Mangaluru : ನಾವೆಲ್ಲರೂ ನೂರಾರು (Veerendra Heggade Likes Kantara) ವರ್ಷಗಳಿಂದ ಪರಂಪರಾಗತವಾಗಿ ದೈವಗಳನ್ನು ಆರಾಧಿಸಿಕೊಂಡು ಬಂದಿದ್ದೇವೆ. ನಾವೆಲ್ಲ ಇವತ್ತಿಗೂ ದೈವಾರಾಧನೆ ಮಾಡುತ್ತೇವೆ.
ನಮ್ಮ ಆಚರಣೆಗಳು ಮತ್ತು ನಂಬಿಕೆಗಳು ಸ್ವಾಭಾವಿಕವಾಗಿ ಬೆಳೆದು ಬಂದಿವೆ. ಹೀಗಾಗಿ ನಮ್ಮ ಆಚರಣೆ ಮತ್ತು ನಂಬಿಕೆಗಳನ್ನು ಬಿಟ್ಟಿರಲು ಸಾಧ್ಯವಿಲ್ಲ.
ನಮ್ಮ ಆಚರಣೆಗಳು ಹಿಂದೂ ಧರ್ಮಕ್ಕೆ ವಿಮರ್ಶೆ (Critic) ಮಾಡುವ ಅಗತ್ಯವು ಇಲ್ಲ ಎಂದು ಧರ್ಮಸ್ಥಳದ (Dharmasthala) ಧರ್ಮಾಧಿಕಾರಿ, ರಾಜ್ಯಸಭಾ ಸದಸ್ಯ ಡಾ.ಡಿ.ವೀರೇಂದ್ರ ಹೆಗ್ಗಡೆ ಅವರು ಅಭಿಪ್ರಾಯಪಟ್ಟಿದ್ದಾರೆ.
ಮಂಗಳೂರಿನ ಭಾರತ್ ಸಿನಿಮಾದಲ್ಲಿ ಕುಟುಂಬದೊಂದಿಗೆ “ಕಾಂತಾರ” (Veerendra Heggade Likes Kantara) ಸಿನಿಮಾ ವೀಕ್ಷಿಸಿದ ನಂತರ ಮಾದ್ಯಮಗಳೊಂದಿಗೆ ಮಾತನಾಡಿದ ಅವರು,
https://vijayatimes.com/report-of-2022-global-hunger-index/
ನಮ್ಮ ಆಚರಣೆಗಳು ಸ್ವಾಭಾವಿಕವಾಗಿ ಬೆಳೆದು ಬಂದದ್ದು, ಹೀಗಾಗಿ ಇದನ್ನು ಹಿಂದೂ ಧರ್ಮಕ್ಕೆ ವಿಮರ್ಶೆ ಮಾಡುವ ಅಗತ್ಯ ಇಲ್ಲ.
ಕರಾವಳಿ ಸೇರಿದಂತೆ ಭಾರತದಾದ್ಯಂತ ಎಲ್ಲೆಡೆ ದೈವ ಮೈಮೇಲೆ ಬಂದಾಗ ಅದಕ್ಕೆ ನಾವು ಗೌರವ ಕೊಡುತ್ತೇವೆ. ದೈವದ ನುಡಿಗೆ ನಮ್ಮ ಪರಂಪೆಯಲ್ಲಿ ವಿಶೇಷವಾದ ಗೌರವವಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕಾಂತಾರ ಸಿನಿಮಾ ನಿರ್ದೇಶಕ ರಿಷಬ್ ಶೆಟ್ಟಿ(Rishab Shetty) ತುಳುನಾಡಿನ ದೈವಾರಾಧನೆಯನ್ನು ಅದ್ಘುತವಾಗಿ ಚಿತ್ರಿಸಿದ್ದಾರೆ. ದೈವಾರಾಧನೆಯ ಸೂಕ್ಷ್ಮತೆಯನ್ನು ಬಹಳ ಚೆನ್ನಾಗಿ ಕಟ್ಟಿಕೊಟ್ಟಿದ್ದಾರೆ. ದೈವಗಳು ಅಧರ್ಮಕ್ಕೆ ಬೆಂಬಲ ಕೊಡೋದಿಲ್ಲ ಎನ್ನುವುದು ಈ ಸಿನಿಮಾದ ಮೂಲ ತಿರುಳು.
ನಮ್ಮ ದೈವಗಳು ಯಾವುದಕ್ಕೂ ಬೆಂಬಲ ಕೊಡೋದಿಲ್ಲ ಎನ್ನುವುದನ್ನು ಕಾಂತಾರ ಸಿನಿಮಾ ತೋರಿಸಿಕೊಟ್ಟಿದೆ. ಈ ಚಿತ್ರದ ಸಂದೇಶ ಅತ್ಯುತ್ತಮವಾಗಿದೆ ಎಂದು ಹೇಳಿದರು. ಇನ್ನು ನಮ್ಮ ಪರಂಪರೆಯಲ್ಲಿ ದೈವಗಳು ಅಧರ್ಮಕ್ಕೆ ಬೆಂಬಲ ನೀಡುವುದಿಲ್ಲ ಎನ್ನುವುದು ಈ ಸಿನಿಮಾದ ಸಂದೇಶ.
ಈ ಚಿತ್ರವು ಇಂದು ಜಗತ್ತಿನಾದ್ಯಂತ ಸದ್ದು ಮಾಡುತ್ತಿದೆ. ಕಾಂತಾರ ಸಿನಿಮಾವನ್ನು ನೋಡದ ಜನರೇ ಇಲ್ಲ ಎನ್ನುವಂತಾಗಿದೆ. ಹೀಗಾಗಿ ಇಂತಹ ಅತ್ಯುತ್ತಮ ಚಿತ್ರವನ್ನು ನಿರ್ಮಿಸಿದ ಎಲ್ಲರಿಗೂ ಅಭಿನಂದನೆಗಳು.
ಚಿತ್ರ ತಂಡದ ಎಲ್ಲರೂ ಅಭಿನಂದನೆಗೆ ಅರ್ಹರು ಎಂದು ಸಿನಿಮಾ ವೀಕ್ಷಣೆ ಬಳಿಕ ಚಿತ್ರ ತಂಡವನ್ನು ಹಾಡಿ ಹೊಗಳಿದ್ದು ಎಲ್ಲರಿಗೂ ಅಭಿನಂದನೆ ಸಲ್ಲಿಸಿದ್ದಾರೆ.
- ಮಹೇಶ್.ಪಿ.ಎಚ್