Uttar Pradesh : ಉತ್ತರ ಪ್ರದೇಶದ (UttarPradesh) ವಾರಣಾಸಿಯ (Varnasi) ಗ್ಯಾನವಾಪಿ ಮಸೀದಿಯಲ್ಲಿ (Gyanvapi Mosque) ಸಿಕ್ಕಿದೆ ಎನ್ನಲಾದ ಶಿವಲಿಂಗದ (Shivling), ಕಾರ್ಬನ್ ಡೇಟಿಂಗ್ ಪರೀಕ್ಷೆ ನಡೆಸಲು ಅನುಮತಿ ನೀಡುವಂತೆ ಹಿಂದೂ ಪರ ವಕೀಲರು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ತಿರಸ್ಕರಿಸಿದೆ.
ಹೌದು, ಗ್ಯಾನವಾಪಿ ಮಸೀದಿಯ ವಝುಖಾನಾ ಅಥವಾ ಜಲಾಶಯದಲ್ಲಿ ಪತ್ತೆಯಾದ ಶಿವಲಿಂಗದ ಕಾರ್ಬನ್ ಡೇಟಿಂಗ್‌ಗೆ ಒತ್ತಾಯಿಸಿ ಹಿಂದೂ ಪರ ವಕೀಲರು ಸಲ್ಲಿಸಿದ ಮನವಿಯನ್ನು ವಾರಣಾಸಿ ನ್ಯಾಯಾಲಯ ಶುಕ್ರವಾರ ತಿರಸ್ಕರಿಸಿದೆ.
ಮೇ 16 ರಂದು ಸರ್ವೆ(Survey) ಕಾರ್ಯದ ವೇಳೆ ಮಸೀದಿಯ ವಝೂಖಾನಾ ಅಥವಾ ಜಲಾಶಯದಲ್ಲಿ ಕಂಡುಬಂದ “ಶಿವಲಿಂಗ” ಆಸ್ತಿಯ ಭಾಗವಾಗಿದೆ ಎಂದು ಅರ್ಜಿದಾರರು ಪ್ರತಿಪಾದಿಸಿದ್ದರು.
ಶಿವಲಿಂಗವನ್ನು ಹೋಲುತ್ತಿದ್ದ ಈ ರಚನೆಯನ್ನು, ಕಾರ್ಬನ್ ಡೇಟಿಂಗ್ ಮತ್ತು ಇತರ ವೈಜ್ಞಾನಿಕ ಪರೀಕ್ಷೆಗೊಳಪಡಿಸಲು ಹಿಂದೂ ಪರ ವಕೀಲರು ಒತ್ತಾಯಿಸಿದ್ದರು. ಅ
ಷ್ಟಕ್ಕೂ, ಈ ಕಾರ್ಬನ್ ಡೇಟಿಂಗ್ ಎಂದರೇನು ಅಂತ ನೋಡುವುದಾದರೆ, ಇದು ಪುರಾತತ್ತ್ವ ಶಾಸ್ತ್ರದ ವಸ್ತು ಅಥವಾ ಪುರಾತತ್ತ್ವ ಶಾಸ್ತ್ರದ ಸಂಶೋಧನೆಗಳ ವಯಸ್ಸನ್ನು ಕಂಡುಹಿಡಿಯುವ ವೈಜ್ಞಾನಿಕ ಪ್ರಕ್ರಿಯೆಯಾಗಿದೆ.
ಇದನ್ನೂ ಓದಿ : https://vijayatimes.com/darling-prabhas-appreciates-kantara/
ಆದರೆ ಹಿಂದೂ ಪರ ವಕೀಲರು ಸಲ್ಲಿಸಿದ್ದ ಕಾರ್ಬನ್ ಡೇಟಿಂಗ್ ಅರ್ಜಿಯನ್ನು ಗ್ಯಾನವಾಪಿ ಮಸೀದಿ ಸಮಿತಿ ವಿರೋಧಿಸಿತ್ತು.
ಈ ಪ್ರಕರಣದ ಹಿನ್ನೆಲೆಯನ್ನು ನೋಡುವುದಾದರೆ, ವಾರಣಾಸಿಯ ಕಾಶಿ ವಿಶ್ವನಾಥ ದೇವಸ್ಥಾನದ ಪಕ್ಕದಲ್ಲಿ ಗ್ಯಾನವಾಪಿ ಮಸೀದಿ ಇದೆ,
ಮೊಘಲ್ ಚಕ್ರವರ್ತಿ ಔರಂಗಜೇಬನ ಆದೇಶದ ಮೇರೆಗೆ ಕೆಡವಲ್ಪಟ್ಟ ಹಿಂದೂ ದೇವಸ್ಥಾನದ ಒಂದು ಭಾಗದಲ್ಲಿ ಮಸೀದಿಯನ್ನು ನಿರ್ಮಿಸಲಾಗಿದೆ,
ಎಂಬ ವಾದವನ್ನು ಪುನರುಜ್ಜೀವನಗೊಳಿಸುವ ಅರ್ಜಿಯನ್ನು ವಾರಣಾಸಿ ನ್ಯಾಯಾಲಯದಲ್ಲಿ ವಿಚಾರಣೆ ಮಾಡಲಾಗುತ್ತಿದೆ.
ಕಳೆದ ತಿಂಗಳು, ಐದು ಹಿಂದೂ ಮಹಿಳೆಯರಲ್ಲಿ ನಾಲ್ಕು ಅರ್ಜಿದಾರರು “ಶಿವಲಿಂಗ” ರಚನೆ ಕುರಿತು “ವೈಜ್ಞಾನಿಕ ತನಿಖೆ” ಕೋರಿ ಮನವಿ ಸಲ್ಲಿಸಿದರು.
