• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ದೇಶ-ವಿದೇಶ

ಅಮೆರಿಕಾ-ಇರಾನ್ ಸಂಘರ್ಷ : ಇರಾನ್ ತೈಲದ ಹಡಗಿನ ಮೇಲೆ ಅಮೆರಿಕ ದಾಳಿ, ಜಾಗತಿಕ ಆತಂಕ ಹೆಚ್ಚಳ

Teju Srinivas by Teju Srinivas
in ದೇಶ-ವಿದೇಶ, ಪ್ರಮುಖ ಸುದ್ದಿ, ವಿಜಯ ಟೈಮ್ಸ್‌
ಅಮೆರಿಕಾ-ಇರಾನ್ ಸಂಘರ್ಷ : ಇರಾನ್ ತೈಲದ ಹಡಗಿನ ಮೇಲೆ ಅಮೆರಿಕ ದಾಳಿ, ಜಾಗತಿಕ ಆತಂಕ ಹೆಚ್ಚಳ
0
SHARES
6
VIEWS
Share on FacebookShare on Twitter

ಅಮೆರಿಕಾ-ಇರಾನ್ ಸಂಘರ್ಷ (US attack on Iranian ship) ಇನ್ನಷ್ಟು ತೀವ್ರ

ಹಾರ್ಮುಜ್ ನೌಕಾ ದಿಗ್ಬಂಧನ ಉಲ್ಲಂಘನೆ ಆರೋಪ

ಇರಾನ್ ಹಡಗಿನ ಮೇಲೆ ಅಮೆರಿಕಾ ದಾಳಿ

ಮಧ್ಯಪ್ರಾಚ್ಯದಲ್ಲಿ ಮತ್ತೆ ಯುದ್ಧ ಸೂಚನೆಗಳು ಕಂಡುಬರುತ್ತಿದ್ದು (US attack on Iranian ship) ಅಮೆರಿಕಾ ಮತ್ತು ಇರಾನ್ ನಡುವಿನ ಉದ್ವಿಗ್ನತೆ ಹೊಸ ತಿರುವು ಪಡೆದುಕೊಂಡಿದೆ.

ಗಲ್ಪ್ ಆಫ್ ಓಮನ್ ಪ್ರದೇಶದಲ್ಲಿ ಇರಾನ್‌ನ ತೈಲ ಟ್ಯಾಂಕರ್ (Tanker) ಮೇಲೆ ಅಮೆರಿಕ ಯುದ್ಧ ವಿಮಾನ ದಾಳಿ ನಡೆಸಿದ ಘಟನೆ ಜಾಗತಿಕ ಮಟ್ಟದಲ್ಲಿ ಚರ್ಚೆಗೆ ಕಾರಣವಾಗಿದೆ.

ಕದನ ವಿರಾಮ ಜಾರಿಯಲ್ಲಿದ್ದರೂ ಈ ದಾಳಿ ನಡೆದಿರುವುದು ಪರಿಸ್ಥಿತಿಯನ್ನು ಮತ್ತಷ್ಟು ಗಂಭೀರಗೊಳಿಸಿದೆ. ಹಾರ್ಮುಜ್ ಜಲಸಂಧಿಯ ಸುತ್ತಮುತ್ತ ಉದ್ಭವಿಸಿರುವ ಉದ್ವಿಗ್ನ ವಾತಾವರಣವು ವಿಶ್ವದ ತೈಲ ಮಾರುಕಟ್ಟೆ ಮತ್ತು ಆರ್ಥಿಕ ವ್ಯವಸ್ಥೆಯ ಮೇಲೂ ನೇರ ಪರಿಣಾಮ ಬೀರುವ ಸಾಧ್ಯತೆಯನ್ನು ತೋರಿಸಿದೆ.

US attack on Iranian ship

ಅಮೆರಿಕ ಸೆಂಟ್ರಲ್ ಕಮಾಂಡ್ ನೀಡಿರುವ ಮಾಹಿತಿ ಪ್ರಕಾರ, ಅಮೆರಿಕ ವಿಧಿಸಿದ್ದ ನೌಕಾ ದಿಗ್ಬಂಧನವನ್ನು ಉಲ್ಲಂಘಿಸಿ ಸಾಗಲು ಯತ್ನಿಸಿದ ಇರಾನ್‌ನ ತೈಲ ಹಡಗನ್ನು ಗುರಿಯಾಗಿಸಿ ದಾಳಿ ನಡೆಸಲಾಗಿದೆ. ಈ ದಾಳಿಯಿಂದ ಹಡಗಿನ ರಡ್ಡರ್ ಭಾಗಕ್ಕೆ ಗಂಭೀರ ಹಾನಿಯಾಗಿದ್ದು, ಹಡಗಿನ ಚಲನೆ ಸಂಪೂರ್ಣ ಸ್ಥಗಿತಗೊಂಡಿದೆ ಎಂದು ವರದಿಯಾಗಿದೆ.

