• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ಖ್ಯಾತ ಗಾಯಕಿ ವಾಣಿ ಜಯರಾಂ ಆಕಸ್ಮಿಕ ಸಾವಿನ ಕಾರಣ ಬಹಿರಂಗ!

Rashmitha Anish by Rashmitha Anish
in ಪ್ರಮುಖ ಸುದ್ದಿ
ಖ್ಯಾತ ಗಾಯಕಿ ವಾಣಿ ಜಯರಾಂ ಆಕಸ್ಮಿಕ ಸಾವಿನ ಕಾರಣ ಬಹಿರಂಗ!
0
SHARES
1.2k
VIEWS
Share on FacebookShare on Twitter

Chennai: 10 ಸಾವಿರಕ್ಕೂ ಅಧಿಕ ಗೀತೆಗಳನ್ನು ಹಾಡಿದ್ದ ಖ್ಯಾತ ಹಿರಿಯ ಗಾಯಕಿ ವಾಣಿ ಜಯರಾಂ(Vani Jayaram) ಅವರು ಶನಿವಾರ ತಮ್ಮ ಸ್ವಗೃಹದಲ್ಲಿ ನಿಧನರಾಗಿದ್ದರು. ಪತಿಯ ನಿಧನದ ಬಳಿಕ (Vani Jayaram’s death reason) ಮಕ್ಕಳಿಲ್ಲದ ಅವರು ಏಕಾಂಗಿಯಾಗಿ ಫ್ಲ್ಯಾಟ್ನಲ್ಲಿ(Flat) ವಾಸವಿದ್ದರು.

ಅವರ ಸಾವಿನ ಕುರಿತು ಹಲವು ಅನುಮಾನಗಳು ಹುಟ್ಟಿಕೊಂಡಿದ್ದು, ಹೆಚ್ಚಿನ ತನಿಖೆಗಾಗಿ ಅವರ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಸರಕಾರಿ ಆಸ್ಪತ್ರೆಗೆ ರವಾನಿಸಲಾಗಿತ್ತು.

ಸ್ಥಳೀಯರು ಹೇಳುವ ಪ್ರಕಾರ ವಾಣಿ ಜಯರಾಂ ಅವರು ಒಬ್ಬರೇ ಮನೆಯಲ್ಲಿ ವಾಸವಿದ್ದರಂತೆ. ಆದರೆ ಪ್ರತಿದಿನ ಮನೆ ಕೆಲಸದಾಕೆ ಮಾತ್ರ ಮನೆಗೆ ಬರುತ್ತಿದ್ದಳು.

ಫೆಬ್ರುವರಿ 4ರಂದು ಮನೆಗೆಲಸದಾಕೆ ಬಂದು ಬಾಗಿಲು ಬಡಿದಾಗ, ಬಾಗಿಲು ತೆರೆದಿಲ್ಲ. ಆಗ ಮನೆಗೆಲಸದಾಕೆ ಪೊಲೀಸರಿಗೆ ಮಾಹಿತಿ ನೀಡಿದ್ದಾಳೆ.

ಸ್ಥಳಕ್ಕೆ ಆಗಮಿಸಿದ ಪೊಲೀಸರು ಮನೆಯ ಬಾಗಿಲು ಮುರಿದು ಒಳಗೆ ಹೋದಾಗ, ವಾಣಿ ಜಯರಾಂ ಅವರು ನೆಲಕ್ಕೆ ಉರುಳಿ ಬಿದ್ದ ಸ್ಥಿತಿಯಲ್ಲಿದ್ದರು.

ಅವರ ಹಣೆಗೆ ಗಂಭೀರ ಗಾಯವಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದರು. ಸದ್ಯ ಇದನ್ನು ಹೃದಯಾಘಾತ(Heart attack) ಎಂದು ಹೇಳಲಾಗುತ್ತಿದೆ.

Vani Jayaram's death reason

ಇದೀಗ ಮರಣೋತ್ತರ ಪರೀಕ್ಷೆಯ ವಿವರ ಬಹಿರಂಗವಾಗಿದ್ದು, ಅವರ ಸಾವಿನ ಬಗ್ಗೆ ಇದ್ದ ಅನುಮಾನಗಳು ದೂರವಾಗಿದೆ.

ಹಾಗೂ ಅವರ ಅಕ್ಕಪಕ್ಕದ ಸಿಸಿಟಿವಿ (CCTV)ದೃಶ್ಯಾವಳಿಗಳನ್ನೂ ಪರಿಶೀಲಿಸಿದ ಪೊಲೀಸರು ಹಿರಿಯ ಗಾಯಕಿಯ ಸಾವಿನ ಕೇಸ್ ಅನ್ನು ಮುಗಿಸಿದ್ದಾರೆ.

