• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ದೇಶ-ವಿದೇಶ

ಅಮೆರಿಕ-ಇರಾನ್ ಸಂಘರ್ಷ: 60 ದಿನಗಳ ಡೆಡ್‌ಲೈನ್‌ ಅಂತ್ಯ, ನಿರ್ಣಾಯಕ ಹಂತದಲ್ಲಿ ಟ್ರಂಪ್ ಆಡಳಿತ

Teju Srinivas by Teju Srinivas
in ದೇಶ-ವಿದೇಶ, ಪ್ರಮುಖ ಸುದ್ದಿ, ವಿಜಯ ಟೈಮ್ಸ್‌
ಅಮೆರಿಕ-ಇರಾನ್ ಸಂಘರ್ಷ: 60 ದಿನಗಳ ಡೆಡ್‌ಲೈನ್‌ ಅಂತ್ಯ, ನಿರ್ಣಾಯಕ ಹಂತದಲ್ಲಿ ಟ್ರಂಪ್ ಆಡಳಿತ
0
SHARES
9
VIEWS
Share on FacebookShare on Twitter

ಇರಾನ್ ಯುದ್ಧ: ಟ್ರಂಪ್ ನಿರ್ಧಾರದ (US Iran conflict deadline ends) ಮೇಲಿದೆ ಎಲ್ಲರ ಕಣ್ಣು

ಕಾನೂನು ಗಡುವು ಮುಗಿಯುತ್ತಿದ್ದಂತೆ ರಾಜಕೀಯ ಒತ್ತಡ ತೀವ್ರ

ಸೈನ್ಯ ಹಿಂತೆಗೆದುಕೊಳ್ಳಬೇಕೇ ಅಥವಾ ಯುದ್ಧ ಮುಂದುವರಿಸಬೇಕೇ ಎಂಬ ದ್ವಂದ್ವದಲ್ಲಿ ಟ್ರಂಪ್

ಅಮೆರಿಕ ಮತ್ತು ಇರಾನ್ ನಡುವಿನ ಸಂಘರ್ಷ ಇದೀಗ ತೀವ್ರ (US Iran conflict deadline ends) ಹಂತಕ್ಕೆ ತಲುಪಿದೆ.

ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ಕಾಂಗ್ರೆಸ್‌ನ(ಅಮೆರಿಕದ ಸಂಸತ್‌)ಪೂರ್ವಾನುಮತಿಯಿಲ್ಲದೆ ಆರಂಭಿಸಿದ ಮಿಲಿಟರಿ ಕಾರ್ಯಾಚರಣೆಗೆ ಸಂಬಂಧಿಸಿದ 60 ದಿನಗಳ ಕಾನೂನು ಗಡುವು ಇಂದು ಮೇ 1ರಂದು ಅಂತ್ಯಗೊಳ್ಳುತ್ತಿದೆ.

ಈ ಗಡುವು 1973ರ ‘ವಾರ್ ಪವರ್ಸ್ ಆಕ್ಟ್’ (War Powers Act) ಅಡಿಯಲ್ಲಿ ನಿಗದಿಯಾಗಿದ್ದು, ಅಧ್ಯಕ್ಷರು ತುರ್ತು ಪರಿಸ್ಥಿತಿಯಲ್ಲಿ ಸೈನಿಕ ಕ್ರಮ ಕೈಗೊಳ್ಳಲು ಅವಕಾಶ ನೀಡುತ್ತದೆ. ಆದರೆ ಅದೇ ವೇಳೆ, ಈ ಕ್ರಮವನ್ನು ಮುಂದುವರಿಸಲು ಕಾಂಗ್ರೆಸ್‌ನ (ಅಮೆರಿಕದ ಸಂಸತ್‌) ಅಧಿಕೃತ ಅನುಮೋದನೆ ಅಗತ್ಯವಿದೆ.

US Iran conflict deadline ends

ಗಡುವು ಮುಗಿಯುತ್ತಿರುವ ಹಿನ್ನೆಲೆ ಟ್ರಂಪ್ ಮುಂದಿನ ಹೆಜ್ಜೆ ಏನು ಎನ್ನುವುದು ಜಗತ್ತಿನ ಮಟ್ಟದಲ್ಲಿಯೇ ಕುತೂಹಲಕ್ಕೆ ಕಾರಣವಾಗಿದೆ.

ಈ ಕಾನೂನು ಪ್ರಕಾರ, ಅಧ್ಯಕ್ಷರು ಯಾವುದೇ ಸೈನಿಕ ಕಾರ್ಯಾಚರಣೆ (US Iran conflict deadline ends) ಆರಂಭಿಸಿದ 48 ಗಂಟೆಗಳ ಒಳಗಾಗಿ ಕಾಂಗ್ರೆಸ್‌ಗೆ (ಅಮೆರಿಕದ ಸಂಸತ್‌) ಮಾಹಿತಿ ನೀಡಬೇಕು.