ಅಮೆರಿಕ ತನ್ನ ಕ್ರಮವನ್ನು ಭದ್ರತಾ ಕಾರಣಗಳಿಂದ ಕೈಗೊಂಡದ್ದು ಎಂದು (US attack on Iranian ship) ಸಮರ್ಥಿಸಿಕೊಂಡಿದ್ದರೂ, ಇರಾನ್ ಇದನ್ನು ನೇರ ಪ್ರಚೋದನೆ ಎಂದು ಪರಿಗಣಿಸಿದೆ.

ಇತ್ತೀಚೆಗೆ ಉಭಯ ರಾಷ್ಟ್ರಗಳು ಯುದ್ಧ ವಿರಾಮ ಘೋಷಿಸಿದ್ದ ಹಿನ್ನೆಲೆ, ಈ ಘಟನೆ ಮತ್ತೆ ಸಂಘರ್ಷಕ್ಕೆ ದಾರಿ ಮಾಡಿಕೊಡುವ ಆತಂಕವನ್ನು ಹುಟ್ಟುಹಾಕಿದೆ.

ಈ ನಡುವೆ ಅಮೆರಿಕ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಸಾಮಾಜಿಕ ಜಾಲತಾಣದಲ್ಲಿ ಮಾಡಿರುವ ಹೇಳಿಕೆಗಳು ಪರಿಸ್ಥಿತಿಗೆ ಇನ್ನಷ್ಟು ಉರಿ ಹಚ್ಚಿವೆ.

“ಇರಾನ್ ಒಪ್ಪಂದಕ್ಕೆ ಬರಲು ಸಿದ್ಧವಿರುವಂತೆ ಕಾಣುತ್ತಿದೆ. ಆದರೆ ಅದು ಅಮೆರಿಕದ ಷರತ್ತುಗಳಿಗೆ ಅನುಗುಣವಾಗಿರಬೇಕು. ಇಲ್ಲವಾದರೆ ಹಿಂದಿನಿಗಿಂತ ಭೀಕರ ದಾಳಿ

ಎದುರಿಸಬೇಕಾಗುತ್ತದೆ” ಎಂದು ಅವರು ಎಚ್ಚರಿಕೆ ನೀಡಿದ್ದಾರೆ. ಮತ್ತೊಂದು ಪೋಸ್ಟ್‌ನಲ್ಲಿ, “ಎರಡು ತಿಂಗಳಿನಿಂದ ಮುಂದುವರಿದಿರುವ ಸಂಘರ್ಷಕ್ಕೆ ಶೀಘ್ರ ಅಂತ್ಯ ಸಾಧ್ಯ.

ತೈಲ ಮತ್ತು ನೈಸರ್ಗಿಕ ಅನಿಲ ಸಾಗಾಟ ಪುನರಾರಂಭವಾಗಬಹುದು. ಆದರೆ ಅಂತಿಮ ನಿರ್ಧಾರ ಇರಾನ್ ಕೈಯಲ್ಲಿದೆ” ಎಂದು ಹೇಳಿದ್ದಾರೆ.

ಈ ಹೇಳಿಕೆಗಳು ರಾಜತಾಂತ್ರಿಕ ಮಾತುಕತೆಯ ಸಾಧ್ಯತೆಗಳ ಜೊತೆಗೆ ಮತ್ತೆ ಯುದ್ಧ ಭೀತಿಯನ್ನೂ ಹೆಚ್ಚಿಸಿವೆ.

ಅಂತರರಾಷ್ಟ್ರೀಯ ಮಾಧ್ಯಮ ವರದಿಗಳ ಪ್ರಕಾರ, ಅಮೆರಿಕ ಮತ್ತು ಇರಾನ್ ನಡುವೆ ಒಂದು ಪುಟದ ಕರಡು ಒಪ್ಪಂದದ ಕುರಿತು ಚರ್ಚೆಗಳು ನಡೆಯುತ್ತಿವೆ ಎಂದು ತಿಳಿದುಬಂದಿದೆ.

