UPI Payment Limit Raised For Consumers: Up To 5 Lakh Transactions Can Be Done At One Time!
Bengaluru: ಡಿಜಿಟಲ್ ಇಂಡಿಯಾಕ್ಕೆ (Digital India) ಕೇಂದ್ರ ಸರ್ಕಾರ ಹೆಚ್ಚಿನ ಒತ್ತು ಕೊಡಲಾರಂಬಿಸಿದ ಮೇಲೆ ಯುಪಿಐ ಸೇವೆ ಬೇಡಿಕೆ ಹೆಚ್ಚಾಗಿದೆ.ಅದರಂತೆ ಪಾವತಿದಾರರ ಸಂಖ್ಯೆ ಹೆಚ್ಚಾಗಿದೆ. ದಿನನಿತ್ಯದ ವ್ಯವಹಾರವನ್ನು ಯುಪಿಐ (UPI) ಸೇವೆ ಸುಲಭಗೊಳಿಸಿದೆ. ಹೀಗಾಗಿ ಹೆಚ್ಚು ಹೆಚ್ಚು ಜನರು ಈ ಸೇವೆಯನ್ನು ಬಳಸುತ್ತಿದ್ದಾರೆ. ಇದೀಗ ಬಳಕೆದಾರರು ಏರಿಕೆಯಾದಂತೆ ಯುಪಿಐ ಸೇವೆಯ ಮಿತಿಯೂ ಕೂಡ ಹೆಚ್ಚಾಗಿದೆ.

ಇಂದಿನಿಂದ UPI ಪಾವತಿ ಮಿತಿಯನ್ನು ₹5 ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ. ಕೆಲವು ನಿರ್ದಿಷ್ಟ ಉದ್ದೇಶಗಳಿಗೆ ಸೀಮಿತವಾಗಿ ಏರಿಕೆ ಮಾಡಲಾಗಿದೆ. ತೆರಿಗೆ ಪಾವತಿ, ಆಸ್ಪತ್ರೆ ಮತ್ತು ಶೈಕ್ಷಣಿಕ ಸಂಸ್ಥೆಗಳು, ಐಪಿಒಗಳು, ರಿಸರ್ವ್ ಬ್ಯಾಂಕ್ನ (Reserve Bank) ನೇರ ರಿಟೇಲ್ ಯೋಜನೆಗಳಿಗೆ ಈ ಮಿತಿ ಏರಿಕೆ ಅನ್ವಯವಾಗುತ್ತದೆ. ಹಾಗಾಗಿ ಕೆಲವು ಸೇವೆಗಳಿಗೆ ಹೆಚ್ಚಿನ ಹಣ ಪಾವತಿಸುವ ಸಂದರ್ಭದಲ್ಲಿ ಬಳಸಬಹುದಾಗಿದೆ.
ಸದ್ಯ ಸಾಮಾನ್ಯ ವಹಿವಾಟುಗಳಿಗೆ 1 ಲಕ್ಷ ರೂಪಾಯಿ ಮಿತಿಯನ್ನಿರಿಸಲಾಗಿತ್ತು. ಬಂಡವಾಳ ಮಾರುಕಟ್ಟೆ, ವಿಮೆ, ವಿದೇಶದಿಂದ ಬರುವ ಒಳಪಾವತಿಗೆ ₹2 ಲಕ್ಷ ಇದೆ. ಆದರೀಗ ಈ ಮಿತಿ ಐದು ಲಕ್ಷ ರೂಪಾಯಿಗೆ ಏರಿಕೆ ಮಾಡಲಾಗಿದೆ. ಗ್ರಾಹಕರು ಹೆಚ್ಚಿನ ಮಿತಿ ಬಳಕೆ ಮಾಡುವ ಮುನ್ನ ಸಂಬಂಧಿಸಿದ ಬ್ಯಾಂಕ್ಗಳಲ್ಲಿ, ಯುಪಿಐ ಆ್ಯಪ್ಗಳಲ್ಲಿ ಪರಿಶೀಲಿಸುವಂತೆ ಎನ್ಸಿಪಿಐ (National Payments Corporation of India) ಸೂಚನೆ ನೀಡಿದೆ.
UPI Payment Limit Raised For Consumers Kannada News
Bengaluru: The demand for UPI service has increased since the central government started giving more emphasis to Digital India. Accordingly, the number of payers has increased. UPI service has made everyday transactions easy. So more and more people are using this service. Now as the number of users has increased, so has the UPI service limit.
UPI payment limit has been increased to ₹5 lakh from today. Raises are limited to certain specific purposes. This limit hike is applicable for tax payment, hospital and educational institutions, IPOs, direct retail schemes of Reserve Bank. So it can be used while paying more for some services.
At present, there was a limit of Rs 1 lakh for general transactions. ₹2 lakh for capital market, insurance, inflows from abroad. However, this limit has been increased to five lakh rupees. NCPI (National Payments Corporation of India) has instructed the customers to check with the respective banks and UPI apps before using the higher limit.