Bangalore : ಉರಿಗೌಡ (Urigowda)-ನಂಜೇಗೌಡ ವಿವಾದಕ್ಕೆ ಆದಿಚಿಂಚುನಗಿರಿ ಮಠದ ನಿರ್ಮಲಾನಂದನಾಥ್ ಶ್ರೀಗಳು (Nirmalanandanatha Swamiji) ಪ್ರತಿಕ್ರಿಯಿಸಿದ್ದು ಬಿಜೆಪಿ (BJP) ನಾಯಕರಿಗೆ (Urigowda Nanjegowda controversy) ಖಡಕ್‌ಸೂಚನೆ ನೀಡಿದ್ದಾರೆ.

ಈ ಬಗ್ಗೆ ವಿಡಿಯೋವೊಂದನ್ನು ಬಿಡುಗಡೆ ಮಾಡಲಾಗಿದ್ದು, ಸಿಟಿ ರವಿ (CT Ravi), ಗೋಪಾಲಯ್ಯ, ಅಶ್ವಥ್‌ನಾರಾಯಣ ಸೇರಿದಂತೆ ಯಾರೇ ಆಗಿರಬಹುದು,
ಇತಿಹಾಸದಲ್ಲಿ ದಾಖಲಾಗಿರದ ಅಪ್ರಸ್ತುತ ವಿಚಾರಗಳನ್ನು ಇಟ್ಟುಕೊಂಡು ವಿವಾದ ಉಂಟು ಮಾಡಬಾರದು. ಇತಿಹಾಸದ ಹಿನ್ನಲೆಯ ವಿಚಾರಗಳನ್ನು ಅವರಿಗೆ ಮನದಟ್ಟು (Urigowda Nanjegowda controversy) ಮಾಡಿಕೊಡಲಾಗಿದೆ.
ಹೀಗಾಗಿ ಅವರು ಸುಮ್ಮನಾಗುತ್ತಾರೆ ಅಥವಾ ಸುಮ್ಮನಾಗಬೇಕೆಂದು ನಾವು ಭಾವಿಸುತ್ತೇವೆ. ಇನ್ನು ಕಲ್ಪನೆಯನ್ನಿಟ್ಟುಕೊಂಡು ಬರೆಯುವುದು ಕಾದಂಬರಿಯಾಗುತ್ತದೆ.
ಶಾಸನಗಳು ಮತ್ತು ಇತಿಹಾಸದ ಹಿನ್ನಲೆಯಲ್ಲಿ ಬರೆದಿರುವಂತದ್ದು, ಮುಂದಿನ ಪೀಳಿಗೆಗೆ ಒಂದಷ್ಟು ಶಕ್ತಿಯಾಗುತ್ತದೆ. ಈ ವಿಚಾರದಲ್ಲಿ ನಮಗೆ ಅಂತಹ ಯಾವುದೇ ಆಧಾರಗಳು ಕಾಣಸಿಗುವುದಿಲ್ಲ.
ಇದನ್ನೂ ಓದಿ : https://vijayatimes.com/mamata-banerjee-statement/
ಇಂತಹ ಹೇಳಿಕೆಗಳಿಂದ ಯುವಕರಲ್ಲಿ ಮತ್ತು ಸಮಕಾಲೀನ ಜಗತ್ತಿನಲ್ಲಿ ಗೊಂದಲಗಳನ್ನು ಸೃಷ್ಟಿಮಾಡಿ, ವ್ಯಕ್ತಿಗಳ ಶಕ್ತಿಯನ್ನು ಹಾಳು ಮಾಡಬಾರದು ಎಂದು ಶ್ರೀಗಳು ಹೇಳಿದ್ಧಾರೆ.
