Vegetables Grown in Sewage Water Kannada Today
Bengaluru: ನಾವು ನೀವೆಲ್ಲಾ ತಿನ್ನುವ ಸೊಪ್ಪು-ತರಕಾರಿ ಸ್ಲೋ ಪಾಯಿಸನ್ (Slow Poison) ಆಗುತ್ತಿದ್ದು, ಸೊಪ್ಪು ತರಕಾರಿ ಆರೋಗ್ಯ ವೃದ್ಧಿಸುವ ಬದಲು ನಾನಾ ಕಾಯಿಲೆ ಕೊಡಬಹುದು. ಅದು ಹೇಗೆ ಗೊತ್ತಾ? ಇಲ್ಲಿದೆ ಇದಕ್ಕೆ ಉತ್ತರ
ಸಿಲಿಕಾನ್ ಸಿಟಿ ಬೆಂಗಳೂರಿನ (Bengaluru) ಡಿ. ಚನ್ನಸಂದ್ರದಲ್ಲಿ ಸೊಪ್ಪು ತರಕಾರಿ ಬೆಳೆಯಲು ಚರಂಡಿಯ ಕೊಳಚೆ ನೀರನ್ನು ಹೊತ್ತು ತರುವ ರಾಜಕಾಲುವೆಗೆ ಪಂಪ್ಸೆಟ್ (Pumpset) ಹಾಕಿ ನೀರು ಬಳಸಿ ಇಲ್ಲಿ ಎಕರೆಗಟ್ಟಲೆ ಸೊಪ್ಪು ತರಕಾರಿ ಬೆಳೆಯಲಾಗುತ್ತಿದೆ. ಈ ನೀರು ಬಳಸಿದರೆ ಗೊಬ್ಬರ ಬಳಸುವ ಅವಶ್ಯಕತೆ ಇಲ್ಲ, ಇದು ಲಾಭದಾಯಕ ಅನ್ನುವ ಕಾರಣಕ್ಕೆ ರೈತರು ಇದೇ ನೀರನ್ನು ವಿಪುಲವಾಗಿ ಬಳಸುತ್ತಿದ್ದಾರೆ. ಅಲ್ಲದೆ ಇಲ್ಲಿ ಬೆಳೆದ ಸೊಪ್ಪು ತರಕಾರಿಯನ್ನು ಬೆಂಗಳೂರಿನ ವಿವಿಧ ಮಾರುಕಟ್ಟೆಗಳಲ್ಲಿ (Market) ಮಾರಾಟ ಮಾಡಲಾಗುತ್ತದೆ.
ಈ ರಾಜಕಾಲುವೆಗೆ ಮನುಷ್ಯನ ಮಲಮೂತ್ರ ಸೇರಿರುವ ಚರಂಡಿ ನೀರಿನಿಂದ ಹಿಡಿದು ಕಾರ್ಖಾನೆಗಳ ಅಪಾಯಕಾರಿ ತ್ಯಾಜ್ಯ ಕೂಡ ಹರಿದು ಬರುತ್ತಿದ್ದು, ಕಾರ್ಖಾನೆಯಿಂದ ಹೊರ ಬರುವ ತ್ಯಾಜ್ಯದಲ್ಲಿ ಅಪಾಯಕಾರಿ (Vegetables, Greens) ರಾಸಾಯನಿಕಗಳಾದ ಸೀಸ, ಪಾದರಸದಂಥಾ ಅಂಶಗಳು ಯಥೇಚ್ಛವಾಗಿರುತ್ತೆ. ಇದೇ ಕೊಳಚೆ ನೀರನ್ನು ನಿರಂತರವಾಗಿ ಬಳಸಿ ಕೃಷಿ ಮಾಡುವುದರಿಂದ ಅದು ಸೊಪ್ಪು ತರಕಾರಿ ಒಳಗೂ ಸೇರಿ ಸ್ಲೋ ಪಾಯಿಸನ್ ಥರಾ ಮನುಷ್ಯನ ಆರೋಗ್ಯ ಕೆಡಿಸುತ್ತದೆ. ಅಲ್ಲದೆ ಕ್ಯಾನ್ಸರ್ನಂಥಾ ಗಂಭೀರ ಕಾಯಿಲೆಗಳಿಗೂ ತುತ್ತಾಗುವಂತೆ ಮಾಡಬಹುದು.
