• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
    • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಪ್ರಮುಖ ಸುದ್ದಿ

ನಟ ವಿಜಯ್ ಬಾಬು ಮೇಲೆ ಅತ್ಯಾಚಾರ ಪ್ರಕರಣ ; ಸಿನಿಮಾ ಪಾತ್ರಗಳಿಗಾಗಿ ನನ್ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ : ಸಂತ್ರಸ್ತೆ!

Mohan Shetty by Mohan Shetty
in ಪ್ರಮುಖ ಸುದ್ದಿ
vijay babu
0
SHARES
0
VIEWS
Share on FacebookShare on Twitter

ಮಲಯಾಳಂ(Malayalam) ನಟ ವಿಜಯ್ ಬಾಬು(Vijay Babu) ಅವರ ಮೇಲೆ ಅತ್ಯಾಚಾರ(Rape) ಪ್ರಕರಣ ದಾಖಲಾಗಿದ್ದು, ಮಹಿಳೆಯೊಬ್ಬರು ಚಲನಚಿತ್ರ ಪಾತ್ರಗಳಿಗಾಗಿ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಆರೋಪಿಸಿದ್ದಾರೆ.

actor

ಈ ಆರೋಪಗಳನ್ನು ತಳ್ಳಿಹಾಕಿರುವ ನಟ ವಿಜಯ್ ಬಾಬು, ನಾನು ಅವಳನ್ನು ಸುಲಭವಾಗಿ ತಪ್ಪಿಸಿಕೊಳ್ಳಲು ಬಿಡುವುದಿಲ್ಲ ಎಂದು ಹಠಾತ್ ಹೇಳಿದ್ದಾರೆ. ಸಂತ್ರಸ್ತೆ ಏಪ್ರಿಲ್ 22 ರಂದು ನಟ ವಿಜಯ್ ಬಾಬು ವಿರುದ್ಧ ಪ್ರಕರಣವನ್ನು ದಾಖಲಿಸಿದ್ದು, ಮಾರ್ಚ್ 13 ರಿಂದ ಏಪ್ರಿಲ್ 14, 2022 ರವರೆಗೆ ತನ್ನ ಮೇಲೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ ಮತ್ತು ಲೈಂಗಿಕವಾಗಿ ಶೋಷಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಆರೋಪವನ್ನು ಸಂತ್ರಸ್ತ ಮಹಿಳೆ, ಲೈಂಗಿಕ ಕಿರುಕುಳದ ವಿರುದ್ಧ ಮಹಿಳೆಯರ ಹೆಸರಿನ ಫೇಸ್‌ಬುಕ್ ಗ್ರೂಪ್ ನಲ್ಲಿ ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ : https://vijayatimes.com/bc-nagesh-strict-action/

ಆಪಾದಿತ ಲೈಂಗಿಕ ದೌರ್ಜನ್ಯದ ವಿವರಗಳನ್ನು ಸಂಪೂರ್ಣವಾಗಿ ವಿವರಿಸಲಾಗಿದೆ. ಸಂತ್ರಸ್ತೆ ದೂರಿನಲ್ಲಿ ವಿಜಯ್ ಬಾಬು ಎರ್ನಾಕುಲಂನಲ್ಲಿರುವ ತನ್ನ ಅಪಾರ್ಟ್‌ಮೆಂಟ್‌ನಲ್ಲಿ ನನಗೆ ಚಿತ್ರರಂಗದಲ್ಲಿ ಉತ್ತಮ ಅವಕಾಶಗಳ ಭರವಸೆ ನೀಡಿ ಹಲವಾರು ಬಾರಿ ಹಿಂಸಿಸಿದ್ದಾನೆ ಎಂದು ಪ್ರಮುಖವಾಗಿ ಆರೋಪದಲ್ಲಿ ಉಲ್ಲೇಖಿಸಿದ್ದಾರೆ. ನಂತರ ವಿಜಯ್ ಬಾಬು ನನ್ನ ಮೇಲೆ ಅತ್ಯಾಚಾರ ಮತ್ತು ದೈಹಿಕ ಹಾನಿ ಮಾಡಿದ್ದಾರೆ ಎಂದು ಹೇಳಿದ್ದಾರೆ. ಈ ವಿಷಯದ ಬಗ್ಗೆ ಪೊಲೀಸರು ಇನ್ನೂ ಅವರನ್ನು ಪ್ರಶ್ನಿಸಿಲ್ಲ ಎಂಬುದು ಕೆಲವರಿಗೆ ಕೊಂಚ ಅನುಮಾನ ಹುಟ್ಟಿಸಿದೆ.

