Mysore : ಇಡೀ ರಾಜ್ಯದ ಗಮನ ಸೆಳೆದಿರುವ ವರುಣಾ ವಿಧಾನಸಭಾ ಕ್ಷೇತ್ರದಲ್ಲಿ (Varuna Assembly Constituency) ಜಾತಿ ಲೆಕ್ಕಾಚಾರವೇ ನಿರ್ಣಾಯಕ ಎನ್ನಲಾಗುತ್ತಿದೆ. ಮುಖ್ಯವಾಗಿ ಲಿಂಗಾಯತ (Lingayat) ಮತ್ತು ಒಕ್ಕಲಿಗ ಸಮುದಾಯ (Okkaliga community) ಯಾರ ಪರವಾಗಿ ನಿಲ್ಲುತ್ತವೆ ಎಂಬುದರ (V Somanna Vs Siddaramaiah) ಆಧಾರದ ಮೇಲೆ ಫಲಿತಾಂಶ ನಿರ್ಧಾರವಾಗುವ ಸಾಧ್ಯತೆಯಿದೆ.
ವಿಪಕ್ಷ ನಾಯಕ ಸಿದ್ದರಾಮಯ್ಯ (Siddaramaiah) ಮತ್ತು ಬಿಜೆಪಿಯ (BJP) ವಿ.ಸೋಮಣ್ಣ (V.Somanna) ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದ್ದು,
ಸೋಮಣ್ಣ ಆಗಮನದ ನಂತರ ಇಡೀ ಕ್ಷೇತ್ರದ ಚಿತ್ರಣವೇ ಬದಲಾಗಿದೆ. ಅನೇಕ ಕಾರಣಗಳಿಂದ ಸಿದ್ದು ವಿರುದ್ದ ಮುನಿಸಿಕೊಂಡಿರುವ ಲಿಂಗಾಯತ
ಸಮುದಾಯ ಮತ್ತು ಒಕ್ಕಲಿಗ ಸಮುದಾಯಗಳನ್ನು ಒಗ್ಗೂಡಿಸುವ ನಿಟ್ಟಿನಲ್ಲಿ ಸೋಮಣ್ಣ ಅನೇಕ ರಣತಂತ್ರಗಳನ್ನು ರೂಪಿಸುತ್ತಿದ್ದಾರೆ.
ಈ ಎರಡು ಸಮುದಾಯಗಳು ಸೋಮಣ್ಣ ಪರ ನಿಂತರೆ ಸಿದ್ದರಾಮಯ್ಯನವರ ಗೆಲುವು ಕಷ್ಟವಾಗಲಿದೆ.
ಹೀಗಾಗಿ ವರುಣಾ ಕ್ಷೇತ್ರದಲ್ಲಿರುವ ಲಿಂಗಾಯತ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಯತೀಂದ್ರ, ಸಿದ್ದರಾಮಯ್ಯ (V Somanna Vs Siddaramaiah) ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ.
ಅನೇಕ ಲಿಂಗಾಯತ ಮುಖಂಡರನ್ನು ಮನವೊಲಿಸುತ್ತಿದ್ದಾರೆ.
ಸದ್ಯ ವರುಣಾದಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಒಮ್ಮೆ ನೋಡುವುದಾದರೆ :
ಇದನ್ನೂ ಓದಿ : https://vijayatimes.com/karnataka-congress-manifesto/
• ವರುಣಾ ಕ್ಷೇತ್ರದ ಮೇಲೆ ಬಿಜೆಪಿ ಹೆಚ್ಚು ಗಮನ ಕೇಂದ್ರೀಕರಿಸಿ ಪ್ರಚಾರ ನಡೆಸುತ್ತಿದೆ. ಬಿಜೆಪಿಯ ರಾಜ್ಯ ನಾಯಕರು, ರಾಷ್ಟ್ರೀಯ ನಾಯಕರು ಸೇರಿದಂತೆ ಅನೇಕರು ಪ್ರಚಾರಕ್ಕೆ ಆಗಮಿಸುತ್ತಿದ್ದು, ಕ್ಷೇತ್ರದಲ್ಲಿ ಬಿಜೆಪಿಯ ಪರವಾದ ಅಲೆಯನ್ನು ರೂಪಿಸುವ ಕೆಲಸ ನಡೆಯುತ್ತಿದೆ.
