Washington DC: ರಿಪಬ್ಲಿಕನ್ (Republican) ಪಕ್ಷದ ಅಭ್ಯರ್ಥಿ ಭಾರತೀಯ ಮೂಲದ ವಿವೇಕ್ ರಾಮಸ್ವಾಮಿ ಅವರು ತಮ್ಮ 2024 ರ ಯುಎಸ್ ಅಧ್ಯಕ್ಷೀಯ ಚುನಾವಣಾ ಕಣದಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ. ಅಮೆರಿಕದ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ (Donald Trump) ಅವರು ಅಯೋವಾ ಸಭೆಯನ್ನು ಅಭೂತಪೂರ್ವ ಗೆಲುವು ಸಾಧಿಸಿದ ನಂತರ, ಉದ್ಯಮಿ ವಿವೇಕ್ ರಾಮಸ್ವಾಮಿ (Vivek Ramaswamy) ಅವರು ಈ ಘೋಷಣೆ ಮಾಡಿದ್ದಾರೆ.
“ಈ ಸಂಪೂರ್ಣ ಅಭಿಯಾನವು ಸತ್ಯವನ್ನು ಮಾತನಾಡುವುದರ ಕುರಿತಾಗಿದೆ. ನಾವು ಇಂದು ರಾತ್ರಿ ನಡೆದ ಸಭೆಯಲ್ಲಿ ನಮ್ಮ ಗುರಿಯನ್ನು ಸಾಧಿಸಲಿಲ್ಲ. ನಮಗೆ ಶ್ವೇತಭವನದಲ್ಲಿ ಅಮೆರಿಕವೇ (America) ಮೊದಲು ಎನ್ನುವ ದೇಶಭಕ್ತರ ಅಗತ್ಯವಿದೆ. ಜನರು ತಮಗೆ ಯಾರು ಬೇಕು ಎಂದು ಜೋರಾಗಿ ಮತ್ತು ಸ್ಪಷ್ಟವಾಗಿ ಹೇಳಿದರು. ಇಂದು ರಾತ್ರಿ ನಾನು ನನ್ನ ಪ್ರಚಾರವನ್ನು ಸ್ಥಗಿತಗೊಳಿಸುತ್ತಿದ್ದೇನೆ ಮತ್ತು ಡೊನಾಲ್ಡ್ ಟ್ರಂಫ್ ಅವರನ್ನು ಅನುಮೋದಿಸುತ್ತಿದ್ದೇನೆ.
ಜೆ. ಟ್ರಂಪ್ ಮತ್ತು ಅವರು ಮುಂದಿನ ಯುಎಸ್ ಅಧ್ಯಕ್ಷ ಎಂದು ಖಚಿತಪಡಿಸಿಕೊಳ್ಳಲು ನಾನು ಎಲ್ಲವನ್ನೂ ಮಾಡುತ್ತೇನೆ. ನಾನು ಈ ತಂಡ, ಈ ಚಳುವಳಿ ಮತ್ತು ನಮ್ಮ ದೇಶದ ಬಗ್ಗೆ ಅಪಾರವಾಗಿ ಹೆಮ್ಮೆಪಡುತ್ತೇನೆ” ಎಂದು ರಾಮಸ್ವಾಮಿ (Ramaswamy) ಟ್ವಿಟರ್ ನಲ್ಲಿ ಬರೆದಿದ್ದಾರೆ.
ವಿವೇಕ್ ರಾಮಸ್ವಾಮಿ ಅವರು ತಮ್ಮ ಪ್ರತಿಸ್ಪರ್ಧಿ ಟ್ರಂಪ್ ಅವರನ್ನು ಬೆಂಬಲಿಸಲು ನಿರ್ಧರಿಸಿದರು. ಅವರು ಅಪರಾಧಗಳಿಗೆ ಶಿಕ್ಷೆಗೊಳಗಾದರೂ ಅವರನ್ನು ಬೆಂಬಲಿಸುವುದಾಗಿ ಪ್ರತಿಜ್ಞೆ ಮಾಡಿದರು. ಅಯೋವಾದಲ್ಲಿ ನಡೆದ ಮೊದಲ 2024 ರಿಪಬ್ಲಿಕನ್ ಅಧ್ಯಕ್ಷೀಯ ಸ್ಪರ್ಧೆಯಲ್ಲಿ ಟ್ರಂಪ್ ಅದ್ಭುತ ಜಯ ಸಾಧಿಸಿದರು.
ವರದಿಗಳ ಪ್ರಕಾರ, ಟ್ರಂಪ್ ಅಯೋವಾ ಕಾಕಸ್ಗಳಲ್ಲಿ ಭಾರೀ ಗೆಲುವು ಸಾಧಿಸಿದ್ದಾರೆ. ಫ್ಲೋರಿಡಾ ಗವರ್ನರ್ ರಾನ್ ಡಿಸಾಂಟಿಸ್ (Ron DeSantis) ಎರಡನೇ ಸ್ಥಾನದಲ್ಲಿದ್ದರೆ, ದಕ್ಷಿಣ ಕೆರೊಲಿನಾ ಗವರ್ನರ್ ನಿಕ್ಕಿ ಹ್ಯಾಲೆ ಮೂರನೇ ಸ್ಥಾನದಲ್ಲಿದ್ದಾರೆ. ಟ್ರಂಪ್ 55,000 ಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದಾರೆ, ಡಿಸಾಂಟಿಸ್ 23,000 ಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದಾರೆ,
ಹೇಲಿ 20,000 ಕ್ಕೂ ಹೆಚ್ಚು ಮತಗಳನ್ನು ಪಡೆದಿದ್ದಾರೆ, ಮತ್ತು ರಾಮಸ್ವಾಮಿ ಕೇವಲ 8,000 ಕ್ಕೂ ಹೆಚ್ಚು ಮತಗಳೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದಾರೆ. ಹೀಗಾಗಿಯೇ ವಿವೇಕ ರಾಮಸ್ವಾಮಿ ಸ್ಪರ್ಧೆಯಿಂದ ಹಿಂದೆ ಸರಿಯಲು ನಿರ್ಧರಿಸಿದ್ದಾರೆ.