Bengaluru (ಜು.3): ಮಾರುಕಟ್ಟೆಯಿಂದ ತರಕಾರಿ ಖರೀದಿ ಮಡುತ್ತೀರಂದರೆ ನಿಮ್ಮ ಜೇಬು ಗಟ್ಟಿ ಇದ್ರೆ ಮಾತ್ರ ಆಲೋಚನೆ ಮಾಡಿ (vegetable meat price increased) ಯಾಕೆಂದರೆ ತರಕಾರಿಗಳ ದರದಲ್ಲಿ ಗಣನೀಯ
ಏರಿಕೆ ಕಂಡಿದೆ. ಕೆಜಿ ಗೆ 20ರಿಂದ 30 ದರ ಕಳೆದ ವಾರಕ್ಕಿಂತ ಹೆಚ್ಚಳವಾಗಿದೆ. ಇನ್ನು ಸದ್ಯಕ್ಕೆ ಟೊಮೆಟೋ ಬಾತ್ (Tomato Bath)ಮಾಡೋದೇ ಬೇಡಪ್ಪ ಅನ್ನೋ ಸ್ಥಿತಿಗೆ ಟೊಮೆಟೋ (Tomato) ದರ ಕೇಳಿದರೆ ಬಂದಿದೆ.
ಏಕೆಂದರೆ 100 ರ ಗಡಿ ಟೊಮೆಟೋ ದರ (vegetable meat price increased) ದಾಟಿದೆ.
ಇದನ್ನೂ ಓದಿ : ರಾಜ್ಯದಲ್ಲಿ ಬೆಲೆ ಏರಿಕೆಯಿಂದ ಜನಸಾಮಾನ್ಯರು ಹೈರಾಣು..! ಅಕ್ಕಿ, ಬೇಳೆಕಾಳುಗಳ ಬೆಲೆಗೆ ನಿಯಂತ್ರಣ ಹಾಕಿ
ಇದೆಲ್ಲದರ ನಡುವೆ ಇದೀಗ ಬೀನ್ಸ್ (Beans)ಬೆಲೆ ಟಮೋಟೋ ರೇಟ್ ಗೆ ಟಕರ್ ಕೊಟ್ತಿದೆ. ಬೆಲೆ ಏರಿಕೆಯಲ್ಲಿ ರೇಸ್ ಗೆ ಬಿದ್ದವರಂತೆ ಬೀನ್ಸ್ ಹಾಗೂ ಕ್ಯಾರೇಟ್ (Carrot) ರೇಟ್ ದರ ತಾ ಮುಂದು ನೀ
ಮುಂದು ಎಂದು ಏರಿಕೆ ಕಾಣ್ತಿದೆ . ಬೀನ್ಸ್ ಬೆಲೆ ಕೆಜಿ ಗೆ 120 ರೂಪಾಯಿ ಏರಿಸಿಕೊಂಡಿದೆ. ಟಮೋಟೋ ಹಾಗೂ ತರಕಾರಿ ಬೆಲೆ 10 ದಿನದಿಂದ ಏರಿಕೆಯ ಕ್ರಮದಲ್ಲೇ ಸಾಗುತ್ತಿದೆ.
ಅಷ್ಟೇ ಅಲ್ಲದೆ ಮಾಂಸ ದರವೂ ಇದೆಲ್ಲದರ ನಡುವೆ ಏರಿಕೆ ಕಂಡಿದೆ. ಇತರ ಮಾಂಸಗಳ ಬೆಲೆ ಮೀನುಗಾರಿಕೆಗೆ ನಿಷೇಧ ಇರುವ ಹಿನ್ನೆಲೆ ಗಣನೀಯ ಏರಿಕೆಯಾಗಿದೆ.

ಗಗನಕ್ಕೇರಿದ ಇಂದಿನ ತರಕಾರಿ ಬೆಲೆಗಳು ಇಂತಿದೆ:
ನಾಟಿ ಟಮೋಟೋ ಇಂದಿನ ದರ 110 ರೂಪಾಯಿ
ಕೆಜಿ ಟಮೋಟೋ 110 ರೂಪಾಯಿ
ಬೀನ್ಸ್ – 120 ರೂಪಾಯಿ
ಜಾಮೂನ್ ಟಮೋಟೋ 105 ರೂಪಾಯಿ
ಕ್ಯಾರೇಟ್ – 110 ರೂಪಾಯಿ
ಬೀನ್ಸ್ ಕಾಳು-110 ರೂಪಾಯಿ
ಹಸಿರು ಬಟಾಣಿ – 190 ರೂಪಾಯಿ
ಹಸಿ ಮೆಣಸಿನ ಕಾಯಿಬ- 170 ರೂಪಾಯಿ
ಬದನೆಕಾಯಿ- 85 ರೂಪಾಯಿ
ಹಾಗಲ ಕಾಯಿ- 98 ರೂಪಾಯಿ
ಗೋರೆಕಾಯಿ – 80 ರೂಪಾಯಿ
ಚಪ್ಪರದ ಅವರರ – 86 ರೂಪಾಯಿ
ಗೆಡ್ಡೆ ಕೋಸು – 90 ರೂಪಾಯಿ
ದಪ್ಪ ಮೆಣಸಿನಕಾಯಿ – 84 ರೂಪಾಯಿ
ಸೋರೆ ಕಾಯಿ- 75 ರೂಪಾಯಿ
ಉತ್ತರ ಪ್ರದೇಶ (Uttar Pradesh), ಮಹಾರಾಷ್ಟ್ರ (Maharashtra) ಒಳಗೊಂಡು ಹೊರರಾಜ್ಯದಿಂದ ಟೊಮ್ಯಾಟೋ, ಕ್ಯಾರೆಟ್ ಮೊದಲಾದ ಕಾಯಿಪಲ್ಯೆಯನ್ನು ಖರೀದಿಸಲಾಗುತ್ತಿದೆ
ಏಕೆಂದರೆ ನಮ್ಮ ರಾಜ್ಯದಲ್ಲಿ ಮಳೆ ಕಡಿಮೆಯಾಗಿ ಬೆಳೆ ನಿರೀಕ್ಷಿತ ಮಟ್ಟದಲ್ಲಿ ಬಂದಿಲ್ಲ ಆದ್ದರಿಂದ ದರದಲ್ಲಿ ಏರಿಕೆಯಾಗಿದೆ.
