Bengaluru : ಕನ್ನಡ ಚಿತ್ರರಂಗದ ಅದ್ಭುತ ನಿರ್ದೇಶಕ, ನಟ, ರಿಷಬ್ ಶೆಟ್ಟಿ(Rishab Shetty) ಅವರು ಬಾಲಿವುಡ್ ನಟಿ ಊರ್ವಶಿ ರೌಟೆಲಾ(Urvashi Rautela) ಅವರೊಂದಿಗೆ ತೆಗೆದಿರುವ ಫೋಟೋ ಸಾಮಾಜಿಕ (Urvashi’s photo with Rishab) ಜಾಲತಾಣದಲ್ಲಿ ಭಾರಿ ವೈರಲ್ ಆಗಿದೆ. ಈ ಒಂದು ಫೋಟೋ ಇದೀಗ ಹಲವು ಚರ್ಚೆಗೆ ಗ್ರಾಸವಾಗಿದೆ.
ಹೌದು, ಬಾಲಿವುಡ್(Bollywood) ನಟಿ ಊರ್ವಶಿ ರೌಟೆಲಾ ಅವರು ಈ ಹಿಂದೆ ಕನ್ನಡ ಚಿತ್ರರಂಗದ ಬಾಕ್ಸ್ ಆಫೀಸ್(Box Office) ಸುಲ್ತಾನ,
ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಅವರೊಂದಿಗೆ ಐರಾವತ(Airavatha) ಚಿತ್ರದಲ್ಲಿ ನಾಯಕಿ ನಟಿಯಾಗಿ ಅಭಿನಯಿಸಿದ್ದರು. ತದನಂತರ ಮತ್ಯಾವ ಕನ್ನಡ ಚಿತ್ರಗಳಲ್ಲೂ ಅವರು ಕಾಣಿಸಿಕೊಂಡಿಲ್ಲ!
ಸದ್ಯ ಇದನ್ನೇ ಗಮನದಲ್ಲಿಟ್ಟುಕೊಂಡು ತಮ್ಮ ಅನಿಸಿಕೆಯನ್ನು ವ್ಯಕ್ತಪಡಿಸಿರುವ ಸಿನಿ ಪ್ರೇಕ್ಷಕರು, ಕಾಂತಾರ ೨(Kanthara 2) ಚಿತ್ರದಲ್ಲಿ ಊರ್ವಶಿ ಅವರೇ ನಾಯಕಿಯಾಗಿ ಕಾಣಿಸಿಕೊಳ್ಳುವುದು ಖಚಿತ ಎಂದು ಹೇಳುತ್ತಿದ್ದಾರೆ.
ಸದ್ಯ ರಿಷಬ್ ಶೆಟ್ಟಿ ಅವರು ನಿರ್ದೇಶಿಸಿ, ನಟಿಸಿದ ಕಾಂತಾರ ಭಾಗ ೧ ಚಿತ್ರ ಕನ್ನಡ ಚಿತ್ರರಂಗ ಮಾತ್ರವಲ್ಲದೇ ಅನ್ಯ ಚಿತ್ರರಂಗದಲ್ಲಿ,
ಅನ್ಯ ಭಾಷೆಗಳಲ್ಲಿ ಧೂಳೆಬ್ಬಿಸಿದ್ದು, ಊಹೆಗೂ ಮೀರಿದ ದಾಖಲೆಯನ್ನು ನಿರ್ಮಿಸುವಲ್ಲಿ ಯಶಸ್ವಿಯಾಯಿತು. ಇತ್ತೀಚಿಗಷ್ಟೇ ಕಾಂತಾರ ೧ ಚಿತ್ರ ೧೦೦ ದಿನಗಳನ್ನು ಪೂರೈಸಿ, ಸಕ್ಸಸ್ ಸಮಾರಂಭದಲ್ಲಿ ಭಾಗಿಯಾಯಿತು.
ಈ ವೇಳೆ ನಟ ರಿಷಬ್ ಶೆಟ್ಟಿ ಅವರು ಇದೇ ಸರಿಯಾದ ಸಮಯ (Urvashi’s photo with Rishab) ಎಂದು ಕಾಂತಾರ ಚಿತ್ರದ ಎರಡನೇ ಭಾಗ ಮುಂದಿನ ವರ್ಷ 2024ಕ್ಕೆ ನಿಮ್ಮ ಮುಂದೆ ಹಾಜರಾಗಲಿದೆ!
‘ಕಾಂತಾರ 2’ ಸಿದ್ಧತೆಗಳು ಭರದಿಂದ ನಡೆಯುತ್ತಿವೆ ಎಂದು ಅಧಿಕೃತವಾಗಿ ಘೋಷಿಸಿದರು.
ಕಾಂತಾರ ಚಿತ್ರದ ಪ್ರೀಕ್ವೆಲ್ ಬರಲಿದೆ. ನೀವೆಲ್ಲಾ ನೋಡಿದ್ದು ಕಾಂತಾರ ಭಾಗ 1 ಅಲ್ಲ, ಬದಲಾಗಿ ಭಾಗ 2! ಈಗ ಬರುವ ಕಾಂತಾರ 2 ಅಸಲಿ ಕಾಂತಾರ ಭಾಗ 1 ಆಗಲಿದೆ.
ನೋಡಲು ಸಜ್ಜಾಗಿ ಎಂದು ನಿರ್ದೇಶಕ ರಿಷಬ್ ಶೆಟ್ಟಿ ಹೇಳಿದರು. ಚಿತ್ರದ ಕಥೆ ಸಿದ್ಧಪಡಿಸುವುದರಲ್ಲಿ ಬ್ಯುಸಿಯಾಗಿದ್ದು, ಏಪ್ರಿಲ್ ತಿಂಗಳ ನಂತರ ಚಿತ್ರೀಕರಣ ಪ್ರಾರಂಭಿಸಬಹುದು ಎಂದು ಹೇಳಲಾಗಿದೆ.
ಇನ್ನು ಕಾಂತಾರ 2 ಚಿತ್ರದಲ್ಲಿ ಯಾರೆಲ್ಲಾ ಅಭಿನಯಿಸಲಿದ್ದಾರೆ? ಹೊಸ ನಟ-ನಟಿಯರ ಆಗಮನ ಇರಲಿದೆಯಾ? ಎಂಬ ಪ್ರಶ್ನೆಗಳು ಹೊರಬರುವ ಮುನ್ನವೇ
ಇದೀಗ ಬಾಲಿವುಡ್ ನಟಿ ಊರ್ವಶಿ ರೌಟೆಲಾ ಅವರು ರಿಷಬ್ ಶೆಟ್ಟಿ ಜತೆಗೆ ತೆಗೆಸಿಕೊಂಡಿರುವ ಫೋಟೊ ಇದೀಗ ಸಾಕಷ್ಟು ಅನುಮಾನಗಳನ್ನು ಹುಟ್ಟುಹಾಕಿದೆ.