Valmiki Corporation Scam: 4,970-page Chargesheet submitted in Valmiki scam.
Bengaluru: ವಾಲ್ಮೀಕಿ ನಿಗಮ ಹಗರಣಕ್ಕೆ (Valmiki Corporation Scam) ಸಂಬಂಧಿಸಿದಂತೆ ಎಸ್ಐಟಿ ಚಾರ್ಜ್ಶೀಟ್ ಸಲ್ಲಿಸಿದ್ದು, ಇ.ಡಿ. ಕೂಡ ಚಾರ್ಜ್ಶೀಟ್ ಸಲ್ಲಿಕೆ ಮಾಡಿದೆ. ಮಾಜಿ ಸಚಿವ ಬಿ.ನಾಗೇಂದ್ರರೇ (B Nagendra) ಹಗರಣದ ಕಿಂಗ್ಪಿನ್ ಅಂತ ಚಾರ್ಜ್ಶೀಟ್ನಲ್ಲಿ ಉಲ್ಲೇಖಿಸಲಾಗಿದ್ದು, ನಿಗಮದ ಅಧ್ಯಕ್ಷ, ಶಾಸಕ ಬಸನಗೌಡ ದದ್ದಲ್ಗೆ ಚಾರ್ಜ್ಶೀಟ್ನಲ್ಲಿ ಕ್ಲೀನ್ಚಿಟ್ ನೀಡಲಾಗಿದೆ.
ವಾಲ್ಮೀಕಿ ಹಗರಣದಲ್ಲಿ 4,970 ಪುಟಗಳ ಚಾರ್ಜ್ಶೀಟ್
ಬರೋಬ್ಬರಿ 4,970 ಪುಟಗಳ ಚಾರ್ಜ್ಶೀಟ್ (Chargesheet) ಸಲ್ಲಿಸಿದ್ದು ಅಕ್ರಮದಲ್ಲಿ ಮಾಜಿ ಸಚಿವ ಬಿ.ನಾಗೇಂದ್ರರೇ ಕಿಂಗ್ಪಿನ್ ಅಂತ ಉಲ್ಲೇಖಿಸಿದೆ. ವಾಲ್ಮೀಕಿ ನಿಗಮ ಹಗರಣದ ತನಿಖೆ ನಡೆಸುತ್ತಿರುವ ಇ.ಡಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದೆ. ನಾಗೇಂದ್ರ ನಿರ್ದೇಶನದಂತೆಯೇ ಅಷ್ಟೂ ಹಣದ ಅವ್ಯವಹಾರ ನಡೆದಿದೆ ಅಂತ ತಿಳಿಸಿದೆ. ಒಟ್ಟು 25 ಆರೋಪಿಗಳ ವಿರುದ್ಧ ಆರೋಪ ಹೊರೆಸಿದೆ.
ಚಾರ್ಜ್ ಶೀಟ್ನಲ್ಲಿ ಏನೇನಿದೆ?
4,970 ಪುಟಗಳ ಚಾರ್ಜ್ಶೀಟ್, 144 ಪುಟಗಳ ದೂರು ಸಲ್ಲಿಕೆ
ಎ1 ನಾಗೇಂದ್ರ, ಎ2 ಸತ್ಯನಾರಾಯಣ ವರ್ಮ (Satyanarayana Varma), ಬ್ರೋಕರ್
ಎ3 ಇಟಕಾಲ ಸತ್ಯನಾರಾಯಣವರ್ಮ, ಫಸ್ಟ್ ಬ್ಯಾಂಕ್ ಮಾಲೀಕ
ಎ4 ಜೆ.ಜಿ ಪದ್ಮನಾಭ (J G Padmanabha), ವಾಲ್ಮೀಕಿ ಅಭಿವೃದ್ಧಿ ನಿಗಮದ ಎಂಡಿ
ನಾಗೇಂದ್ರ ಮತ್ತು ಗ್ಯಾಂಗ್ ಅಕ್ರಮ ನಡೆಸಿರೋದು ತನಿಖೆಯಲ್ಲಿ ಧೃಡ
ಹಣ ಅಕ್ರಮಕ್ಕೆ ಒಳಸಂಚು, ಸಾಕ್ಷ್ಯನಾಶ ಮಾಡಲು ಒಳಸಂಚು
ಶಾಸಕ ಬಸನಗೌಡ ದದ್ದಲ್ ಪಾತ್ರವಿಲ್ಲ
ಎಸ್ಐಟಿ (SIT) ಚಾರ್ಜ್ಶೀಟ್ನಂತೆ ಇಡಿ ಚಾರ್ಜ್ಶೀಟ್ನಲ್ಲಿ ಸಾಕಷ್ಟು ಭಿನ್ನವಾಗಿದೆ. ಎಸ್ಐಟಿ ಚಾರ್ಜ್ಶೀಟ್ನಲ್ಲಿ ನಾಗೇಂದ್ರಗೆ ಕ್ಲೀನ್ಚಿಟ್ ನೀಡಿದೆ. ಶಾಸಕ ಬಸನಗೌಡ ದದ್ದಲ್ (Basanagouda Daddal) ಪಾತ್ರವೂ ಉಲ್ಲೇಖವಾಗಿಲ್ಲ. ಆದ್ರೆ, ಇಡಿ ಚಾರ್ಜ್ಶೀಟ್ನಲ್ಲಿ ನಾಗೇಂದ್ರ ಕಿಂಗ್ಪಿನ್ ಅಂತ ಆರೋಪಿಸಿದೆ. ಒಟ್ಟಾರೆ, ವ್ಯತಿರಿಕ್ತ ಚಾರ್ಜ್ಶೀಟ್ಗಳು ಆಯಾ ಸರ್ಕಾರಗಳನ್ನ ಬಿಂಬಿಸ್ತಿರುವಂತೆ ಕಾಣಿಸ್ತಿದೆ.
