ಇ-ಶ್ರಮ ಕಾರ್ಡ್ ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಯಾಗಿದೆ . ಅಸಂಘಟಿತ ವಲಯದ ಕಾರ್ಮಿಕರಿಗೆ ಸಂಪೂರ್ಣವಾಗಿ ವೃತ್ತಿ ಮಾಹಿತಿ ಮತ್ತು ಸರ್ಕಾರದ ಯೋಜನೆಗಳು ಕಾರ್ಮಿಕರಿಗೆ ನೇರವಾಗಿ ತಲುಪಿಸುವ ,ಹಾಗೂ ದತ್ತಾಂಶ ಸಂಗ್ರಹಿಸುವ ಉದ್ದೇಶದಿಂದ 26 ಆಗಸ್ಟ್ 2021 ರಂದು ಕೇಂದ್ರ ಸರ್ಕಾರವು ಈ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆ ಜಾರಿ ಮಾಡಿದ ನಂತರ ಯಶಸ್ವಿಯಾಗಿ 1 ವರ್ಷ ಸಮೀಪಿಸಿದೆ.

ಇ-ಶ್ರಮ ಯೋಜನೆ ಪಡೆಯಲು ಯಾರು ಅರ್ಹರು :
ಕಟ್ಟಡ ಕಾರ್ಮಿಕರು, ರಸ್ತೆ ಬದಿ ವ್ಯಾಪಾರಿಗಳು, ಮಿನುಗಾರರು,ಕೃಷಿ ಸಂಗೋಪನಾಕಾರರು ,ಸಣ್ಣ, ಅತಿ ಸಣ್ಣ ರೈತರು, ನೇಕಾರರು , ಆಶಾ ಕಾರ್ಯಕರ್ತೆಯರು, ಛಾಯಾ ಚಿತ್ರಕಾರರು, ಕ್ಷೌರಿಕರು, ತರಕಾರಿ ಮತ್ತು ಹಣ್ಣು ವ್ಯಾಪಾರಿಗಳು, ಪತ್ರಿಕೆ ಮಾರಾಟಗಾರರು, ಟೈಲರ್ಗಳು, ವಲಸೆ ಕಾರ್ಮಿಕರು ,ಬೇಕರಿ ಕಾರ್ಮಿಕರು ಸೇರಿದಂತೆ ಇನ್ನೂ 156 ಅಧಿಕ ವರ್ಗಗಳು ಈ ಯೋಜನೆಗಳಲ್ಲಿ ಪಾಲ್ಗೊಂಡಿವೆ.
ಇ-ಶ್ರಮ ಕಾರ್ಡ್ ಮಾಡಲು ಬೇಕಾಗಿರುವ ಮೂಲ ದಾಖಲಾತಿಗಳು :
ಹೆಸರು, ವಿಳಾಸ, ಉದ್ಯೋಗ, ವಿದ್ಯಾರ್ಹತೆ, ಆಧಾರ ಕಾರ್ಡ್ ,ಚಾಲ್ತಿಯಲ್ಲಿರುವ ಅಥವಾ ಸಕ್ರೀಯವಾಗಿರುವ ಪಾಸ್ ಬುಕ್,ಆಧಾರ ಕಾರ್ಡ್ಗೆ ನಮೂದನೆಯಾಗಿರುವ ಪೋನ್ ನಂಬರ್. ಅದು ಸಕ್ರೀಯವಾಗಿರಬೇಕು.
ಇ-ಶ್ರಮ ಕಾರ್ಡ್ ಸೌಲಭ್ಯಗಳು :
• ದುಬಾರಿ ಚಿಕಿತ್ಸೆ ಹಣಕಾಸಿನ ನೆರವು
• ಭವಿಷ್ಯದ ಪಿಂಚಣಿ ಸೌಲಭ್ಯ
• ಮುಂದಿನ ದಿನಗಳಲ್ಲಿ ಸರಕಾರದ ಯಾವುದೇ ಯೋಜನೆಗಳು ನೇರವಾಗಿ ಅಸಂಘಟಿತ ಕಾರ್ಮಿಕರಿಗೆ ದೊರಕುತ್ತದೆ,
• ಉಚಿತವಾಗಿ 2 ಲಕ್ಷ ರೂಪಾಯಿಗಳು ಅಪಘಾತದಲ್ಲಿ ಕಾರ್ಡ್ದಾರ ಮರಣವಾದರೆ ವಿಮಾ ಯೋಜನೆಯಿಂದ ಲಭ್ಯವಾಗುವುದು
• ಕಾರ್ಡ್ದಾರ ಶಾಶ್ವತ ಅಥವಾ ಭಾಗಶಃ ಅಂಗವಿಕಲರಾದರೆ ಸುಮಾರು 1 ಲಕ್ಷ ರೂಗಳಷ್ಷು ಉಚಿತವಾಗಿ ಸಿಗುವುದು. ಹಾಗೂ ಇನ್ನೂ ಹಲವಾರು

ಇ-ಶ್ರಮ ಕಾರ್ಡನ್ನು ನಮ್ಮ ಮೊಬೈಲ್ ಅಥವಾ ಕಂಪ್ಯೂಟರ್ನಲ್ಲಿ ನಾವೇ ಸ್ವಯಂ ಆಗಿ ನೊಂದಾವಣಿ ಮಾಡಿಕೊಳ್ಳಬಹುದು ಅಥವಾ ಸೈಬರ್ ಸೆಂಟರ್ಗೆ ಹೋಗಿ ಮಾಡಿಸಿಕೊಳ್ಳಬಹುದು. . ಇ-ಶ್ರಮ ಕಾರ್ಡ್ ಮಾಡುವಾಗ ಯಾವುದೇ ತೊಂದರೆ ಉಂಟಾದರೆ ಅಥವಾ ಹೆಚ್ಚಿನ ಮಾಹಿತಿ ಬೇಕಾದರೆ 14434 ಉಚಿತವಾಗಿ ಕರೆ ಮಾಡಿ ಮಾಹಿತಿ ಪಡೆದುಕೊಳ್ಳಬಹುದು. ಇದುವರೆಗೆ ಯಾರು ಅಸಂಘಟಿತ ಕಾರ್ಮಿಕರು ಇ-ಶ್ರಮ ಕಾರ್ಡ್ ಪೋರ್ಟಲ್ ನಲ್ಲಿ ನೋಂದಾವಣೆ ಆಗಿರುವುದಿಲ್ಲವೋ ಈಗಲೇ ಹೋಗಿ ನೀವು ಮತ್ತು ಅಕ್ಕ ಪಕ್ಕದವರಿಗೂ ಸಹ ಮಾಡಿಸಿಕೊಳ್ಳಲು ಹೇಳಿ ಸರ್ಕಾರ ನೀಡಿರುವ ಈ ಯೋಜನೆಯ ಸದುಪಯೋಗ ಪಡೆದುಕೊಳ್ಳಿ.
ವರದಿ : ರಾಘವೇಂದ್ರ ಬೆಂಡ್ಲಗಟ್ಟಿ ಮುಂಡಗೋಡ (ಉ.ಕ)