ಸಮವಸ್ತ್ರದಲ್ಲಿರುವಾಗ ಹಣೆಗೆ ತಿಲಕವಿಡಲು ಅನುಮತಿ ಸೂಚಿಸಿದ ಯು.ಎಸ್ ಏರ್ ಫೋರ್ಸ್!

ಯು.ಎಸ್ ಏರ್ ಫೋರ್ಸ್‌ನಲ್ಲಿ(US Air force) ಏರ್‌ಮ್ಯಾನ್(Airman) ಆಗಿರುವ ಭಾರತ ಮೂಲದ ದರ್ಶನ್ ಷಾ(Darshan Shah) ಅವರಿಗೆ ಸಮವಸ್ತ್ರದಲ್ಲಿರುವಾಗ ಧಾರ್ಮಿಕ ಸಂಕೇತವಾಗಿರುವ ತಿಲಕ ಇಡಲು ಅನುಮತಿ ಸೂಚಿಸಲಾಗಿದೆ. ಷಾ ಅವರು ಧಾರ್ಮಿಕ ಸಂಕೇತವಾದ ಕುಂಕಮ ಇಟ್ಟುಕೊಂಡಿದ್ದಾರೆ ಎಂಬ ಸುದ್ದಿ ಆನ್‌ಲೈನ್ ಗ್ರೂಪ್ ಚಾಟ್‌ಗಳು ಮೂಲಕ ಹೊರಬರುತ್ತಿದ್ದಂತೆ ತಡ ಇದಕ್ಕೆ ಪ್ರಪಂಚದಾದ್ಯಂತ ಬೆಂಬಲ ವ್ಯಕ್ತವಾಗುತ್ತಿದೆ.

ಈ ಕುರಿತು ಮಾತನಾಡಿರುವ ದರ್ಶನ್ ಟೆಕ್ಸಾಸ್, ಕ್ಯಾಲಿಫೋರ್ನಿಯಾ, ನ್ಯೂಜೆರ್ಸಿ ಮತ್ತು ನ್ಯೂಯಾರ್ಕ್‌ನ ನನ್ನ ಸ್ನೇಹಿತರು, ನನ್ನ ಪೋಷಕರಿಗೆ ಸಂದೇಶ ಕಳುಹಿಸುತ್ತಿದ್ದಾರೆ. ವಾಯುಪಡೆಯಲ್ಲಿ ಈ ರೀತಿಯ ಘಟನೆ ಸಂಭವಿಸಿರುವುದು ಅಶ್ಚರ್ಯ, ಅನ್ಯ ದೇಶದ ನೆಲ ನಮ್ಮ ಸಂಪ್ರದಾಯಕ್ಕೆ ಅನುಮತಿ ಸೂಚಿಸಿರುವುದು ಖುಷಿ ಸಂಗತಿ ಎಂದು ಅವರು ತುಂಬಾ ಸಂತೋಷಪಟ್ಟಿದ್ದಾರೆ. “ಇದು ಹೊಸ ವಿಷಯವೂ ಹೌದು. ಇದು ಅವರು ಹಿಂದೆಂದೂ ಕೇಳಿರದ ಅಥವಾ ಸಾಧ್ಯವಾ? ಎಂದು ಭಾವಿಸಿದ ವಿಷಯ, ಆದರೆ ಇದು ನಿಜಕ್ಕೂ ಸಂಭವಿಸಿದೆ.

