Visit Channel

ತೈವಾನ್ಗೆ ಯು.ಎಸ್ ಅಧಿಕಾರಿಗಳು ಭೇಟಿ ನೀಡುವುದನ್ನು ತಡೆಯಲು ಚೀನಾಗೆ ಸಾಧ್ಯವಿಲ್ಲ : ನ್ಯಾನ್ಸಿ ಪೆಲೋಸಿ

US

ಟೋಕಿಯೋ : ತೈವಾನ್ಗೆ(Taiwaan) ಅಮೇರಿಕಾದ(America) ಅಧಿಕಾರಿಗಳು ಭೇಟಿ ನೀಡುವುದನ್ನು ತಡೆಯಲು ಚೀನಾಗೆ(China) ಸಾಧ್ಯವಿಲ್ಲ. ತೈವಾನ್ ನಮ್ಮ ಪ್ರಮುಖ ಪಾಲುದಾರ ಮಿತ್ರನಾಗಿದ್ದು, ಅವರೊಂದಿಗೆ ಅಮೇರಿಕಾ ನಿಲ್ಲಲಿದೆ. ತೈವಾನ್ ಮೇಲೆ ನಡೆಯುವ ಯಾವುದೇ ದಬ್ಬಾಳಿಕೆಯನ್ನು ಅಮೇರಿಕಾ ಒಪ್ಪುವುದಿಲ್ಲ ಎಂದು ಯು.ಎಸ್(US) ಹೌಸ್ ಸ್ಪೀಕರ್(House Speaker) ನ್ಯಾನ್ಸಿ ಪೆಲೋಸಿ(Nancy Pelosi) ಹೇಳಿದ್ದಾರೆ.

china


ಏಷ್ಯಾ(Asia) ಪ್ರವಾಸದಲ್ಲಿರುವ ಅವರು ಸಿಂಗಾಪುರ, ಮಲೇಷ್ಯಾ, ತೈವಾನ್ ಮತ್ತು ದಕ್ಷಿಣ ಕೊರಿಯಾಕ್ಕೆ ಭೇಟಿ ನೀಡಿದ ನಂತರ ಇದೀಗ ಜಪಾನ್‌ಗೆ ಭೇಟಿ ನೀಡಿದ್ದು, ಟೋಕಿಯೊದಲ್ಲಿ ಚೀನಾ ವಿರುದ್ದ ಟೀಕೆಗಳನ್ನು ಮಾಡಿದ್ದು, ಸ್ವ-ಆಡಳಿತ ದ್ವೀಪದಲ್ಲಿ ಮತ್ತು ಇತರೆಡೆಗಳಲ್ಲಿ ಪ್ರಜಾಪ್ರಭುತ್ವಕ್ಕೆ ಅಮೇರಿಕಾದ ಬದ್ಧತೆ ಕಬ್ಬಿಣದ ಕವಚವಾಗಿ ಉಳಿದಿದೆ ಎಂದಿದ್ದಾರೆ. ಇನ್ನು ತೈವಾನ್ ಅನ್ನು ವಿಶ್ವಸಮುದಾಯದಿಂದ ಪ್ರತ್ಯೇಕಿಸಲು ಸಾಧ್ಯವಿಲ್ಲ. ನಾವು ತೈವಾನ್ನೊಂದಿಗೆ ನಿಲ್ಲುತ್ತೇವೆ. ಅಮೇರಿಕಾದ ಅಧಿಕಾರಿಗಳು ಈ ಹಿಂದಿನಿಂದಲೂ ತೈವಾನ್ಗೆ ಭೇಟಿ ನೀಡುತ್ತಿದ್ದಾರೆ.

