Visit Channel

ಎಣ್ಣೆ, ಬತ್ತಿ ಇಲ್ಲದೇ ಉರಿಯುವ ಈ 3 ದೀಪಗಳ ಬಗ್ಗೆ ನಿಮಗೆ ತಿಳಿದಿದೆಯಾ? ಇಲ್ಲಿದೆ ಮಾಹಿತಿ

UK

(ಬೃಹ್ಮ ವಿಷ್ಣು ಮಹೇಶ್ವರ ರೂಪದಲ್ಲಿ ನಿರಂತರವಾಗಿ ಉರಿಯುತ್ತಿರುವ ಮೂರು ದೀಪಗಳು) ಕಾರವಾರ ಜಿಲ್ಲೆಯ, ಮುಂಡಗೋಡ ತಾಲೂಕಿನ, ಚಿಗಳ್ಳಿ ಗ್ರಾಮದಲ್ಲಿ ಸುಮಾರು 43 ವರ್ಷಗಳಿಂದ ನಿರಂತರವಾಗಿ 3 ದೀಪಗಳು ವಿಸ್ಮಯ ರೀತಿಯಲ್ಲಿ ಉರಿಯುತ್ತಿವೆ ಯಾವುದೇ ಎಣ್ಣೆ, ಬತ್ತಿ ಇಲ್ಲದೆ. ಈ ಗ್ರಾಮವು ಮುಂಡಗೋಡ ಮತ್ತು ಶಿರಸಿ ಮಾರ್ಗದ ಮಧ್ಯ ಬರುವ ಕಾವಲಕೊಪ್ಪ ಗ್ರಾಮದಿಂದ ಸುಮಾರು 1 ಕಿ.ಮೀ ಸಮೀಪ ಪವಿತ್ರವಾದ ಆಧಿಶಕ್ತಾತ್ಮಕ ಶ್ರೀ ಶ್ರೀ ಶ್ರೀ ದೀಪನಾಥೇಶ್ವರ ದೇವಾಲಯದ ಸ್ಥಳಕ್ಕೆ ಬರುತ್ತದೆ. ಈ 3 ವಿಸ್ಮಯ ದೀಪಗಳು ನೋಡಲು ಹೊರ ರಾಷ್ಟಗಳಿಂದ ಮತ್ತು ಹೊರ ರಾಜ್ಯಗಳಿಂದ ಬರುತ್ತಾರೆ.

ಬೃಹ್ಮ,ವಿಷ್ಣು, ಮಹೇಶ್ವರ ದೈವ ರೂಪದಲ್ಲಿರುವ ಈ ವಿಸ್ಮಯ ದೀಪಗಳನ್ನೂ ನೋಡಲು ಪ್ರತಿ ನಿತ್ಯವೂ ನೂರಾರು ಜನರು ಭಕ್ತರು ಮತ್ತು ಪ್ರವಾಸಿಗರು ಬರುತ್ತಾರೆ. ಈ ದೀಪವನ್ನು ಹಚ್ಚಿದವರು ದಿವಂಗತ ಶಾರದಾ ಅಣ್ಣಪ್ಪಯ್ಯ ದೈವಜ್ಞ ಎಂಬ ದೈವ ಪರಮ ಭಕ್ತೆ. ದೇವರಲ್ಲಿ ಅಪಾರವಾದ ಭಕ್ತಿ ಮತ್ತು ನಂಬಿಕೆ ಇಟ್ಟವರು. (1979 ರಲ್ಲಿ ದೀಪ ಬೆಳಗಿಸಿದ ಮಹಾತಾಯಿಯವರ ದಂಪತಿ ಪೋಟೊ) 1979 ರಲ್ಲಿ ಶಾರದಮ್ಮ ಅಣ್ಣಪ್ಪಯ್ಯ ದೈವಜ್ಞ ಅಮ್ಮನವರು ಒಂದು ದೀಪವನ್ನು ಬೆಳಗಿಸಿದ್ದರು, ನಿರಂತರವಾಗಿ ಉರಿಯುವುದನ್ನು ಕಂಡು 1980 ರಲ್ಲಿ 2ನೇ ದೀಪ ಮತ್ತೆ 15 ದಿನಗಳ ನಂತರ 3ನೇ ದೀಪ ಬೆಳಗಿಸಿದರು.