• ಇನ್ನೊಂದೆಡೆ ಕಾಂಗ್ರೆಸ್ (Congress) ಕೂಡಾ ನಟಿ ರಮ್ಯಾ (Actress Ramya), ನಟ ದುನಿಯಾ ವಿಜಯ (Actor Duniya Vijaya) ಮೂಲಕ ಸ್ಟಾರ್‌ನಟರನ್ನು ಕರೆತಂದು ಪ್ರಚಾರ ನಡೆಸುತ್ತಿದೆ.
• ಪ್ರತಿ ಬೂತ್ ಮಟ್ಟದಲ್ಲಿ ಪಕ್ಷವನ್ನು ಸಂಘಟಿಸುವ ನಿಟ್ಟಿನಲ್ಲಿ ಬಿಜೆಪಿ ಅನೇಕ ತಂತ್ರಗಳನ್ನು ರೂಪಿಸುತ್ತಿದೆ. ಬೂತ್ ಮಟ್ಟದಲ್ಲೇ ಅನೇಕರನ್ನು ಸೆಳೆಯುವ ಪ್ರಯತ್ನವನ್ನು ಬಿಜೆಪಿ ನಡೆಸಿದೆ.
• ಕಾಂಗ್ರೆಸ್ ಕೂಡಾ ಕಾರ್ಯಕರ್ತರ ಪಡೆಯನ್ನು ಸಿದ್ದಪಡಿಸಿಕೊಂಡು, ಪ್ರತಿ ಬೂತ್‌ನಲ್ಲೂ ವಿಶೇಷ ತಂಡಗಳನ್ನು ರಚಿಸಿಕೊಂಡು ಕೆಲಸ ಮಾಡುತ್ತಿದೆ.
• ಸೋಮಣ್ಣ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳ ವಿಶ್ವಾಸ ಗಳಿಸುವ ನಿಟ್ಟಿನಲ್ಲಿ ಕ್ಚೇತ್ರದಲ್ಲಿರುವ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳ ಮುಖಂಡರನ್ನು ಭೇಟಿಯಾಗಿ ಮಾತುಕತೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : https://vijayatimes.com/supreme-court-order/
• ಇನ್ನೊಂದೆಡೆ ಜೆಡಿಎಸ್ (JDS) ದಲಿತ ಮುದಾಯದ ಮಾಜಿ ಶಾಸಕ ಭಾರತಿಶಂಕರ ಅವರನ್ನು ಕಣಕ್ಕಿಳಿಸಿರುವುದು ಸಿದ್ದರಾಮಯ್ಯನವರ ಅತಂಕಕ್ಕೆ ಕಾರಣವಾಗಿದೆ. ದಲಿತ ಸಮುದಾಯದ ಮೇಲೆ ಪ್ರಭಾವ ಹೊಂದಿರುವ ಭಾರತಿಶಂಕರ ಅವರು 10-15 ಸಾವಿರ ಮತಗಳನ್ನು ಪಡೆಯುವ ಸಾಧ್ಯತೆಗಳಿವೆ.
• ಇನ್ನು ವರುಣಾದಲ್ಲಿ 55 ಸಾವಿರ ಲಿಂಗಾಯತ ಮತದದಾರು, ಕುರುಬರು 35 ಸಾವಿರ, ಪರಿಶಿಷ್ಟ ಜಾತಿಯ 43 ಸಾವಿರ ಮತದಾರರು, ಪರಿಶಿಷ್ಟ ಪಂಗಡದ 23 ಸಾವಿರ, ಒಕ್ಕಲಿಗರು 12 ಸಾವಿರ ಹಾಗೂ ಇತರ ಹಿಂದುಳಿದ ವರ್ಗಗಳ ಸಮುದಾಯದವರು 12 ಸಾವಿರ ಮತದಾರರು ಇದ್ದಾರೆ. ಜಾತಿ ಲೆಕ್ಕಾಚಾರ ಕೆಲಸ ಮಾಡಿದರೆ, ಸಿದ್ದರಾಮಯ್ಯನವರಿಗೆ ಗೆಲುವು ಸುಲಭವಲ್ಲ.
• ಸದ್ಯ ವರುಣಾದಲ್ಲಿ ಜಾತಿ ಲೆಕ್ಕಾಚಾರದಲ್ಲೇ ಭಾರೀ ಗೊಂದಲ ಉಂಟಾಗಿದ್ದು, ಸಿದ್ದು-ಸೋಮಣ್ಣ ನಡುವೆ ಪೈಪೋಟಿ ಏರ್ಪಟ್ಟಿರುವುದದಂತು ಸತ್ಯ.