ಪಾಕ್ ಮಧ್ಯಸ್ಥಿಕೆಯಲ್ಲಿ (US Iran war ceasefire) ಅಮೆರಿಕಾ–ಇರಾನ್ ಶಾಂತಿ ಒಪ್ಪಂದ
ಪಶ್ಚಿಮ ಏಷ್ಯಾದಲ್ಲಿ ತಾತ್ಕಾಲಿಕ ಶಾಂತಿ: ಕದನ ವಿರಾಮ ಘೋಷಣೆ
ಹಾರ್ಮುಜ್ ಜಲಸಂಧಿ ಪುನಃ ತೆರವು: ಜಾಗತಿಕ ತೈಲ ಮಾರುಕಟ್ಟೆಗೆ ನಿರಾಳ ಉಸಿರು
ಪಶ್ಚಿಮ ಏಷ್ಯಾದಲ್ಲಿ ಕಳೆದ ಕೆಲವು ವಾರಗಳಿಂದ ತೀವ್ರ ಉದ್ವಿಗ್ನತೆ ಸೃಷ್ಟಿಸಿದ್ದ (US Iran war ceasefire) ಅಮೆರಿಕಾ ಮತ್ತು ಇರಾನ್ ನಡುವಿನ ಸಂಘರ್ಷಕ್ಕೆ ತಾತ್ಕಾಲಿಕ ತಣಿವು ಸಿಕ್ಕಂತಾಗಿದೆ.
ಯುದ್ಧದ ಭೀತಿಯ ನಡುವೆ, ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ನೀಡಿದ್ದ ಗಡುವು ಮುಗಿಯಲು ಗಂಟೆಗಳಷ್ಟೇ ಬಾಕಿ ಇರುವಾಗ ಮಹತ್ವದ ರಾಜತಾಂತ್ರಿಕ ಬೆಳವಣಿಗೆ ನಡೆದಿದೆ.

ಪಾಕಿಸ್ತಾನದ ಮಧ್ಯಸ್ಥಿಕೆಯಲ್ಲಿ ಎರಡೂ ರಾಷ್ಟ್ರಗಳು ಎರಡು ವಾರಗಳ ಕಾಲ ಕದನ ವಿರಾಮಕ್ಕೆ ಒಪ್ಪಿಕೊಂಡಿದ್ದು, ಈ ನಿರ್ಧಾರವು ಜಾಗತಿಕ ಮಟ್ಟದಲ್ಲಿ ಸ್ವಾಗತಕ್ಕೆ ಪಾತ್ರವಾಗಿದೆ.
ಈ ಕದನ ವಿರಾಮ ಒಪ್ಪಂದದ ಪ್ರಕಾರ, ಅಮೆರಿಕಾ ಮತ್ತು ಇರಾನ್ ಎರಡೂ ದೇಶಗಳು ತಮ್ಮ ಸೇನಾ ಕಾರ್ಯಾಚರಣೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಒಪ್ಪಿಕೊಂಡಿವೆ.
ಮುಂದಿನ ದಿನಗಳಲ್ಲಿ ಶಾಂತಿ ಮಾತುಕತೆಗಳಿಗೆ ಅವಕಾಶ ಕಲ್ಪಿಸುವ (US Iran war ceasefire) ಉದ್ದೇಶದಿಂದ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಪಾಕಿಸ್ತಾನ ಪ್ರಧಾನಿ Shehbaz Sharif ಮತ್ತು ಸೇನಾಪ್ರಮುಖ Asim Munir ಅವರ ಮಧ್ಯಸ್ಥಿಕೆಯಲ್ಲಿ ಈ ಒಪ್ಪಂದ ಸಾಧ್ಯವಾಗಿದೆ. ಈ ಬೆಳವಣಿಗೆ ಪಶ್ಚಿಮ ಏಷ್ಯಾ ಪ್ರದೇಶದಲ್ಲಿ
ಶಾಂತಿ ಸ್ಥಾಪನೆಗೆ ಹೊಸ ದಾರಿಯನ್ನು ತೆರೆದಿದೆ. ಒಪ್ಪಂದದ ಪ್ರಮುಖ ಅಂಶವೆಂದರೆ ಹಾರ್ಮುಜ್ ಜಲಸಂಧಿಯ ಪುನರ್ ತೆರವು.