facts

ಆ ಮೂರು ದೀಪಗಳು ನಿರಂತರವಾಗಿ ಉರಿಯುತ್ತಿರುವುದನ್ನು ಆ ಭಾಗದ ಜನರು ಕಂಡು ಇದು ಬ್ರಹ್ಮ, ವಿಷ್ಣು ಮಹೇಶ್ವರ ಎಂಬ ದೇವರುಗಳು ಪ್ರತಿರೂಪ ಎಂದು ಬಲವಾಗಿ ನಂಬಿ ಈಗಲೂ ದೇವರ ಆರಾದನೆ ಮಾಡುತ್ತಿದ್ದಾರೆ. ಈ ಹಿಂದೆ ಆಧಿಶಕ್ತಾತ್ಮಕ ಶ್ರೀ ಶ್ರೀ ಶ್ರೀ ದೀಪನಾಥೇಶ್ವರ ದೇವಾಲಯ ಆಗುವ ಮೊದಲು ಇದು ಒಂದು ಶಾರದಮ್ಮನವರ ವಾಸಿಸುವ ಸಣ್ಣ ಮನೆಯಾಗಿತ್ತು .ಶಾರದಮ್ಮನವರು ದೇವರಲ್ಲಿ ಅಪಾರವಾದ ನಂಬಿಕೆ ಮತ್ತು ಶ್ರದ್ಧೆ ಹೊಂದಿದ್ದರು. ಸದಾ ದೇವರ ಆರಾಧನೆಯಲ್ಲಿ ತೊಡಗಿದ್ದರು. ಇವರ ಮನೆ ಮುಂದೆ ಇರುವ ಪರಮ ಪೂಜ್ಯ ಸದ್ಗುರು ಕಲ್ಮೇಶ್ವರ ಮಹಾಸ್ವಾಮಿ ಮಠದಲ್ಲಿ ಪ್ರತಿದಿನ ಪೂಜೆ ಮತ್ತು ಭಜನೆ ಮಾಡುತ್ತಿದ್ದರು.

ಒಂದು ದಿನ ಪರಮ ಪೂಜ್ಯ ಗೋವಿಂದ ಭಟ್ಟರವರು ಶ್ರಿ ಸಂತ ಶಿಶುನಾಳ ಶರಿಫರ ಪಾರಾಯಣ ನಡೆದಿತ್ತು, ಶಾರದಮ್ಮನವರ ಮನೆಗೆ ವಿದ್ಯುತ್ ಸಂಪರ್ಕ ಇಲ್ಲದ ಕಾರಣ ಮನೆಯಲ್ಲಿ ಸ್ವಲ್ಪ ಉಳಿದ ಎಣ್ಣೆಯಿಂದ ದೀಪ ಬೆಳಗಿಸಿ ಪರಮ ಪೂಜ್ಯ ಸದ್ಗರು ಕಲ್ಮೇಶ್ವರ ಮಹಾಸ್ವಾಮಿ ಮಠಕ್ಕೆ ಪುರಾಣ ಕೇಳಲು ಹೋಗಿದ್ದರು. ರಾತ್ರಿಯೆಲ್ಲಾ ಉರಿದು 2 ನೇ ದಿವಸದವರೆಗೂ ಪ್ರಶಾಂತ ಮತ್ತು ಪ್ರಸನ್ನವಾಗಿ ಒಂದು ದೀಪ ಉರಿಯವುದನ್ನು ಕಂಡು ವಿಸ್ಮಿತರಾಗಿ ಮತ್ತು ಆಶ್ಚರ್ಯಗೊಂಡು ಊರ ಜನರಿಗೆ ತಿಳಿಸಿದರು. ಆಗ ಊರಿನ ಜನರು ಈ ಉರಿಯುವ ದೀಪ ಕಂಡು ದಿಗ್ರ್ಭಮೆಗೊಂಡಿದ್ದರು.

