Tel Aviv: ಪ್ಯಾಲೆಸ್ಟೈನ್ನಲ್ಲಿ (Palestine) ನಡೆಯುತ್ತಿರುವ ಇಸ್ರೇಲ್ ಮತ್ತು ಹಮಾಸ್ ಉಗ್ರಗಾಮಿಗಳ ನಡುವಿನ (US Increased power to Israel) ಯುದ್ಧದ ಹಿನ್ನೆಲೆಯಲ್ಲಿ ಅಮೇರಿಕಾ ಮಧ್ಯಪ್ರವೇಶ
ಮಾಡಿದ್ದು ವಿಮಾನವಾಹಕ ನೌಕೆ, ಹಡಗುಗಳು ಮತ್ತು ಜೆಟ್ಗಳನ್ನು ಪೂರ್ವ ಮೆಡಿಟರೇನಿಯನ್ಗೆ ಅಮೇರಿಕಾ (America) ಸ್ಥಳಾಂತರಿಸಿದೆ. ಅಗತ್ಯ ಬಿದ್ದಲ್ಲಿ ಯುದ್ಧ ವಿಮಾನಗಳನ್ನೂ ಕಳುಹಿಸುವ ಸಾಧ್ಯತೆ
ಇದೆ ಎಂದು ಅಮೆರಿಕ ರಕ್ಷಣಾ ಕಾರ್ಯದರ್ಶಿ (US Increased power to Israel) ಲಾಯ್ಡ್ ಆಸ್ಟಿನ್ ಹೇಳಿದ್ದಾರೆ.
ಗಾಜಾ ಮೂಲದ ಪ್ಯಾಲೇಸ್ಟಿನಿಯನ್ ಉಗ್ರಗಾಮಿ ಗುಂಪು ಹಮಾಸ್ ಇಸ್ರೇಲ್ ಮೇಲೆ ಭಾರೀ ಪ್ರಮಾಣದಲ್ಲಿ ರಾಕೆಟ್ ದಾಳಿ ನಡೆಸಿ ಯುದ್ದ ಘೋಷಣೆ ಮಾಡಿದ ನಂತರ ಇಸ್ರೇಲ್ ಕೂಡಾ ಪ್ರತಿಯಾಗಿ
ಯುದ್ಧವನ್ನು ಘೋಷಿಸಿತು. ‘ಆಪರೇಷನ್ ಅಲ್-ಅಕ್ಸಾ ಫ್ಲಡ್’ (Operation Al-Aqsa Flood) ಎಂದು ಕರೆಯಲ್ಪಡುವ ಹಮಾಸ್ ಕಾರ್ಯಾಚರಣೆಯಿಂದ ಪ್ರಚೋದಿಸಲ್ಪಟ್ಟ ನಡೆಯುತ್ತಿರುವ ಸಂಘರ್ಷವು
ಎರಡೂ ಕಡೆಗಳಲ್ಲಿ 1,100 ಕ್ಕೂ ಹೆಚ್ಚು ಸಾವುಗಳಿಗೆ ಕಾರಣವಾಗಿದೆ. ಸಾವಿರಾರು ಮಂದಿ ಗಾಯಗೊಂಡು ಸ್ಥಳಾಂತರಗೊಂಡಿದ್ದಾರೆ. 130 ಕ್ಕೂ ಹೆಚ್ಚು ಇಸ್ರೇಲಿಗಳು ಮತ್ತು ಇತರ ಪ್ರಜೆಗಳು ಹಮಾಸ್
ಉಗ್ರರ ಒತ್ತೆಯಾಳಾಗಿದ್ದಾರೆ ಎನ್ನಲಾಗಿದೆ.
