Bengaluru: ವಿಜಯಪುರ ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ (Vijayendra vs Yatnal) ಅವರು ರಾಜ್ಯ ಘಟಕದ ಅಧ್ಯಕ್ಷರನ್ನಾಗಿ ಬಿವೈ ವಿಜಯೇಂದ್ರ ನೇಮಕಕ್ಕೆ ಈವರೆಗೆ ಒಳಗೊಳಗೇ

ಅಸಮಾಧಾನ ವ್ಯಕ್ತಪಡಿಸಿದ್ದು, ಇದೀಗ ಆಕ್ರೋಶ ಹೊರಹಾಕಿದ್ದಾರೆ. ವಿಜಯೇಂದ್ರ ಅವರು ತಮ್ಮನ್ನು ಮಾತನಾಡಿಸಲು ಬರುವ ಅಗತ್ಯವಿಲ್ಲ. ಅವರು ತಮ್ಮ ಮನೆಗೆ ಕಾಲಿಡುವುದು
ಬೇಡ ಎಂದು ಬೆಂಗಳೂರಿನಲ್ಲಿ ಮಾತನಾಡಿದ ಅವರು ಆಕ್ರೋಶ (Vijayendra vs Yatnal) ವ್ಯಕ್ತಪಡಿಸಿದ್ದಾರೆ.
ರಾಜ್ಯ ಬಿಜೆಪಿ ಸಂಘಟನಾ ಪ್ರಧಾನ ಕಾರ್ಯದರ್ಶಿ (State BJP Organizing General Secretary) ರಾಜೇಶ್ ಅವರಿಗೆ ಕರೆ ಮಾಡಿ ತಿಳಿಸಿದ್ದು, ವಿಜಯೇಂದ್ರ ನೇಮಕಕ್ಕೆ ನಾನು ಯಾವುದೇ
ಪ್ರತಿಕ್ರಿಯೆ ಕೊಡಲ್ಲ. ಹೈಕಮಾಂಡ್ ವೀಕ್ಷಕರ ಬಳಿ ಹೊಂದಾಣಿಕೆ ರಾಜಕಾರಣದ ಬಗ್ಗೆ ಹೇಳಿದ್ದೇನೆ. ಶಾಸಕಾಂಗ (Legislature) ಪಕ್ಷದ ಸಭೆಯಲ್ಲಿ ಭಾಗಿಯಾಗಿ ನನ್ನ ಅಭಿಪ್ರಾಯ ಹೇಳುತ್ತೇನೆ. ವಿಧಾನಸಭೆ
ವಿಪಕ್ಷ ನಾಯಕ ಸ್ಥಾನ ಉತ್ತರ ಕರ್ನಾಟಕಕ್ಕೆ (North Karnataka) ಕೊಡಬೇಕು. ಅದರಲ್ಲಿ ಯಾವುದೇ ರಾಜಿ ಇಲ್ಲ ಎಂದು ಹೇಳಿದ್ದಾರೆ.
ಈ ಸಂದರ್ಭದಲ್ಲಿ ವಿಜಯೇಂದ್ರ ಜೊತೆ ಮಾತನಾಡಲು ಇಚ್ಛಿಸುವುದಿಲ್ಲ. ನನ್ನ ಮನೆಗೆ ವಿಜಯೇಂದ್ರ ಬರೋದು ಬೇಡ ಎಂದು ಯತ್ನಾಳ್ ಹೇಳಿದ್ದಾರೆ. ಹೀಗಾಗಿ ಹೈಕಮಾಂಡ್ ವೀಕ್ಷಕರ
ಜೊತೆ ಯತ್ನಾಳ್ ಮನೆಗೆ ವಿಜಯೇಂದ್ರ ತೆರಳಿಲ್ಲ.
ಪ್ರತಿಪಕ್ಷ ಸ್ಥಾನ ಉತ್ತರ ಕರ್ನಾಟಕಕ್ಕೇ ಬೇಕು: ಯತ್ನಾಳ್ ಪಟ್ಟು ನಿನ್ನೆ ಒಬ್ಬ ಏಜೆಂಟ್ ನನ್ನನ್ನು ಖರೀದಿ ಮಾಡಲು ಬಂದಿದ್ದ. ವಿಜಯೇಂದ್ರ ನೇಮಕಕ್ಕೆ ನಾನು ಯಾವುದೇ ಪ್ರತಿಕ್ರಿಯೆ ಕೊಡಲ್ಲ.
ಹೈಕಮಾಂಡ್ ವೀಕ್ಷಕರ ಬಳಿ ಹೊಂದಾಣಿಕೆ ರಾಜಕಾರಣದ ಬಗ್ಗೆ ಹೇಳಿದ್ದೇನೆ.
ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾಗಿಯಾಗಿ ನನ್ನ ಅಭಿಪ್ರಾಯ ಹೇಳುತ್ತೇನೆ. ವಿಧಾನಸಭೆ (Vidhan Sabha) ವಿಪಕ್ಷ ನಾಯಕ ಸ್ಥಾನ ಉತ್ತರ ಕರ್ನಾಟಕಕ್ಕೆ ಕೊಡಬೇಕು. ಅದರಲ್ಲಿ ಯಾವುದೇ ರಾಜಿ
ಇಲ್ಲ ಎಂದು ಯತ್ನಾಳ್ ಹೇಳಿದ್ದಾರೆ.
ಉತ್ತರ ಕರ್ನಾಟಕಕ್ಕೆ ಅವಕಾಶ ಕೊಡದಿದ್ರೆ ಜನ ತೀರ್ಮಾನ ಮಾಡ್ತಾರೆ. ಬಿಜೆಪಿಯಲ್ಲಿ ದಕ್ಷಿಣ ಕರ್ನಾಟಕದವರೇ (South Karnataka) ವಿಪಕ್ಷ ನಾಯಕರು ಆಗಬೇಕಾ? ಮಂಗಳೂರು (Mangalore)
ಬಿಟ್ಟರೆ ದಕ್ಷಿಣ ಕರ್ನಾಟಕದ ಎಷ್ಟು ಶಾಸಕರು ಇದ್ದಾರೆ? ಬಹಳಷ್ಟು ಶಾಸಕರು ನಮ್ಮ ಜೊತೆಗಿದ್ದಾರೆ, ಆದರೆ ಮಾತಾಡಲು ಧಮ್ ಇಲ್ಲ. ಬಹಳಷ್ಟು ಶಾಸಕರು ಮಕ್ಕಳನ್ನು ಲೋಕಸಭೆಗೆ ನಿಲ್ಲಿಸಬೇಕು
ಅಂತಿದ್ದಾರೆ.ಆಗ ನಾವೂ ತೀರ್ಮಾನ ಮಾಡ್ತೇವೆ ಎಂದು ಕಿಡಿಕಾರಿದ್ದಾರೆ.

ಚುನಾವಣೆ ವೇಳೆ ಆಗಿರುವ ಬೆಳವಣಿಗೆ ಬಗ್ಗೆ ಎಲ್ಲವನ್ನೂ ವಿವರಿಸಿದ್ದೇನೆ. ಒಂದು ವರ್ಗದ ಕೇಂದ್ರೀಕೃತವಾಗಿ ಪಕ್ಷಕ್ಕೆ ದ್ರೋಹ ಮಾಡಿದ್ದಾರೆ. ಹೈಕಮಾಂಡ್ ವೀಕ್ಷಕರಿಗೆ ರಾಜ್ಯದ ಎಷ್ಟೋ
ವಿಷಯಗಳು ಗೊತ್ತಿರಲಿಲ್ಲ. ಧೈರ್ಯದಿಂದ ನಾನು ಎಲ್ಲವನ್ನೂ ಹೇಳಿದ್ದೇನೆ. ದೇಶದಲ್ಲಿ ನಾವು ಉಳಿಯಬೇಕಾದರೆ ಮೋದಿ ಮತ್ತೆ ಪ್ರಧಾನಿ (Narendra Modi) ಆಗಬೇಕು ಎಂದು ಹೈಕಮಾಂಡ್
ವೀಕ್ಷಕರನ್ನು ಭೇಟಿ ಮಾಡಿದ ಬಗ್ಗೆ ಮಾಹಿತಿ ನೀಡಿದರು.
ಕೆಲವರು ಬ್ಲ್ಯಾಕ್ಮೇಲ್ ಮಾಡಲು ಪ್ರಯತ್ನ ಮಾಡುತ್ತಾರೆ. ನಾನು ಭಯಪಡುವುದಿಲ್ಲ ಎಂದಿದ್ದಕ್ಕೆ ಇಬ್ಬರೂ ಬಹಳ ಖುಷಿಯಾದರು. ನೀವು ಎಲ್ಲವನ್ನೂ ಧೈರ್ಯವಾಗಿ ಹೇಳಿದ್ದೀರಿ ಅಂತಾ
ವೀಕ್ಷಕರು ಹೇಳಿದರು. ಜೆಪಿ ನಡ್ಡಾ, (JP Nadda) ಪ್ರಧಾನಿಗೆ ಎಲ್ಲವನ್ನೂ ತಿಳಿಸುವುದಾಗಿ ಅವರು ಹೇಳಿದ್ದಾರೆ ಎಂದು ಯತ್ನಾಳ್ ಹೇಳಿದ್ದಾರೆ.
ಇದನ್ನು ಓದಿ: ಉತ್ತರಕಾಶಿ ಸುರಂಗ ಕುಸಿತ: 5 ದಿನ ಕಳೆದರೂ ಮುಗಿಯದ ರಕ್ಷಣಾ ಕಾರ್ಯಾಚರಣೆ
- ಭವ್ಯಶ್ರೀ ಆರ್ ಜೆ