Visit Channel

ವಾರ್ತಾ ಆಯುಕ್ತರಿಂದ ವಿಷ್ಣು ಸ್ಮಾರಕ ಸ್ಥಳ ಪರಿಶೀಲನೆ

WhatsApp Image 2021-01-08 at 6.47.52 PM

ಮೈಸೂರು, ಜ. 08: ಮೈಸೂರಿನಿಂದ ಸುಮಾರು ಆರು ಕಿಲೋ ಮೀಟರುಗಳ ಅಂತರದಲ್ಲಿರುವ ಹಾಲಾಳು ಗ್ರಾಮದಲ್ಲಿ ನಿರ್ಮಾಣಗೊಳ್ಳುತ್ತಿರುವ ಖ್ಯಾತ ನಟ , ಸಾಹಸ ಸಿಂಹ ವಿಷ್ಣುವರ್ಧನ್ ಸ್ಮಾರಕ ಸ್ಥಳಕ್ಕೆ ವಾರ್ತಾ ಮತ್ತು ಪ್ರಚಾರ ಇಲಾಖೆ ಆಯುಕ್ತರಾದ ಡಾ ಪಿ. ಎಸ್. ಹರ್ಷ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಇಮೇಜ್ ಗ್ಯಾಲರಿ ಮತ್ತು ಸಭಾಂಗಣದ ಕಾಮಗಾರಿ ಆರಂಭಗೊಂಡಿದ್ದು, ವಿಶ್ವ ದರ್ಜೆಯ ಸ್ಮಾರಕ ಸ್ಥಳ ಇದಾಗಬೇಕೆಂಬ ಆಶಯ ತಮ್ಮದಾಗಿದೆ ಎಂದ ಡಾ.ಹರ್ಷ , ರಾಜ್ಯ ಸರ್ಕಾರವೂ ಸಹ ಈ ನಿಟ್ಟಿನಲ್ಲಿ ಅತೀವ ಆಸಕ್ತಿ ವಹಿಸುತ್ತಿದೆ ಎಂದರು.

ಸುಮಾರು 11 ಕೋಟಿ ರೂಗಳ ಯೋಜನೆ ಇದಾಗಿದ್ದು , ಐದು ಎಕರೆ ವಿಶಾಲ ಪ್ರದೇಶದಲ್ಲಿ ನಿರ್ಮಾಣಗೊಳ್ಳುತ್ತಿರುವ ವಿಷ್ಣು ಸ್ಮಾರಕವನ್ನು ಅತ್ಯಂತ ಕ್ಷಿಪ್ರವಾಗಿ ಹಾಗೂ ಉತ್ಕೃಷ್ಟವಾಗಿ ನಾಡಿಗೆ ನೀಡುವ ಸಂಕಲ್ಪಕ್ಕೆ ವಾರ್ತಾ ಇಲಾಖೆ ಕಟಿಬದ್ಧವಾಗಿದೆ ಎಂದು ಹರ್ಷ ಹೇಳಿದರು

ಪೊಲೀಸ್ ಗೃಹ ನಿರ್ಮಾಣ ಸಂಸ್ಥೆ ಕೈಗೆತ್ತಿಕೊಂಡಿರುವ ಕೈಗೆತ್ತಿಕೊಂಡಿರುವ ಈ ಕಾಮಗಾರಿಯ ನಿರ್ವಹಣೆಯನ್ನು ರೇವನಿ ಪ್ರಸಾದ್ ಕನ್ಸ್ಟ್ರಕ್ಷನ್ ಕಂಪನಿ ಮಾಡುತ್ತಿದ್ದು , ಹನ್ನೊಂದು ತಿಂಗಳ ಒಳಗಾಗಿ ಕನ್ನಡ ನಾಡಿಗೆ ಸಮರ್ಪಣೆ ಮಾಡಲಿದೆ.

ಪರಿಶೀಲನೆ ವೇಳೆ ಸಹಾಯಕ ಇಂಜಿನಿಯರುಗಳಾದ ಮಂಜುನಾಥ್ ಮತ್ತು ಸಂರಕದ ಸ್ಮಾರಕದ ರೂಪು ರೂಪು- ರೇಷೆಗಳನ್ನು ನಕ್ಷೆಯೊಂದಿಗೆ ವಿವರಿಸಿದರು. ವಾರ್ತಾ ಅಧಿಕಾರಿ ವಿಜಯಾನಂದ್ ಹಾಗೂ ಅಶೋಕ್ ಕುಮಾರ್ ಹಾಜರಿದ್ದರು.

Latest News

Assam
ದೇಶ-ವಿದೇಶ

ತನ್ನ ಪ್ರೀತಿಯನ್ನು ನಿರೂಪಿಸಲು, ಏಡ್ಸ್ ರೋಗವಿರುವ ಪ್ರಿಯಕರನ ರಕ್ತವನ್ನು ತನ್ನ ದೇಹಕ್ಕೆ ಚುಚ್ಚಿಕೊಂಡ 15 ವರ್ಷದ ಹುಡುಗಿ!

ಏಡ್ಸ್ ರೋಗವಿರುವ ತನ್ನ ಹುಡುಗನ ರಕ್ತವನ್ನು ಸೂಜಿಯ ಮೂಲಕ ತನ್ನ ದೇಹಕ್ಕೆ ಚುಚ್ಚಿಕೊಂಡಿದ್ದಾಳಂತೆ! ಇನ್ನೊಂದು ಅಚ್ಚರಿಯ ವಿಷಯ ಎಂದರೆ, ಈಕೆಯ ವಯಸ್ಸು ಕೇವಲ 15 ವರ್ಷ!

Shivamogga
ಪ್ರಮುಖ ಸುದ್ದಿ

ರಾತ್ರಿ ವೇಳೆ ಅನಗತ್ಯ ಬೈಕ್ ಸಂಚಾರ ನಿಷೇಧ ; ಇಬ್ಬರು ಯುವಕರು ಬೈಕ್‍ನಲ್ಲಿ ಸಂಚರಿಸುವಂತಿಲ್ಲ : ಎಡಿಜಿಪಿ

ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಿದ ಅವರು, ದ್ವಿಚಕ್ರ ವಾಹನ ಸವಾರರು ಹಿಂಬದಿಯಲ್ಲಿ 40 ವರ್ಷಕ್ಕಿಂತ ಕಿರಿಯ ವಯಸ್ಸಿನವರನ್ನು ಕೂರಿಸಿಕೊಂಡು ಸಂಚರಿಸುವುದನ್ನು ನಿಷೇಧಿಸಲಾಗಿದೆ.

Lal singh Chadda
ಮನರಂಜನೆ

`ಲಾಲ್ ಸಿಂಗ್ ಚಡ್ಡಾʼ ಹೊಗಳಿದ ಹೃತಿಕ್ ; `ಕಾಶ್ಮೀರ ಫೈಲ್ಸ್ʼ ಬಗ್ಗೆ ಯಾಕೆ ಮಾತನಾಡಲಿಲ್ಲ? : ಸಿಡಿದೆದ್ದ ನೆಟ್ಟಿಗರು!

ಹೃತಿಕ್ ರೋಷನ್ ʼಲಾಲ್ ಸಿಂಗ್ ಚಡ್ಡಾʼ(Lal Singh Chadda) ಚಿತ್ರವನ್ನು ನೋಡುವಂತೆ ಕರೆ ನೀಡಿರುವುದು ನೆಟ್ಟಿಗರ(Netizens) ಆಕ್ರೋಶಕ್ಕೆ ಕಾರಣವಾಗಿದೆ.