ಕಾಬೂಲ್ ಆ 31 : ಉಗ್ರವಾದವನ್ನು ತಡೆಗಟ್ಟುವ ಸಲುವಾಗಿ ಸುಮಾರು 20 ವರ್ಷಗಳ ಹಿಂದೆ ಅಫ್ಘಾನ್ಗೆ ಕಾಲಿಟ್ಟಿದ್ದ ಅಮೆರಿಕ ಸೇನೆ ಇಂದು ಅಫ್ಘಾನ್ ನಿಂದ ಹೊರ ಹೋಗಬೇಕಾದ ಅನಿವಾರ್ಯತೆಯಿದೆ.
ಅಫ್ಘಾನಿಸ್ತಾನವನ್ನು ತಾಲಿಬಾನಿಗಳು ವಶಪಡಿಸಿಕೊಂಡಿರುವ ಹಿನ್ನಲೆಯಲ್ಲಿ ಅಮೆರಿಕ ಸೈನ್ಯ ತನ್ನ ಸೈನ್ಯವನ್ನು ವಾಪಸ್ ಕರೆಸಿಕೊಳ್ಳುವುದಾಗಿ ಹೇಳಿದೆ. ಈ ಹಿನ್ನಲೆಯಲ್ಲಿ ಅಮೆರಿಕ ತನ್ನ ಸೈನ್ಯವನ್ನು ಕರೆಸಿಕೊಳ್ಳಲು ಇಂದು ಅಂತಿಮ ಗಡುವಾಗಿದೆ.
ಅಫ್ಘಾನಿಸ್ತಾನಕ್ಕೆ ಸಂಬಂಧಿಸಿದಂತೆ ಅಮೆರಿಕ ಹಾಗೂ ತಾಲಿಬಾನ್ ಉಗ್ರರ ನಡುವೆ ಏರ್ಪಟ್ಟಿರುವ ಒಪ್ಪಂದದ ಪ್ರಕಾರ, ದೇಶದಲ್ಲಿರುವ ಎಲ್ಲ ವಿದೇಶಗಳ ಸೈನಿಕರು ಆ.31ರೊಳಗೆ ಅಫ್ಘಾನಿಸ್ತಾನವನ್ನು ತೊರೆಯಬೇಕಿದೆ. ಈ ಒಪ್ಪಂದಕ್ಕೆ ಬದ್ಧ ಎಂದು ಅಮೆರಿಕ ಕೂಡ ಈಗಾಗಲೇ ಘೋಷಿಸಿದೆ.
ಅಮೆರಿಕದ ವಿಶ್ವ ವಾಣಿಜ್ಯ ಗೋಪುರಗಳ ಮೇಲೆ 2001ರ ಸೆ.11ರಂದು ವಿಮಾನಗಳನ್ನು ಡಿಕ್ಕಿ ಹೊಡೆಸಿ ಸಹಸ್ರಾರು ನಾಗರಿಕರನ್ನು ಅಲ್ಖೈದಾ ಭಯೋತ್ಪಾದಕರು ಕೊಂದಿದ್ದರು. ಅಲ್ಖೈದಾ ನೇತಾರರಿಗೆ ತಾಲಿಬಾನ್ ಆಶ್ರಯ ನೀಡಿತ್ತು. ಹೀಗಾಗಿ ಅಫ್ಘಾನಿಸ್ತಾನದ ಮೇಲೆ ಅಮೆರಿಕ ನೇತೃತ್ವದಲ್ಲಿ 40 ದೇಶಗಳನ್ನು ಒಳಗೊಂಡ ನ್ಯಾಟೋ ಪಡೆಗಳು ದಾಳಿ ನಡೆಸಿದ್ದವು. ಅಮೆರಿಕ ನಡೆಸಿದ ಸುದೀರ್ಘ ಯುದ್ಧಕ್ಕೆ ತೆರೆ ಬಿದ್ದಿದೆ. ಈ ಯುದ್ಧ ಯೋಧರು, ನಾಗರಿಕರು, ಉಗ್ರರು ಸೇರಿ 1.72 ಲಕ್ಷ ಜನರನ್ನು ಬಲಿಯಾಗಿದ್ದರು. ಇದೀಗ ತಾಲಿಬಾನ್ಗಳ ಹಿಡಿತದಲ್ಲಿರುವ ಅಫ್ಘಾನ್ ಜನತೆ ಮುಂದೆ ಹೇಗೂ ಎಂಬ ಚಿಂತೆಯಲ್ಲಿದ್ದಾರೆ.