Bengaluru : ಖ್ಯಾತ ತನಿಖಾ ಪತ್ರಕರ್ತೆ ವಿಜಯಲಕ್ಷ್ಮಿ ಶಿಬರೂರು(Vijayalakshmi Shibaruru) ಅವರ ನೇತೃತ್ವದಲ್ಲಿ ಸಾಗುತ್ತಿರುವ ವಿಜಯಟೈಮ್ಸ್ (VijayaTimes) ತಂಡ ನಡೆಸಿದ ರಹಸ್ಯ ಕಾರ್ಯಚರಣೆಯಲ್ಲಿ ಸಿಕ್ಕಿಬಿದ್ದ ಸರ್ಕಾರಿ ಅಧಿಕಾರಿಯ ವೀಡಿಯೋ ಈಗ ಎಲ್ಲೆಡೆ ಭಾರಿ ವೈರಲ್ ಆಗುತ್ತಿದೆ.
ಹೌದು, ಸರ್ಕಾರ ಸರ್ಕಾರಿ ಅಧಿಕಾರಿಗಳಿಗೆ ತಮ್ಮ ಕರ್ತವ್ಯಕ್ಕೆ ಎಂದು ಕೊಟ್ಟ ವಾಹನವನ್ನು ತಮ್ಮ ವೈಯಕ್ತಿಕ (personal) ಕಾರಣಗಳಿಗಾಗಿ ಉಪಯೋಗಿಸುತ್ತಿರುವುದನ್ನು,
ನಮ್ಮ ವಿಜಯಟೈಮ್ಸ್ ತಂಡ ಬಟಾಬಯಲು ಮಾಡಿರುವುದು ಈಗ ಸಾಮಾಜಿಕ ಜಾಲತಾಣದಲ್ಲಿ (Social Media) ಭಾರಿ ವೈರಲ್ (Viral) ಆಗಿದೆ.
ಹೌದು, ಪೊಲೀಸ್ (Police) ಅಧಿಕಾರಿಯೊಬ್ಬರು ಸರ್ಕಾರ ವಾಹನದಲ್ಲಿ ತಮ್ಮ ಕುಟುಂಬ ಸಮೇತ ಮಾರುಕಟ್ಟೆಯಲ್ಲಿ ಇದ್ದದನ್ನು ಕಂಡು ಸ್ಥಳಕ್ಕೆ ನಮ್ಮ ವಿಜಯಟೈಮ್ಸ್ ವರದಿಗಾರ ಕೂಡಲೇ ದೌಡಾಯಿಸಿ,
ಅಧಿಕಾರಿಯನ್ನು ಪ್ರಶ್ನಿಸಿರುವ ವೀಡಿಯೋ ಈಗ ರಾಜ್ಯದಲ್ಲಿ (state) ಭಾರಿ ಸದ್ದು ಮಾಡುತ್ತಿದ್ದು, ಜನಸಾಮಾನ್ಯರ ವಾಟ್ಸಾಪ್,
ಫೇಸ್‍ಬುಕ್ ಸ್ಟೇಟಸ್‍ನಲ್ಲಿ ಹೆಚ್ಚೆಚ್ಚು ಶೇರ್ ಆಗುವ ಮೂಲಕ `ಸರ್ಕಾರ ವಾಹನ ದುರ್ಬಳಕೆ’ ವೀಡಿಯೋ ಜನರನ್ನು ತಲುಪುತ್ತಿದೆ.
ಅಷ್ಟಕ್ಕೂ ಅಲ್ಲಿ ನಡೆದ್ದಾದರೂ ಏನೂ? ಘಟನೆಯ ವಿವರ ಹೀಗಿದೆ : ಬೆಂಗಳೂರಿನ, ಮಡಿವಾಳ (Madiwala) ನಗರದ ಮುಖ್ಯ ರಸ್ತೆಯ ಮಾರುಕಟ್ಟೆಯ ಬಳಿ ಪೊಲೀಸ್ (police)ಅಧಿಕಾರಿಯೊಬ್ಬರು,
ಸರ್ಕಾರ ಕೊಟ್ಟ ವಾಹನದಲ್ಲಿ ತಮ್ಮ ಕುಟುಂಬ (family) ಸಮೇತ ಬಂದು ರಸ್ತೆಬದಿಯಲ್ಲಿದ್ದ ಹಣ್ಣಿನ ಅಂಗಡಿಯಲ್ಲಿ ಹಣ್ಣು ಖರೀದಿ ಮಾಡುತ್ತಿದ್ದರು.
ಇದೇ ಸಮಯಕ್ಕೆ ಸರಿಯಾಗಿ ನಮ್ಮ ವಿಜಯಟೈಮ್ಸ್ ತಂಡದ ವರದಿಗಾರ (Reporter) ಮತ್ತು ಕ್ಯಾಮರಾಮ್ಯಾನ್ (Cameraman),
ಅಧಿಕಾರಿ ನಿಲ್ಲಿಸಿದ್ದ ಟಯೋಟಾ ಇನ್ನೋವಾ (ಸರ್ಕಾರ ವಾಹನ) ಕಾರಿನ ಬಳಿ ಓಡಿ ಬಂದು ಅಧಿಕಾರಿಗೆ ಪ್ರಶ್ನೆಗಳ ಸುರಿಮಳೆಯನ್ನು ಹರಿಸಿದ್ದಾರೆ.
