Karnataka: ರಾಜ್ಯ ಬಿಜೆಪಿ ನಾಯಕರ ವಿಭಿನ್ನ ಪೋಸ್ಟರ್‌ಗಳ ಹಂಚಿಕೊಂಡು ರಾಜ್ಯ ಕಾಂಗ್ರೆಸ್ ಪ್ರೇಮಿಗಳ ದಿನದ(Valintince Day) ಶುಭಾಶಯ ಕೋರಿದೆ. ರಾಜ್ಯ ಕಾಂಗ್ರೆಸ್(State Congress) ಹರಿಬಿಟ್ಟಿರುವ ಪೋಸ್ಟರ್‌ಗಳು ಇದೀಗ ಸಾಮಾಜಿಕ ಜಾಲತಾಣದಲ್ಲಿ(Social Media) ಭಾರೀ ವೈರಲ್‌ಆಗುತ್ತಿವೆ.
ಮುಖ್ಯಮಂತ್ರಿ ಬೊಮ್ಮಾಯಿ( Basavarai Bommai) ಅವರ ವಿಭಿನ್ನ ಪೋಸ್ಟರ್‌ಹಾಕಿ, ಬಿಜೆಪಿಗರು(Bjp) ಶುದ್ಧ 40% ಪ್ರೇಮಿಗಳು, 40% ಕಮಿಷನ್ ಮೇಲಿನ ಅವರ ಪ್ರೀತಿ ರೋಮಿಯೋ ಜ್ಯುಲಿಯೆಟ್ ಪ್ರೀತಿಗಿಂತಲೂ ಉತ್ಕಟವಾದುದು ಎಂದು ಲೇವಡಿ ಮಾಡಿದೆ. ಇನ್ನೊಂದೆಡೆ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ ಪೋಸ್ಟರ್‌ಹಾಕಿ, ಪ್ರಿಯಕರನ ಕನಸು, ಮನಸಲ್ಲೂ ಪ್ರಿಯತಮೆ ಕಾಣುವಂತೆ, ಬಿಜೆಪಿಗರ ಕನಸು ಮನಸ್ಸಿನಲ್ಲೂ 40 ಪರ್ಸೆಂಟಿನದ್ದೇ ಧ್ಯಾನ…..!!ಬಿಜೆಪಿಗರದ್ದು ಗೋ ಪ್ರೀತಿಯಲ್ಲ, Go ಪ್ರೀತಿ!! ಬಿಜೆಪಿಗರು ಗೋವಿನ ಎದುರು ಫ್ಲರ್ಟ್ ಮಾಡುತ್ತಾರೆ ಹೊರತು ಪ್ರೀತಿಯಲ್ಲ! ಭಗ್ನ ಪ್ರೇಮಿಯೊಬ್ಬನ ಪ್ರಲಾಪಗಳು ಎಂದು ವ್ಯಂಗ್ಯವಾಡಿದೆ.
ಇನ್ನೊಂದು ಟ್ವೀಟ್(Twitter)ನಲ್ಲಿ, ಸಂಸದ ತೇಜಸ್ವಿ ಸೂರ್ಯ(Tejaswi Surya) ಅವರ ಪೋಸ್ಟರ್‌ಹಾಕಿ, ವಿಮಾನದ ತುರ್ತು ನಿರ್ಗಮನದ ಬಾಗಿಲು ತೆಗೆಯುವುದು. ಸಿಎಂ ಮನೆಗೆ ಕಲ್ಲು ಹೊಡೆಯುವುದು. ರೈತರಿಗೆ ಅವಮಾನಿಸುವುದು. ಪ್ರೀತಿ ಕಳೆದುಕೊಂಡು ವಿಚಿತ್ರವಾಗಿ ವರ್ತಿಸುತ್ತಿರುವ ಈ ಭಗ್ನಪ್ರೇಮಿಗೆ ಕೌನ್ಸ್‌ಲಿಂಗ್ ಅಗತ್ಯವಿದೆ!ಒಮ್ಮೆ ತಿರಸ್ಕಾರ ಭಾವ ಮೂಡಿದರೆ ಮತ್ತೆಂದೂ ಅಲ್ಲಿ ಪ್ರೀತಿಗೆ ಜಾಗವಿಲ್ಲ ಎಂದು ಕುಟುಕಿದೆ. ಇನ್ನೊಂದು ಟ್ವೀಟ್‌ನಲ್ಲಿ ಕಂದಾಯ ಸಚಿವ ಆರ್.ಅಶೋಕ(R Ashok) ಪೋಸ್ಟರ್‌ಹಾಕಿ, ಮಂಡ್ಯದಲ್ಲಿ ತಿರಸ್ಕಾರದ ಪ್ರೇಮವೈಫಲ್ಯ ಅನುಭವಿಸಿ ನೋವಿನಲ್ಲಿರುವ ಭಗ್ನಪ್ರೇಮಿಗೆ ನಮ್ಮ ಸಾಂತ್ವಾನಗಳು!”ಪ್ರೀತಿ ಮಧುರ, ತ್ಯಾಗ ಅಮರ” ಎಂದಿದೆ.
ಅದೇ ರೀತಿ ಕೆ.ಎಸ್.ಈಶ್ವರಪ್ಪ(KS Eswarappa) ಪೋಸ್ಟರ್‌ಹಾಕಿ, ಕುರ್ಚಿಯೊಂದಿಗಿನ ಪ್ರೇಮದ ಸವಿಗಳಿಗೆಯ ನೆನಪು, ವಿರಹದ ನೋವು ಸದಾ ಕಾಡುತ್ತಿರುತ್ತದೆ.. ಈಶ್ವರಪ್ಪನವರೇ ತಮಗೆ ವಿರಹದ ನೋವು ಭರಿಸುವ ಶಕ್ತಿ ಸಿಗಲಿ ಎಂದು ವ್ಯಂಗ್ಯವಾಡಿದೆ. ಇನ್ನೊಂದೆಡೆ ಶಾಸಕ ರೇಣುಕಾಚಾರ್ಯ(Renukacharya) ಪೋಸ್ಟರ್‌ಹಾಕಿ, ಒಂದು ಮುತ್ತಿನ ಕತೆಯಲ್ಲಿ ಪ್ರೇಮಿಗೆ ಜಯ ಸಿಗಲಿಲ್ಲ! “ಸಚಿವ ಹುದ್ದೆ” ಎಂಬ ಪ್ರೇಮ ವೈಫಲ್ಯದಿಂದ ಭಗ್ನಪ್ರೇಮಿಯಾಗಿ ತಿರುಗುತ್ತಿರುವವರ ನೋವು ಜಗತ್ತಿನ ಕಣ್ಣಿಗೆ ಕಾಣುವುದಿಲ್ಲ ಎಂದು ವ್ಯಂಗ್ಯವಾಡಿದೆ.