Strait of Hormuz ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾಗಿದ್ದು, ಇದು ಮುಚ್ಚಲ್ಪಟ್ಟಿದ್ದರಿಂದ ತೈಲ ಬೆಲೆಗಳು ಏರಿಕೆಯಾಗಿದ್ದವು.
ಇದೀಗ ಈ ಮಾರ್ಗವನ್ನು ಸುರಕ್ಷಿತವಾಗಿ ತೆರೆಯಲು ಇರಾನ್ ಒಪ್ಪಿಕೊಂಡಿರುವುದು ಜಾಗತಿಕ ಸರಬರಾಜು ಸರಪಳಿಗೆ ದೊಡ್ಡ ಮಟ್ಟದ ನೆರವಾಗಿದೆ. ಇದರ ಪರಿಣಾಮವಾಗಿ ತೈಲ ಮಾರುಕಟ್ಟೆಯಲ್ಲಿ ಸ್ಥಿರತೆ ಮೂಡುವ ಸಾಧ್ಯತೆ ಹೆಚ್ಚಿದೆ.
ಇದೇ ವೇಳೆ, ಇಸ್ರೇಲ್ ಸಹ ತಾತ್ಕಾಲಿಕವಾಗಿ ತನ್ನ ಸೇನಾ ಕಾರ್ಯಾಚರಣೆಗಳನ್ನು ನಿಲ್ಲಿಸಲು ಒಪ್ಪಿಕೊಂಡಿರುವುದು ಗಮನಾರ್ಹ.
ಈ ಹಿನ್ನೆಲೆಯಲ್ಲಿ ಏಪ್ರಿಲ್ 10ರಂದು Islamabad ನಲ್ಲಿ ಅಮೆರಿಕಾ ಮತ್ತು ಇರಾನ್ ಪ್ರತಿನಿಧಿಗಳ ನಡುವೆ ಔಪಚಾರಿಕ ಮಾತುಕತೆಗಳು ಆರಂಭವಾಗಲಿವೆ.
ಈ ಮಾತುಕತೆಗಳು ಭವಿಷ್ಯದ ಶಾಂತಿ ಒಪ್ಪಂದಕ್ಕೆ ದಾರಿಯನ್ನೀಡುವ ಸಾಧ್ಯತೆ ಇದೆ ಎಂದು ರಾಜಕೀಯ ವಲಯದಲ್ಲಿ ನಿರೀಕ್ಷಿಸಲಾಗಿದೆ.
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಣೆ ನೀಡಿರುವ ಶೆಹಬಾಜ್ ಶರೀಫ್, ಪಶ್ಚಿಮ ಏಷ್ಯಾದ ಸಂಘರ್ಷದ ನಡುವೆಯೂ ಎರಡೂ ರಾಷ್ಟ್ರಗಳು ಕದನ ವಿರಾಮಕ್ಕೆ ಒಪ್ಪಿಕೊಂಡಿರುವುದು ಶಾಂತಿಯತ್ತ ಮಹತ್ವದ ಹೆಜ್ಜೆ ಎಂದು ಹೇಳಿದ್ದಾರೆ.
ಎಲ್ಲಾ ವಿವಾದಗಳನ್ನು ಶಾಂತಿಯುತವಾಗಿ ಬಗೆಹರಿಸುವ ಗುರಿ ಹೊಂದಿರುವ ಈ ಮಾತುಕತೆಗಳು, ಪ್ರಾಂತ್ಯದಲ್ಲಿ ದೀರ್ಘಕಾಲಿಕ ಸ್ಥಿರತೆ ತರಲು ಸಹಕಾರಿಯಾಗಲಿವೆ
ಎಂಬ ವಿಶ್ವಾಸ ವ್ಯಕ್ತವಾಗಿದೆ. ಮುಂದಿನ ಎರಡು ವಾರಗಳು ಈ ಪ್ರದೇಶದ ರಾಜತಾಂತ್ರಿಕ ಚಟುವಟಿಕೆಗಳಿಗೆ ನಿರ್ಣಾಯಕವಾಗುವ ಸಾಧ್ಯತೆ ಇದೆ.
ಇದನ್ನು ಓದಿ : https://vijayatimes.com/japan-new-plan-for-electricity/