ಮುಖ್ಯವಾಗಿ ಇನ್ನೊಂದು ಅಪಾಯಕಾರಿ ಅಂಶವನ್ನು ನಿಮಗೆ ತಿಳಿಸಲೇ ಬೇಕು. ಮನುಷ್ಯ ಅಥವಾ ಪ್ರಾಣಿಗಳ ಮಲಮೂತ್ರಯುಕ್ತ ನೀರಿನಲ್ಲಿ ಟೇಪ್ ವರ್ಮ್ ಅಥವಾ ಲಾಡಿ ಹುಳದ ಮೊಟ್ಟೆಗಳಿರುತ್ತವೆ. ಈ ನೀರನ್ನು ತರಕಾರಿ, ಸೊಪ್ಪಿಗೆ ಹಾಯಿಸಿದಾಗ ಅದು ಸೊಪ್ಪು ತರಕಾರಿಯೊಳಗೆ ಸೇರುತ್ತವೆ. ಒಂದು ವೇಳೆ ಈ ಲಾಡಿಹುಳದ ಮೊಟ್ಟೆಯುಳ್ಳ ಸೊಪ್ಪು ತರಕಾರಿಯನ್ನು ನಾವು ಹಸಿಯಾಗಿಯೇ ತಿಂದರೆ ಲಾಡಿ ಹುಳದ ಮೊಟ್ಟೆ ನಮ್ಮ ದೇಹದೊಳಗೆ ಸೇರಿಕೊಳ್ಳುತ್ತದೆ. ಸ್ವಲ್ಪದಿನದ ಬಳಿಕ ಮೊಟ್ಟೆ ಒಡೆದು ಲಾರ್ವವು ನಮ್ಮ ರಕ್ತದಲ್ಲಿ ಸೇರಿ ಶ್ವಾಸಕೋಶ, ಮೆದುಳು, ಚರ್ಮ, (Lungs, Brain, Skin) ಮಾಂಸಖಂಡ ಹೀಗೆ ದೇಹದ ನಾನಾ ಅಂಗಾಗಳೊಳಗೆ ಮನೆ ಮಾಡುತ್ತವೆ. ಆ ಬಳಿಕ ಅವು ಹುಳಗಳಾಗಿ ಬದಲಾಗಿ ನಮ್ಮ ಪ್ರಾಣಕ್ಕೆ ಕುತ್ತು ತರಬಹುದು. ಒಂದು ವೇಳೆ ಮೆದುಳಿನೊಳಗೆ ಸೇರಿದ್ರೆ ಬ್ರೈನ್ ಹ್ಯಾಮರೇಜ್ ಕೂಡ ಆಗಬಹುದು.
ಈ ಭಯಾನಕ ಅಪಾಯದ ಬಗ್ಗೆ ರೈತರಿಗೆ ತಿಳಿದಿದೆಯೋ, ಇಲ್ವೋ ಗೊತ್ತಿಲ್ಲ. ಒಂದು ವೇಳೆ ರೈತರಿಗೆ ಗೊತ್ತಿಲ್ಲದಿದ್ದರೆ ಆಹಾರ ಗುಣಮಟ್ಟ ಮತ್ತು ಸುರಕ್ಷತಾ ಅಧಿಕಾರಿಗಳು ತಕ್ಷಣ ಡಿ.ಚನ್ನಸಂದ್ರಕ್ಕೆ (D Channasandra) ಭೇಟಿ ಕೊಟ್ಟು. ರೈತರಿಗೆ ತಿಳಿ ಹೇಳಿ, ತುರ್ತಾಗಿ ಪರ್ಯಾಯ ವ್ಯವಸ್ಥೆಯನ್ನು ಮಾಡಿಕೊಳ್ಳಲು ಆದೇಶಿಸಬೇಕು ಎನ್ನುವುದೇ ವಿಜಯಟೈಮ್ಸ್ ಆಗ್ರಹ
Bengaluru: All of the green vegetables that we eat are becoming slow poisons, instead of improving health, green vegetables can cause various diseases. How do you know that? Here is the answer
Silicon City Bangalore (Bengaluru) d. Acres of alfalfa vegetables are being grown here by putting a pumpset in the Rajakalu which carries sewage water to grow alfalfa vegetables in Channasandra. If this water is used, there is no need to use fertilizer, because it is profitable, farmers are using this water abundantly. Also, green vegetables grown here are sold in different markets of Bangalore.
Hazardous waste from factories including sewage water containing human excrement is also flowing into this Rajkalu, and the waste coming out of the factory (Vegetables, Greens) contains a lot of dangerous chemicals like lead and mercury. Due to the continuous use of this sewage water in agriculture, it becomes a slow poison and deteriorates human health. It can also cause serious diseases like cancer.
Importantly, there is one more risk factor that you should be aware of. Human or animal faeces contain eggs of tapeworms or tapeworms. When this water is applied to vegetables and greens, it gets absorbed into the greens. If we eat this leafy green vegetable raw, then the eggs of the tapeworm will enter our body. After a few days, the eggs hatch and the larvae enter our blood and make their home in the lungs, brain, skin, muscles and other parts of the body.
Farmers do not know about this terrible danger or not. If the farmers do not know, food quality and safety officials should immediately visit D. Channasandra. Vijayatimes demands that the farmers should be informed and ordered to make an alternative system immediately