ನಮ್ಮ ವಿಜಯಟೈಮ್ಸ್ ತಂಡ ಧಾವಿಸಿ, ಪ್ರಶ್ನಿಸುತ್ತಿದ್ದಂತೆ ತಬ್ಬಿಬ್ಬಾದ ಪೊಲೀಸ್ ಅಧಿಕಾರಿ, ನಮ್ಮ ವರದಿಗಾರರ ಪ್ರಶ್ನೆಗೆ ಉತ್ತರಿಸಲಾಗದೆ, ನಮ್ಮ ಕ್ಯಾಮರಾಮ್ಯಾನ್ ಹಿಡಿದಿರುವ ಕ್ಯಾಮರಾ ಕಡೆ ನೋಡಲಾಗದೆ,
ಮಾಧ್ಯಮದವರ ಕಣ್ತಪ್ಪಿಸಿ ಓಡಿ ಹೋಗಲು ಪ್ರಾರಂಭಿಸಿದರು. ಅಧಿಕಾರಿ (officer) ಓಡಿ ಹೋಗುತ್ತಿದ್ದಂತೆ ಅವರನ್ನು ನಮ್ಮ ವರದಿಗಾರ ಮತ್ತು ಕ್ಯಾಮರಾಮ್ಯಾನ್ ಇಬ್ಬರು ಬೆನ್ನಟ್ಟಿ ಹೋಗಿದ್ದಾರೆ.
ಆದ್ರೆ, ನಮ್ಮವರ ಕಣ್ತಪ್ಪಿಸಿ ಓಡಿ ಹೋದ ಅಧಿಕಾರಿಯೂ ಹೆಚ್ಚು ಸಮಯ ಎಲ್ಲೂ ನಿಂತು ವಿಶ್ರಾಂತಿ ಪಡೆಯಲು ಸಾಧ್ಯವಾಗಿಲ್ಲ, ಕಾರಣ ನಮ್ಮವರು ಬಿಟ್ಟಿಲ್ಲ!
ಪೊಲೀಸ್ ಅಧಿಕಾರಿಯೂ ಎಷ್ಟು ಬಾರಿ ಪ್ರಶ್ನಿಸಿದರೂ ಉತ್ತರಿಸಲು ತಯಾರಿರಲಿಲ್ಲ. ಆ ಬಳಿಕ ನಮ್ಮ ವರದಿಗಾರರು ನಿಂತಿದ್ದ ಸರ್ಕಾರ ವಾಹನದ (Government vehicle) ಮುಂದೆ ನಿಂತು,
ಇದನ್ನೂ ಓದಿ : https://vijayatimes.com/two-girls-fight-for-one-boyfriend/
ಅಧಿಕಾರಿಗಳು ಸರ್ಕಾರ ಕರ್ತವ್ಯಕ್ಕೆ ಎಂದು ಕೊಟ್ಟ ವಾಹನವನ್ನು ದುರ್ಬಳಕೆ ಮಾಡುವುದು ಎಷ್ಟು ಸರಿ?ಸರ್ಕಾರಿ ವಾಹನ ದುರ್ಬಳಕೆ’
ಮಾಡುವುದು ತೀರ ಖಂಡನೀಯ (Reprehensible), ಅಕ್ಷಮ್ಯ ಎಂದು ಪ್ರಶ್ನಿಸುವ ಮುಖೇನ ಸ್ಥಳದಿಂದ ವರದಿ ಮಾಡಿದ್ದಾರೆ.
ಈ ಒಂದು ವೀಡಿಯೋ ನಮ್ಮ ವಿಜಯಟೈಮ್ಸ್ ಡಿಜಿಟಲ್ ಮೀಡಿಯಾದಲ್ಲಿ ಪ್ರಸಾರವಾದ ಬಳಿಕ ಸಾಕಷ್ಟು ಭಾರಿ ಶೇರ್ ಆಗಲು ಪ್ರಾರಂಭವಾಯಿತು.
ಇದಾದ ಕೆಲವೇ ಗಂಟೆಗಳಲ್ಲಿ ನಮ್ಮ ತಂಡ ನಡೆಸಿದ “ಸರ್ಕಾರಿ ವಾಹನ ದುರ್ಬಳಕೆ’ (Misuse of government vehicles) ಕಾರ್ಯಾಚರಣೆಯ ವೀಡಿಯೋ ಹೆಚ್ಚೆಚ್ಚು ವೈರಲ್ ಆಗಲು ಪ್ರಾರಂಭಿಸಿತು.
