ಮಡಿಕೇರಿ, ಮೇ. 31: ಅಮೇರಿಕಾದ ಪ್ರಮುಖ ಹುದ್ದೆಯಲ್ಲಿದ್ದರೂ ಮಡಿಕೇರಿಯ ಕೊವೀಡ್ ಆಸ್ಪತ್ರೆಗೆ ವೈದ್ಯರೋವ೯ರು ನೆರವು ನೀಡಲು ಮುಂದಾಗಿದ್ದಾರೆ.
ಅಮೇರಿಕಾದ ಆರೋಗ್ಯ ಸಚಿವಾಲಯದಲ್ಲಿ ಪ್ರಮುಖ ಹುದ್ದೆ ಹೊಂದಿರುವ ಭಾರತೀಯ ಸಂಜಾತ ವಿವೇಕ್ ಮೂತಿ೯ ಮಡಿಕೇರಿ ಕೋವಿಡ್ ಆಸ್ಪತ್ರೆಗೆ ಅಗತ್ಯ ನೆರವು ನೀಡಲು ಮುಂದಾಗಿದ್ದಾರೆ.
ಮೂಲತ ಹಳ್ಳಗೆರೆ ಗ್ರಾಮದವರಾದ ಲಕ್ಷ್ಮೀ ನರಸಿಂಹಮೂತಿ೯ ಅವರ ಪುತ್ರ ವಿವೇಕ್ ಮೂತಿ೯ ಅಮೇರಿಕಾ ದೇಶದ ಸಾವ೯ಜನಿಕ ಆರೋಗ್ಯ ಸಚಿವಾಲಯದ ಮುಖ್ಯಸ್ಥರಾಗಿದ್ದಾರೆ.
ಅಮೇರಿಕಾದಲ್ಲಿ ಒಬಾಮ ಸಕಾ೯ರ ಇದ್ದಾಗಲೇ ವಿವೇಕ್ ಮೂತಿ೯ ಅವರನ್ನು ಈ ಹುದ್ದೆಗೆ ನೇಮಿಸಿದ್ದು ವಿವೇಕ್ ವೖತ್ತಿ ಕೌಶಲ್ಯಕ್ಕೆ ಮೆಚ್ಚುಗೆ ಸೂಚಿಸಿದ್ದ ಬಿಡೆನ್ ಕೂಡ ವಿವೇಕ್ ಅವರನ್ನು ಇದೇ ಹುದ್ದೆಯಲ್ಲಿ ಮುಂದುವರೆಸಿದ್ದರು. ತನ್ನ ಸಂಸ್ಥೆಯಾದ ಸ್ಕೋಪ್ ಮೂಲಕ ಇದೀಗ ಭಾರತದ ಕೆಲವು ಸಣ್ಣ ಆಸ್ಪತ್ರೆಗಳಿಗೆ ಅಗತ್ಯ ವೈದ್ಯಕೀಯ ನೆರವು ನೀಡಲು ಮುಂದಾಗಿರುವ ವಿವೇಕ್ ಮೂತಿ೯ ಇದಕ್ಕಾಗಿ ಮಡಿಕೇರಿ ಕೋವಿಡ್ ಆಸ್ಪತ್ರೆ ಸೇರಿದಂತೆ ರಾಜ್ಯದ 12 ಆಸ್ಪತ್ರೆಗಳನ್ನು ಆಯ್ಕೆ ಮಾಡಿಕೊಂಡಿದ್ದಾರೆ.
ಈ ಆಸ್ಪತ್ರೆಗಳಿಗೆ 70 ಆಕ್ಸಿಜನ್ ಉಪಕರಣ, 4 ವೆಂಟಿಲೇಟರ್, ಅತ್ಯುತ್ತಮ ಗುಣಮಟ್ಟದ ಮಾಸ್ಕ್,ವೈದ್ಯಕೀಯ ಉಪಕರಣಗಳನ್ನು ನೀಡಲಿದ್ದಾರೆ. 12 ಆಸ್ಪತ್ರೆಗಳಿಗೆ ಸ್ಕೋಪ್ ಫೌಂಡೇಶನ್ ವಿನಿಯೋಗಿಸಲಿರುವ ಮೊತ್ತವೇ 2.40 ಕೋಟಿ ರು. ಗಳಾಗಿದೆ. ಈಗಾಗಲೇ ಈ ಸಾಮಾಗ್ರಿಗಳು ಬೆಂಗಳೂರು ತಲುಪಿದ್ದು ಸದ್ಯದಲ್ಲಿಯೇ ಮಡಿಕೇರಿ ಕೋವಿಡ್ ಆಸ್ಪತ್ರೆಗೆ ವಿತರಣೆಯಾಗಲಿದೆ ಎಂದು ವಿವೇಕ್ ತಂದೆ ಲಕ್ಷ್ಮೀ ನರಸಿಂಹಮೂತಿ೯ ತಿಳಿಸಿದ್ದಾರೆ.
ಇಷ್ಟಕ್ಕೆ ವಿವೇಕ್ ಕೊಡುಗೆ ಮುಕ್ತಾಯವಾಗಿಲ್ಲ. ಇನ್ನೂ 70 ಲಕ್ಷ ಮೌಲ್ಯದ ವೈದ್ಯಕೀಯ ಸಾಮಾಗ್ರಿಗಳನ್ನು ರಾಜ್ಯದ ಆಯ್ದ ಮತ್ತು ಅಗತ್ಯವಿರುವ ಆಸ್ಪತ್ರೆಗಳಿಗೆ ನೀಡಲು ಯೋಜನೆ ರೂಪಿಸಲಾಗುತ್ತಿದೆ. ಅನೇಕ ಆಸ್ಪತ್ರೆಗಳಿಗೆ ಉತ್ತಮ ವೈದ್ಯಕೀಯ ಸೌಲಭ್ಯಗಳ ಅಗತ್ಯವಿದೆ. ಹೀಗಾಗಿ ಮೊದಲ ಹಂತದಲ್ಲಿ ಇಂಥ ಸಣ್ಣ ಆಸ್ಪತ್ರೆಗಳನ್ನು ನೆರವಿನ ಕೊಡುಗೆಗೆ ವಿವೇಕ್ ಮೂತಿ೯ ಮತ್ತು ಸ್ಕೋಪ್ ತಂಡ ಆಯ್ಕೆ ಮಾಡಿಕೊಂಡಿದೆ.
ವಿಶ್ವದ ಅಗ್ರಗಣ್ಯ ದೇಶದಲ್ಲಿನ ಪ್ರಮುಖ ಹುದ್ದೆಯಲ್ಲಿದ್ದರೂ ತನ್ನ ಹುಟ್ಟೂರು ಮತ್ತು ಕನ್ನಡನಾಡನ್ನು ಮರೆಯದೇ ತಾಯ್ನಾಡಿಗಾಗಿ ಅಮೇರಿಕಾದಿಂದ ಮಹತ್ವದ ವೈದ್ಯಕೀಯ ಉಪಕರಣಗಳನ್ನು ಕೊಡುಗೆಯಾಗಿ ನೀಡಿರುವ ವಿವೇಕ್ ಮೂತಿ೯ ಅವರ ಹೃದಯವಂತಿಕೆ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.