temple

ತದನಂತರ ಸ್ವಲ್ಪ ದಿನಗಳ ನಂತರ ಆ ಮನೆಯನ್ನು ತೆಗೆದು ಅದೆ ಸ್ಥಳದಲ್ಲಿ ಆಧಿಶಕ್ತಾತ್ಮಕ ಶ್ರೀ ಶ್ರೀ ಶ್ರೀ ದೀಪನಾಥೇಶ್ವರ ದೇವಾಲಯದ ನಿರ್ಮಾಣ ಮಾಡಲು ಊರಿನವರು ಮತ್ತು ದಾನಿಗಳ ಸಹಾಯದೊಂದಿಗೆ ನಿರ್ಮಿಸುತ್ತಿದ್ದಾರೆ. ಇನ್ನು ಮುಕ್ತಾಯ ಹಂತದಲ್ಲಿ ಬಾಕಿ ಇದೆ. (ಆಧಿಶಕ್ತಾತ್ಮಕ ಶ್ರೀ ಶ್ರೀ ಶ್ರೀ ದೀಪನಾಥೇಶ್ವರ ದೇವಾಲಯದ ಮುಂಭಾಗ) ದೀಪವನ್ನು ವೀಕ್ಷಿಸಲು ಗಣ್ಯರು ಮತ್ತು ಆಧ್ಯಾತ್ಮಿಕ ಗುರುಗಳು ದಂಡು ಬಂದಿತ್ತು. 1994 ರಲ್ಲಿ ಜುಲೈ 31 ರಂದು ಧರ್ಮಸ್ಥಳದ ಧರ್ಮಾಧಿಕಾರಿಗಳಾದ ಸನ್ಮಾನ್ಯ ಶ್ರೀ ವೀರೆಂದ್ರ ಹೆಗ್ಗಡೆಯವರು ಸಹ ಬಂದು ಸ್ವತಃ ವೀಕ್ಷಿಸಿ ಮುಂದೊಂದು ದಿನ ಈ ಸ್ಥಳ ಪುಣ್ಯ ಸ್ಥಳವಾಗುವುದೆಂದು ಸಲಹೆ ನೀಡಿದ್ದರು.

2001 ರಲ್ಲಿ ಟಿಬೇಟ್ ಧರ್ಮಗುರುಗಳಾದ ಸನ್ಮಾನ್ಯ ಶ್ರೀ ದಲಾಯಿ ಲಾಮಾರವರು ಆಗಮಿಸಿ ವೀಕ್ಷಿಸಿ ನಾನು ಸಹಜವಾಗಿ ಯಾವುದೇ ದೇವಸ್ಥಾನಕ್ಕೆ ಹೋಗುವುದಿಲ್ಲ. ಇಲ್ಲಿ ಬಂದು ಆಶ್ಚರ್ಯವಾಯಿತು ಇದು ಕೂಡಾ ಪುಣ್ಯ ಸ್ಥಳವಾಗುತ್ತದೆ ಎಂದು ಹೇಳಿದ್ದರು. ಇನ್ನು ಹಲವು ಆಧ್ಯಾತ್ಮಿಕ ಗುರುಗಳು ಎಣ್ಣೆಯಿಲ್ಲದೆ ಉರಿಯುವ ದೀಪಗಳನ್ನು ಬಂದು ವೀಕ್ಷಿಸಿದ್ದಾರೆ. ಈ ಸ್ಥಳವನ್ನು ಪರೀಕ್ಷಿಸಿದವರಿಗೆ ಮತ್ತು ಅನುಮಾನ ವ್ಯಕ್ತಪಡಿಸಿದವರಿಗೆ ಆಗಿದೆ ಆರೋಗ್ಯದಲ್ಲಿ ಏರು ಪೇರು.
ಗುಲ್ಬರ್ಗಾದ ಖ್ಯಾತ ಕಾಲೇಜಿನ ವಿಜ್ಞಾನ ವಿಭಾಗದ ವಿಧ್ಯಾರ್ಥಿಗಳು ಮತ್ತು ಶಿಕ್ಷಕ ವೃಂದದವರು ಬಂದು ಈ 3 ದೀಪಗಳ ಬಗ್ಗೆ ಪರೀಕ್ಷಿಸಲು ಮುಂದಾಗಿದ್ದರು.