actor vijay babu

ಸಂತ್ರಸ್ತೆ ಬರೆದಿರುವ ಪೋಸ್ಟ್ ನೋಡಿದಾಗ, “ಇಂಡಸ್ಟ್ರಿಯಲ್ಲಿ ಕೆಲವು ವರ್ಷಗಳಿಂದ ಇತನನ್ನು ತಿಳಿದಿದ್ದೇನೆ ಮತ್ತು ಅವನೊಂದಿಗೆ ಚಲನಚಿತ್ರಕ್ಕಾಗಿ ಕೆಲಸ ಮಾಡಿದ್ದೇನೆ ಎಂದು ಹೇಳುವ ಮೂಲಕ ಪ್ರಾರಂಭಿಸಿದ್ದಾರೆ. ಚಿತ್ರರಂಗಕ್ಕೆ ಹೊಸಬರಾಗಿದ್ದರಿಂದ ಸರಿಯಾದ ಮಾರ್ಗದರ್ಶನವಿಲ್ಲದೆ ಸ್ನೇಹದಿಂದ ವರ್ತಿಸಿ ಸಲಹೆ ನೀಡುವ ಮೂಲಕ ನನ್ನ ನಂಬಿಕೆಯನ್ನು ಗಳಿಸಿದ್ದರು. ನನ್ನ ವೈಯಕ್ತಿಕ ಮತ್ತು ವೃತ್ತಿಪರ ಸಮಸ್ಯೆಗಳಿಗೆ ನನ್ನ ಸಂರಕ್ಷಕನಂತೆ ನಾಟಕವಾಡಿ ನನ್ನನ್ನು ಲೈಂಗಿಕವಾಗಿ ಬಳಸಿಕೊಂಡಿದ್ದಾನೆ.

ಇದನ್ನೂ ಓದಿ : https://vijayatimes.com/charlie-777-kannada-movie/

ನಟ ಬಾಬು ನನ್ನೊಂದಿಗೆ ಲೈಂಗಿಕ ಸಂಬಂಧ ಹೊಂದಲು ಬಂದಾಗ, ನಾನು ಅದನ್ನು ನಿರಾಕರಿಸಿದ್ದಕ್ಕಾಗಿ ನನ್ನ ಮೇಲೆ ಹಲ್ಲೆ ನಡೆಸಿದ. ಒಂದು ದಿನ ನಾನು ನನ್ನ ಮುಟ್ಟಿನ ಸಮಯದಲ್ಲಿ ಲೈಂಗಿಕತೆಯನ್ನು ನಿರಾಕರಿಸಿದ ಕಾರಣ, ನನ್ನ ಹೊಟ್ಟೆಯ ಮೇಲೆ ಒದ್ದು, ನನ್ನ ಮುಖದ ಮೇಲೆ ಉಗುಳಿದನು. ಆ ಸಮಯದಲ್ಲಿ ಏನಾಗುತ್ತಿದೆ ಎಂದು ನಾನು ಅರ್ಥಮಾಡಿಕೊಳ್ಳಲು ಅಸಾಧ್ಯವಾಯಿತು! ಆತ ನನ್ನ ನಗ್ನ ವೀಡಿಯೊವನ್ನು ರೆಕಾರ್ಡ್ ಮಾಡಿದ್ದಾನೆ ಮತ್ತು ಅದನ್ನು ಮುಂದಿಟ್ಟು ನನಗೆ ಬೆದರಿಕೆ ಹಾಕಿದ್ದಾನೆ.

