Bengaluru : ರೋಗಕ್ಕೆ ಔಷಧಿ ತರಲೂ ಹಣವಿಲ್ಲದ ಕಡು ಕಷ್ಟದ ಕಾಲದಲ್ಲಿ ಹುಟ್ಟಿದ ಮಗ ಅದೃಷ್ಟವನ್ನೇ ತರುತ್ತಾನೆ. ಪ್ರೀತಿ, ಹಣದ ಬೆಲೆ, ಗೊತ್ತಿಲ್ಲದ ಮಗ(vasanthi nalidaga kannada movie) ದುರಾದೃಷ್ಟದ ಹಾದಿ ಹಿಡಿಯುತ್ತಾನೆ. ದಾರಿ ತಪ್ಪಿದ ಮಗ ಮತ್ತೆ ಅದೃಷ್ಟ ತರುತ್ತಾನಾ? ತಂದೆ ತಾಯಿಯ ಭಾಗ್ಯದ ಬಾಗಿಲು ತೆರೆಯುತ್ತಾನಾ? ಅನ್ನೋ ಕುತೂಹಲ ಮೂಡಿಸುವ ಚಿತ್ರವೇ ‘ವಾಸಂತಿ ನಲಿದಾಗ’.
ನೈಜ ಕತೆಯನ್ನು ಚಿತ್ರರೂಪಕ್ಕಿಳಿಸಿ ಸಿನೆಮಾ(Cinema) ಪ್ರಿಯರ ಮನಸೂರೆಗೊಳ್ಳಲು ಪ್ರಯತ್ನಿಸಿದೆ ‘ವಾಸಂತಿ ನಲಿದಾಗ’ ಚಿತ್ರತಂಡ. ಹೊಸಬರೇ ನಿರ್ಮಿಸಿರುವ ಈ ಚಿತ್ರ ನೈಜಕತೆಯಿಂದ ಸಿನಿಪ್ರಿಯರ ಮನಮುಟ್ಟಿದೆ.
ರವೀಂದ್ರ ವೆಂಶಿ(Ravindra Venshi) ನಿರ್ದೇಶಿಸಿರುವ ಮೂರನೇ ಚಿತ್ರ ಇದಾಗಿದ್ದು,
ಹೊಸ ಹೊಸ ಪ್ರತಿಭೆಗಳಿಗೆ ಅವಕಾಶ ನೀಡಲಾಗಿದೆ. ಚಿತ್ರದಲ್ಲಿ ಹೀರೋ ಆಗಿ ರೋಹಿತ್ ಶ್ರೀಧರ್(Rohit Sridhar), ನಾಯಕ ನಟಿಯರಾಗಿ ಜೀವಿತಾ ವಶಿಷ್ಠ, ಭಾವನಾ ಶ್ರೀನಿವಾಸ ಅಭಿನಯಿಸಿ ತಮ್ಮ ಪ್ರತಿಭೆಯನ್ನು ಒರೆಗೆ ಹಚ್ಚಿದ್ದಾರೆ.
ಸಾಧು ಕೋಕಿಲ(Sadhu Kokila),ಸಾಯಿ ಕುಮಾರ್, ಸುಧಾರಾಣಿಯಂಥ ಹಿರಿಯ ನಟರೂ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ.
ಇದನ್ನೂ ನೋಡಿ : https://fb.watch/ho7wju_Ejk/ ರಿಯಾಲಿಟಿ ಚೆಕ್ ನಲ್ಲಿ ಬಯಲಾಯಿತು ಆಂಬ್ಯುಲೆನ್ಸ್ ಡ್ರೈವರ್ ನ ಅಜಾಗರೊಕತೆ!.
ಕಾಲೇಜ್ ಲೈಫ್, ಹುಡುಗ ಹುಡುಗಿಯ ಆಕರ್ಷಣೆ, ಲವ್ ಸ್ಟೋರಿ, ತಂದೆಯ ಪ್ರೀತಿ ಹೀಗೆ ನಾನಾ ಅಂಶಗಳನ್ನು ತುಂಬಿದ ‘ವಾಸಂತಿ ನಲಿದಾಗ’(Vasanthi Nalidaga) ಚಿತ್ರದ ಮೊದಲ ದೃಶ್ಯವೇ ಪ್ರೇಕ್ಷಕರಲ್ಲಿ ರೋಚಕತೆ ಮೂಡಿಸುತ್ತೆ.
ಹೆಂಡತಿಗೆ ಹೆರಿಗೆಯಾದಾಗ ಔಷಧಿ ತರಲು ಹಣವಿಲ್ಲದ ಪರಿಸ್ಥಿತಿಯಲ್ಲಿ ಮಗನ ಆಗಮನ ಸಾಯಿ ಕುಮಾರ್ ಹಾಗೂ ಸುಧಾರಾಣಿ ಬದುಕಿಗೆ ಅದೃಷ್ಟವಾಗುತ್ತದೆ.