History

ಅವರು ಆ 3 ವಿಸ್ಮಯ ದೀಪಗಳ ಪಕ್ಕದಲಿ ಎಣ್ಣೆ ಮತ್ತು ಬತ್ತಿ ಹಾಕಿ ದೀಪವನ್ನು ತಾವೆ ಬೆಳಗಿಸಿ ಇಟ್ಟರು. ಸತತ 1 ದಿನಗಳ ಕಾಲ ಉರಿದು ಅವರು ಹಚ್ಚಿದ ದೀಪ ಆರಿ ಹೋಯಿತು. ಮತ್ತೊಂದು ದಿನ ಅದೇ ರೀತಿ ಮಾಡಲು ಮುಂದಾದಾಗ ಅಲ್ಲಿ ಬಂದಿರುವ ಎಲ್ಲರಿಗೂ ಆರೊಗ್ಯದಲ್ಲಿ ಏರು-ಪೇರು ಪ್ರಾರಂಭವಾಯಿತು. ತದನಂತರ ಅವರೆಲ್ಲರೂ ನಾವು ಮಾಡಿದ್ದು ತಪ್ಪಾಯಿತೆಂದು ಕ್ಷಮೆಯಾಚಿಸಿದಾಗ ಅವರು ಹುಷಾರಾಗಿದ್ದರು. ಹಾಗೆ ಇನ್ನು ಹಲವರು ಆ ದೀಪಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದವರಿಗೂ ಹಲವು ಬಾರಿ ಅವರಿಗೂ ಸಹ ಆರೋಗ್ಯದಲ್ಲಿ ಏರು-ಪೇರು ಸಹ ಆಗಿದೆ ಮತ್ತು ದೇವರಲ್ಲಿ ನಂಬಿಕೆ ಇಲ್ಲದ ನಾಸ್ತಿಕರು ಸಹ ಇಲ್ಲಿ ಬಂದು ದೈವ ಆರಾಧಕರಾಗಿ ಹೋಗಿದ್ದು ಸಹ ಇದೆ ಎಂದು ಇಲ್ಲಿ ಜನರ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಆಧಿಶಕ್ತಾತ್ಮಕ ಶ್ರೀ ಶ್ರೀ ಶ್ರೀ ದೀಪನಾಥೇಶ್ವರ ದೇವರಿಗೆ ವಿಶೇಷ ಪೂಜೆ ನಡೆಯುತ್ತದೆ : ಪ್ರತಿ ಅಮಾವಾಸ್ಯೆ ಮತ್ತು ಹುಣ್ಣಿಮೆಯ ದಿನದಂದು ವಿಶೇಷ ಪೂಜೆ ನಡೆಯುತ್ತದೆ ಹಾಗೂ ಕಾರ್ತಿಕ ಅಮವಾಸ್ಯೆಯ ದಿನದಂದು ವಿಶೇಷ ಪೂಜೆ ಮತ್ತು ದೀಪೋತ್ಸವ ಜರಗುತ್ತದೆ. ಆ ದಿನದಂದು ದೇವಸ್ಥಾನದ ಸುತ್ತಲೂ ದೀಪವನ್ನು ಬೆಳಗಿಸಿ ನಂತರ ಸ್ವಲ್ಪ ದೂರದ ಅಂತರದಲ್ಲಿರುವ ವೀರೆಶ್ವರ ಮಠದವರೆಗೆ ನಡು ರಸ್ತೆಯಲ್ಲಿ ದೀಪಗಳನ್ನು ಬೆಳಗಿಸಿ ವಿಶೇಷವಾಗಿ ಶ್ರದ್ದಾ ಭಕ್ತಿಯಿಂದ ದೀಪೋತ್ಸವವನ್ನು ಆಚರಿಸುತ್ತಾರೆ.

Mangaluru

ಈಗ ದೇವಸ್ಥಾನದ ಪೂಜಾ ವಿಧಿ- ವಿಧಾನಗಳನ್ನು ಪ್ರತಿದಿನ ದಿವಗಂತ ಶಾರದಮ್ಮನವರ ತಮ್ಮನ ಮಗನಾದ ವೆಂಕಟೇಶ ರಾಯ್ಕರ್ ರವರು ಮಾಡುತ್ತಿದ್ದಾರೆ ಮತ್ತು ಪ್ರವಾಸಿಗರು ಭಕ್ತಾಧಿಗಳು ಯಾವ ಸಮಯದಲ್ಲೂ ಬಂದರು ದೇವರ ದರ್ಶನ ಮಾಡಲು ಸಹಕರಿಸುತ್ತಾರೆ.
ವಿಜ್ಞಾನ ಮತ್ತು ತಂತ್ರಜ್ಞಾನ ಲೋಕ ಎಷ್ಟೆ ಮುಂದುವರೆದಿದ್ದರೂ ಸಹ ಇಂತಹ ಪವಾಡ ಸದೃಶಗಳ ಮತ್ತು ಪ್ರಕೃತಿ ಸದೃಶಗಳ ಮುಂದೆ ಏನು ಇಲ್ಲದಂತಾಗಿದೆ.

