Bengaluru : ಬಿಜೆಪಿ (BJP) ಸದಸ್ಯರು ನಿಲುವಳಿ ಸೂಚನೆ ಅಡಿಯಲ್ಲಿ ಕಾಂಗ್ರೆಸ್ (vidhanasabha session Guarantee uproar) ಗ್ಯಾರಂಟಿ ಘೋಷಣೆ ಲೋಪ ವಿಚಾರವಾಗಿ ಚರ್ಚೆಗೆ ಅವಕಾಶ
ಕೊಡುವಂತೆ ಆಗ್ರಹಿಸಿ ಸದನದ ಭಾವಿಗಿಳಿದು ಪ್ರತಿಭಟನೆ ನಡೆಸಿದರು. ಇಂದು ಮಂಗಳವಾರ ವಿಧಾನಸಭೆಯಲ್ಲಿ(Vidhana Sabha) ಗ್ಯಾರಂಟಿ ಘೋಷಣೆ ಜಾರಿಯಲ್ಲಿ ಸದನ ಆರಂಭ
ಆಗುತ್ತಿದ್ದಂತೆ ಲೋಪವಾಗಿದೆ. ಈ ಹಿನ್ನಲೆಯಲ್ಲಿ ಬಿಜೆಪಿ ಸದಸ್ಯರು ಚರ್ಚೆಗೆ ನಿಲುವಳಿ ಸೂಚನೆ ಅಡಿಯಲ್ಲಿ ಅವಕಾಶ ಕೊಡಬೇಕು ಎಂದು ಆಗ್ರಹಿಸಿದರು.

ಮಾಜಿ ಸಿಎಂ ಬಸವರಾಜ ಬೊಮ್ಮಾಯಿ (Basavaraj Bommai) ಡಿಕೆ ಶಿವಕುಮಾರ್ (D.K Shiva Kumar) ಸೇರಿದಂತೆ ಕಾಂಗ್ರೆಸ್ ನಾಯಕರ ಹೇಳಿಕೆಗಳನ್ನು ಕಾಂಗ್ರೆಸ್ ಗ್ಯಾರಂಟಿ ಜಾರಿಯ
ಬಗ್ಗೆ ಈ ಮೊದಲು ಉಲ್ಲೇಖಿಸಿದ ” ಉಚಿತ ನಿಶ್ಚಿತ ಖಚಿತ ನಿಮ್ಮ ನುಡಿಮುತ್ತು ” ಅದರ ಬಗ್ಗೆಯೇ ಚರ್ಚೆಯಾಗಲಿ ಎಂದು ಆಗ್ರಹಿಸಿದರು. ಡಿಸಿಎಂ ಡಿಕೆ ಶಿವಕುಮಾರ್ ಇದಕ್ಕೆ ಪ್ರತ್ಯುತ್ತರ ನೀಡಿ
15 ಲಕ್ಷ ಕೊಡ್ತೀರಿ ಅಂದಿದ್ರಲ್ಲ, ಅದನ್ನು ಮೊದಲು ಚರ್ಚೆ ಮಾಡಿ ಎಂದು (vidhanasabha session Guarantee uproar) ತಿರುಗೇಟು ನೀಡಿದರು.
ಅಶ್ವಥ್ ನಾರಾಯಣವರೇ ಯಾಕ್ರಿ ಅಷ್ಟೊಂದು ಇಮೋಶನಲ್ ಆಗ್ತೀರಿ!
ಸಿಎಂ ಸಿದ್ದರಾಮಯ್ಯ (Siddaramaiah) ಅಶ್ವಥ್ ನಾರಾಯಣವರೇ (Ashwath Narayana) ಯಾಕ್ರಿ ಅಷ್ಟೊಂದು ಇಮೋಶನಲ್ ಆಗ್ತೀರಿ ಎಂದು ಪ್ರಶ್ನಿಸಿದರು.ಬಿಜೆಪಿಯವರು ನಿಲುವಳಿಯಲ್ಲಿ ಏನು ಹೇಳಿದ್ದಾರೆ
ಈ ಮೊದಲು ನೊಟೀಸ್ ನಲ್ಲಿಯೇ ಪ್ರಸ್ತಾಪ ಮಾಡಲಿಕ್ಕೆ ಪ್ರಶ್ನೋತ್ತರ ಹಾಗೂ ಶೂನ್ಯವೇಳೆ ಆದಮೇಲೆ ಅವಕಾಶ ನೀಡಿ ಅಂತ ಹೇಳಿದ್ದಾರೆ. ನೀವು ಮೂರು ವರ್ಷ 10 ತಿಂಗಳು ಅಧಿಕಾರ ಮಾಡಿದವರು .

ಲೀಡರ್ ಆಫ್ ಅಪೋಸಿಷನ್ ನಾನೂ ಸದನದಲ್ಲಿ ಆಗಿದ್ದೆ. ನಿಲುವಳಿ ಮಂಡನೆಗೆ ಪ್ರಶ್ನೋತ್ತರ ಕಲಾಪಕ್ಕೂ ಮೊದಲು ಅವಕಾಶ ಇಲ್ಲ ಎಂದರು. ಒಂದು ದಿನವೂ ನಮಗೆ ಸ್ಪೀಕರ್ (Speaker) ಆದವರು
ಪ್ರಶ್ನೋತ್ತರಕ್ಕಿಂತ ಮೊದಲು ಅವಕಾಶ ನೀಡಿಲ್ಲ. ನಾವೇ ಮಾಡಿಕೊಂಡಿರುವ ನಿಯಮಗಳು ಅವು, ಅಂತಹ ಒಂದು ನಿದರ್ಶನ ತೋರಿಸಿ ಬಿಡಿ ನೋಡೋಣ ಎಂದು ಸವಾಲು ಹಾಕಿದರು.
ಇದನ್ನೂ ಓದಿ : ರಾಜ್ಯದಲ್ಲಿ ಬೆಲೆ ಏರಿಕೆಯಿಂದ ಜನಸಾಮಾನ್ಯರು ಹೈರಾಣು..! ಅಕ್ಕಿ, ಬೇಳೆಕಾಳುಗಳ ಬೆಲೆಗೆ ನಿಯಂತ್ರಣ ಹಾಕಿ
ಮೊಂಡಾಟದಿಂದ ಏನೂ ಆಗಲ್ಲ ಈ ಮೊಂಡಾಟ ಬಿಡಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು ಆ ಸಂದರ್ಭದಲ್ಲಿ ಆಕ್ರೋಶಗೊಂಡ ಬಿಜೆಪಿ ಸದಸ್ಯರು ಮೊಂಡಾಟ ಪದಕ್ಕೆ ಗದ್ದಲ ಉಂಟು ಮಾಡಿದರು.
ರಶ್ಮಿತಾ ಅನೀಶ್