ಯುದ್ಧ ನಿಲ್ಲಿಸಲು ಇರಾನ್ ಗೆ (US conditions for Iran to stop war) ಅಮೇರಿಕಾ 15 ಷರತ್ತು
ಯುದ್ಧ ನಮಗೆ ಬೇಕಾದಾಗ ನಿಲ್ಲಿಸ್ತೀವಿ, ನಿಮಗೆ ಬೇಕಿದ್ದರೆ ಮೊದಲು 5 ಷರತ್ತುಗಳಿಗೆ ಒಪ್ಪಿ
ಅಮೆರಿಕಾಗೆ ಇರಾನ್ ಖಡಕ್ ಸಂದೇಶ
ಇರಾನ್ ಮತ್ತು ಅಮೆರಿಕಾ ನಡುವಿನ ಉದ್ವಿಗ್ನ ಪರಿಸ್ಥಿತಿ ಇನ್ನೂ ಸಂಪೂರ್ಣವಾಗಿ (US conditions for Iran to stop war) ಶಮನವಾಗಿಲ್ಲ. ಒಂದೆಡೆ ಯುದ್ಧದ ಭೀತಿ ಮುಂದುವರಿದಿದ್ದರೆ, ಮತ್ತೊಂದೆಡೆ ಸಂಧಾನದ ಪ್ರಯತ್ನಗಳು ಕೂಡ ನಡೆಯುತ್ತಿವೆ.
ಇದೇ ಸಂದರ್ಭದಲ್ಲಿ ಅಮೆರಿಕಾ ಇರಾನ್‌ಗೆ 15 ಅಂಶಗಳ ರಹಸ್ಯ ಪ್ರಸ್ತಾಪವನ್ನು ಕಳುಹಿಸಿರುವುದು ಜಾಗತಿಕ ರಾಜಕೀಯದಲ್ಲಿ ದೊಡ್ಡ ಚರ್ಚೆಗೆ ಕಾರಣವಾಗಿದೆ.
ಯುದ್ಧದ ನಡುವೆ ಬಂದಿರುವ ಈ ಪ್ರಸ್ತಾಪವು ಭವಿಷ್ಯದ ರಾಜತಾಂತ್ರಿಕ ಬೆಳವಣಿಗೆಗಳಿಗೆ ದಾರಿ ಮಾಡಿಕೊಡಬಹುದು ಎಂಬ ನಿರೀಕ್ಷೆ ವ್ಯಕ್ತವಾಗಿದೆ.

ವರದಿಗಳ ಪ್ರಕಾರ, ಅಮೆರಿಕಾ ನೇರವಾಗಿ ಇರಾನ್ ಜೊತೆ ಮಾತುಕತೆ ನಡೆಸದೇ ಮಧ್ಯವರ್ತಿಗಳ ಮೂಲಕ ಸಂಪರ್ಕ ಸಾಧಿಸಿದೆ ಎಂದು ತಿಳಿದುಬಂದಿದೆ.
ಅಮೆರಿಕಾದ ನಾಯಕತ್ವವು ಯುದ್ಧವನ್ನು ತಾತ್ಕಾಲಿಕವಾಗಿ ನಿಲ್ಲಿಸಿ ಸಂಧಾನದ ಮೂಲಕ ಸಮಸ್ಯೆ ಪರಿಹರಿಸಲು ಪ್ರಯತ್ನಿಸುತ್ತಿದೆ ಎನ್ನಲಾಗಿದೆ.
ಮೂರು ವಾರಗಳಿಂದ ಮುಂದುವರಿದಿರುವ ಸಂಘರ್ಷವನ್ನು ತಾತ್ಕಾಲಿಕವಾಗಿ ನಿಲ್ಲಿಸಲು (US conditions for Iran to stop war) ಒಂದು ತಿಂಗಳ ಕಾಲ ಕದನ ವಿರಾಮ ಘೋಷಿಸುವ ಪ್ರಸ್ತಾಪವೂ ಈ ಯೋಜನೆಯಲ್ಲಿ ಸೇರಿದೆ ಎಂದು ವರದಿಗಳು ಹೇಳುತ್ತಿವೆ.
ಅಮೆರಿಕಾ ನೀಡಿರುವ 15 ಅಂಶಗಳ ಪ್ರಸ್ತಾಪದಲ್ಲಿ ಪ್ರಮುಖವಾಗಿ ಇರಾನ್ ತನ್ನ ಪರಮಾಣು ಕಾರ್ಯಕ್ರಮವನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎಂಬ ಷರತ್ತು ಸೇರಿದೆ.