ಈ ಕರಡು ಒಪ್ಪಂದದಲ್ಲಿ ಇರಾನ್ ಯುರೇನಿಯಂ ಸಂವರ್ಧನೆಯನ್ನು ತಾತ್ಕಾಲಿಕವಾಗಿ ನಿಲ್ಲಿಸುವುದು, ಅಮೆರಿಕ ವಿಧಿಸಿರುವ ಆರ್ಥಿಕ ನಿರ್ಬಂಧಗಳನ್ನು ಸಡಿಲಿಸುವುದು,

ಇರಾನ್‌ನ ವಿದೇಶಿ ನಿಧಿಗಳನ್ನು ಬಿಡುಗಡೆ ಮಾಡುವುದು ಹಾಗೂ ಹಾರ್ಮುಜ್ ಜಲಸಂಧಿಯನ್ನು ಪುನಃ ಹಡಗುಗಳಿಗೆ ತೆರೆಯುವಂತಹ ಅಂಶಗಳು ಸೇರಿವೆ ಎನ್ನಲಾಗಿದೆ.

ಆದರೆ ಇರಾನ್ ವಿದೇಶಾಂಗ ಸಚಿವಾಲಯ ಅಮೆರಿಕದ ಕೆಲವು ಪ್ರಸ್ತಾವನೆಗಳನ್ನು ತೀವ್ರವಾಗಿ ತಿರಸ್ಕರಿಸಿದ್ದು, “ರಾಷ್ಟ್ರೀಯ ಹಿತಾಸಕ್ತಿಗೆ ವಿರುದ್ಧವಾದ ಯಾವುದೇ ಒಪ್ಪಂದವನ್ನು ನಾವು ಒಪ್ಪುವುದಿಲ್ಲ” ಎಂದು ಸ್ಪಷ್ಟಪಡಿಸಿದೆ.

ಆದರೂ ಹೊಸ ಪ್ರಸ್ತಾವನೆಗಳ ಕುರಿತು ಪರಿಶೀಲನೆ ನಡೆಯುತ್ತಿದೆ ಎಂದು ತಿಳಿಸಿರುವುದು ಮಾತುಕತೆಗಳಿಗೆ ಇನ್ನೂ ಅವಕಾಶ ಉಳಿದಿದೆ ಎಂಬ ಸಂದೇಶ ನೀಡಿದೆ.

ಹಾರ್ಮುಜ್ ಜಲಸಂಧಿ ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾಗಿರುವುದರಿಂದ ಇಲ್ಲಿ ಉಂಟಾಗುವ ಯಾವುದೇ ಸಂಘರ್ಷವು ವಿಶ್ವದ ಇಂಧನ ಮಾರುಕಟ್ಟೆಯನ್ನು

ತೀವ್ರವಾಗಿ ತಟ್ಟುತ್ತದೆ. ಈಗಾಗಲೇ ತೈಲ ದರಗಳಲ್ಲಿ ಏರಿಕೆ ಕಂಡುಬಂದಿದ್ದು, ತೈಲ ಆಮದು ಅವಲಂಬಿತ ರಾಷ್ಟ್ರಗಳು ಆರ್ಥಿಕ ಒತ್ತಡಕ್ಕೆ ಸಿಲುಕಿವೆ.

ವಿಶೇಷವಾಗಿ ಚೀನಾ ಸೇರಿದಂತೆ ಅನೇಕ ದೇಶಗಳು ಈ ಪರಿಸ್ಥಿತಿಯನ್ನು ಕಳವಳದಿಂದ ಗಮನಿಸುತ್ತಿವೆ. ಚೀನಾ ವಿದೇಶಾಂಗ ಸಚಿವ ವಾಂಗ್ ಯಿ (Wang Yi) , “ಈ ಸಂಘರ್ಷ ಜಾಗತಿಕ ಶಾಂತಿಗೆ ಅಪಾಯವಾಗಿದ್ದು, ತಕ್ಷಣ ಕದನ ವಿರಾಮ ಜಾರಿಯಾಗಬೇಕು” ಎಂದು ಆಗ್ರಹಿಸಿದ್ದಾರೆ.