ಜನಸಾಮಾನ್ಯರು ಈ ವೀಡಿಯೋ ಕಂಡು ವಿಜಯಟೈಮ್ಸ್ ವರದಿಗಾರನ ಧೈರ್ಯಕ್ಕೆ ಮೆಚ್ಚುಗೆ, ಶ್ಲಾಘನೆಯ ಮಹಾಪೂರವನ್ನೇ ಹರಿಸಿದ್ದಾರೆ.
ಇದಲ್ಲದೇ ಈ ವೀಡಿಯೋ ಹಾಗೂ ವೀಡಿಯೋ (video)ತುಣಕನ್ನು ಸಾಮಾಜಿಕ ಜಾಲತಾಣವಾದ ವಾಟ್ಸಾಪ್ ಸ್ಟೇಟಸ್, ಫೇಸ್‍ಬುಕ್, ಇನ್ಸ್ಟಾಗ್ರಾಂನಲ್ಲಿ ಶೇರ್ ಮಾಡುವ ಮುಖೇನ ವಿಜಯಟೈಮ್ಸ್ ತಂಡದ ಕೆಲಸವನ್ನು ಪ್ರೋತ್ಸಾಹಿಸಿದ್ದಾರೆ.
ನಮ್ಮ ತಂಡದ ವರದಿಗಾರ ಹಾಗೂ ಕ್ಯಾಮರಾಮ್ಯಾನ್ ಸೇರಿದಂತೆ ವಿಜಯಟೈಮ್ಸ್ ತಂಡಕ್ಕೆ ಜನಸಾಮಾನ್ಯರು ಸಾಮಾಜಿಕ ಜಾಲತಾಣ ಸೇರಿದಂತೆ ದೂರವಾಣಿ ಕರೆ ಮೂಲಕ ನಮ್ಮ ಕೆಲಸವನ್ನು ಶ್ಲಾಘಿಸಿ, ಅಭಿನಂದಿಸುತ್ತಿದ್ದಾರೆ.
ನಮ್ಮ ತಂಡದ ಈ ಕೆಲಸಕ್ಕೆ ನೀವು ಕೊಡುತ್ತಿರುವ ಪ್ರೋತ್ಸಾಹ, ಮೆಚ್ಚುಗೆ, ಪ್ರಶಂಸೆ, ಶ್ಲಾಘನೆ (Appreciation) ಇವೆಲ್ಲದಕ್ಕೂ ನಮ್ಮ ಹೃತೂರ್ವಕ ಧನ್ಯವಾದಗಳು.
ನೀವು ನಮ್ಮ ತಂಡದ ಮೇಲಿಟ್ಟಿರುವ ನಂಬಿಕೆಗೆ ನಾವು ಅರ್ಹರಾಗಿರುತ್ತೇವೆ,
ಬದ್ಧರಾಗಿರುತ್ತೇವೆ. ಇದೇ ರೀತಿ ಹೆಚ್ಚೆಚ್ಚು ಅಕ್ರಮ, ಭ್ರಷ್ಟತೆಯನ್ನು ಬಯಲಿಗೆಳೆಯುವ ಕೆಲಸವನ್ನು ಮುಂದುವರಿಸುತ್ತೇವೆ.
ಇದನ್ನೂ ಓದಿ : https://vijayatimes.com/new-atal-bridge-is-on-the-way/
ನಮ್ಮ ವಿಜಯಟೈಮ್ಸ್ ಡಿಜಿಟಲ್ ಮೀಡಿಯಾ ಇದೀಗ ಫೇಸ್‍ಬುಕ್,(facebook) ಟ್ವಿಟರ್ (twitter) ಯೂಟ್ಯೂಬ್(youtube), ಇನ್ಸ್ಟಾಗ್ರಾಂನಲ್ಲಿ (Instagram)ಲಭ್ಯವಿದೆ.
ನಾವು ಪ್ರಸಾರ ಮಾಡುವ ವೀಡಿಯೋ ವೀಕ್ಷಿಸಲು ನಮ್ಮ ಡಿಜಿಟಲ್ ಮೀಡಿಯಾವನ್ನು ಸಬ್‍ಸ್ಕ್ರೈಬ್ (Subscribe) ಮಾಡಿ, ಅನುಸರಿಸಿ.
“ಸರ್ಕಾರಿ ವಾಹನ ದುರ್ಬಳಕೆ’ ವೀಡಿಯೋ ವೈರಲ್ ಮಾಡಿ ಸರ್ಕಾರಕ್ಕೆ ತಲುಪಿಸುವಂತ ಕೆಲಸಕ್ಕೆ ಕೈಜೋಡಿಸಿದ ನಿಮ್ಮೆಲ್ಲರಿಗೂ ಮತ್ತೊಮ್ಮೆ, ಮಗದೊಮ್ಮೆ ವಿಜಯಟೈಮ್ಸ್ ತಂಡದಿಂದ ಧನ್ಯವಾದ.
- ಮೋಹನ್ ಶೆಟ್ಟಿ (ವಿಜಯಟೈಮ್ಸ್ ತಂಡ)