ಪುನೀತ್ ರಾಜಕುಮಾರ್ ಅವರ ಪಿ ಆರ್ ಕೆ ನಿರ್ಮಾಣ ಸಂಸ್ಥೆಯ ಬ್ಯಾನರಿನ ಅಡಿಯಲ್ಲಿ ಹಾಗೂ ಸತ್ಯ & ಮಯೂರ ಪಿಕ್ಚರ್ಸ್ ಜತೆಗೂಡಿ ತಯಾರಿಸುತ್ತಿರುವ ‘ಮ್ಯಾನ್ ಆಫ್ ದಿ ಮ್ಯಾಚ್’ ಚಲನಚಿತ್ರ ಶೂಟಿಂಗ್ ಮತ್ತು ಡಬ್ಬಿಂಗ್ ಮುಗಿಸಿದೆ. ಚಿತ್ರದಲ್ಲಿ ಬಿಗ್ ಬಾಸ್ ಖ್ಯಾತಿಯ ವಾಸುಕಿ ವೈಭವ್ ಇದ್ದಾರೆ ಎನ್ನುವುದು ಹೊಸ ಸುದ್ದಿ.
ಡಿ ಸತ್ಯ ಪ್ರಕಾಶ್ ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಈ ಚಿತ್ರದ ಬಗ್ಗೆ ಕುತೂಹಲಕಾರಿ ಅಂಶವಾಗಿ ವಾಸುಕಿ ಎಂಟ್ರಿಯನ್ನು ಚಿತ್ರತಂಡ ತಿಳಿಸಿದೆ. ಈ ಚಿತ್ರದಲ್ಲಿ ಬಿಗ್ ಬಾಸ್ ಖ್ಯಾತಿಯ ವಾಸುಕಿ ವೈಭವ್ ಅವರು ಸಂಗೀತ ನೀಡುವುದರ ಜೊತೆಗೆ ಅತಿಥಿ ಪಾತ್ರದಲ್ಲಿ ಕಾಣಿಸಿಕೊಂಡು ಹಾಡಿ, ಕುಣಿದಿದ್ದಾರೆ.
ನೃತ್ಯ ನಿರ್ದೇಶನವನ್ನು ಸ್ವತಃ ಡಿ ಸತ್ಯ ಪ್ರಕಾಶ್ ಅವರೇ ಮಾhಡಿದ್ದಾರೆ. ಚಿತ್ರದ ವಸ್ತು ವಿಷಯವನ್ನು ತಿಳಿಸುವ ಈ ಹಾಡಿಗೆ, ಚುರುಕಾದ ಸಾಹಿತ್ಯವನ್ನು ಯೋಗರಾಜ್ ಭಟ್ ಮತ್ತು ಡಿ ಸತ್ಯ ಪ್ರಕಾಶ್ ಜಂಟಿಯಾಗಿ ಬರೆದಿರುವುದು ವಿಶೇಷ.
ಏಳನೇ ಸೀಸನ್ ಬಿಗ್ ಬಾಸ್ ಮುಗಿದ ಬಳಿಕ ಕೊರೊನಾ ಕಾಟ ಶುರುವಾದ ಕಾರಣ ಅಲ್ಲಿಂದ ಜನಪ್ರಿಯರಾದ ಪ್ರತಿಭೆಗಳಿಗೆ ಯಾವುದೇ ದೊಡ್ಡ ಮಟ್ಟದ ಅವಕಾಶಗಳು ದೊರಕಿರಲಿಲ್ಲ. ಆದರೆ ಈಗ ಒಂದೊಂದಾಗಿ ಹೊಸ ಪ್ರಾಜೆಕ್ಟ್ ಗಳು ಗರಿಬಿಚ್ಚುತ್ತಿರುವುದು ಖುಷಿಯ ವಿಚಾರ.