  • ರಾಘವೇಂದ್ರ ಬೆಂಡ್ಲಗಟ್ಟಿ, ಮುಂಡಗೋಡ

Latest News

Lal singh chadda
ಮನರಂಜನೆ

“ಲಾಲ್ ಸಿಂಗ್ ಚಡ್ಡಾ” ಚಿತ್ರ ಭಾರತೀಯ ಸೇನೆ ಮತ್ತು ಸಿಖ್ಖರನ್ನು ಅವಮಾನಿಸಿದೆ! : ಕ್ರಿಕೆಟಿಗ ಮಾಂಟಿ ಪನೇಸರ್

ಲಾಲ್ ಸಿಂಗ್ ಚಡ್ಡಾ  ಚಿತ್ರ ನಿಷೇಧಕ್ಕೆ ಮಾಂಟಿ ಪನೇಸರ್ ಕರೆ.  ಕ್ರಿಕೆಟಿಗ ಮಾಂಟಿ ಪನೇಸರ್ ಅವರು ಟ್ವಿಟರ್ನಲ್ಲಿ “ಲಾಲ್ ಸಿಂಗ್ ಚಡ್ಡಾ ಚಿತ್ರ ನಾಚಿಕೆಗೇಡಿನದು.

Medical Test
ಮಾಹಿತಿ

ಮದುವೆಗೂ ಮುನ್ನ ಈ ವೈದ್ಯಕೀಯ ಪರೀಕ್ಷೆಗಳನ್ನು ತಪ್ಪದೇ ಮಾಡಿಸಿಕೊಳ್ಳಿ ; ಅನುವಂಶಿಕ ಕಾಯಿಲೆಗಳನ್ನು ಪತ್ತೆ ಮಾಡಿ

ಕೆಲ ವೈದ್ಯಕೀಯ ಪರೀಕ್ಷೆಗಳನ್ನು ನಡೆಸುವುದರಿಂದ ಆನುವಂಶಿಕ ಕಾಯಿಲೆಗಳು ಪತ್ತೆ ಮಾಡಿ, ಅವುಗಳಿಗೆ ಚಿಕಿತ್ಸೆಯನ್ನು ಕೂಡ ಪಡೆದುಕೊಳ್ಳಬಹುದು.

Siddaramaiah
ರಾಜಕೀಯ

ಲೋಕಾಯುಕ್ತವೇ ಇದ್ದಿದ್ದರೆ ಮಜಾವಾದಿ ಸಿದ್ದರಾಮಯ್ಯ ಜೈಲೂಟ ತಿನ್ನುತ್ತಿದ್ದರು : ಬಿಜೆಪಿ

ಲೋಕಾಯುಕ್ತವೇ ಇದ್ದಿದ್ದರೆ ಮಜಾವಾದಿ ಸಿದ್ದರಾಮಯ್ಯ(Siddaramaiah) ಜೈಲೂಟ ತಿನ್ನುತ್ತಿದ್ದರು ಎಂದು ರಾಜ್ಯ ಬಿಜೆಪಿ(State BJP) ವ್ಯಂಗ್ಯವಾಡಿದೆ.

Gaalipata 2
ಮನರಂಜನೆ

ತೆರೆಯ ಮೇಲೆ ಹಾರಿದ ‘ಗಾಳಿಪಟ-2’; ಗಣಿ-ಭಟ್ರು ಕಾಂಬಿನೇಷನ್‍ಗೆ ಶಿಳ್ಳೆ-ಚಪ್ಪಾಳೆ

ಯೋಗರಾಜ್ ಭಟ್ ಮತ್ತು ‘ಗೋಲ್ಡನ್ ಸ್ಟಾರ್’ ಗಣೇಶ್ ಅವರ ಕಾಂಬಿನೇಷನ್ ಹೇಗೆ ಮೂಡಿಬಂದಿದೆ ಎಂಬುದನ್ನು ತಿಳಿಯಲು ಅಭಿಮಾನಿಗಳು ಕುತೂಹಲದಿಂದ ಚಿತ್ರಮಂದಿರದತ್ತ ಹೆಜ್ಜೆ ಹಾಕಿದ್ದಾರೆ.