ಅದಲ್ಲದೆ, 60 ದಿನಗಳ ಒಳಗೆ ಕಾಂಗ್ರೆಸ್‌ನ(ಅಮೆರಿಕದ ಸಂಸತ್‌)ಅನುಮೋದನೆ ಪಡೆಯಬೇಕು. ಅನುಮತಿ ಸಿಗದಿದ್ದಲ್ಲಿ, ಸೈನಿಕ ಪಡೆಗಳನ್ನು ಹಿಂತೆಗೆದುಕೊಳ್ಳುವುದು ಕಡ್ಡಾಯವಾಗುತ್ತದೆ.

ಈ ನಿಯಮಗಳು ಅಮೆರಿಕದ ಕಾರ್ಯನಿರ್ವಹಣಾ ಮತ್ತು ಶಾಸನಾಂಗಗಳ ನಡುವೆ ಸಮತೋಲನವನ್ನು ಕಾಯ್ದುಕೊಳ್ಳಲು ರೂಪಿಸಲ್ಪಟ್ಟಿವೆ. ಈಗಿನ ಪರಿಸ್ಥಿತಿಯಲ್ಲಿ,

ಟ್ರಂಪ್ ಆಡಳಿತವು ಮಾರ್ಚ್ 2ರಂದು ಕಾಂಗ್ರೆಸ್‌ಗೆ (ಅಮೆರಿಕದ ಸಂಸತ್‌)ವರದಿ ಸಲ್ಲಿಸಿದ್ದು, ಆ ದಿನದಿಂದ ಲೆಕ್ಕಿಸಿದರೆ ಗಡುವು ನಾಳೆಯೇ ಪೂರ್ಣಗೊಳ್ಳಲಿದೆ.

ಫೆಬ್ರವರಿ 28ರಂದು ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ದಾಳಿ ನಡೆಸಿದ್ದವು. ಈ ದಾಳಿಯಲ್ಲಿ ಇರಾನ್‌ನ ಪರಮಾಣು ಸ್ಥಾವರಗಳು, ಸೈನಿಕ ಕೇಂದ್ರಗಳು

ಹಾಗೂ ಪ್ರಮುಖ ನಾಯಕರನ್ನು ಗುರಿಯಾಗಿಸಲಾಗಿತ್ತು.

ದಾಳಿಯ ಬಳಿಕ ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ತಾತ್ಕಾಲಿಕ ಕದನ ವಿರಾಮ ಜಾರಿಯಲ್ಲಿದ್ದರೂ, ಸೈನಿಕ ಸನ್ನದ್ಧತೆ ಮತ್ತು ನೌಕಾ ದಿಗ್ಬಂಧನ ಮುಂದುವರಿದಿದೆ.

ಹೀಗಾಗಿ ಕಾನೂನು ಗಡುವಿನ ಪ್ರಾಮುಖ್ಯತೆ ಇನ್ನೂ ಕಡಿಮೆಯಾಗಿಲ್ಲ. ಪರಿಸ್ಥಿತಿ ಮೇಲ್ನೋಟಕ್ಕೆ ಶಾಂತವಾಗಿದ್ದರೂ, ಅಡಿಪಾಯದಲ್ಲಿ ಉದ್ವಿಗ್ನತೆ ಮುಂದುವರಿದಿದೆ.

ಮುಂದಿನ ಹಂತದಲ್ಲಿ ಟ್ರಂಪ್ ಮುಂದೆ ಹಲವು ಆಯ್ಕೆಗಳಿವೆ. ಯುದ್ಧವನ್ನು ಮುಂದುವರಿಸಲು ಅವರು ಕಾಂಗ್ರೆಸ್‌ನಿಂದ(ಅಮೆರಿಕದ ಸಂಸತ್‌) ಅಧಿಕೃತ

ಅನುಮತಿ ಪಡೆಯಬೇಕಾಗುತ್ತದೆ. ಅಥವಾ ಅನಿವಾರ್ಯ ಪರಿಸ್ಥಿತಿಗಳನ್ನು ಉಲ್ಲೇಖಿಸಿ ಹೆಚ್ಚುವರಿ 30 ದಿನಗಳ ಕಾಲಾವಕಾಶವನ್ನು ಕೋರಬಹುದು.

ಆದರೆ ಕಾಂಗ್ರೆಸ್ (Congress) ಅನುಮೋದನೆ ನೀಡದಿದ್ದರೆ, ಕಾನೂನಿನ ಪ್ರಕಾರ ಸೈನ್ಯವನ್ನು ಹಿಂದಕ್ಕೆ ಕರೆಸಿಕೊಳ್ಳಬೇಕಾಗುತ್ತದೆ.

ಇದೇ ವೇಳೆ, ಅಮೆರಿಕದ ಜನಾಭಿಪ್ರಾಯವೂ ಯುದ್ಧದ ವಿರುದ್ಧ ತಿರುಗುತ್ತಿರುವುದು ಆಡಳಿತಕ್ಕೆ ಮತ್ತೊಂದು ಸವಾಲಾಗಿದೆ. ಸಮೀಕ್ಷೆಗಳ ಪ್ರಕಾರ, ಬಹುಮತ ಅಮೆರಿಕನ್ನರು ಈ ಯುದ್ಧವನ್ನು ವಿರೋಧಿಸುತ್ತಿದ್ದಾರೆ.