ಇದನ್ನೂ ಓದಿ: 100 ದಿನ ಪೂರೈಸಿದ ಅಪ್ಪು ಕನಸಿನ ʻಗಂಧದಗುಡಿʼ ; ಧನ್ಯವಾದ ತಿಳಿಸಿದ ಅಶ್ವಿನಿ ಪುನೀತ್ ರಾಜ್‌ಕುಮಾರ್

ಮರಣೋತ್ತರ ಪರೀಕ್ಷೆಯ ವರದಿಯಲ್ಲೇನಿದೆ? : ಪೋಸ್ಟ್ ಮಾರ್ಟೆಮ್(Post Mortem) ವರದಿಯ ಯ ಪ್ರಕಾರ ‘ವಾಣಿ ಜಯರಾಮ್ ಅವರ ಸಾವಿನಲ್ಲಿ ಯಾವುದೇ ಅನುಮಾನವಿಲ್ಲ ಎಂದು ತಿಳಿದು ಬಂದಿದೆ.

ಅವರ ಹಾಸಿಗೆಯ ಹತ್ತಿರ ಹಳೆಯದಾದ ಮರದ ಮೇಜಿನ ಮೇಲೆ ಜಾರಿ ಬಿದ್ದಿದ್ದರು. ಆ ಮೇಜು 2 ಅಡಿ ಎತ್ತರವಿತ್ತು, ಹಣೆಗೆ ಗಾಯವಾಗಿ ಹಣೆಯಿಂದ ಭಾರೀ ರಕ್ತಸ್ರಾವವಾಗಿದೆ.

ಮೇಜಿನ ಮೇಲೂ ರಕ್ತದ ಕಲೆ ಇತ್ತು. ಸಿಸಿಟಿವಿಯನ್ನು ವೀಕ್ಷಿಸಿದಾಗ ಅವರ ಮನೆಗೆ ಹೊರಗಿನವರು ಯಾರೂ ಬಂದಿರಲಿಲ್ಲ’ ಎಂದು ಪೊಲೀಸರು ಖಚಿತಪಡಿಸಿ ಕೊಂಡಿದ್ದಾರೆ.

Vani Jayaram's death reason

77 ವರ್ಷದ ಗಾಯಕಿಗೆ, ಕೇಂದ್ರ ಸರ್ಕಾರ ಗಣರಾಜ್ಯೋತ್ಸವ ಮುನ್ನಾ ದಿನ ಪದ್ಮವಿಭೂಷಣ ಪ್ರಶಸ್ತಿ ಘೋಷಣೆ ಮಾಡಿತ್ತು. ಅವರ ಮನೆಯ ಕೆಲಸದ (Vani Jayaram’s death reason) ಹೆಂಗಸು ಶನಿವಾರ ಸಾಕಷ್ಟು ಬಾರಿ ಮನೆಯ ಬೆಲ್ ಬಾರಿಸಿದರೂ,

ವಾಣಿ ಜಯರಾಮ್ ಬಾಗಿಲು ತೆಗೆಯದ ಕಾರಣ, ಅವರ ಸಂಬಂಧಿಗಳು ಹಾಗೂ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದರು.

ಕೊನೆಗೆ ಬದಲಿ ಕೀ ಬಳಸಿ ಮನೆಯ ಬಾಗಿಲು ತೆಗೆದಾಗ, ವಾಣಿ ಜಯರಾಮ್ ರಕ್ತದ ಮಡುವಿನಲ್ಲಿ ಬಿದ್ದಿರುವುದು ಗೊತ್ತಾಗಿತ್ತು ಎಂದು ಪಿಟಿಐ(PTI) ವರದಿ ಮಾಡಿತ್ತು.

ಇದನ್ನೂ ಓದಿ: ಇದೊಂದು ಸಹಾಯ ಮಾಡಿ, ಕೈಮುಗಿದು ಬೇಡುತ್ತೇನೆ : ಲೈವ್‌ ಬಂದು ಕಣ್ಣೀರಿಟ್ಟ ‘ನಟ ಭಯಂಕರ’ ಪ್ರಥಮ್!

ಇನ್ನು ವಾಣಿ ಜಯರಾಂ ಅವರು ಮೂಲತಃ ತಮಿಳುನಾಡಿನವರಾಗಿದ್ದು(Tamil Nadu), ಅನೇಕ ಭಾಷೆಗಳಲ್ಲಿ ಗಾಯಕಿಯಾಗಿ ಗುರುತಿಸಿಕೊಂಡಿದ್ದರು..

1974ರಲ್ಲಿ ಪೋಷ್ಸುಮಂಗಲಿ ಚಿತ್ರದ ಮೂಲಕ ಗಾಯಕಿಯಾಗಿ ಚಿತ್ರರಂಗ ಪ್ರವೇಶಿಸಿದ್ದ ಅವರು 10000ಕ್ಕೂ ಹೆಚ್ಚು ಗೀತೆಗಳನ್ನು ಹಾಡಿದ್ದಾರೆ.

ಅವರಿಗೆ ಮೂರು ಬಾರಿ ರಾಷ್ಟ್ರ ಪ್ರಶಸ್ತಿ ಕೂಡ ಬಂದಿದೆ. ಮೊನ್ನೆಯಷ್ಟೇ ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಪದ್ಮ ಭೂಷಣವನ್ನೂ ಅವರಿಗೆ ನೀಡಲಾಗಿತ್ತು.

journalism course

ವಾಣಿ ಜಯರಾಂ ಅವರು ಮದ್ರಾಸ್ ವಿಶ್ವ ವಿದ್ಯಾಲಯದಿಂದ ಸಂಗೀತದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ್ದು. ನಂತರ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ(State Bank of India) ಕೆಲಸ ಮಾಡಿದರು.