malyalam

ನನ್ನ ಸುರಕ್ಷತೆಗಾಗಿ ಇಷ್ಟು ದಿನ ನಾನು ಹೆದರುತ್ತಿದ್ದೆ! ಆದ್ರೆ ಇನ್ನು ಮುಂದೆ ನಾನು ನನ್ನ ಬಾಯಿ ಮುಚ್ಚುವುದಿಲ್ಲ. ನಾನು ಇನ್ನು ಮುಂದೆ ಈ ನೋವನ್ನು ಸಹಿಸಲಾರೆ, ನಾನು ಬಲವಾಗಿ ನಂಬುತ್ತೇನೆ. ನನಗೆ ನ್ಯಾಯ ಸಿಗುತ್ತದೆ, ನನ್ನಂತೆ ಯಾರೂ ತಮ್ಮ ಜೀವನದಲ್ಲಿ ಇಂಥ ನೋವು ಮತ್ತು ಆಘಾತವನ್ನು ಅನುಭವಿಸಬಾರದು ಎಂದು ಹೇಳಿಕೊಂಡಿದ್ದಾರೆ.

Tags: actorCasemalyalamRapevijaybabu

Related News

ವೈಟ್ ಫೀಲ್ಡ್ ಹೊಸ ಮೆಟ್ರೋ ಮಾರ್ಗದ ಮೊದಲ ದಿನ ಪ್ರಯಾಣಿಸಿದ ಸಂಖ್ಯೆ 16000 ಕ್ಕೂ ಅಧಿಕ! ವರದಿ
ಪ್ರಮುಖ ಸುದ್ದಿ

ವೈಟ್ ಫೀಲ್ಡ್ ಹೊಸ ಮೆಟ್ರೋ ಮಾರ್ಗದ ಮೊದಲ ದಿನ ಪ್ರಯಾಣಿಸಿದ ಸಂಖ್ಯೆ 16000 ಕ್ಕೂ ಅಧಿಕ! ವರದಿ

March 27, 2023
ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ 14 ವಿರೋಧ ಪಕ್ಷಗಳು ; ಕಾರಣ ಏನು ಗೊತ್ತಾ
Vijaya Time

ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ 14 ವಿರೋಧ ಪಕ್ಷಗಳು ; ಕಾರಣ ಏನು ಗೊತ್ತಾ

March 24, 2023
ಹೆಚ್ಚಾಯ್ತು ವಿಮಾನದಲ್ಲಿ ಕುಡಕರ ಕಾಟ ; ಇಂಡಿಗೋ ವಿಮಾನದಲ್ಲಿ ಮತ್ತೆ ಇಬ್ಬರು ಕುಡುಕರ ಬಂಧನ
Vijaya Time

ಹೆಚ್ಚಾಯ್ತು ವಿಮಾನದಲ್ಲಿ ಕುಡಕರ ಕಾಟ ; ಇಂಡಿಗೋ ವಿಮಾನದಲ್ಲಿ ಮತ್ತೆ ಇಬ್ಬರು ಕುಡುಕರ ಬಂಧನ

March 23, 2023
ಐಫೋನ್ ಆರ್ಡರ್ ಮಾಡಿದ್ದ ವ್ಯಕ್ತಿಗೆ ಸಿಕ್ಕಿದ್ದು ನಿರ್ಮಾ ಸೋಪು!
Vijaya Time

ಐಫೋನ್ ಆರ್ಡರ್ ಮಾಡಿದ್ದ ವ್ಯಕ್ತಿಗೆ ಸಿಕ್ಕಿದ್ದು ನಿರ್ಮಾ ಸೋಪು!

March 24, 2023

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
Menu
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
Menu
  • About Us
  • Contact Us
  • For Advertisement

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.