- ಹಾರ್ಮುಜ್ ಸಂಕಷ್ಟದ ನಡುವೆ ಭಾರತಕ್ಕೆ (US green signal to buy oil) ರಷ್ಯಾದ ಸಹಾಯ
- ಹಾರ್ಮುಜ್ ಜಲಸಂಧಿ ಮುಚ್ಚಿದ ಹಿನ್ನೆಲೆ ಜಾಗತಿಕ ತೈಲ ಪೂರೈಕೆ ಸಂಕಷ್ಟ
- ರಷ್ಯಾದಿಂದ 30 ದಿನಗಳ ಕಾಲ ತೈಲ ಖರೀದಿಸಲು ಗ್ರೀನ್ ಸಿಗ್ನಲ್; ಭಾರತದ ಇಂಧನ ಭದ್ರತೆಗೆ ಮಹತ್ವದ ಹೆಜ್ಜೆ
New delhi: ಮಧ್ಯಪ್ರಾಚ್ಯದಲ್ಲಿ ಉಂಟಾದ ಉದ್ವಿಗ್ನ ಪರಿಸ್ಥಿತಿಯ (US green signal to buy oil) ನಡುವೆ ಭಾರತದ ಇಂಧನ ಭದ್ರತೆ ಕುರಿತು ಮಹತ್ವದ ಬೆಳವಣಿಗೆ ನಡೆದಿದೆ.
ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷ ತೀವ್ರಗೊಂಡ ಹಿನ್ನೆಲೆ ಇರಾನ್ ಹಾರ್ಮುಜ್ (Iran Hormuz) ಜಲಸಂಧಿಯನ್ನು ಮುಚ್ಚಿರುವುದು ಜಾಗತಿಕ ತೈಲ ಪೂರೈಕೆಗೆ ದೊಡ್ಡ ಹೊಡೆತ ನೀಡಿದೆ.

ಈ ಪರಿಸ್ಥಿತಿಯಲ್ಲಿ ಭಾರತಕ್ಕೆ ತೈಲ ಪೂರೈಕೆ ತೊಂದರೆ ಉಂಟಾಗುವ ಸಾಧ್ಯತೆ ಕಂಡುಬಂದ ಹಿನ್ನೆಲೆಯಲ್ಲಿ ರಷ್ಯಾ ಮುಂದೆ ಬಂದಿದೆ.
ಈ ಹಿನ್ನೆಲೆಯಲ್ಲಿ ಭಾರತವು ರಷ್ಯಾದಿಂದ ತೈಲ ಖರೀದಿಸಲು ಅಮೆರಿಕ (US green signal to buy oil) ತಾತ್ಕಾಲಿಕವಾಗಿ ಅನುಮತಿ ನೀಡಿರುವುದು ಗಮನಾರ್ಹ ಬೆಳವಣಿಗೆಯಾಗಿದೆ.
ಅಮೆರಿಕ ಸರ್ಕಾರವು 30 ದಿನಗಳ ಕಾಲ ರಷ್ಯಾದಿಂದ ತೈಲ ಆಮದು ಮಾಡಲು ಭಾರತಕ್ಕೆ ಗ್ರೀನ್ ಸಿಗ್ನಲ್ (Green Signal) ನೀಡಿದೆ.
ಹಿಂದಿನ ದಿನಗಳಲ್ಲಿ ರಷ್ಯಾದಿಂದ ತೈಲ ಖರೀದಿಸುತ್ತಿರುವುದನ್ನು ಕಾರಣವನ್ನಾಗಿ ಮಾಡಿಕೊಂಡು ಅಮೆರಿಕ ಭಾರತಕ್ಕೆ ಹೆಚ್ಚುವರಿ ಸುಂಕ ವಿಧಿಸಿತ್ತು.
ಆ ಸಮಯದಲ್ಲಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಆಡಳಿತವು ಭಾರತ ಮೇಲೆ ಸುಮಾರು 25 ಶೇಕಡಾ ಹೆಚ್ಚುವರಿ ಸುಂಕ ವಿಧಿಸಿತ್ತು. ಇದರ ಪರಿಣಾಮವಾಗಿ ಒಟ್ಟು ಸುಂಕವು ಸುಮಾರು 50 ಶೇಕಡಾ ಮಟ್ಟಕ್ಕೆ ಏರಿತ್ತು.