ಲೋಕಸಭಾ ಚುನಾವಣೆಗೆ ನಿಗಮದ ಹಣ ಬಳಕೆ!
ಸ್ವತಃ ನಾಗೇಂದ್ರ ಅವರೇ ನಕಲಿ ಖಾತೆ ತೆರೆದು ಹಣ ಡೆಪಾಸಿಟ್ (Deposit) ಮಾಡಲು ಸೂಚನೆ ನೀಡಿದ್ದರು. ನಾಗೇಂದ್ರ ಸೂಚನೆಯಂತೆ ಎಂಡಿ ಜೆ.ಜಿ.ಪದ್ಮನಾಭ ಅಕ್ರಮ ಎಸಗಿದ್ದರು ಅನ್ನೋದು ಬಯಲಾಗಿದೆ. ನಿಗಮದ 20.19 ಕೋಟಿ ಹಣವನ್ನ ಬಳ್ಳಾರಿ ಲೋಕಸಭಾ ಚುನಾವಣೆಗೆ ಬಳಕೆಯಾಗಿತ್ತು ಎಂಬ ವಿಚಾರ ತನಿಖೆಯಲ್ಲಿ ಪತ್ತೆಯಾಗಿದೆ. ಬಳ್ಳಾರಿಯ (Bellary) ಪ್ರತಿ ಬೂತ್ಗೂ ಹಣ ಹಂಚಿಕೆ ಮಾಡಿರೋದು ಬಯಲಾಗಿದೆ. ಇದ್ರಲ್ಲಿ ಸ್ವತಃ ನಾಗೇಂದ್ರ 5.26 ಕೋಟಿ ಹಣ ಬಳಕೆ ಮಾಡಿರೋದು ಗೊತ್ತಾಗಿದೆ.
Valmiki Corporation Scam In Kannada Latest Update
Bengaluru: The SIT filed a chargesheet in connection with the Valmiki Corporation Scam, and E.D. Charge sheet has also been submitted. Former minister B. Nagendra has been mentioned as the kingpin of the scam in the charge sheet, and president of the corporation, MLA Basanagowda Daddal has been given a clean chit in the charge sheet.
4,970 page charge sheet in Valmiki scam
A charge sheet of 4,970 pages has been submitted and it has mentioned former minister B. Nagendra as the kingpin in the illegality. The charge sheet has been submitted to the ED court which is probing the Valmiki Corporation scam. As per Nagendra’s direction, so much money has been misappropriated. A total of 25 accused have been charged.
What is in the charge sheet?
4,970 pages of charge sheet, 144 pages of complaint
A1 Nagendra, A2 Satyanarayana Varma, Broker
A3 Itakala Satyanarayanavarma, Proprietor of First Bank
A4 J G Padmanabha, MD, Valmiki Development Corporation
Nagendra and the gang’s illegal activities are investigated
Conspiracy to embezzle money, conspiracy to destroy evidence
MLA Basanagowda Daddal has no role
ED Chargesheet is quite different from SIT Chargesheet. SIT gave a clean chit to Nagendra in the charge sheet. MLA Basanagouda Daddal’s role is also not mentioned. However, ED has accused Nagendra as kingpin in the charge sheet. Overall, the conflicting Chargesheet appear to have framed the respective governments.
Use of corporation money for Lok Sabha elections!
Nagendra himself opened a fake account and instructed him to deposit the money. It has been revealed that MD JG Padmanabha had committed illegal acts as instructed by Nagendra. Investigation revealed that 20.19 crores of the corporation’s money was used for Bellary Lok Sabha elections. It has been revealed that money has been distributed to each booth in Bellary. It is known that Nagendra himself spent 5.26 crores.