Fruits : ಹಣ್ಣುಗಳನ್ನು(Fruits) ಸಾಮಾನ್ಯವಾಗಿ ಪ್ರತಿಯೊಬ್ಬರೂ ಇಷ್ಟಪಡುತ್ತಾರೆ. ಸೀಸನ್‌ಗೆ ತಕ್ಕಂತೆ ಮಾರುಕಟ್ಟೆಗೆ ಆಗಮಿಸುವ ಸತ್ವಭರಿತ ರುಚಿಯಾದ ಹಣ್ಣುಗಳು ಅಪಾರವಾದ ಜೀವಸತ್ವಗಳನ್ನು, ಪ್ರೋಟೀನ್, ಖನಿಜಾಂಶಗಳನ್ನು ಹೊಂದಿರುತ್ತವೆ.

ದೇಹದ ಪೋಷಣೆ, ಬೆಳವಣಿಗೆ, ತ್ವಚೆಯ ಆರೋಗ್ಯ, ರೋಗನಿರೋಧಕ ಶಕ್ತಿ, ವೃದ್ಧಿ ಇತ್ಯಾದಿಗಳಿಗಾಗಿ ಹಣ್ಣನ್ನು ಸೇವಿಸುವುದು ಉತ್ತಮ. ಸಾಧಾರಣವಾಗಿ ನಾವು ಚಳಿಗಾಲದಲ್ಲಿ ಕೆಂಪು ಸ್ಟ್ರಾಬೇರಿಯನ್ನ(Strawberry) ತಿಂದಿರ್ತೀವಿ. ಆದ್ರೆ ಬಿಳಿ ಸ್ಟ್ಪಾಬೇರಿನೂ ಇದೆ. ಅದನ್ನ ಪೈನ್ ಬೆರ್ರಿ ಅಂತಾ ಕರೀತಾರೆ.
ಇದನ್ನೂ ಓದಿ : https://vijayatimes.com/high-alert-on-gyanvapi-case-verdict/
ಕೆಂಪು ಸ್ಟ್ರಾಬೇರಿಯಲ್ಲಿ ಬಿಳಿ ಬಣ್ಣದ ಬೀಜಗಳನ್ನ ನಾವು ಕಾಣ್ತೀವಿ. ಆದ್ರೆ ಪೈನ್ ಬೇರಿ(Pine Berry) ಬಿಳಿ ಬಣ್ಣದ ಹಣ್ಣಾಗಿದ್ದು, ಕೆಂಪು ಬಣ್ಣದ ಬೀಜವನ್ನು ಹೊಂದಿರುತ್ತದೆ. ಇದರ ಸ್ವಾದ ಪೈನಾಪಲ್ ಹಣ್ಣಿನ ರೀತಿ ಇರುವ ಕಾರಣಕ್ಕೆ ಈ ಹಣ್ಣನ್ನು ಪೈನ್ ಬೆರಿ ಎಂದು ಕರೆಯಲಾಗುತ್ತದೆ.

ಇನ್ನು, ನಿಂಬೆಹಣ್ಣು(Lemon) ಹೆಚ್ಚು ಕಡಿಮೆ ವರ್ಷವಿಡೀ ದೊರೆಯುವುದು. ಇದು ಹಣ್ಣು ಎಂದು ಕರೆಸಿಕೊಂಡರೂ ಸಹ ಇದನ್ನು ಬೇರೆಲ್ಲಾ ಹಣ್ಣುಗಳಂತೆ ನೇರವಾಗಿ ತಿನ್ನಲಾಗುವುದಿಲ್ಲ. ಆದರೆ ವಿಶೇಷ ಎಂದರೆ ಹಳದಿ ನಿಂಬೆಹಣ್ಣಿನಂತೆ, ಕೆಂಪು ನಿಂಬೆಹಣ್ಣು ಕೂಡ ಇದ್ದು ಇದನ್ನ ರೆಡ್ ಲೈಮ್ ಎಂದು ಕರೆಯಲಾಗುತ್ತದೆ.
ಇದನ್ನೂ ಓದಿ : https://vijayatimes.com/congress-slams-state-bjp-ministers/
ಸಾಮಾನ್ಯವಾಗಿ ದುಂಡಗೆ, ಮೊಟ್ಟೆಯಾಕಾರದ ಕಲ್ಲಂಗಡಿಗಳನ್ನು ನೀವು ನೋಡಿರುತ್ತೀರಿ. ಆದರೆ ಚೌಕಾಕಾರದ ಕಲ್ಲಂಗಡಿಗಳೂ ಇವೆ, ಅವುಗಳನ್ನು ಜಪಾನ್‌ನಲ್ಲಿ ಬೆಳೆಸಲಾಗುತ್ತದೆ. ಈ ಚೌಕಾಕಾರದ ಕಲ್ಲಂಗಡಿಗಳ ಬೆಲೆ ಸುಮಾರು 60 ಸಾವಿರ ರೂಪಾಯಿಗಳು. ಈ ಕಲ್ಲಂಗಡಿ ನಾವು ನೀವು ತಿನ್ನುವ ಕಲ್ಲಂಗಡಿ ಹಣ್ಣಿನ ಸ್ವಾದಕ್ಕಿಂತಲೂ ಬೇರೆಯದಾಗಿರುತ್ತದಂತೆ.

ಸಮಶೀತೋಷ್ಣ ಪ್ರದೇಶಗಳಲ್ಲಿ ಬೆಳೆಯುವ ಹಣ್ಣುಗಳಲ್ಲಿ ಪಿಯರ್ಸ್ ಹಣ್ಣು ಸಹ ಒಂದು. ಪಿಯರ್ಸ್ ಹಣ್ಣನ್ನು ಮರಸೇಬು ಎಂದೂ ಕರೆಯುತ್ತಾರೆ. ವಿಶೇಷ ಎಂದರೆ ಪ್ರಪಂಚದಲ್ಲಿ ಬುದ್ಧನಾಕಾರದ ಪೀಯರ್ಸ್ ಹಣ್ಣು ಕೂಡ ಇದ್ದು, ಇದನ್ನ ತಿನ್ನುವವರು ಅಪರೂಪದಲ್ಲೇ ಅಪರೂಪ. ಅಲ್ಲದೆ ಇದರ ಬೆಲೆ ಸಾವಿರಾರು ರೂಪಾಯಿಯಾಗಿದ್ದು, ಇದನ್ನು ಚೀನಾದ ಕಂಪನಿಯೊಂದು ಉತ್ಪಾದಿಸುತ್ತದೆ.
- ಪವಿತ್ರ