ನಂತರ ಭಾರತ ಮತ್ತು ಅಮೆರಿಕ ನಡುವಿನ ಮಧ್ಯಂತರ ಒಪ್ಪಂದದ ಮೂಲಕ ಈ ಸುಂಕದಿಂದ ಭಾರತಕ್ಕೆ ತಾತ್ಕಾಲಿಕ ವಿನಾಯಿತಿ ದೊರಕಿತ್ತು. ಆದರೆ ಈ ವಿನಾಯಿತಿಗೆ ಒಂದು
ಷರತ್ತು ಇತ್ತು. ಅದು ಭಾರತವು ರಷ್ಯಾದಿಂದ ತೈಲ ಖರೀದಿ ಮಾಡಬಾರದು ಎಂಬುದು. ಈಗಿನ ಜಾಗತಿಕ ಬಿಕ್ಕಟ್ಟಿನ ಪರಿಸ್ಥಿತಿಯಲ್ಲಿ ಈ ಷರತ್ತನ್ನು ತಾತ್ಕಾಲಿಕವಾಗಿ ಸಡಿಲಿಸಲಾಗಿದೆ.
ಹಾರ್ಮುಜ್ ಜಲಸಂಧಿ ಜಾಗತಿಕ ತೈಲ ವ್ಯಾಪಾರದಲ್ಲಿ ಅತ್ಯಂತ ಪ್ರಮುಖ ಸಮುದ್ರ ಮಾರ್ಗವಾಗಿದೆ. ಇದು ಇರಾನ್ ಮತ್ತು ಓಮನ್ ನಡುವಿನ ಸಮುದ್ರ ಮಾರ್ಗವಾಗಿದ್ದು
ಪರ್ಷಿಯನ್ ಕೊಲ್ಲಿಯನ್ನು ಅರೇಬಿಯನ್ ಸಮುದ್ರಕ್ಕೆ ಸಂಪರ್ಕಿಸುತ್ತದೆ. ಜಗತ್ತಿನ ಅನೇಕ ದೇಶಗಳಿಗೆ ಈ ಮಾರ್ಗದ ಮೂಲಕ ತೈಲ ಸಾಗಾಟ ನಡೆಯುತ್ತದೆ.
ಭಾರತ ತನ್ನ ಒಟ್ಟು ಕಚ್ಚಾ ತೈಲ ಅಗತ್ಯಗಳಲ್ಲಿ ಸುಮಾರು 40 ಶೇಕಡಾವರೆಗೆ ಈ ಮಾರ್ಗದ ಮೂಲಕವೇ ಆಮದು ಮಾಡಿಕೊಳ್ಳುತ್ತದೆ.
ಸೌದಿ ಅರೇಬಿಯಾ, ಇರಾಕ್, ಯುನೈಟೆಡ್ ಅರಬ್ ಎಮಿರೇಟ್ಸ್ (United Arab Emirates) ಮತ್ತು ಕುವೈತ್ ಸೇರಿದಂತೆ ಹಲವು ಪಶ್ಚಿಮ ಏಷ್ಯಾ ದೇಶಗಳು ಈ ಮಾರ್ಗದ ಮೂಲಕ ಭಾರತಕ್ಕೆ ತೈಲ ಪೂರೈಸುತ್ತವೆ.
ಹೀಗಾಗಿ ಈ ಜಲಸಂಧಿ ಮುಚ್ಚಲ್ಪಟ್ಟರೆ ಭಾರತ ಸೇರಿದಂತೆ ಅನೇಕ ರಾಷ್ಟ್ರಗಳಿಗೆ ತೈಲ ಪೂರೈಕೆ ಮೇಲೆ ಗಂಭೀರ ಪರಿಣಾಮ ಬೀಳುವ ಸಾಧ್ಯತೆ ಇದೆ.
ಈ ಪರಿಸ್ಥಿತಿಯಲ್ಲಿ ಭಾರತಕ್ಕೆ ಸಹಾಯ ಮಾಡಲು ರಷ್ಯಾ ಮುಂದೆ ಬಂದಿರುವುದು ಮಹತ್ವದ ಸಂಗತಿ.