ಈ ಕುರಿತು ತಮ್ಮ ಸಹೋದ್ಯೋಗಿಗಳಿಂದ ಸಾಕಷ್ಟು ಬೆಂಬಲವನ್ನು ಪಡೆಯುತ್ತಿದ್ದಾರಂತೆ ದರ್ಶನ್. ಪ್ರತಿದಿನ ಕೆಲಸ ಮಾಡಲು ತಿಲಕ/ ಚಂದ್ಲೋ ಧರಿಸುವುದು ಅದ್ಭುತವಾಗಿದೆ. ಜೀವನದಲ್ಲಿ ಕಷ್ಟಗಳು ಮತ್ತು ಕಷ್ಟಗಳನ್ನು ಎದುರಿಸಲು ಇದು ನನಗೆ ಬಹಳ ಧೈರ್ಯ ಮಾರ್ಗ ನೀಡಿದೆ. ಇದು ನನಗೆ ಪ್ರತಿಬಾರಿ ಉತ್ತಮ ಮಾರ್ಗದರ್ಶನ ನೀಡುತ್ತದೆ. ಇಂದು ಒಂದೊಳ್ಳೆ ಸ್ನೇಹಿತರನ್ನು ನನಗೆ ನೀಡಿದೆ ಮತ್ತು ಈ ಜಗತ್ತಿನಲ್ಲಿ ನಾನು ಯಾರೆಂಬುದರ ಬಗ್ಗೆ ಒಟ್ಟಾರೆ ತಿಳುವಳಿಕೆಯನ್ನು ನೀಡಿದೆ. ಸಮವಸ್ತ್ರದಲ್ಲಿ ಮತ್ತು ಹೊರಗೆ ನನ್ನ ಧಾರ್ಮಿಕ ಸ್ವಾತಂತ್ರ್ಯವನ್ನು ಬಹಿರಂಗವಾಗಿ ವ್ಯಕ್ತಪಡಿಸುವ ಸ್ವಾತಂತ್ರ್ಯವನ್ನು ನೀಡಿರುವ ದೇಶದಲ್ಲಿ ನಾನು ವಾಸಿಸುತ್ತಿರುವುದಕ್ಕೆ ನನಗೆ ಹೆಮ್ಮೆಯಿದೆ ಎಂದು ಹೇಳಿದ್ದಾರೆ.

Latest News

ರಾಜಕೀಯ

“ಕಾಂಗ್ರೆಸ್ ಬಸ್‍ಗೆ ಎರಡು ಸ್ಟೇರಿಂಗ್” : ಸಚಿವ ಡಾ. ಸುಧಾಕರ್

“ಪ್ರಸ್ತುತ ಕಾಂಗ್ರೆಸ್ ಪಕ್ಷ ಈಗ ಡಂಬಲ್ ಡೋರ್ ಬಸ್‍ನಲ್ಲಿ ಪ್ರಯಾಣಿಸುತ್ತಿದೆ. ಈ ಬಸ್‍ನಲ್ಲಿರುವ ಅವರ ಪಕ್ಷದವರ ಪೈಕಿ ಯಾರನ್ನು ಪ್ರಥಮವಾಗಿ ಕೆಳಗಿಳಿಸುತ್ತಾರೋ ತಿಳಿಯದು.

ದೇಶ-ವಿದೇಶ

ಮನೆ ಮತ್ತು ಕಾರ್ಪೊರೇಟ್ ಕಚೇರಿಗಳ ಮೇಲೆ ಶೇ.18 ರಷ್ಟು ಜಿಎಸ್‌ಟಿ ? ; ಏನಿದು ಗೊಂದಲ ಇಲ್ಲಿದೆ ಮಾಹಿತಿ

ಹೊಸ ನಿಯಮಗಳ ಪ್ರಕಾರ, ಜಿಎಸ್‌ಟಿ ನೋಂದಾಯಿತ ಹಿಡುವಳಿದಾರನು ರಿವರ್ಸ್ ಚಾರ್ಜ್ ಮೆಕ್ಯಾನಿಸಂ (RCM) ಅಡಿಯಲ್ಲಿ ತೆರಿಗೆಯನ್ನು ಪಾವತಿಸಲು ಹೊಣೆಗಾರನಾಗಿರುತ್ತಾನೆ.

ಪ್ರಮುಖ ಸುದ್ದಿ

ತಾಜುದ್ದೀನ್ಜುನೈದೀ ಮತ್ತು  ಶಿವಮೊಗ್ಗ ಸುಬ್ಬಣ್ಣ ನಿಧನಕ್ಕೆ ಗಣ್ಯರ ಸಂತಾಪ

ಪ್ರಖ್ಯಾತ ಗಾಯಕರು, ತಮ್ಮ ಸುಸ್ವರದ ಮೂಲಕ ಕವಿ ಗೀತೆಗಳಿಗೆ ಮೆರುಗು ತಂದುಕೊಟ್ಟಿದ್ದ ಶ್ರೀ ಶಿವಮೊಗ್ಗ ಸುಬ್ಬಣ್ಣ ಅವರ ನಿಧನದ ಸುದ್ದಿ ಕೇಳಿ ಬಹಳ ದುಃಖವಾಗಿದೆ.