vijaya times advertisements
Visit Channel

ಮದರಸಾಗಳಲ್ಲಿ ಡ್ರೆಸ್ ಕೋಡ್, NCERT ಪಠ್ಯಕ್ರಮವನ್ನು ಜಾರಿಗೆ ತರಲು ಸಜ್ಜಾದ ಉತ್ತರಾಖಂಡ

madarasa

Dehrudan : ಉತ್ತರಾಖಂಡದ(Uttarkhand) ಪುಷ್ಕರ್ ಸಿಂಗ್ ಧಾಮಿ ಸರ್ಕಾರವು ಮದರಸಾಗಳಲ್ಲಿ(Madarasa) ಶಿಕ್ಷಣಕ್ಕೆ ಸಂಬಂಧಿಸಿದಂತೆ ಕೆಲವು ಬದಲಾವಣೆಗಳನ್ನು ಮಾಡಲು ಮುಂದಾಗಿದೆ. ಮದರಸಾಗಳಲ್ಲಿ ಸಮವಸ್ತ್ರ ಸೇರಿದಂತೆ ಪಠ್ಯಕ್ರಮದ ಪರಿಷ್ಕರಣೆ ಮಾಡಲು ಉತ್ತರಾಖಂಡ ಸರ್ಕಾರ ಮುಂದಾಗಿದೆ.

Madarasa

ಎನ್‌ಸಿಇಆರ್‌ಟಿ ಪಠ್ಯಕ್ರಮ(NCERT Syllabus) ಮತ್ತು ಡ್ರೆಸ್ ಕೋಡ್ ಅನ್ನು ಮುಂದಿನ ಶಿಕ್ಷಣ ಅಧಿವೇಶನದಿಂದ ರಾಜ್ಯದ ವಕ್ಫ್ ಮಂಡಳಿಯ ಮದರಸಾಗಳಲ್ಲಿ ಜಾರಿಗೆ ತರಲಾಗುವುದು. ಮದರಸಾಗಳಿಗೆ ಕಾಯಕಲ್ಪ ನೀಡಲು ರಾಜ್ಯ ಸರ್ಕಾರ ಪ್ರಯತ್ನ ನಡೆಸುತ್ತಿದೆ.

ಅದರ ಭಾಗವಾಗಿ ಈ ಕ್ರಮ ಕೈಗೊಳ್ಳಲು ಮುಂದಾಗಿದೆ. ಉತ್ತರಾಖಂಡದ ವಕ್ಫ್ ಮಂಡಳಿಯ ವ್ಯಾಪ್ತಿಯಲ್ಲಿರುವ ಎಲ್ಲಾ 103 ಮದರಸಾಗಳಲ್ಲಿ ಮುಂದಿನ ಅಧಿವೇಶನದಿಂದ ಡ್ರೆಸ್ ಕೋಡ್ ಅನ್ನು ಜಾರಿಗೊಳಿಸಲಾಗುವುದು ಮತ್ತು ಎಲ್ಲಾ ಮದರಸಾಗಳಲ್ಲಿ ಎನ್‌ಸಿಇಆರ್‌ಟಿ ಪಠ್ಯಕ್ರಮವನ್ನು ಬೋಧಿಸಲಾಗುವುದು.

ಇದನ್ನೂ ಓದಿ : https://vijayatimes.com/cji-chandrachud-announcement/

ಆಧುನಿಕ ಶಾಲೆಗಳ ಮಾದರಿಯಲ್ಲಿ ಮದರಸಾಗಳನ್ನು ಕೂಡ ನಡೆಸಲು ಸಿದ್ಧತೆ ನಡೆಸಲಾಗುತ್ತಿದೆ. ಇದಕ್ಕಾಗಿ ಡೆಹ್ರಾಡೂನ್, ಉಧಮ್ ಸಿಂಗ್ ನಗರ, ಹರಿದ್ವಾರ, ಮತ್ತು ನೈನಿತಾಲ್ ನಲ್ಲಿರುವ 7 ಮದರಸಾಗಳನ್ನು ಮೊದಲ ಹಂತದಲ್ಲಿ ಆಧುನೀಕರಿಸಲಾಗುವುದು ಎಂದು ಉತ್ತರಾಖಂಡದ ವಕ್ಫ್ ಮಂಡಳಿಯ ಅಧ್ಯಕ್ಷ ಶಾದಾಬ್ ಶಾಮ್ಸ್ ತಿಳಿಸಿದ್ದಾರೆ.

Madarasa

ಅದೇ ಸಮಯದಲ್ಲಿ, ಮದರಸಾಗಳ ಸಮಯ ಮತ್ತು ಡ್ರೆಸ್ ಕೋಡ್‌ನಲ್ಲಿಯೂ ಬದಲಾವಣೆಗಳನ್ನು ಮಾಡಲಾಗುತ್ತಿದೆ. ಸಾಮಾನ್ಯ ಶಾಲೆಗಳಂತೆ ಬೆಳಿಗ್ಗೆ 8 ರಿಂದ ಮಧ್ಯಾಹ್ನ 2 ರವರೆಗೆ ಮದರಸಾಗಳನ್ನು ನಡೆಸಲು ನಾವು ಯೋಜನೆ ಸಿದ್ಧಪಡಿಸಿದ್ದೇವೆ. ಉತ್ತರಾಖಂಡ ವಕ್ಫ್ ಮಂಡಳಿಯಲ್ಲಿ ನೋಂದಾಯಿಸಲಾದ 103 ಮದರಸಾಗಳಲ್ಲಿ ಈ ಬದಲಾವಣೆಯನ್ನು ನಾವು ಜಾರಿಗೆ ತರುತ್ತೇವೆ.