ಕೈಗಾರಿಕಾ ಮೂಲಗಳ ಪ್ರಕಾರ ಭಾರತ ಸರ್ಕಾರ ವಿನಂತಿಸಿದರೆ ಭಾರತದ ಸಮುದ್ರದ ಹತ್ತಿರವೇ ಸುಮಾರು 9.5 ಮಿಲಿಯನ್ ಬ್ಯಾರೆಲ್ (Million Barrel) ರಷ್ಯಾದ
ಕಚ್ಚಾ ತೈಲ ಹಡಗುಗಳಲ್ಲಿ ಸಿದ್ಧವಾಗಿದ್ದು, ಕೆಲವು ವಾರಗಳೊಳಗೆ ಭಾರತಕ್ಕೆ ತಲುಪಬಹುದು ಎಂದು ತಿಳಿಸಲಾಗಿದೆ.
ಜಾಗತಿಕ ಮಾರುಕಟ್ಟೆಯಲ್ಲಿ ಉಂಟಾಗಿರುವ ಅಸ್ಥಿರತೆಯ ನಡುವೆ ಭಾರತದ ಇಂಧನ ಅವಶ್ಯಕತೆಗಳನ್ನು ಪೂರೈಸಲು ರಷ್ಯಾ ಸಿದ್ಧವಿರುವುದಾಗಿ ರಷ್ಯಾದ ರಾಯಭಾರಿ ಡೆನಿಸ್ ಅಲಿಪೋವ್ ತಿಳಿಸಿದ್ದಾರೆ.
ಅಗತ್ಯವಿದ್ದರೆ ಭಾರತದ ಒಟ್ಟು ಕಚ್ಚಾ ತೈಲ ಅಗತ್ಯಗಳಲ್ಲಿ ಸುಮಾರು 40 ಶೇಕಡಾ ವರೆಗೆ ಪೂರೈಸಲು ರಷ್ಯಾ ಸಿದ್ಧವಾಗಿದೆ ಎಂಬುದಾಗಿ ಮೂಲಗಳು ಸೂಚಿಸಿವೆ.
ಇದಲ್ಲದೆ ರಷ್ಯಾ ಭಾರತಕ್ಕೆ ಕೇವಲ ಕಚ್ಚಾ ತೈಲವಷ್ಟೇ ಅಲ್ಲ, ದ್ರವೀಕೃತ ನೈಸರ್ಗಿಕ ಅನಿಲ (LNG) ಪೂರೈಕೆ ಮಾಡುವುದಕ್ಕೂ ಸಿದ್ಧವಾಗಿದೆ ಎಂದು ಹೇಳಲಾಗಿದೆ.
ಸಾಮಾನ್ಯವಾಗಿ ಕತಾರ್ ಭಾರತಕ್ಕೆ ಪ್ರಮುಖ ಅನಿಲ ಪೂರೈಕೆದಾರ ರಾಷ್ಟ್ರವಾಗಿದೆ. ಆದರೆ ಮಧ್ಯಪ್ರಾಚ್ಯದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ
ಕತಾರ್ ಅನಿಲ ಉತ್ಪಾದನೆ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ.
ಈ ಹಿನ್ನೆಲೆಯಲ್ಲಿ ಭಾರತಕ್ಕೆ ಅನಿಲ ಪೂರೈಕೆ ಸಮಸ್ಯೆ ಉಂಟಾದರೆ ಅದನ್ನು ನಿವಾರಿಸಲು ರಷ್ಯಾ ಸಹಕಾರ ನೀಡಲಿದೆ ಎಂಬ ಮಾಹಿತಿ ಹೊರಬಂದಿದೆ.
ಜಾಗತಿಕ ರಾಜಕೀಯ ಉದ್ವಿಗ್ನತೆ ಮತ್ತು ಯುದ್ಧದ ಪರಿಣಾಮದಿಂದ ಇಂಧನ ಮಾರುಕಟ್ಟೆಯಲ್ಲಿ ಉಂಟಾದ ಅನಿಶ್ಚಿತತೆಯ ನಡುವೆ ಭಾರತ ತನ್ನ ಇಂಧನ ಭದ್ರತೆಯನ್ನು ಕಾಯ್ದುಕೊಳ್ಳಲು ಹಲವು ರಾಷ್ಟ್ರಗಳೊಂದಿಗೆ ಸಹಕಾರ ಹೆಚ್ಚಿಸುವತ್ತ ಗಮನ ಹರಿಸುತ್ತಿದೆ.