ಇನ್ನೊಂದೆಡೆ ಇಸ್ರೇಲ್ ಕೂಡ ಬೈರೂತ್ ದಕ್ಷಿಣ ಭಾಗದ ಮೇಲೆ ದಾಳಿ ನಡೆಸಿರುವುದು ಮಧ್ಯಪ್ರಾಚ್ಯದಲ್ಲಿ ಉದ್ವಿಗ್ನತೆಯನ್ನು ಮತ್ತಷ್ಟು ಉಲ್ಬಣಗೊಳಿಸಿದೆ.

ಒಟ್ಟಾರೆ ಅಮೆರಿಕಾ-ಇರಾನ್ ನಡುವಿನ ಈ ಹೊಸ ಬೆಳವಣಿಗೆಗಳು ಜಾಗತಿಕ ರಾಜಕೀಯ ಮತ್ತು ಆರ್ಥಿಕ ವಲಯದಲ್ಲಿ ಅನಿಶ್ಚಿತತೆಯನ್ನು ಹೆಚ್ಚಿಸಿದ್ದು, ಮುಂದಿನ ದಿನಗಳಲ್ಲಿ ಪರಿಸ್ಥಿತಿ ಯಾವ ದಿಕ್ಕಿಗೆ ತಿರುಗುತ್ತದೆ ಎಂಬುದನ್ನು ಕಾದು ನೋಡಬೇಕಿದೆ.

ಇದನ್ನು ಓದಿ : https://vijayatimes.com/one-year-of-operation-sindoor/

Tags: americafuelIranoilSHIP

Related News

ಐಪಿಎಲ್‌ನಲ್ಲಿ ಅಶಿಸ್ತಿಗೆ ಬ್ರೇಕ್: ಬಿಸಿಸಿಐನಿಂದ ಕಠಿಣ ನಿಯಮ ಜಾರಿ
Sports

ಐಪಿಎಲ್‌ನಲ್ಲಿ ಅಶಿಸ್ತಿಗೆ ಬ್ರೇಕ್: ಬಿಸಿಸಿಐನಿಂದ ಕಠಿಣ ನಿಯಮ ಜಾರಿ

May 13, 2026
ವಿಪಕ್ಷ ನಾಯಕ ರಬ್ಬರ್ ಸ್ಟಾಂಪ್ ಅಲ್ಲ : ಸಿಬಿಐ ನಿರ್ದೇಶಕರ ಆಯ್ಕೆ ಪ್ರಕ್ರಿಯೆ ಪ್ರಶ್ನಿಸಿದ ರಾಹುಲ್ ಗಾಂಧಿ
ದೇಶ-ವಿದೇಶ

ವಿಪಕ್ಷ ನಾಯಕ ರಬ್ಬರ್ ಸ್ಟಾಂಪ್ ಅಲ್ಲ : ಸಿಬಿಐ ನಿರ್ದೇಶಕರ ಆಯ್ಕೆ ಪ್ರಕ್ರಿಯೆ ಪ್ರಶ್ನಿಸಿದ ರಾಹುಲ್ ಗಾಂಧಿ

May 13, 2026
ಚಿನ್ನ-ಬೆಳ್ಳಿ ಆಮದು ಸುಂಕ ಏರಿಕೆ: ಬಂಗಾರ ಖರೀದಿ ಮತ್ತಷ್ಟು ದುಬಾರಿ, ಗ್ರಾಹಕರಿಗೆ ಹೆಚ್ಚಿದ ಹೊರೆ
ದೇಶ-ವಿದೇಶ

ಚಿನ್ನ-ಬೆಳ್ಳಿ ಆಮದು ಸುಂಕ ಏರಿಕೆ: ಬಂಗಾರ ಖರೀದಿ ಮತ್ತಷ್ಟು ದುಬಾರಿ, ಗ್ರಾಹಕರಿಗೆ ಹೆಚ್ಚಿದ ಹೊರೆ

May 13, 2026
NEET UG 2026 ಮರು ಪರೀಕ್ಷೆ: ವಿದ್ಯಾರ್ಥಿಗಳ ಆತಂಕದ ನಡುವೆ ಮಹತ್ವದ ಮಾಹಿತಿ ನೀಡಿದ NTA
ದೇಶ-ವಿದೇಶ

NEET UG 2026 ಮರು ಪರೀಕ್ಷೆ: ವಿದ್ಯಾರ್ಥಿಗಳ ಆತಂಕದ ನಡುವೆ ಮಹತ್ವದ ಮಾಹಿತಿ ನೀಡಿದ NTA

May 13, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.