ಅಕ್ಟೋಬರ್(October) 9ರಂದು ಶನಿವಾರ ಹಮಾಸ್ ಉಗ್ರರು ಇಸ್ರೇಲ್ ಮೇಲೆ ದಾಳಿಯನ್ನು ಪ್ರಾರಂಭಿಸಿದ್ದು, ಇಸ್ರೇಲ್ನ ದಕ್ಷಿಣದ ಭಾಗದ ಪಟ್ಟಣಗಳಿಗೆ ಶಸ್ತ್ರಸಜ್ಜಿತ ಉಗ್ರರು ನುಸುಳಿದ್ದಾರೆ. ಇದಕ್ಕೆ
ಪ್ರತಿಕ್ರಿಯೆಯಾಗಿ, ಇಸ್ರೇಲ್ ಬೃಹತ್ ವಾಯುದಾಳಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದ್ದು, ಸುಮಾರು 400 ಹಮಾಸ್ ಉಗ್ರಗಾಮಿಗಳನ್ನು ನಿರ್ಮೂಲನೆ ಮಾಡಿದ್ದೇವೆ ಎಂದು ಇಸ್ರೇಲ್ ಹೇಳಿಕೊಂಡಿದೆ.
ಪ್ಯಾಲೇಸ್ಟಿನಿಯನ್ ಉಗ್ರಗಾಮಿ ಗುಂಪು ಹಮಾಸ್ ಇಸ್ರೇಲ್ ಮೇಲೆ ನಡೆಸಿರುವ ದಾಳಿಗೆ ಇರಾನ್ ಮತ್ತು ಲೆಬನಾನಿನ ಉಗ್ರಗಾಮಿ ಗುಂಪು ಹೆಜ್ಬೊಲ್ಲಾಹ್ ಬೆಂಬಲ ವ್ಯಕ್ತಪಡಿಸಿವೆ. ಹೀಗಾಗಿ ಇದೀಗ
ಇಸ್ರೇಲ್ಗೆ ಬೆಂಬಲ ನೀಡಲು ಅಮೇರಿಕಾ ಮುಂದಾಗಿದೆ. ಮಇಸ್ರೇಲ್ ಮತ್ತು ಈ ಪ್ರದೇಶದಲ್ಲಿನ ಇತರ ಅಮೇರಿಕಾದ ಮಿತ್ರರಾಷ್ಟ್ರಗಳಿಗೆ ಧೈರ್ಯ ತುಂಬಲು ಮತ್ತು ಸಂಘರ್ಷದ ಲಾಭವನ್ನು ಪಡೆಯಲು
ಇರಾನ್ನಂತಹ ವಿರೋಧಿಗಳನ್ನು ತಡೆಯಲು ಯು.ಎಸ್.ಎಸ್. ಜೆರಾಲ್ಡ್ ಫೋರ್ಡ್ ಸ್ಟ್ರೈಕ್ ವಿಮಾನವಾಹಕ ನೌಕೆ ಸೇರಿದಂತೆ ಹಲವಾರು ವಿಧ್ವಂಸಕಗಳು ಮತ್ತು ಕ್ರೂಸರ್ಗಳನ್ನು ಪೂರ್ವ ಮೆಡಿಟರೇನಿಯನ್ಗೆ
ಕಳುಹಿಸಲಾಗಿದೆ. ಇದಲ್ಲದೆ, ಈ ಪ್ರದೇಶದಲ್ಲಿ F-35, F-15, F-16 ಮತ್ತು A-10 ಯುದ್ಧವಿಮಾನಗಳ ಸ್ಕ್ವಾಡ್ರನ್ಗಳನ್ನು ಬಲಪಡಿಸಲಾಗುತ್ತಿದೆ. ಇಸ್ರೇಲಿ ರಕ್ಷಣಾ ಪಡೆಗಳಿಗೆ ಉಪಕರಣಗಳು ಮತ್ತು
ಮದ್ದುಗುಂಡುಗಳನ್ನು ಸಾಗಿಸಲು ಪ್ರಾರಂಭಿಸುತ್ತದೆ ಎಂದು ಯುಎಸ್ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ (Lloyd Asty) ಹೇಳಿದ್ದಾರೆ.
ಇದನ್ನು ಓದಿ : ಪಂಚ ರಾಜ್ಯಗಳ ವಿಧಾನಸಭಾ ಚುನಾವಣಾ ದಿನಾಂಕ ಪ್ರಕಟ ; ಡಿಸೆಂಬರ್ 3ಕ್ಕೆ ಫಲಿತಾಂಶ