ಸದಾ ಸಾಮಾಜಿಕ ಜಾಲತಾಣದಲ್ಲಿ ಎಂದಿನಂತೆ ಸಕ್ರಿಯರಾಗಿರುವ ಉರ್ಫಿ ತಮ್ಮ ವಿಭಿನ್ನ, ವಿವಿಧ ಉಡುಪುಗಳಿಂದ ಮತ್ತು ವಿವಾದಾತ್ಮಕ ಹೇಳಿಕೆಯಿಂದ ಯಾವಾಗಲೂ ಸುದ್ದಿಯಲ್ಲಿ ಇರುತ್ತಾರೆ. ಸದಾ ಬಾಲಿವುಡ್ ಅಂಗಳದಲ್ಲಿ ಸದ್ದು ಮಾಡುವ ಚೆಲುವೆ ಉರ್ಫಿ ಜಾದವ್ ಒಂದು ಹೊಸ ಹೈಡ್ರಾಮವನ್ನೇ ಶುರು ಮಾಡಿಕೊಂಡಿದ್ದಾರೆ. ಅಷ್ಟಕ್ಕೂ ಆ ಹೈಡ್ರಾಮಾ ಏನು ಗೊತ್ತಾ? ಮುಂದೆ ಓದಿ. ಯಾವಾಗಲೂ ಕ್ಯಾಮರಾ ಮುಂದೆ ಬಂದ ನಂತರ, ತನ್ನ ಉಡುಪುಗಳಿಂದ ಮತ್ತು ಬೇಡದ ಹೇಳಿಕೆಗಳನ್ನು ಕೊಟ್ಟು ಸೋಶಿಯಲ್ ಮೀಡಿಯಾದಂತಹ ವೇದಿಕೆಗಳಲ್ಲಿ ಕೆಂಗಣ್ಣಿಗೆ ಗುರಿಯಾಗುತ್ತಾರೆ.

ಇದೀಗ ಉರ್ಫಿ ತನ್ನ ಸ್ನೇಹಿತನೊಂದಿಗೆ ಕಾಣಿಸಿಕೊಂಡಿದ್ದಾರೆ. ಕ್ಯಾಮರಾ ನನ್ನನ್ನು ನೋಡುತ್ತಿದೆ ಎಂಬುದನ್ನು ಖಚಿತ ಪಡಿಸಿಕೊಂಡು ಸ್ಥಳದಲ್ಲಿ ದೊಡ್ಡ ಹೈಡ್ರಾಮವನ್ನೇ ಕ್ರಿಯೇಟ್ ಮಾಡಿದ್ದಾರೆ. ತನಗಿಂತ ಬಹಳ ದೊಡ್ಡದಾದ ಬಟ್ಟೆಯನ್ನು ಧರಿಸಿ ಮೊಬೈಲ್ ನೋಡ್ಕೊಂಡು ಅಳುತ್ತಿರುವ ಹಾಗೆ ನಟಿಸಿದ್ದಾರೆ. ಉರ್ಫಿ ನಿಜವಾಗಲೂ ದುಃಖತಪ್ತರು ಆಗಿದ್ದಾರೋ ಇಲ್ಲವೋ ಎಂಬುದು ಗೊತ್ತಿಲ್ಲ. ಆದರೆ ಅವರ ಮುಖ ಮಾತ್ರ ಕೆಂಪುಮೆಣಸಿನಕಾಯಿ ಹಾಗೆ ಆಗಿತ್ತು.

ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಅದನ್ನು ನೋಡಿದ ಸಾರ್ವಜನಿಕರು ಇದು ದೊಡ್ಡ ಹೈಡ್ರಾಮಾ, ಇದು ಫೇಕ್ ಹಾಗೂ ಈಕೆಯು ಕೂಡ ದೊಡ್ಡ ಫೇಕ್ ಎಂದು ಕರೆಯುತ್ತಿದ್ದಾರೆ. ರಾಖಿ ಸಾವಂತ್ ರೀತಿಯೇ ತಾನು ವಿವಾದ ಮಾಡಿಕೊಂಡು ಬಿಗ್ ಬಾಸ್ ಗೆ ಎಂಟ್ರಿ ಕೊಡುವ ಯೋಜನೆಯನ್ನು ಹೊಂದಿದ್ದಾರೆ ಎಂದು ನೆಟ್ಟಿಗರು ಕಮೆಂಟ್ ಮಾಡುತ್ತಿದ್ದಾರೆ ಮತ್ತು ಸ್ನೇಹಿತನ ಜೊತೆ ಮಾತನಾಡುವಾಗ ಕ್ಯಾಮರಾ ಕಡೆ ಮುಖ ಮಾಡಿದ್ದಾರೆ ಎನ್ನುತ್ತಿದ್ದಾರೆ.
https://www.instagram.com/reel/CZUF6I8FHl2/?utm_source=ig_web_copy_link
ಯಾವಾಗಲೂ ಟ್ರೆಂಡಿಂಗ್ ನಲ್ಲಿ ಇರಬೇಕು ಅನ್ನೋದು ಅವಳ ತಲೆಯಲ್ಲಿದೆ. ಇಂತಹ ಸನ್ನಿವೇಶವನ್ನು ಬಳಸಿಕೊಂಡು ಕ್ಯಾಮರಾಗೆ ಪೋಸ್ ಕೊಡುತ್ತಾರೆ ಅನ್ನೋದು ಜನರ ಅಭಿಪ್ರಾಯ ವ್ಯಾಪಾಕವಾಗಿ ವ್ಯಕ್ತವಾಗಿತ್ತಿದೆ. ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿರುವ ಪೈಕಿ ಉರ್ಫಿ ಕೂಡ ಪ್ರಮುಖರಾಗಿದ್ದಾರೆ.
- Preethu