West Bengal : ಉತ್ತರ ಬಂಗಾಳದ(North Bengal) ಮಾಲ್ಡಾದಲ್ಲಿ ಹೊಸದಾಗಿ ಪ್ರಾರಂಭಿಸಲಾದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ಕಿಡಿಗೇಡಿಗಳು ಕಲ್ಲು ತೂರಿ ರೈಲಿನ ಗಾಜು ಪುಡಿ ಪುಡಿ ಮಾಡಿದ ಘಟನೆ ನಿನ್ನೆ ಸಂಭವಿಸಿದೆ. ಈ ಹೊಸ ವಂದೇ ಮಾತರಂ ರೈಲಿಗೆ ಪಶ್ಚಿಮ ಬಂಗಾಳದಲ್ಲಿ(Vande Bharat Express train) ಡಿಸೆಂಬರ್ 30 ರಂದು ಪ್ರಧಾನಿ ನರೇಂದ್ರ ಮೋದಿ(Narendra modi) ಅವರು ಚಾಲನೆ ನೀಡಿದ್ದರು.

ಪ್ರಯಾಣದ ಎರಡನೇ ದಿನದಂದು ಅಪರಿಚಿತ ದುಷ್ಕರ್ಮಿಗಳು ಸೋಮವಾರ ಕಲ್ಲು ತೂರಾಟ ನಡೆಸಿದ್ದು, ರೈಲಿನ ಬಲ ಭಾಗದ ಕಿಟಕಿಯ ಗಾಜನ್ನು ಒಡೆದಿದ್ದಾರೆ.
ಈ ವೇಳೆ ಯಾವುದೇ ಪ್ರಯಾಣಿಕರಿಗೆ ಹಾನಿಯಾಗದಿದ್ದರೂ, ಕಲ್ಲೂ ತೂರಿದ ರಭಸಕ್ಕೆ ಕೋಚ್ ಸಂಖ್ಯೆ ಸಿ-13 ರ ಬಾಗಿಲು ಒಡೆದು ಹೋಗಿದೆ.
ಈ ಘಟನೆ ಕುರಿತು ರೈಲ್ವೆ ಅಧಿಕಾರಿಗಳು ತನಿಖೆ ಆರಂಭಿಸಿದ್ದು, ರೈಲ್ವೇ ಕಾಯ್ದೆಯ ಸೆಕ್ಷನ್ 154 ರ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸೋಮವಾರ ಸಂಜೆ 5:50ರ ಸುಮಾರಿಗೆ ಕುಮಾರ್‌ಗಂಜ್‌ನಲ್ಲಿ ನ್ಯೂ ಜಲ್ಪೈಗುರಿ-ಹೌರಾ ವಂದೇ ಭಾರತ್ ಎಕ್ಸ್‌ಪ್ರೆಸ್ ಮೇಲೆ ಕಲ್ಲು ತೂರಾಟ ನಡೆದಿತ್ತು.
ಒಂದು ಮುಖ್ಯ ಬಾಗಿಲಿನ ಗಾಜು ಒಡೆದು ಹೋಗಿದೆ. ಈ ಘಟನೆ ಸಂಭವಿಸಿದರು ಕೂಡ ನಿಗದಿಪಡಿಸಿದ್ದ ವೇಳಾಪಟ್ಟಿಯಲ್ಲಿ ಯಾವುದೇ ವಿಳಂಬವಾಗಿಲ್ಲ ಎಂದು ಹಿರಿಯ ರೈಲ್ವೇ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.
ಪ್ರಧಾನಿ ಮೋದಿ ಶುಕ್ರವಾರ ಪಶ್ಚಿಮ ಬಂಗಾಳದ ಮೊದಲ ವಂದೇ ಭಾರತ್ ಎಕ್ಸ್‌ಪ್ರೆಸ್‌ಗೆ(Vande Bharat Express train) ಚಾಲನೆ ನೀಡಿದರು ಮತ್ತು ಈ ಮಾರ್ಗದಲ್ಲಿ ಜನವರಿ 1 ರಂದು ಇಲ್ಲಿನ ಪ್ರಯಾಣಿಕರಿಗೆ ವಂದೇ ಭಾರತ್ ಎಕ್ಸ್‌ಪ್ರೆಸ್ ಸೇವೆಯನ್ನು ಒದಗಿಸಲಾಯಿತು.