ಇದಕ್ಕೆ ಜೊತೆಯಾಗಿ ರಾಜಕೀಯ ಒತ್ತಡವೂ ಹೆಚ್ಚುತ್ತಿದೆ. ಕೆಲವು ರಿಪಬ್ಲಿಕನ್ (Republican) ಸಂಸದರು ಕೂಡ ಕಾಂಗ್ರೆಸ್(ಅಮೆರಿಕದ ಸಂಸತ್‌) ಅನುಮತಿ ಇಲ್ಲದೆ ಯುದ್ಧ ಮುಂದುವರಿಸುವುದನ್ನು ವಿರೋಧಿಸುತ್ತಿದ್ದಾರೆ.

ವಿರೋಧ ಪಕ್ಷದ ಡೆಮೋಕ್ರಾಟ್ (Democrat) ನಾಯಕರು ಟ್ರಂಪ್ ಈ ಗಡುವನ್ನು ಲೆಕ್ಕಿಸದೇ ಮುಂದುವರಿಯುವ ಸಾಧ್ಯತೆ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಅಂತಹ ಪರಿಸ್ಥಿತಿಯಲ್ಲಿ ಅಮೆರಿಕದಲ್ಲಿ ಸಂವಿಧಾನಾತ್ಮಕ ಬಿಕ್ಕಟ್ಟು ಉಂಟಾಗುವ ಸಾಧ್ಯತೆಯಿದೆ. ಇಂಧನದ ಬೆಲೆ ಏರಿಕೆ ಹಾಗೂ ಆರ್ಥಿಕ ಒತ್ತಡಗಳ ನಡುವೆ ಟ್ರಂಪ್ ತೆಗೆದುಕೊಳ್ಳುವ ನಿರ್ಧಾರವು ಮುಂದಿನ ದಿನಗಳಲ್ಲಿ ಜಾಗತಿಕ ರಾಜಕೀಯದ ದಿಕ್ಕನ್ನು ನಿರ್ಧರಿಸಲಿದೆ.

ಇದನ್ನು ಓದಿ : https://vijayatimes.com/bowring-hospital-compound-collapse/

Tags: americaDeadlineIranwarwarconflict

Related News

ಇಂದು ದೇಶಾದ್ಯಂತ ಮೆಡಿಕಲ್ ಶಾಪ್ ಬಂದ್‌ : ಅಗತ್ಯ ಔಷಧಿಗಾಗಿ ವಿಶೇಷ ವ್ಯವಸ್ಥೆ
ದೇಶ-ವಿದೇಶ

ಇಂದು ದೇಶಾದ್ಯಂತ ಮೆಡಿಕಲ್ ಶಾಪ್ ಬಂದ್‌ : ಅಗತ್ಯ ಔಷಧಿಗಾಗಿ ವಿಶೇಷ ವ್ಯವಸ್ಥೆ

May 20, 2026
ಅಮೆರಿಕದ ‘ಆಪರೇಶನ್ ಎಪಿಕ್ ಫ್ಯೂರಿ’ಗೆ ಭಾರೀ ಹೊಡೆತ: F-35 ಸೇರಿ 42 ಯುದ್ಧ ವಿಮಾನ, ಡ್ರೋನ್‌ಗಳಿಗೆ ಹಾನಿ
ದೇಶ-ವಿದೇಶ

ಅಮೆರಿಕದ ‘ಆಪರೇಶನ್ ಎಪಿಕ್ ಫ್ಯೂರಿ’ಗೆ ಭಾರೀ ಹೊಡೆತ: F-35 ಸೇರಿ 42 ಯುದ್ಧ ವಿಮಾನ, ಡ್ರೋನ್‌ಗಳಿಗೆ ಹಾನಿ

May 20, 2026
ಮತ್ತೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ: ವಾಹನ ಸವಾರರಿಗೆ ಶಾಕ್
ಪ್ರಮುಖ ಸುದ್ದಿ

ಮತ್ತೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ: ವಾಹನ ಸವಾರರಿಗೆ ಶಾಕ್

May 19, 2026
ರಾಜ್ಯ ಸರ್ಕಾರದ ಮೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ಸಾಧನ ಸಮಾವೇಶ: ಗಿನ್ನೆಸ್ ದಾಖಲೆ ಬರೆಯಲು ಸಜ್ಜಾದ ತುಮಕೂರು
ಪ್ರಮುಖ ಸುದ್ದಿ

ರಾಜ್ಯ ಸರ್ಕಾರದ ಮೂರು ವರ್ಷ ತುಂಬಿದ ಹಿನ್ನೆಲೆಯಲ್ಲಿ ಸಾಧನ ಸಮಾವೇಶ: ಗಿನ್ನೆಸ್ ದಾಖಲೆ ಬರೆಯಲು ಸಜ್ಜಾದ ತುಮಕೂರು

May 19, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.