೇಶಗಳಲ್ಲಿ ದಿನವೂ ಲಕ್ಷಾಂತರ ಐಟಿ ಉದ್ಯೋಗಿಗಳು 2–3 ಗಂಟೆಗಳ ಕಾಲ ವಾಹನಗಳಲ್ಲಿ ನಿಂತುಕೊಳ್ಳಬೇಕಾದ ಸ್ಥಿತಿ ನಿರ್ಮಾಣವಾಗಿದೆ.
ಈ ಸಮಸ್ಯೆ ಇಷ್ಟು ತೀವ್ರವಾಗುತ್ತಿದ್ದಂತೆ ಕೆಲವು ಐಟಿ ಕಂಪನಿಗಳು (IT Company) ಬೆಂಗಳೂರನ್ನೇ ಬಿಟ್ಟು ಹೋಗುವ ಚಿಂತೆ ವ್ಯಕ್ತಪಡಿಸುತ್ತಿದ್ದವು. ಆದರೆ ಈಗ, ಈ ಸಂಕಷ್ಟಕ್ಕೆ ಅಂತ್ಯ ಕಾಣುವ ದಿನಗಳು ದೂರದಲ್ಲಿಲ್ಲ.
ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ (D.K.Shivakumar) ತಮ್ಮ ಮುಂದಾಳತ್ವದಲ್ಲಿ ಐಟಿ ಕಾರಿಡಾರ್ ಅಭಿವೃದ್ಧಿಗೆ ಭರ್ಜರಿ 400 ಕೋಟಿಯ ಮಹತ್ತರ ಯೋಜನೆ ಘೋಷಿಸಿದ್ದು, ಇದು ಬೆಂಗಳೂರು ಐಟಿ ವಲಯಕ್ಕೆಸಿಕ್ಕ ದೊಡ್ಡ ಮಟ್ಟದ ಗೆಲುವಾಗಿದೆ.
ಈ ಯೋಜನೆಯ ಪ್ರಮುಖ ಭಾಗ ಸಿಲ್ಕ್‌ಬೋರ್ಡ್ ಜಂಕ್ಷನ್‌ನಿಂದ ಕೆಆರ್ ಪುರಂವರೆಗಿನ (upgrade bengaluru outerring roads) ಪ್ರಮುಖ ಐಟಿ ಮಾರ್ಗದ ಪರಿಷ್ಕರಣೆ.
ಸುಮಾರು 20 ಕಿಲೋಮೀಟರ್ (Kilometer) ಉದ್ದದ ಈ ರಸ್ತೆ ಈಗಾಗಲೇ ಟ್ರಾಫಿಕ್ ಜಾಮ್ ಅನುಭವಿಸುತ್ತಿರುವ ಪ್ರದೇಶವಾಗಿದೆ.
ಬೆಳಗ್ಗೆ 8 ರಿಂದ 11ರವರೆಗೂ, ಸಂಜೆ 5 ರಿಂದ 10ರವರೆಗೆ ಔಟರ್ ರಿಂಗ್ ರೋಡ್‌ನಲ್ಲಿ ವಾಹನ ಸಂಚಲನವೇ ಅಸಾಧ್ಯವಾಗುವಂತಹ ಜಾಮ್ ಪರಿಸ್ಥಿತಿ ಉಂಟಾಗುತ್ತದೆ.
ಇಲೆಕ್ಟ್ರಾನಿಕ್ ಸಿಟಿ, ಮನ್ಯಾತಾ ಟೆಕ್ ಪಾರ್ಕ್ (Manyata Tech Park) , ಬಾಗ್ಮನೆ ಟೆಕ್ ಪಾರ್ಕ್ (Bagmane Tech Park) ಸೇರಿದಂತೆ ಹಲವು ಐಟಿ ಕೇಂದ್ರಗಳಿಗೆ ಪ್ರಯಾಣಿಸುವವರಿಗೆ ಇದು ಪ್ರತಿದಿನದ ಕಿರುಕುಳವಾಗಿತ್ತು.
ಡಿಕೆಶಿಯವರ 400 ಕೋಟಿ ರೂ. ರಸ್ತೆ ಅಭಿವೃದ್ಧಿಯ ನಿರ್ಧಾರದಿಂದ, ಈ ಭಾಗದಲ್ಲಿ ವಿಶ್ವದರ್ಜೆಯ ಸೌಲಭ್ಯಗಳಿರುವ, ವೇಗವಾದ ಸಂಚಾರಕ್ಕೆ ಅನುಕೂಲವಾಗುವ ರಸ್ತೆ ನಿರ್ಮಾಣವಾಗಲಿದೆ ಎನ್ನಲಾಗಿದೆ.
ಪ್ರಾಜೆಕ್ಟ್ ಪೂರ್ಣಕ್ಕೆ ಸುಮಾರು 18–24 ತಿಂಗಳು ಬೇಕಾಗಿದ್ದು 2027ರೊಳಗೆ ಈ ಮಾರ್ಗ ಸಂಪೂರ್ಣವಾಗಿ ನಿರೀಕ್ಷೆಯಿದೆ.
ಇದನ್ನು ಓದಿ ಹೊಸ ವರ್ಷಾಚರಣೆ ಹಿನ್ನೆಲೆ: ಬೆಂಗಳೂರಿನ ಪಬ್, ಹೋಟೆಲ್‌ಗಳಿಗೆ ಸ್ಟ್ರಿಕ್ಟ್ ರೂಲ್ಸ್