ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾದ(Serum institute of India) ಕೋವಿಶೀಲ್ಡ್(Covieshield) ಮತ್ತು ಭಾರತ್ ಬಯೋಟೆಕ್‌ನ(Bharath Biotech) ಕೋವಾಕ್ಸಿನ್‌ನ(Covaxin) ಒಂದು ಡೋಸ್(Dose) ಪಡೆಯಲು ಈಗ ಖಾಸಗಿ ಆಸ್ಪತ್ರೆಗಳಲ್ಲಿ 225 ರೂ. ಹಣ ನೀಡಬೇಕಿದೆ. ಹೌದು, ಖಾಸಗಿ ಆಸ್ಪತ್ರೆಗಳಿಗೆ ಬಂದಿಳಿದ ಕೋವಾಕ್ಸಿನ್ ಮತ್ತು ಕೋವಿಶೀಲ್ಡ್ ಡೋಸ್ ಪಡೆಯಲು 250 ರೂ. ನೀಡಿ ಪಡೆಯಬೇಕಾಗಿದೆ. ಒಂದು ಡೋಸ್ ಪಡೆಯಲು ಖಾಸಗಿ ಆಸ್ಪತ್ರೆ 250 ರೂ. ಶುಲ್ಕ ವಿಧಿಸುತ್ತದೆ.

ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದೊಂದಿಗೆ ಸಮಾಲೋಚಿಸಿದ ನಂತರ ಖಾಸಗಿ ಆಸ್ಪತ್ರೆಗಳಿಗೆ ಕೋವಿಡ್ -19 ಲಸಿಕೆ ಬೆಲೆಯನ್ನು 600 ರಿಂದ 225ಕ್ಕೆ ಇಳಿಸಲು ಲಸಿಕೆ ತಯಾರಕರು ನಿರ್ಧರಿಸಿದ್ದಾರೆ ಎಂದು SIನ ಸಿಇಒ ಆದರ್ ಪೂನಾವಾಲ್ಲಾ ಶನಿವಾರ ಟ್ವೀಟ್‌ನಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಅದೇ ರೀತಿ, ಭಾರತ್ ಬಯೋಟೆಕ್‌ನ ಸಹ-ಸಂಸ್ಥಾಪಕಿ ಸುಚಿತ್ರಾ ಎಲಾ ಅವರು ಕೋವಾಕ್ಸಿನ್‌ನ ಬೆಲೆಯನ್ನು ಖಾಸಗಿ ಆಸ್ಪತ್ರೆಗಳಿಗೆ ಹಿಂದಿನ 1,200 ರೂ.ಗಳಿಂದ ಪ್ರತಿ ಡೋಸ್‌ಗೆ 225 ರೂ.ಗೆ ಇಳಿಸಲು ಲಸಿಕೆ ತಯಾರಕರು ನಿರ್ಧರಿಸಿದ್ದಾರೆ ಎಂದು ಘೋಷಿಸಿದರು.
ಕೇಂದ್ರ ಸರ್ಕಾರದೊಂದಿಗೆ ಸಮಾಲೋಚಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದರು. ಖಾಸಗಿ ಲಸಿಕಾ ಕೇಂದ್ರಗಳಲ್ಲಿ ಏಪ್ರಿಲ್ 10 ರಿಂದ 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಕೋವಿಡ್ -19 ಲಸಿಕೆಗಳ ಮುನ್ನೆಚ್ಚರಿಕೆ ಡೋಸ್ ಲಭ್ಯವಿರುತ್ತದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ಶುಕ್ರವಾರ ಪ್ರಕಟಿಸಿದೆ. ಬೂಸ್ಟರ್ ಡೋಸ್ ಪಡೆಯಲು ಬಯಸುವವರು ಎರಡನೇ ಡೋಸ್ ಸ್ವೀಕರಿಸಿ ಒಂಬತ್ತು ತಿಂಗಳುಗಳು ಕಳೆದಿರಬೇಕು ಎಂಬುದನ್ನು ಖಚಿತಪಡಿಸಿಕೊಳ್ಳಬೇಕು ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಕಳೆದ ವರ್ಷದ ಜನವರಿಯಲ್ಲಿ ರಾಷ್ಟ್ರವ್ಯಾಪಿ ಇನಾಕ್ಯುಲೇಷನ್ ಡ್ರೈವ್ ಪ್ರಾರಂಭವಾದಾಗಿನಿಂದ, 15 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಸುಮಾರು 96 ಪ್ರತಿಶತದಷ್ಟು ಜನರು ಕೋವಿಡ್ -19 ಲಸಿಕೆಯ ಕನಿಷ್ಠ ಒಂದು ಡೋಸ್ ಅನ್ನು ಸ್ವೀಕರಿಸಿದ್ದಾರೆ. ಅದೇ ಸಮಯದಲ್ಲಿ, 83 ಪ್ರತಿಶತದಷ್ಟು ಜನರು ಕೋವಿಡ್ -19 ಲಸಿಕೆಗಳ ಎರಡೂ ಡೋಸ್‌ಗಳನ್ನು ಸ್ವೀಕರಿಸಿದ್ದಾರೆ. 12-14 ವರ್ಷ ವಯಸ್ಸಿನ 45 ಪ್ರತಿಶತದಷ್ಟು ಫಲಾನುಭವಿಗಳು ಕೋವಿಡ್-19 ಲಸಿಕೆಯ ಮೊದಲ ಡೋಸ್ ಅನ್ನು ಸ್ವೀಕರಿಸಿದ್ದಾರೆ ಎಂದು ಸರ್ಕಾರಿ ಮಾಹಿತಿಯು ವರದಿಯಲ್ಲಿ ವಿವರಿಸಿದೆ.