ಇನ್ನು ಉರಿಗೌಡ-ನಂಜೇಗೌಡ (Nanjegowda) ವಿವಾದವೂ ರಾಜ್ಯ ರಾಜಕೀಯದಲ್ಲಿ ಭಾರೀ ಸದ್ದು ಮಾಡುತ್ತಿದ್ದು,
ಬಿಜೆಪಿಯೂ ಇದನ್ನು ರಾಜಕೀಯ ಲಾಭಕ್ಕಾಗಿ ಸೃಷ್ಟಿ ಮಾಡಿದೆ ಎಂದು ಕಾಂಗ್ರೆಸ್ ಮತ್ತು ಜೆಡಿಎಸ್‌ಆರೋಪಿಸುತ್ತಿವೆ.
ಈ ನಡುವೆ ಸಚಿವ ಮತ್ತು ನಿರ್ಮಾಪಕ ಮುನಿರತ್ನ “ಉರಿಗೌಡ-ನಂಜೇಗೌಡ” ಎಂಬ ಸಿನಿಮಾ ಮಾಡುವುದಾಗಿ ಘೋಷಣೆ ಮಾಡಿದ್ದು,
ಈ ವಿವಾದಕ್ಕೆ ಮತ್ತಷ್ಟು ಕಿಚ್ಚು ಹೊತ್ತಿಸಿತ್ತು. ಈ ವಿವಾದ ಒಕ್ಕಲಿಗ ಸಮುದಾಯದ ನಾಯಕರ ನಡುವೆ ತೀವ್ರ ವಾಕ್ಸಮರಕ್ಕೆ ಕಾರಣವಾಗಿದ್ದು,
ಜೆಡಿಎಸ್‌ನಾಯಕ ಕುಮಾರಸ್ವಾಮಿ ಅವರು ಇದನ್ನು ತೀವ್ರವಾಗಿ ಖಂಡಿಸಿದ್ದರೆ, ಬಿಜೆಪಿ ನಾಯಕರಾದ ಸಿಟಿ ರವಿ, ಗೋಪಾಲಯ್ಯ, ಅಶ್ವಥ್‌ನಾರಾಯಣ್‌ಇದನ್ನು ಸಮರ್ಥಿಸಿಕೊಂಡಿದ್ದರು.
ಇದನ್ನೂ ಓದಿ : https://vijayatimes.com/siddaramaiah-favors-vidhan-parishad/
ಇನ್ನೊಂದೆಡೆ ಈ ವಿವಾದಕ್ಕೆ ಸಂಬಂಧಿಸಿದಂತೆ ಸಚಿವ ಮುನಿರತ್ನ ಅವರಿಗೆ ಭೇಟಿಯಾಗುವಂತೆ ನಿರ್ಮಲಾನಂದನಾಥ್ ಶ್ರೀಗಳು ಸೂಚನೆ ನೀಡಿದ್ದರು.
ಶ್ರೀಗಳ ಭೇಟಿಯ ನಂತರ ಮುನಿರತ್ನ ಅವರು ಸಿನಿಮಾ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಭೇಟಿಯ ವೇಳೆ ಈ ರೀತಿಯ ವಿವಾದಾತ್ಮಕ ವಿಚಾರಗಳಿಂದ ದೂರವಿರಿ ಎಂದು ಶ್ರೀಗಳು ಮುನಿರತ್ನ ಅವರಿಗೆ ಸೂಚನೆ ನೀಡಿದ್ದು,
ಚರ್ಚೆಯ ವೇಳೆ ಶ್ರೀಗಳು ಮುನಿರತ್ನ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು ಎನ್ನಲಾಗಿದ್ದು,
ಈ ವಿವಾದವನ್ನು ಇಲ್ಲಿಗೆ ಬಿಟ್ಟು ಬಿಡಿ ಎಂದು ಸೂಚನೆ ನೀಡಿದ್ಧಾರೆ ಎನ್ನಲಾಗಿದೆ. ಉರಿಗೌಡ-ನಂಜೇಗೌಡ ವಿವಾದ ಇಲ್ಲಿಗೆ ಮುಗಿಯುತ್ತಾ ಎಂಬುದನ್ನು ಕಾದುನೋಡಬೇಕಿದೆ.