ಫಿಲಿಪೈನ್ಸ್, ಏ. 19: ಇಲ್ಲಿನ ಕಳಿಂಗಾ ಪ್ರಾಂತ್ಯದಲ್ಲಿ ಏಪ್ರಿಲ್ 18ರಂದು ಎಸ್ಯುವಿ ವಾಹನ ನೀರಾವರಿ ಕಾಲುವೆಗೆ ಬಿದ್ದು 13 ಮಂದಿ ಮೃತಪಟ್ಟಿದ್ದಾರೆ. ಗಾಡಿಯಲ್ಲಿದ್ದ 15ಜನರಲ್ಲಿ 13 ಜನರ ಜೀವ ಕಳೆದುಕೊಂಡಿದ್ದು, ಅದರಲ್ಲಿ ಬಹುತೇಕರು ಮಕ್ಕಳು ಎಂದು ವರದಿಯಾಗಿದೆ.
ಕಳಿಂಗ ಪ್ರಾಂತ್ಯದ ಟಬೂಕ್ ಸಿಟಿಯ ಬರಂಗೇ ಬುಲೋ ಎಂಬಲ್ಲಿ ಈ ಭೀಕರ ಅಪಘಾತ ಆಗಿದೆ. 11 ಜನರು ಸ್ಥಳದಲ್ಲೇ ಮೃತಪಟ್ಟಿದ್ದರು. ಇನ್ನಿಬ್ಬರು ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯದಲ್ಲಿ ಸಾವನ್ನಪ್ಪಿದ್ದಾರೆ. ಇವರೆಲ್ಲ ಭಾನುವಾರ ಸಂಜೆ 6ರ ಹೊತ್ತಿಗೆ ಟಬೂಕ್ ಸಿಟಿಯ ಬರಂಗೇ ಬುಲೋದಲ್ಲಿರುವ ಪ್ರಸಿದ್ಧ ಸರೋವರ ಬುಲೋ ಲೇಕ್ಗೆ ಹೊರಟಿದ್ದರು. ಚಾಲಕನ ನಿಯಂತ್ರಣ ತಪ್ಪಿದ್ದೇ ಅಪಘಾತಕ್ಕೆ ಕಾರಣ ಎಂದು ಪ್ರಾಥಮಿಕ ವರದಿಯಲ್ಲಿ ಬಹಿರಂಗವಾಗಿದೆ.