ಅವರ ಕಂಠಸಿರಿ ಗಮನಿಸಿದ ಸಂಗೀತ ನಿರ್ದೇಶಕರು ಅವರಿಗೆ ಅವಕಾಶಗಳನ್ನು ನೀಡಿದರು. ಮರಾಠಿ,ಮಲಯಾಳಂ, ಓಡಿಯಾ, ಗುಜರಾತಿ, ಕನ್ನಡ, ಹಿಂದಿ, ತೆಲುಗು, ತಮಿಳು, ಸೇರಿದಂತೆ ಭಾರತೀಯ ಅನೇಕ ಭಾಷೆಗಳ ಸಿನಿಮಾಗಳಿಗೆ ಹಾಡಿದ ಹೆಗ್ಗಳಿಕೆ ಇವರದ್ದು.

ಕನ್ನಡದಲ್ಲಿ ರಾಜ್ ಕುಮಾರ್, ವಿಷ್ಣುವರ್ಧನ್, ಅಂಬರೀಶ್, ಶಿವರಾಜ್ ಕುಮಾರ್, ಅನಂತ್ ನಾಗ್ ಹೀಗೆ ಅನೇಕ ನಾಯಕರ ಚಿತ್ರಗಳಿಗೆ ವಾಣಿ ಜಯರಾಂ ಅವರು ಹಿನ್ನಲೆ ಗಾಯಕಿಯಾಗಿ ಹಾಡಿದ್ದಾರೆ. ಕನ್ನಡದಲ್ಲಿ ಅವರು ಐವತ್ತಕ್ಕೂ ಹೆಚ್ಚು ಗೀತೆಗಳನ್ನು ಹಾಡಿದ್ದಾರೆ.

Tags: Deathnewsvanijayaram

Related News

ಬೆಲೆ ಏರಿಕೆಯ ಬಿಸಿಯ ಜೊತೆಗೆ ಮತ್ತೊಂದು ಬಿಸಿ, ಸಾಮಾನ್ಯ ಬಳಕೆಯ ಔಷಧ ಬೆಲೆ ಹೆಚ್ಚಳ, ಏ.1 ರಿಂದ ದುಬಾರಿಯಾಗಲಿದೆ ಔಷಧ.
ಆರೋಗ್ಯ

ಬೆಲೆ ಏರಿಕೆಯ ಬಿಸಿಯ ಜೊತೆಗೆ ಮತ್ತೊಂದು ಬಿಸಿ, ಸಾಮಾನ್ಯ ಬಳಕೆಯ ಔಷಧ ಬೆಲೆ ಹೆಚ್ಚಳ, ಏ.1 ರಿಂದ ದುಬಾರಿಯಾಗಲಿದೆ ಔಷಧ.

March 29, 2023
10 ಗಂಟೆ ನಂತ್ರ ಫ್ಲಾಟ್‌ಗೆ ಪ್ರವೇಶ ಇಲ್ಲ, ಫೋನಲ್ಲಿ ಮಾತಾಡಬಾರದು: ನಿಯಮ ತಪ್ಪಿದ್ರೆ ಬಾಡಿಗೆದಾರರಿಗೆ 1000 ರೂ. ದಂಡ!
ಪ್ರಮುಖ ಸುದ್ದಿ

10 ಗಂಟೆ ನಂತ್ರ ಫ್ಲಾಟ್‌ಗೆ ಪ್ರವೇಶ ಇಲ್ಲ, ಫೋನಲ್ಲಿ ಮಾತಾಡಬಾರದು: ನಿಯಮ ತಪ್ಪಿದ್ರೆ ಬಾಡಿಗೆದಾರರಿಗೆ 1000 ರೂ. ದಂಡ!

March 28, 2023
ವೈಟ್ ಫೀಲ್ಡ್ ಹೊಸ ಮೆಟ್ರೋ ಮಾರ್ಗದ ಮೊದಲ ದಿನ ಪ್ರಯಾಣಿಸಿದ ಸಂಖ್ಯೆ 16000 ಕ್ಕೂ ಅಧಿಕ! ವರದಿ
ಪ್ರಮುಖ ಸುದ್ದಿ

ವೈಟ್ ಫೀಲ್ಡ್ ಹೊಸ ಮೆಟ್ರೋ ಮಾರ್ಗದ ಮೊದಲ ದಿನ ಪ್ರಯಾಣಿಸಿದ ಸಂಖ್ಯೆ 16000 ಕ್ಕೂ ಅಧಿಕ! ವರದಿ

March 28, 2023
ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ 14 ವಿರೋಧ ಪಕ್ಷಗಳು ; ಕಾರಣ ಏನು ಗೊತ್ತಾ
Vijaya Time

ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ 14 ವಿರೋಧ ಪಕ್ಷಗಳು ; ಕಾರಣ ಏನು ಗೊತ್ತಾ

March 24, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.