ಇತ್ತೀಚಿನ ದಿನಗಳಲ್ಲಿ ಕಣ್ಣಿನ ಸಮಸ್ಯೆಗೆ (Eye Issue) ಅನೇಕರು ತುತ್ತಾಗುತ್ತಿದ್ದಾರೆ. ಅತಿಯಾದ ಗ್ಯಾಜೇಟ್ (Gadget) ಬಳಕೆ ಮತ್ತು ಎಲ್ಲ ಕೆಲಸವನ್ನು ಕಂಪ್ಯೂಟರ್ನಲ್ಲೇ ಮಾಡಬೇಕಿರುವುದರಿಂದ ಕಣ್ಣಿನ ಮೇಲಿನ ಒತ್ತಡ ಹೆಚ್ಚಾಗುತ್ತಿದೆ.
ಆದರೆ ಒತ್ತಡ ನಿರ್ವಹಣೆಗೆ ಬೇಕಾದ ಸಿದ್ದತೆಗಳನ್ನು ನಾವು ಮಾಡಿಕೊಳ್ಳದಿರುವುದು ಕಣ್ಣಿನ ಸಮಸ್ಯೆಗೆ ಮುಖ್ಯ ಕಾರಣವಾಗಿದೆ.
ಹೀಗಾಗಿ ಕಣ್ಣಿನ ಆರೋಗ್ಯ ಕಾಪಾಡಿಕೊಳ್ಳಲು 20-20-20 ನಿಯಮ (Use 20-20-20 law for eye health) ಅಗತ್ಯ. ಅದರ ವಿವರ ಇಲ್ಲಿದೆ ನೋಡಿ. ಯಾವುದೇ ರೀತಿಯ ಅಸ್ವಾಭಾವಿಕ ಬೆಳಕನ್ನು ದೀರ್ಘಕಾಲ ನೋಡುವುದು ಕಣ್ಣಿಗೆ ಒಳ್ಳೆಯದಲ್ಲ.
ಇದರಿಂದ ಕಣ್ಣಿನ ಮೇಲೆ ಒತ್ತಡ ಉಂಟಾಗುತ್ತದೆ. ಇದರಿಂದಾಗಿ ತಲೆನೋವು(Head Ache) ಮತ್ತು ದೃಷ್ಟಿ ಮಸುಕಾಗುವಿಕೆ ಉಂಟಾಗುತ್ತದೆ.
ಇದನ್ನೂ ಓದಿ : https://vijayatimes.com/bombay-highcourt-verdict-over-divorce/
ಹೀಗಾಗಿ ಹೆಚ್ಚಾಗಿ ಮೊಬೈಲ್, ಟ್ಯಾಬ್ಲೆಟ್, ಲ್ಯಾಪ್ಟಾಪ್ ಮತ್ತು ಕಂಪ್ಯೂಟರ್ ಬಳಸುವರು 20-20-20 ನಿಯಮವನ್ನು (Use 20-20-20 law for eye health) ಅನುಸರಿಸಿ. ಅಂದರೆ, 20 ನಿಮಿಷಗಳ ಕಾಲ ಸ್ಕ್ರೀನ್ ನೋಡಿ ಕೆಲಸ ಮಾಡಿ,
ನಂತರ 20 ಸೆಕೆಂಡುಗಳ ಕಾಲ 20 ಅಡಿ ದೂರಕ್ಕೆ ನೋಡಿ, ನಂತರ 20 ಸೆಕೆಂಡುಗಳ ಕಾಲ ಕಣ್ಣುಗಳನ್ನು ಮುಚ್ಚಿ ಕಣ್ಣಿಗೆ ವಿಶ್ರಾಂತಿ ನೀಡಿ.
20-20-20 ನಿಯಮದ ನಂತರ ಮತ್ತೆ ಕೆಲಸ ಪ್ರಾರಂಭಿಸಿ. ಹೀಗೆ ಪ್ರತಿ 20 ನಿಮಿಷಕ್ಕೊಮ್ಮೆ ಈ ನಿಮಯವನ್ನು ಅನುಸರಿಸಿ. ಇನ್ನು ಯಾವುದೇ ರೂಪದಲ್ಲಾದರೂ ನಮ್ಮ ದೇಹವನ್ನು ಸೇರುವ ತಂಬಾಕು ಅನೇಕ ಕಣ್ಣಿನ ಸಮಸ್ಯೆಗಳಿಗೆ ಕಾರಣವಾಗುತ್ತದೆ.
ಹೀಗಾಗಿ ಬೀಡಿ, ತಂಬಾಕು, ಸಿಗರೇಟು ಸೇವನೆ ಕಣ್ಣುಗಳಿಗೆ ಒಳ್ಳೆಯದಲ್ಲ.
ಇದನ್ನೂ ಓದಿ : https://vijayatimes.com/mystery-hoia-baciu-forest/
ಕಣ್ಣಿನ ಆರೋಗ್ಯಕ್ಕಾಗಿ, ಎಸಿಇ ನಿಯಮವನ್ನು ಪಾಲಿಸಿ. ಅಂದರೆ ವಿಟಮಿನ್ ಎ, ಸಿ ಮತ್ತು ಇ ಮತ್ತು ಉತ್ಕರ್ಷಣ ನಿರೋಧಕಗಳಾದ ಲುಟೀನ್ ಮತ್ತು ಜಿಯಾಕ್ಸಾಂಥಿನ್ ಅನ್ನು ಆಹಾರದಲ್ಲಿ ಹೆಚ್ಚಾಗಿ ಸೇವಿಸಿ.
ರಕ್ತದಲ್ಲಿನ ಸಕ್ಕರೆಯ ಮಟ್ಟ, ರಕ್ತದೊತ್ತಡದ ಬಗ್ಗೆ ಜಾಗರೂಕರಾಗಿರಿ. ಮಧುಮೇಹ (Diabities) ಮತ್ತು ಅಧಿಕ ರಕ್ತದೊತ್ತಡವು ಕಣ್ಣುಗಳಿಗೆ ಹಾನಿಯನ್ನುಂಟುಮಾಡುತ್ತದೆ. ಹೀಗಾಗಿ ವರ್ಷಕ್ಕೆ ಕನಿಷ್ಠ ಒಂದು ಬಾರಿಯಾದರೂ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳಬೇಕು.
- ಮಹೇಶ್.ಪಿ.ಎಚ್