ಪ್ರಕರಣದಲ್ಲಿ ಸ್ಪಷ್ಟತೆಗಾಗಿ ಶಿವಲಿಂಗದ ವಯಸ್ಸನ್ನು ನಿರ್ಧರಿಸುವುದು ಅಗತ್ಯ ಎಂದು ಅವರು ವಾದಿಸಿದರು. ಅದೇ ರೀತಿ, ಹಿಂದೂ ದೇವತೆಗಳ ಪುರಾತನ ವಿಗ್ರಹಗಳೂ ಮಸೀದಿಯೊಳಗಿವೆ ಎಂದು ಮಹಿಳೆಯರು ಹೇಳಿಕೊಂಡಿದ್ದಾರೆ.
ಆದರೆ ಮಸೀದಿ ಸಮಿತಿಯು ಈ ವೈಜ್ಞಾನಿಕ ತನಿಖೆಯನ್ನು ವಿರೋಧಿಸಿತ್ತು. ವೈಜ್ಞಾನಿಕ ತನಿಕೆಯಿಂದ ವಿಗ್ರಹಕ್ಕೆ ಹಾನಿಯಾಗುತ್ತದೆ ಎಂಬುದು ಮಸೀದಿ ಸಮಿತಿಯ ವಾದವಾಗಿದೆ.
ಜೊತೆಗೆ, ಮಸೀದಿಯೊಳಗಿನ ದೇಗುಲದಲ್ಲಿ ಪೂಜೆ ಮಾಡುವುದಕ್ಕೆ ಶಿವಲಿಂಗದಂತಿರುವ ರಚನೆಯೊಂದಿಗೆ ಯಾವುದೇ ಸಂಬಂಧವಿಲ್ಲ ಎಂದು ವಾದಿಸಿತು.
“ಶಿವಲಿಂಗ” ಎಂದು ಕರೆಯಲ್ಪಡುವ ವಸ್ತುವು ವಾಸ್ತವವಾಗಿ “ಕಾರಂಜಿ” ಎನ್ನುವುದು ಮಸೀದಿ ಸಮಿತಿಯ ವಾದವಾಗಿದೆ. ಕಳೆದ ವಾರ,
ಶಿವಲಿಂಗವನ್ನು ಪ್ರಕರಣದ ಭಾಗವಾಗಿ ಮಾಡಬಹುದೇ ಮತ್ತು ವೈಜ್ಞಾನಿಕ ತನಿಖೆಗೆ ಆದೇಶಿಸಬಹುದೇ ಎಂದು ನ್ಯಾಯಾಲಯ ಕೇಳಿದೆ.
ಹಿಂದೂ ಮಹಿಳೆಯರ ಪರ ವಕೀಲರಾದ ವಿಷ್ಣು ಶಂಕರ್ ಜೈನ್ ಅವರು, ಮಸೀದಿಯಲ್ಲಿ ಸಿಕ್ಕ ವಸ್ತು ಶಿವಲಿಂಗದ ರಚನೆಯಾಗಿದೆ ಎಂದು ವಾದಿಸಿದ್ದಾರೆ.
ಹೀಗಾಗಿ ವೈಜ್ಞಾನಿಕ ತನಿಖೆಗಾಗಿ ಆಯೋಗಕ್ಕೆ ಆದೇಶ ನೀಡುವ ಅಧಿಕಾರ ನ್ಯಾಯಾಲಯಕ್ಕೆ ಇದೆ ಎಂದು ಹೇಳುವ ನಿಯಮವನ್ನು ನಾವು ನ್ಯಾಯಾಲಯದ ಗಮನಕ್ಕೆ ತಂದಿದ್ದೇವೆ ಎಂದು ಅವರು ಹೇಳಿದರು.
https://youtu.be/EyLZ5K3m7zo ಸ್ಟೋನ್ ಕ್ರಷರ್ ಅನ್ನು ಈ ಕೂಡಲೇ ರದ್ದುಗೊಳಿಸಿ.
ಆದರೆ, ವಾದ ವಿವಾದಗಳ ನಂತರ, ಶಿವಲಿಂಗದ ವೈಜ್ಞಾನಿಕ ಅಧ್ಯಯನ ನಡೆಸಲು ಅನುಮತಿ ನೀಡುವಂತೆ ಕೋರಿ ಹಿಂದೂಗಳು ಸಲ್ಲಿಸಿದ್ದ ಅರ್ಜಿಯನ್ನ ವಾರಣಾಸಿ ಜಿಲ್ಲಾಕೋರ್ಟ್ ನ್ಯಾಯಾಧೀಶ ಅಜಯ್ ಕೃಷ್ಣ ವಜಾಗೊಳಿಸಿದ್ದಾರೆ.
ಕಾರ್ಬನ್ ಡೇಟಿಂಗ್ ನಡೆಸಿದರೇ ಸಾಕ್ಷಿಗೆ ಹಾನಿಯಾಗಬಹುದು, ಜಾಗವನ್ನ ಸೀಲ್ ಮಾಡುವಂತೆ ಸುಪ್ರೀಂಕೋರ್ಟ್ ಆದೇಶಿಸಿದೆ ಎಂದು ಸುಪ್ರೀಂಕೋರ್ಟ್ ಆದೇಶ ಉಲ್ಲೇಖಿಸಿ ಈ ಮಹತ್ವದ ತೀರ್ಪನ್ನ ಕೋರ್ಟ್ ನೀಡಿದೆ.
- ಪವಿತ್ರ