ತನ್ನ ಬದುಕಿನ ಲಕ್ ಆದ ಮಗನಿಗೆ ಯಾವುದೇ ಕೊರತೆ ಬಾರದಂತೆ ತಂದೆ ನೋಡಿಕೊಳ್ಳುತ್ತಾರೆ. ಆದ್ರೆ ಆ ಬಳಿಕ ಹಾದಿ ತಪ್ಪುವ ಮಗನಿಗೆ ಪ್ರೀತಿ, ಹಣದ ಬೆಲೆ, ಜವಾಬ್ದಾರಿ ಗೊತ್ತಿಲ್ಲದೆ ದುರಾದೃಷ್ಟದ ಹಾದಿ ಹಿಡಿಯುತ್ತಾನೆ.
ದಾರಿ ತಪ್ಪಿದ ಮಗನನ್ನು ಮತ್ತೆ ಒಳ್ಳೆಯವವನ್ನಾಗಿಸುವ ಈ ಚಿತ್ರ ಜೀವನ ಪಾಠ ಕಲಿಸುತ್ತೆ.
ಚಿತ್ರದ ಮೊದಲ ಭಾಗ ಸಿಂಪಲ್ ಲವ್ ಸ್ಟೋರಿ ಅಂತೆ ಕಂಡರೂ ಇಂಟರ್ವಲ್ ನಂತರ ನೈಜ ಘಟನೆಯಂತೆ ಭಾಸವಾಗುತ್ತದೆ.
ಈ ಚಿತ್ರದ ಒಂದು ಡೈಲಾಗ್ ‘ಅಪ್ಪ ಅಮ್ಮನಿಗೆ ನಾನು ಅದೃಷ್ಟ ತಂದಿದ್ದಲ್ಲ, ಅವರ ಪ್ರೀತಿ ಒಂದಾದಾಗ ಅದುವೇ ಅದೃಷ್ಟವಾಗಿ ಬದಲಾದದ್ದು’ ಈ ಮಾತು ಎಲ್ಲರ ಮನ ಮುಟ್ಟಿದೆ.
ಹಾಗೆಯೇ ಚಿತ್ರದಲ್ಲಿ ಬರುವಂತಹ ಹಾಡುಗಳು ‘ಕೇಳ್ರಪ್ಪೋ ಕೇಳಿ’ ಹಾಡಿಗೆ ಜನರು ಒಳ್ಳೆಯ ಪ್ರತಿಕ್ರಿಯೆಯನ್ನು ನೀಡಿದ್ದಾರೆ. ಸಾಮಾನ್ಯರು ಕಥೆ ಹೀಗೆಯೇ ಆಗಬಹುದು ಎಂದು ನಿರೀಕ್ಷಿಸಬಹುದು.
ಆದರೆ ನಿರೀಕ್ಷೆಗೂ ಮೀರಿದ ಕೆಲ ತಿರುವು ನಾವು ‘ವಾಸಂತಿ ನಲಿದಾಗ’ ಸಿನಿಮಾದಲ್ಲೂ ಕಾಣಬಹುದು.
ಇನ್ನು ಈ ಸಿನಿಮಾದಲ್ಲಿನ ಹಾಸ್ಯನಟರ ಪಾತ್ರದಲ್ಲಿ ಸಾಧು ಕೋಕಿಲ, ಮಂಜು ಪಾವಗಡ, ವಿನೋದ್ ಗೊಬ್ಬರಗಾಲ ಮುಂತಾದವರು ಪ್ರೇಕ್ಷಕರ ಮೊಗದಲ್ಲಿ ನಗು ಮೂಡಿಸಿದ್ದಾರೆ.
ಇದನ್ನೂ ಓದಿ : https://vijayatimes.com/shocking-news-for-smokers/
ನಿರ್ಮಾಪಕ ಶ್ರೀಧರ್(Sridhar) ಅವರು ಸಾಕಷ್ಟು ನಿರೀಕ್ಷೆ ಇಟ್ಟು, ಮಗನಿಗೆ ಸ್ಯಾಂಡಲ್‌ವುಡ್‌ನಲ್ಲಿ(Sandalwood) ಒಳ್ಳೆ ಬ್ರೇಕ್ ಕೊಡಬೇಕು ಅನ್ನೋ ದೃಷ್ಟಿಯಲ್ಲಿ ಹೊಸತನ ತುಂಬಿದ್ದಾರೆ.
ಒಟ್ಟಾರೆ ಹೊಸಬರ ತಂಡ ಹೊಸತನ ತರಲು ಪ್ರಯತ್ನಿಸಿದೆ, ಆದ್ರೆ ಇದನ್ನು ಸಿನೆಮಾ ಪ್ರಿಯರು ಹೇಗೆ ಸ್ವೀಕರಿಸುತ್ತಾರೆ ಅನ್ನೋದನ್ನು ಕಾದು ನೋಡಬೇಕು.