Bengaluru : ವಂದೇ ಭಾರತ್ ಎಕ್ಸ್ಪ್ರೆಸ್(vande bharath express in hubbali) ರೈಲಿನ ಸಂಚಾರದ ಬಗ್ಗೆ ಇದೀಗ ಚರ್ಚೆಗಳು ಜೋರಾಗಿದ್ದು, ಶೀಘ್ರದಲ್ಲೇ ಹುಬ್ಬಳ್ಳಿ-ಬೆಂಗಳೂರು(Hubbali-Bengaluru) ನಡುವೆ ಎರಡು ವಂದೇ ಭಾರತ್ ರೈಲುಗಳ ಸಂಚಾರ ಆರಂಭವಾಗಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾಹಿತಿ ನೀಡಿದ್ದಾರೆ.
ಕಳೆದ ನವೆಂಬರ್‌ನಲ್ಲಿ ದಕ್ಷಿಣ ಭಾರತದ ಮೊದಲ ವಂದೇ ಭಾರತ್ ರೈಲು ಸಂಚಾರ ಚೆನ್ನೈ-ಮೈಸೂರು-ಬೆಂಗಳೂರು(Chennai-Mysuru-Bengaluru) ನಡುವೆ ಆರಂಭವಾಗಿತ್ತು.
ಇದೀಗ 2023ರ ಮೇ ತಿಂಗಳಲ್ಲಿ ಹುಬ್ಬಳ್ಳಿ-ಬೆಂಗಳೂರು ನಡುವೆ ಎರಡು ವಂದೇ ಭಾರತ್ ರೈಲುಗಳು ಸಂಚಾರ ಆರಂಭಿಸಲಿವೆ ಎಂಬ ಮಾಹಿತಿ ಹೊರಬಿದ್ದಿದೆ.
ಈ ಕುರಿತು ಟ್ವೀಟ್(Tweet) ಮಾಡಿರುವ ಪ್ರಹ್ಲಾದ್ ಜೋಶಿ(Prahlad Joshi) ಅವರು, “ನಮ್ಮ ಧಾರವಾಡ-ಹುಬ್ಬಳ್ಳಿಯಿಂದ ಬೆಂಗಳೂರಿಗೆ ಅತ್ಯಾಧುನಿಕ ಅತಿವೇಗದ ವಂದೇ ಭಾರತ್ ರೈಲನ್ನು ಆರಂಭಿಸಲು ಕೇಂದ್ರ ಸರ್ಕಾರ ಮತ್ತು ರೈಲ್ವೆ ಇಲಾಖೆ ವೇಗವಾಗಿ ಕಾರ್ಯನಿರ್ವಹಿಸುತ್ತಿದೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ : https://vijayatimes.com/bengaluru-gang-sets-ablaze/
ಇನ್ನು 2019 ರಲ್ಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಭಾರತದಲ್ಲಿ ಚಾಲನೆಗೊಂಡಿತ್ತು. 16 ಬೋಗಿಗಳಿರುವ ಈ ರೈಲಿನ ನಿರ್ಮಾಣಕ್ಕೆ 115 ಕೋಟಿ ವೆಚ್ಚವಾಗುತ್ತದೆ.
ಒಂದು ರೈಲು ನಿರ್ಮಾಣಕ್ಕೆ 200 ಕೋಟಿ ಆಗಬಹುದು ಎಂದು ರೈಲ್ವೆ ಇಲಾಖೆ ಹೇಳಿತ್ತು. ಮುಂದಿನ ವರ್ಷದಲ್ಲಿ 75 ವಂದೇ ಭಾರತ್ ರೈಲುಗಳನ್ನು ತಯಾರಿಸಲಾಗುತ್ತಿದೆ.
ಇದನ್ನೂ ಓದಿ : https://vijayatimes.com/pramod-muthalik-politics-game/
ಮುಂದಿನ ಮೂರು ವರ್ಷದಲ್ಲಿ ಬರೋಬ್ಬರಿ 400 ವಂದೇ ಭಾರತ್ ರೈಲುಗಳನ್ನು ನಿರ್ಮಿಸುವ ಗುರಿಯನ್ನು ರೈಲ್ವೆ ಇಲಾಖೆಗೆ ಹೊಂದಿದೆ. ಈ ರೈಲಿನ ಬ್ರೇಕಿಂಗ್ ವ್ಯವಸ್ಥೆ ಅತ್ಯಾಧುನಿಕದ್ದಾಗಿದೆ.
ಇದರಲ್ಲಿ ಕೇಂದ್ರೀಕೃತ ಕೋಚ್ ಮಾನಿಟರಿಂಗ್ ಸಿಸ್ಟಂ ಇದ್ದು, ರೈಲಿನ ಎಲೆಕ್ಟ್ರಿಕ್ ಭಾಗಗಳಿಂದ ಹಿಡಿದು ಕ್ಲೈಮೇಟ್ ಕಂಟ್ರೋಲ್‌ವರೆಗೂ ಎಲ್ಲವನ್ನೂ ರಿಯಲ್-ಟೈಮ್‌ನಲ್ಲಿ ಮಾನಿಟರ್ ಮಾಡಲಾಗುತ್ತದೆ.
ವಂದೇ ಮಾತರಂ ರೈಲಿನ ಭಾಗಗಳನ್ನು ದೇಶೀಯವಾಗಿ ನಿರ್ಮಿಸಲಾಗಿದೆ. ಈ ರೈಲು ಸ್ವಯಂಚಾಲಿತ(ಆಟೊಮ್ಯಾಟಿಕ್) ಡೋರ್‌ಗಳನ್ನು ಹೊಂದಿರುತ್ತವೆ.
ಈ ರೈಲು ವಿಮಾನದಲ್ಲಿರುವಂತ ಅತ್ಯಾದುನಿಕ ಸೌಲಭ್ಯಗಳನ್ನು ಹೊಂದಿದೆ. ದೇಶದಲ್ಲಿ ಈಗಾಗಲೇ ಆರು ವಂದೇ ಭಾರತ್ ರೈಲುಗಳು ಸಂಚಾರ ನಡೆಸುತ್ತಿದ್ದು,
https://fb.watch/hqxu1-caHH/ ನಿಮ್ಮ ಪ್ರಕಾರ ಮುಂದಿನ ಸಿಎಂ ಯಾರಾಗಬೇಕು? : ಜನಾಭಿಪ್ರಾಯ
ಮುಂದಿನ ಬಜೆಟ್‌ನಲ್ಲಿ ಈ ರೈಲುಗಳ ನಿರ್ಮಾಣಕ್ಕೆ ದೊಡ್ಡ ಮೊತ್ತವನ್ನು ಮೀಸಲಿರಿಸಲು ಕೇಂದ್ರ ಸರ್ಕಾರ ಯೋಜಿಸಿದೆ. ಈ ಬಗ್ಗೆ ಸಾರ್ವಜನಿಕರು ಕೇಂದ್ರ ಸರ್ಕಾರದ ಯೋಜನೆಗೆ ಬಲವಾದ ಬೆಂಬಲ ಸೂಚಿಸಿದೆ.
- ಮಹೇಶ್.ಪಿ.ಎಚ್