ಬೆಂಗಳೂರು, ಜು. 21: ನಾಯಕತ್ವ ಬದಲಾವಣೆ ವಿಚಾರಕ್ಕೆ ಸಂಬಂಧಿಸಿದಂತೆ ವಿವಿಧ ಮಠಾಧೀಶರು ಮಧ್ಯಪ್ರವೇಶಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಬೆನ್ನಿಗೆ ನಿಂತಿದ್ದರೆ. ಮತ್ತೊಂದೆಡೆ ನಾಯಕತ್ವ ಬದಲಾವಣೆ ಮಾಡುವುದಾದರೆ ವೀರಶೈವ ಲಿಂಗಾಯತರಿಗೆ ನಾಯಕತ್ವ ಸಿಗಬೇಕೆಂದು ಕೊಳದ ಮಠದ ಶ್ರೀ ಡಾ.ಶಾಂತವೀರ ಸ್ವಾಮೀಜಿ ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಈ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಾಯಕತ್ವ ಬದಲಾವಣೆ ಮಾಡುವುದಾದರೆ ವೀರಶೈವ ಲಿಂಗಾಯತರಿಗೆ ನಾಯಕತ್ವ ಸಿಗಬೇಕು. ಇಲ್ಲವಾದರೆ ನಮ್ಮ ಮಠಗಳಿಂದ ಹೋರಾಟ ನಡೆಸುತ್ತೇವೆ. ಕರ್ನಾಟಕದ ವತಿಯಿಂದ ಸುಮಾರು ಮೂನ್ನೂರರಿಂದ ನಾನೂರು ಸಾಧು ಸಂತರನ್ನು ಸೇರಿಸಿ ಮೋದಿಯನ್ನು ಭೇಟಿ ಮಾಡುತ್ತೇವೆ ಎಂದು ತಿಳಿಸಿದರು.
ಬಿಜೆಪಿಯಲ್ಲಿ ವೀರಶೈವ ಲಿಂಗಾಯತ ಜನಾಂಗದವರು ಐವತ್ತಕ್ಕು ಹೆಚ್ಚು ಜನ ಇದ್ದಾರೆ. ಸಮುದಾಯ ಕಡೆಗಣಿಸುವ ಕೆಲಸ ಆಗಬಾರದು. ಬೊಮ್ಮಾಯಿ, ಯತ್ನಾಳ್, ಅರವಿಂದ್ ಬೆಲ್ಲದ್ ಹೆಸರನ್ನು ಪ್ರಸ್ತಾಪ ಮಾಡಿದ ಅವರು, ಯಾರನ್ನಾದರೂ ಸಿಎಂ ಮಾಡಲಿ. ನಾವು ಯಾರ ಪರವಾಗಿಯೂ ಇಲ್ಲ ಅಥವಾ ವಿರೋಧವಾಗಿಯೂ ಇಲ್ಲ. ವೀರಶೈವ ಧರ್ಮ ಉಳಿಸುವುದಕ್ಕಾಗಿ ನಮ್ಮ ಹೋರಾಟ ಎಂದು ಹೇಳಿದರು.