ಇದನ್ನೂ ಓದಿ : https://vijayatimes.com/kantara-effect/

ಈ ಮೂಲಕ  ಮುಸ್ಲಿಂ ಮಕ್ಕಳಿಗೂ ಕೂಡಾ ಆಧುನಿಕ ಮತ್ತು ಉತ್ತಮ ಗುಣಮಟ್ಟದ ಶಿಕ್ಷಣವನ್ನು ನಾವು ಒದಗಿಸುತ್ತೇವೆ.  ಈ ರೀತಿಯ ಕ್ರಮಗಳ ಮೂಲಕ ಮದರಸಾ  ಶಿಕ್ಷಣದಲ್ಲಿ ಮಹತ್ವದ ಬದಲಾವಣೆಯನ್ನು ತರುತ್ತವೆ ಎಂದು ಶಾದಾಬ್ ಶಾಮ್ಸ್ ಅಭಿಪ್ರಾಯಪಟ್ಟಿದ್ದಾರೆ.

  • ಮಹೇಶ್.ಪಿ.ಎಚ್

Latest News

ದೇಶ-ವಿದೇಶ

ಕಿಡ್ನಿ ಕಸಿ ನಂತರ ಲಾಲು ಪುತ್ರಿಗೆ ಕೇಂದ್ರ ಸಚಿವ ಗಿರಿರಾಜ್ ಸಿಂಗ್ ಪ್ರಶಂಸೆ

“ನನ್ನ ತಂದೆಯ ಮೂತ್ರಪಿಂಡ ಕಸಿ ಯಶಸ್ವಿ ಶಸ್ತ್ರಚಿಕಿತ್ಸೆಯ ನಂತರ ಅವರನ್ನು ಆಪರೇಷನ್ ಥಿಯೇಟರ್‌ನಿಂದ ಐಸಿಯುಗೆ(ICU) ಸ್ಥಳಾಂತರಿಸಲಾಗಿದೆ

ರಾಜಕೀಯ

“ಸಿದ್ರಾಮುಲ್ಲಾಖಾನ್” ಸಿಟಿ ರವಿ ಟೀಕೆಯಿಂದ ಮುಸ್ಲಿಂ ಮುಲ್ಲಾಗಳಿಗೆ ಅವಮಾನವಾಗಿದೆ ಎಂದು ಆರೋಪ

ಈ ಹೇಳಿಕೆಯನ್ನು ಹಿಂಪಡೆಯಬೇಕೆಂದು ಕಾಂಗ್ರೆಸ್ಕಾರ್ಯಕರ್ತರು ಸಿಟಿ ರವಿ ಅವರ ನಿವಾಸಕ್ಕೂ ಮುತ್ತಿಗೆ ಹಾಕಿದ್ದರು, ಆದರೆ “ಸಿದ್ರಾಮುಲ್ಲಾ ಖಾನ್  ಎಂಬುದು ಜನರೇ ನೀಡಿರುವ ಬಿರುದು,

ರಾಜಕೀಯ

‘ಇದು ನನ್ನ ಸವಾಲು, ಕಾಂಗ್ರೆಸ್ಸಿಗರೇ ನಿಮ್ಮ ರಾಹುಲ್ ಗಾಂಧಿಯ ಒಂದೇ ಒಂದು ಸಾಧನೆಯನ್ನು ಹೇಳಿ ನೋಡೋಣ’ : ಸಿ.ಟಿ ರವಿ

ಕಾಂಗ್ರೆಸ್ ಪಕ್ಷದ ನಾಯಕ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ(siddaramaih) ಅವರ ವಿರುದ್ಧ ಸಿಡಿದೇಳುವ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸಿ.ಟಿ ರವಿ(C.T.Ravi),

ದೇಶ-ವಿದೇಶ

ಭಾರತ್ ಜೋಡೋ ಯಾತ್ರೆಯಲ್ಲಿ ‘ಮೋದಿ, ಮೋದಿ’ ಎಂದು ಕೂಗಿದವರಿಗೆ ಮುತ್ತು ಕೊಟ್ಟ ರಾಹುಲ್ ಗಾಂಧಿ

ಜನ ಸಮೂಹ ಕೂಗುತ್ತಿದ್ದ ಜೈಕಾರಗಳನ್ನು ಆಲಿಸಿದ ರಾಹುಲ್ ಗಾಂಧಿ ಅವರ ಬಳಿ ಮೊದಲು ಕೈಬೀಸುತ್ತಿರುವ ದೃಶ್ಯ ಕ್ಯಾಮೆರಾ ಕಣ್ಣಿನಲ್ಲಿ ಸೆರೆಯಾಗಿದೆ.