ಬೆಂಗಳೂರು, ಫೆ. 08: ರಾಜ್ಯದ 31ನೇ ಜಿಲ್ಲೆಯಾಗಿ ರಾಜ್ಯ ಸರ್ಕಾರ ವಿಜಯನಗರವನ್ನು ಘೋಷಣೆ ಮಾಡಿ ಅಧಿಕೃತವಾಗಿ ಗೆಜೆಟ್ ಅಧಿಸೂಚನೆ ಹೊರಡಿಸಿದೆ. ಈ ಮೂಲಕ ರಾಜ್ಯದ 31ನೇ ಜಿಲ್ಲೆಯಾಗಿ ವಿಜಯನಗರ ಘೋಷಣೆಯಾಗಿದೆ.
ಕಂದಾಯ ಇಲಾಖೆ(ಭೂ ಮಾಪನ) ಸರ್ಕಾರದ ಅಧೀನ ಕಾರ್ಯದರ್ಶಿ ವಿಟಿ ರಾಜಶ್ರೀ ಗೆಜೆಟ್ ಅಧಿಸೂಚನೆ ಹೊರಡಿಸಿದ್ದು, ಕರ್ನಾಟಕ ಭೂ ಕಂದಾಯ ಅಧಿನಿಯಮ 1964 ( 1964ರ ಕರ್ನಾಟಕ ಅಧಿನಿಯಮ ಸಂಖ್ಯೆ 12)ರ 6ನೇ ಪ್ರಕರಣದ ಮೇರೆಗೆ ಅಗತ್ಯ ಪಡಿಸಲಾದಂತೆ ಬಳ್ಳಾರಿ ಜಿಲ್ಲೆಯ ಸರಹದ್ದುಗಳನ್ನು ಮಾರ್ಪಡಿಸಿ, ವಿಜಯ ನಗರ ಜಿಲ್ಲೆ ಎಂಬ ಹೆಸರಿನ ನೂತನ ಜಿಲ್ಲೆಯನ್ನು ರಚಿಸಲಾಗಿದೆ. ವಿಜಯನಗರ ಜಿಲ್ಲೆಯ ಕೇಂದ್ರ ಸ್ಥಾನವನ್ನಾಗಿ ಹೊಸಪೇಟೆಯನ್ನು ಆಯ್ಕೆ ಮಾಡಲಾಗಿದೆ. ವಿಜಯನಗರ ಹೊಸ ಜಿಲ್ಲೆಗೆ, ಅಗರಿಬೊಮ್ಮನಹಳ್ಳಿ ಹೊಸಪೇಟೆ, ಕೂಡ್ಲಿಗಿ, ಹೂವಿನ ಹಡಗಲಿ ಹರಪನಹಳ್ಳಿ ಹಾಗೂ ಕೊಟ್ಟೂರು, ತಾಲೂಕುಗಳನ್ನು ಸೇರ್ಪಡೆಗೊಳಿಸಲಾಗಿದೆ.