ಮುಂದೆಯೂ ಭೇಟಿ ನೀಡುತ್ತಾರೆ. ಅದನ್ನು ತಡೆಯಲು ಚೀನಾದಿಂದ ಸಾಧ್ಯವಿಲ್ಲ. ಚೀನಾ ಮಿಲಿಟರಿ ಬಲಪ್ರಯೋಗದ ಮೂಲಕ ತೈವಾನ್ ಅನ್ನು ಸುತ್ತುವರೆದು, ಅಂತಾರಾಷ್ಟ್ರೀಯ(International) ಸಮುದಾಯದಿಂದ ಅದನ್ನು ಪ್ರತ್ಯೇಕಿಸುವ ಕಾರ್ಯ ಮಾಡುತ್ತಿದೆ. ಆದರೆ ಅದು ಸಾಧ್ಯವಾಗದು ಎಂದು ನ್ಯಾನ್ಸಿ ಪೆಲೋಸಿ ಹೇಳಿದ್ದಾರೆ.
ಇನ್ನು ತೈವಾನ್ ಅನ್ನು ಅಗತ್ಯಬಿದ್ದರೆ ಬಲವಂತವಾಗಿ ಸ್ವಾಧೀನಪಡಿಸಿಕೊಳ್ಳುವುದಾಗಿ ಬೆದರಿಕೆ ಹಾಕಿರುವ ಚೀನಾ, ಈ ವಾರದ ಆರಂಭದಲ್ಲಿ ತೈವಾನ ದ್ವೀಪಕ್ಕೆ ಯು.ಎಸ್ ಹೌಸ್ ಸ್ಪೀಕರ್ ಪೆಲೋಸಿಯ ಭೇಟಿಯನ್ನು “ಇದು ಅಮೇರಿಕಾದ ಪ್ರಚೋದನೆ” ಎಂದು ಕರೆದಿದೆ.

China

ಗುರುವಾರ ತೈವಾನ್ ಸುತ್ತಮುತ್ತಲಿನ ಆರು ವಲಯಗಳಲ್ಲಿ ಖಂಡಾಂತರ ಕ್ಷಿಪಣಿ ಪರೀಕ್ಷೆ ಸೇರಿದಂತೆ ಮಿಲಿಟರಿ ವ್ಯಾಯಾಮವನ್ನು ಪ್ರಾರಂಭಿಸಿದೆ.

Latest News

BJP
ರಾಜಕೀಯ

ಮುಸ್ಲಿಂ ಏರಿಯಾದಲ್ಲಿ ಸಾವರ್ಕರ್ ಫೋಟೋ ಹಾಕಬಾರದಿತ್ತು ಎನ್ನಲು ಸಿದ್ದರಾಮಯ್ಯ ಯಾರು? : ಬಿಜೆಪಿ

ಮತ್ತೊಮ್ಮೆ ದೇಶ ವಿಭಜಿಸುವ ಕಾಂಗ್ರೆಸ್ ಪಕ್ಷದ(Congress Party) ಹಿಡನ್ ಅಜೆಂಡಾ ಸಿದ್ದರಾಮಯ್ಯ ಬಾಯಿಂದ ಬಹಿರಂಗವಾಗಿದೆ ಎಂದಿದೆ.

Fruit
ಮಾಹಿತಿ

ಬಿಪಿ, ಮದುಮೇಹ ಸೇರಿದಂತೆ ಅನೇಕ ಖಾಯಿಲೆಗಳಿಗೆ ರಾಮಬಾಣ ನೇರಳೆ ಹಣ್ಣು ; ಓದಿ ಈ ಉಪಯುಕ್ತ ಮಾಹಿತಿ

ಮಧುಮೇಹ, ಹೃದಯದ ಕಾಯಿಲೆ, ಸಂಧಿವಾತ, ಹೊಟ್ಟೆಯ ಖಾಯಿಲೆಗಳ ನಿಯಂತ್ರಣ ಮತ್ತು ನಿವಾರಣೆಗೂ ಇದು ರಾಮಬಾಣ ಎನ್ನುತ್ತದೆ ಆಯುರ್ವೇದ(Ayurveda).

Lal Singh Chadda
ಮನರಂಜನೆ

ಲಾಲ್ ಸಿಂಗ್ ಚಡ್ಡಾ ನಷ್ಟಕ್ಕೆ ವಿತರಕರಿಗೆ ಪರಿಹಾರ ಕೊಡಲು ಸಜ್ಜಾದ್ರಾ ನಟ ಅಮೀರ್ ಖಾನ್?

ಚಿತ್ರದ ವಿತರಕರಿಗೆ ಪರಿಹಾರದ ಮಾದರಿಯನ್ನು ರೂಪಿಸಲು ನಟ ಅಮೀರ್ ಖಾನ್ ಮಾತುಕತೆ ನಡೆಸುತ್ತಿದ್ದಾರೆ ಎಂಬುದು ತಿಳಿದು ಬಂದಿದೆ.