ಈ ಘಟನೆ ರಾಜಕೀಯ ಮುಖವಾಣಿ ಪಡೆದಿದ್ದು, ಘಟನೆಯ ಬೆನ್ನಲ್ಲೇ ಪ.ಬಂಗಾಳ ಆಡಳಿತಾರೂಢ ತೃಣಮೂಲ ಕಾಂಗ್ರೆಸ್ ಮತ್ತು ಭಾರತೀಯ ಜನತಾ ಪಕ್ಷದ ನಡುವೆ ದೋಷಾರೋಪಣೆಯನ್ನು ಸೃಷ್ಟಿಸಿತು.
“ದುರದೃಷ್ಟಕರ ಮತ್ತು ಅನಾರೋಗ್ಯಕರ ನಡೆಯಿತು. ಪಶ್ಚಿಮ ಬಂಗಾಳದ ಮಾಲ್ಡಾ ಜಿಲ್ಲೆಯಲ್ಲಿ ಭಾರತದ ಹೆಮ್ಮೆಯ ವಂದೇ ಭಾರತ್ ಎಕ್ಸ್‌ಪ್ರೆಸ್ ಮೇಲೆ ಕಲ್ಲು ತೂರಾಟ ಸಂಭವಿಸಿದೆ.
ಪ್ರಧಾನಿ ಮೋದಿ ಮತ್ತು ರೈಲ್ವೇ ಇಲಾಖೆ(Railway department) ತನಿಖೆಯನ್ನು NIAಗೆ ಹಸ್ತಾಂತರಿಸುವಂತೆ ಮತ್ತು ಅಪರಾಧಿಗಳನ್ನು ಶಿಕ್ಷಿಸುವಂತೆ ನಾನು ಒತ್ತಾಯಿಸುತ್ತೇನೆ ಎಂದು ಬಿಜೆಪಿ ಶಾಸಕ ಮತ್ತು ಪಶ್ಚಿಮ ಬಂಗಾಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ(Suvendu adhikari) ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: https://vijayatimes.com/demonetisation-correct-supreme-court/
‘ವಂದೇ ಭಾರತ’ಕ್ಕೆ ಹಾನಿ ಮಾಡಲು ಯಾರು ಪ್ರಯತ್ನಿಸುತ್ತಿದ್ದಾರೆ? ಅಂಥವರ ವಿರುದ್ಧ ಸೂಕ್ತ ತನಿಖೆ ಅಗತ್ಯವಿದೆ ಎಂದು AITC ಅಧಿಕಾರಿಗಳು ಕಲ್ಲು ತೂರಾಟವನ್ನು ಬಲವಾಗಿ ಖಂಡಿಸಿದ್ದಾರೆ. ಈ ಘಟನೆ ಪ.ಬಂಗಾಳದ ವಿರುದ್ಧ ನಕಾರಾತ್ಮಕ ಪ್ರಚಾರವನ್ನು ಸೃಷ್ಟಿಸುವ ಪಿತೂರಿಯಾಗಿರಬಹುದು.
ಮೊದಲು ಕಲ್ಲು ಎಸೆಯಿರಿ, ನಂತರ ಹೇಳಿಕೆಗಳನ್ನು ನೀಡಿ, ನಂತರ ಕೊಳಕು ರಾಜಕೀಯವನ್ನು ಪ್ರಾರಂಭಿಸಿ? ಎಂದು ಟಿಎಂಸಿ(TMC) ವಕ್ತಾರ ಕುನಾಲ್ ಘೋಷ್ ಟ್ವೀಟ್ ಮಾಡಿದ್ದಾರೆ.