ಮಾಂಸ ದರವೂ ಏರಿಕೆ:ಚಿಕನ್ ಕೆಜಿಗೆ 300, ಮಟನ್ .800
ಸಮುದ್ರದ ಅಲೆಗಳ ಅಬ್ಬರ ಮಳೆಗಾಲವಾದ್ದರಿಂದ ಜೋರಾಗಿರುತ್ತದೆ. ಜತೆಗೆ ಜೂನ್ನಿಂದ(June) ಮೀನುಗಳ ಸಂತಾನೋತ್ಪತ್ತಿ ಸಂದರ್ಭ. ಆದ್ದರಿಂದ ಯಾಂತ್ರೀಕೃತ ಮೀನುಗಾರಿಕೆಯನ್ನು
ಕೇಂದ್ರ ಸರ್ಕಾರ ಎರಡು ತಿಂಗಳು ನಿಷೇಧಿಸಿದೆ. ಹೀಗಾಗಿ ಮೀನುಗಳ ಲಭ್ಯತೆ ಮಾರುಕಟ್ಟೆಯಲ್ಲಿ ಕಡಿಮೆಯಾಗಿದ್ದು, ಚಿಕನ್ (Chicken), ಮಟನ್ (Mutton) ದರ ಕೂಡ ಏರಿಕೆಯಾಗಿದೆ.
ಚಿಕನ್ ಕೆಜಿಗೆ 300, ಮಟನ್ .800 ಗೆ ತಲುಪಿದೆ.

200 ರ ಗಡಿ ದಾಟುತ್ತಾ ಟೊಮ್ಯಾಟೊ ಬೆಲೆ!
ಸಗಟು ವ್ಯಾಪಾರದಲ್ಲಿಯೇ ಕೊಪ್ಪಳ (Koppal) ಎಪಿಎಂಸಿ (APMC)ಮಾರುಕಟ್ಟೆಯಲ್ಲಿ ಬಾರಿ ಬೆಲೆ ಇದೆ. ಬರೋಬ್ಬರಿ 2900 ಬೆಲೆ ಒಂದು ಬಾಕ್ಸ್ ಟಮ್ಯಾಟೊಗೆ ಇದೆ.ಒಂದು ಬಾಕ್ಸ್ ಟೊಮ್ಯಾಟೊ
2900 ರೂಪಾಯಿ ಕನಕಗಿರಿ ಮಾರುಕಟ್ಟೆಯಲ್ಲಿ ತಲುಪಿದೆ.ಇನ್ನು ದಲ್ಲಾಳಿಗಳು ಬರೋಬ್ಬರಿ 2900 ರೂ ಬೆಲೆ ಕೊಟ್ಟು 15 ಕೆಜಿ ಬ್ಯಾಕ್ಸ್ ಟೊಮ್ಯಾಟೊ ಗೆ ಖರೀದಿ ಮಾಡ್ತಿದ್ದಾರೆ. ಗ್ರಾಹಕರು ಕೊಪ್ಪಳ ಜಿಲ್ಲೆಯಲ್ಲಿಯೇ
ಗಗನಕ್ಕೆರುತ್ತಿರೋ ಟೊಮ್ಯಾಟೊ ಬೆಲೆ ಕೇಳಿ ಶಾಕ್ ಆಗಿದ್ದಾರೆ. ಈ ಹಿಂದೆ ಬಾಕ್ಸ್ ಒಂದಕ್ಕೆ 2300 ರೂ ಬೆಲೆ ಇದ್ದ ಟೊಮ್ಯಾಟೊ ಇದೀಗ 2900 ರೂ.ಗೆ ಜಿಗಿತ ಕಂಡಿದೆ.
ರಶ್ಮಿತಾ ಅನೀಶ್