ಯುರೇನಿಯಂ ಪುಷ್ಟೀಕರಣವನ್ನು ನಿಲ್ಲಿಸುವುದು, ಈಗಾಗಲೇ ಸಂಗ್ರಹಿಸಿರುವ ಯುರೇನಿಯಂ ಅನ್ನು ಅಂತರರಾಷ್ಟ್ರೀಯ ಅಟೋಮಿಕ್ ಎನರ್ಜಿ ಏಜೆನ್ಸಿಗೆ (Atomic Energy Agency) ಒಪ್ಪಿಸುವುದು, ಪ್ರಮುಖ ಪರಮಾಣು ಕೇಂದ್ರಗಳನ್ನು ತೆರವುಗೊಳಿಸುವುದು ಸೇರಿದಂತೆ ಹಲವು ಕಠಿಣ ನಿಯಮಗಳನ್ನು ಅಮೆರಿಕಾ ಮುಂದಿಟ್ಟಿದೆ.
ಜೊತೆಗೆ ಇರಾನ್ ತನ್ನ ಕ್ಷಿಪಣಿ ಕಾರ್ಯಕ್ರಮವನ್ನು ಮಿತಿಗೊಳಿಸಬೇಕು ಹಾಗೂ ಪ್ರಾದೇಶಿಕ ಪ್ರಾಕ್ಸಿ ಗುಂಪುಗಳಿಗೆ ಬೆಂಬಲ ನಿಲ್ಲಿಸಬೇಕು ಎಂಬ ಬೇಡಿಕೆ ಕೂಡ ಇದೆ.
ಇದರ ಜೊತೆಗೆ ಹಾರ್ಮುಜ್ ಜಲಸಂಧಿಯನ್ನು ಸಂಪೂರ್ಣವಾಗಿ ಸಾಗಣೆಗಾಗಿ ತೆರೆದಿಡಬೇಕು ಎಂಬ ಷರತ್ತು ಕೂಡ ಪ್ರಮುಖವಾಗಿದೆ. ಈ ಜಲಸಂಧಿ ಜಾಗತಿಕ ತೈಲ ಸಾಗಣೆಗೆ ಬಹಳ ಮುಖ್ಯವಾದುದರಿಂದ, ಇದನ್ನು ಮುಕ್ತವಾಗಿ ಇಡುವಂತೆ ಅಮೆರಿಕಾ ಒತ್ತಾಯಿಸಿದೆ.
ಒಟ್ಟಾರೆ, ಈ ಯೋಜನೆ ಮಧ್ಯಪ್ರಾಚ್ಯ ಪ್ರದೇಶದಲ್ಲಿ ಶಾಂತಿ ಸ್ಥಾಪನೆ ಮತ್ತು ಭವಿಷ್ಯದ ಸಂಘರ್ಷಗಳನ್ನು ಕಡಿಮೆ ಮಾಡುವ ಉದ್ದೇಶದಿಂದ ರೂಪಿಸಲಾಗಿದೆ ಎಂದು ಹೇಳಲಾಗುತ್ತಿದೆ.
ಆದರೆ ಈ ಕಠಿಣ ಷರತ್ತುಗಳಿಗೆ ಪ್ರತಿಯಾಗಿ ಅಮೆರಿಕಾ ಕೆಲವು ಸೌಲಭ್ಯಗಳನ್ನು ನೀಡಲು ಸಹ ಸಿದ್ಧವಾಗಿದೆ.
ಇರಾನ್ ಮೇಲೆ ವಿಧಿಸಿರುವ ಆರ್ಥಿಕ ನಿರ್ಬಂಧಗಳನ್ನು ತೆಗೆದುಹಾಕುವುದು, ನಾಗರಿಕ ಪರಮಾಣು ಕಾರ್ಯಕ್ರಮಕ್ಕೆ ಸಹಾಯ ಮಾಡುವುದು ಹಾಗೂ ವಿದ್ಯುತ್ ಉತ್ಪಾದನೆಗೆ ತಾಂತ್ರಿಕ ನೆರವು ನೀಡುವುದು ಈ ಸೌಲಭ್ಯಗಳಲ್ಲಿ ಸೇರಿವೆ.
ಆದರೆ ಈ ಪ್ರಸ್ತಾಪಕ್ಕೆ ಇರಾನ್ ಇನ್ನೂ ಅಧಿಕೃತ ಉತ್ತರ ನೀಡಿಲ್ಲ. ಮುಂದಿನ ದಿನಗಳಲ್ಲಿ ಈ ಮಾತುಕತೆಗಳು ಯಶಸ್ವಿಯಾಗುತ್ತವೆಯೇ ಅಥವಾ ಸಂಘರ್ಷ ಮತ್ತಷ್ಟು ಹೆಚ್ಚಾಗುತ್ತದೆಯೇ ಎಂಬುದನ್ನು ಕಾದು ನೋಡಬೇಕಾಗಿದೆ.
ಇದನ್ನು ಓದಿ : https://vijayatimes.com/terrible-bus-accident-in-andhra/