India : ಬಹುನಿರೀಕ್ಷಿತ ವಂದೇ ಭಾರತ್ ಎಕ್ಸ್‌ಪ್ರೆಸ್(Vande Bharat Express) ನವೆಂಬರ್ 11 ರಂದು ದಕ್ಷಿಣ ಭಾರತದಲ್ಲಿ ಪಾದಾರ್ಪಣೆ ಮಾಡಲಿದೆ. ಭಾರತದ ಮೊದಲ ಹೈಸ್ಪೀಡ್ ರೈಲಿನ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಐದು ಸಂಗತಿಗಳು ಇಲ್ಲಿವೆ.
1. ಇದು ಭಾರತದಲ್ಲಿ ಐದನೇ ವಂದೇ ಭಾರತ್ ಎಕ್ಸ್‌ಪ್ರೆಸ್ ಆಗಿದೆ(Vande Bharat Express). ಇದು ಕರ್ನಾಟಕದ ಬೆಂಗಳೂರು ಮತ್ತು ಮೈಸೂರನ್ನು ತಮಿಳುನಾಡು ರಾಜಧಾನಿ ಚೆನ್ನೈಗೆ ಸಂಪರ್ಕಿಸುತ್ತದೆ.
‘ಮೇಕ್ ಇನ್ ಇಂಡಿಯಾ’(Make in India) ಅಭಿಯಾನದ ಭಾಗವಾಗಿರುವ ಈ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಚಾಲನೆ ನೀಡಲಿದ್ದಾರೆ.
ವಂದೇ ಭಾರತ್ ಸೇವೆಗಳು ಪ್ರವಾಸೋದ್ಯಮವನ್ನು ಉತ್ತೇಜಿಸುವ ಜೊತೆಗೆ ವೇಗವಾದ ಮತ್ತು ಹೆಚ್ಚು ಆರಾಮದಾಯಕ ಪ್ರಯಾಣದ ಆಯ್ಕೆಗಳನ್ನು ಒದಗಿಸುವ ನಿರೀಕ್ಷೆಯಿದೆ.
ಇಲ್ಲಿಯವರೆಗೆ ಪ್ರಾರಂಭಿಸಲಾದ ನಾಲ್ಕು ರೈಲುಗಳು ದೆಹಲಿ, ಮುಂಬೈ, ಅಹಮದಾಬಾದ್, ಕಾನ್ಪುರ, ವಾರಣಾಸಿ ಮತ್ತು ಇತರ ಸ್ಥಳಗಳಿಗೆ ಸಂಪರ್ಕ ಕಲ್ಪಿಸುತ್ತವೆ.
ಇದನ್ನೂ ಓದಿ : https://vijayatimes.com/snake-catching-video-viral/
2. ಚೆನ್ನೈ-ಮೈಸೂರು ಸೇವೆಯ ಸರಾಸರಿ ವೇಗ ಗಂಟೆಗೆ 75 ರಿಂದ 77 ಕಿಲೋಮೀಟರ್‌ಗಳ ನಡುವೆ ಇರುತ್ತದೆ. ಪ್ರಯಾಣದ ಸಮಯ – ದೂರವು ಸುಮಾರು 504 ಕಿಲೋಮೀಟರ್‌ಗಳು – ಸುಮಾರು ಆರೂವರೆ ಗಂಟೆಗಳಿರುತ್ತದೆ.
ಚೆನ್ನೈ ಸೆಂಟ್ರಲ್‌ನಿಂದ ಬೆಳಗ್ಗೆ 5.50ಕ್ಕೆ ಹೊರಡುವ ರೈಲು ಬೆಂಗಳೂರಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ (KRS) ನಿಲ್ದಾಣದಲ್ಲಿ ನಿಲುಗಡೆಗೊಂಡು ಮಧ್ಯಾಹ್ನ 12.30ಕ್ಕೆ ಮೈಸೂರು ತಲುಪಲಿದೆ.
3. ಇದು ಮೈಸೂರಿನಿಂದ ಮಧ್ಯಾಹ್ನ 1.05 ಕ್ಕೆ ಹೊರಟು, 2.25 ಕ್ಕೆ ಬೆಂಗಳೂರಿಗೆ ಆಗಮಿಸಿ ರಾತ್ರಿ 7.35 ಕ್ಕೆ ಚೆನ್ನೈ ತಲುಪುತ್ತದೆ.
೪. ರೈಲು ವಾರದ ಆರು ದಿನಗಳಲ್ಲಿ ಚಲಿಸುತ್ತದೆ. ಆದರೆ ಬುಧವಾರ ಲಭ್ಯವಿರುವುದಿಲ್ಲ.
ಇದು 16 ಕೋಚ್‌ಗಳನ್ನು ಹೊಂದಿದ್ದು, ಸ್ವಯಂಚಾಲಿತ ಬಾಗಿಲುಗಳು ಮತ್ತು 180 ಡಿಗ್ರಿ ಸುತ್ತುವ ಸೀಟುಗಳನ್ನು ಹೊಂದಿರುತ್ತದೆ.
5. ‘ಎಕಾನಮಿ ಕ್ಲಾಸ್’ ಟಿಕೆಟ್‌ಗಳ ಬೆಲೆ ₹921 (ಚೆನ್ನೈ-ಮೈಸೂರು ಮಾರ್ಗ) ಮತ್ತು ‘ಎಕ್ಸಿಕ್ಯುಟಿವ್ ಕ್ಲಾಸ್’ ₹1,880. ಮೈಸೂರು ಮತ್ತು ಬೆಂಗಳೂರು ನಡುವಿನ ಪ್ರಯಾಣ ದರ ಕ್ರಮವಾಗಿ ₹ 368 ಮತ್ತು ₹ 768 ಆಗಿರುತ್ತದೆ.
- ಮಹೇಶ್.ಪಿ.ಎಚ್