• ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Vijaya Times logo
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Menu
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ
Visit Channel
Home ಡಿಜಿಟಲ್ ಜ್ಞಾನ

ಭಾರತದ ಮೇಡ್ ಇನ್ ಇಂಡಿಯಾ ನಿರ್ಮಿತ ವಿಕ್ರಮ್-32 ಬಿಟ್ ಮೈಕ್ರೋಪ್ರೊಸೆಸರ್‌ ಚಿಪ್ ಅನಾವರಣ, ಸೆಮಿಕಂಡಕ್ಟರ್‌ ರೇಸ್‌ಗೆ ಭಾರತದ ಎಂಟ್ರಿ

Shwetha Mohan by Shwetha Mohan
in ಡಿಜಿಟಲ್ ಜ್ಞಾನ, ದೇಶ-ವಿದೇಶ, ಪ್ರಮುಖ ಸುದ್ದಿ, ವಿಜಯ ಟೈಮ್ಸ್‌, ವೈರಲ್ ಸುದ್ದಿ
ಭಾರತದ ಮೇಡ್ ಇನ್ ಇಂಡಿಯಾ ನಿರ್ಮಿತ ವಿಕ್ರಮ್-32 ಬಿಟ್ ಮೈಕ್ರೋಪ್ರೊಸೆಸರ್‌ ಚಿಪ್ ಅನಾವರಣ, ಸೆಮಿಕಂಡಕ್ಟರ್‌ ರೇಸ್‌ಗೆ ಭಾರತದ ಎಂಟ್ರಿ
0
SHARES
11
VIEWS
Share on FacebookShare on Twitter
  • ಭಾರತದ ಮೊದಲ ಸ್ವದೇಶಿ ನಿರ್ಮಿತ ವಿಕ್ರಮ್-32 ಬಿಟ್ ಮೈಕ್ರೋಪ್ರೊಸೆಸರ್‌ ಚಿಪ್
  • ಪ್ರಧಾನಿ ಮೋದಿಗೆ ಚಿಪ್‌ ಹಸ್ತಾಂತರಿಸಿದ ಎಲೆಕ್ಟ್ರಾನಿಕ್ಸ್ ಮತ್ತು ಐಟಿ ಸಚಿವ ಅಶ್ವಿನಿ ವೈಷ್ಣವ್
  • ಮೇಕ್ ಇನ್ ಇಂಡಿಯಾಗೆ ದೊಡ್ಡ ಜಯ

ನವದೆಹಲಿ: ಭಾರತವನ್ನು ಜಗತ್ತೇ ತಿರುಗಿ ನೋಡುವಂತಹ ಮಹತ್ವದ ಸಾದನೆಯನ್ನು ಸಾದಿಸಿ, ಮೇಕ್ ಇನ್ ಇಂಡಿಯಾಗೆ(Make in India) ದೊಡ್ಡ ಜಯವನ್ನು ತಂದಿದೆ.

ಡಿಜಿಟಲ್‌ ವಜ್ರ(Digital diamond) ಎಂದು ಕರೆಯುವ ಚಿಪ್‌ ಅನ್ನು ಭಾರತ ಸಂಪೂರ್ಣವಾಗಿ ದೇಶೀಯವಾಗಿಯೇ ಉತ್ಪಾದಿಸಿದೆ. ಕೇಂದ್ರ ಎಲೆಕ್ಟ್ರಾನಿಕ್ಸ್‌ ಹಾಗೂ ಮಾಹಿತಿ ತಂತ್ರಜ್ಞಾನ

ಸಚಿವ ಅಶ್ವಿನಿ ವೈಷ್ಣವ್‌(Ashwini Vaishnav) ಪ್ರಧಾನಿ ನರೇಂದ್ರ ಮೋದಿ ಅವರಿಗೆ ವಿಕ್ರಮ್‌ 3201 ಮೈಕ್ರೋಪ್ರೊಸೆಸರ್‌(Vikram 3201 microprocessor) ಅನ್ನು ದೆಹಲಿಯಲ್ಲಿ ಆಯೋಜಿಸಿದ್ದ ಸೆಮಿಕಾನ್‌ ಇಂಡಿಯಾ 2025 ರಲ್ಲಿ ಗಿಫ್ಟ್‌ ಆಗಿ ನೀಡುವ ಮೂಲಕ ಈ ಸಾಧನೆಯನ್ನು ಜಗಜ್ಜಾಹೀರು ಮಾಡಿದ್ದಾರೆ.

ಇಲ್ಲಿಯವರೆಗೂ ಕಚ್ಚಾ ತೈಲವನ್ನು ಕಪ್ಪು ಬಂಗಾರ ಎಂದು ಕರೆಯಲಾಗುತ್ತಿತ್ತು, ಆದರೆ ಈಗ ಸಣ್ಣ ಚಿಪ್‌ಗಳು ಡಿಜಿಟಲ್‌ ವಜ್ರಗಳಾಗಿವೆ. ಇವುಗಳನ್ನು ಭಾರತ ಉತ್ಪಾದಿಸಿದೆ ಎಂದು ಹೇಳಿದ್ದಾರೆ.

ಸೆಮಿಕಂಡಕ್ಟರ್‌ ಕ್ಷೇತ್ರದಲ್ಲಿ ಇಂಡಿಯಾದ ರೇಸ್‌ ಆರಂಭವಾಗಿದೆ ಎಂಬ ಸಂದೇಶವನ್ನು ಪ್ರಧಾನಿ ನರೇಂದ್ರ ಮೋದಿ(PM Narendra Modi) ಜಗತ್ತಿಗೆ ಸಾರಿ ಹೇಳಿದ್ದಾರೆ.

ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ಇಸ್ರೋ(ISRO) ಹಾಗೂ ಸೆಮಿಕಂಡಕ್ಟರ್ ಪ್ರಯೋಗಾಲಯ ವಿಕ್ರಮ್‌ 3201 ಸೆಮಿಕಂಡಕ್ಟರ್‌ ಚಿಪ್‌ ಅನ್ನು ಜಂಟಿಯಾಗಿ ಅಭಿವೃದ್ಧಿಪಡಿಸಿವೆ.

Vikram-32 bit microprocessor chip
ವಿಕ್ರಮ್‌ 3201 ಭಾರತದ ಮೊದಲ ಸಂಪೂರ್ಣ ಸ್ವದೇಶಿ 32-ಬಿಟ್‌ ಮೈಕ್ರೋಪ್ರೊಸೆಸರ್‌ ಇದಾಗಿದೆ. ಇದರಿಂದ ಮೇಕ್‌ ಇನ್‌ ಐಂಡಿಯಾ ಗೆ ಹೊಸ ಮೆರಗು ನೀಡಿದೆ.

ಈ ಚಿಪ್‌ ಅನ್ನು ಸಾಮಾನ್ಯ ಕಂಪ್ಯೂಟರ್‌ಗಳಿಗಾಗಿ ಡಿಸೈನ್‌ ಮಾಡಿರುವುದಲ್ಲ ಬದಲಾಗಿ ರಾಕೆಟ್‌ ಉಡಾವಣೆಯಂತಹ(rocket launch) ಬಾಹ್ಯಾಕಾಶದ ಕಠಿಣ ಪರಿಸ್ಥಿತಿಗಳಲ್ಲಿ ಕೆಲಸ ಮಾಡಲು ಸ್ಪೆಷಲ್‌ ಆಗಿ ವಿನ್ಯಾಸ ಮಾಡಲಾಗಿದೆ.

ಉಡಾವಣಾ ವಾಹನಗಳಲ್ಲಿನ ಸಂಕೀರ್ಣ ಗಣಿತ, ನ್ಯಾವಿಗೇಷನ್ ಮತ್ತು ನಿಯಂತ್ರಣ ಕಾರ್ಯಗಳನ್ನು ನಿಖರವಾಗಿ ನಿರ್ವಹಿಸುವುದು ಈ ಮೈಕ್ರೋಪ್ರೊಸೆಸರ್‌ ಉದ್ದೇಶವಾಗಿದೆ.

ಸಂಪೂರ್ಣವಾಗಿ ಸ್ವದೇಶಿ ನಿರ್ಮಿತ ಮೈಕ್ರೋಪ್ರೊಸೆಸರ್‌ ಉತ್ಪಾದನೆಯೊಂದಿಗೆ(Microprocessor production) ಜಗತ್ತಿನ ಕೆಲವೇ ದೇಶಗಳ ಸಾಲಿಗೆ ಭಾರತವೂ ಕೂಡ ಸೇರಿದೆ.

ಈ ಸಾಧನೆಯೊಂದಿಗೆ ಭಾರತವು ನಿರ್ಣಾಯಕ ಬಾಹ್ಯಾಕಾಶ ಟೆಕ್ನಾಲಜಿಗಳಿಗಾಗಿ ವಿದೇಶಿ ಅವಲಂಬನೆಯನ್ನು ಕಡಿಮೆ ಮಾಡಿಕೊಳ್ಳುವತ್ತ ದೊಡ್ಡ ಹೆಜ್ಜೆಯಾಗಿದೆ.

ವಿಕ್ರಮ್-32 ಬಿಟ್ ಪ್ರೊಸೆಸರ್ ಚಿಪ್ 32-ಬಿಟ್ ಆರ್ಕಿಟೆಕ್ಚರ್ ಹೊಂದಿದ್ದು, 100 ಮೆಗಾ ಹರ್ಟ್ಜ್‌ ವೇಗದಲ್ಲಿ ಕಾರ್ಯನಿರ್ವಹಿಸುತ್ತದೆ ಮತ್ತು 152 ಸೂಚನೆಗಳು ಅಥವಾ ಇನ್ಸ್ಟ್ರಕ್ಷನ್ಸ್‌ ಅನ್ನು ಬೆಂಬಲಿಸುತ್ತದೆ.

ಇದು -55 ಡಿಗ್ರಿ ಸೆಲ್ಸಿಯಸ್‌ನಿಂದ, +125 ಡಿಗ್ರಿ ಸೆಲ್ಸಿಯಸ್‌ವರೆಗಿನ ತಾಪಮಾನವನ್ನು ತಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ. 500 ಮೆಗಾವ್ಯಾಟ್‌ಗಿಂತ ಕಡಿಮೆ ಶಕ್ತಿಯನ್ನು ಬಳಸುವ

ವಿಕ್ರಮ್-32 ಬಿಟ್ ಪ್ರೊಸೆಸರ್ ಅನ್ನು ಎಸ್‌ಸಿಎಲ್‌ನ 180ಎನ್‌ಎಂ ಸಿಎಂಒಎಸ್‌ ತಂತ್ರಜ್ಞಾನ ಬಳಸಿ ತಯಾರಿಸಿದ್ದಾರೆ. ಇದು 2009ರಿಂದ ಇಸ್ರೋದ ಉಡಾವಣಾ ವಾಹನಗಳಿಗೆ

ಶಕ್ತಿ ತುಂಬುತ್ತಿರುವ ಹಳೆಯ 16-ಬಿಟ್ ಸಾಮರ್ಥ್ಯದ ವಿಕ್ರಮ್ 1601 ಪ್ರೊಸೆಸರ್‌ನ ಅಪ್‌ಡೇಟೆಡ್‌ ವರ್ಶನ್‌, ಹೊಸ 32-ಬಿಟ್ ಆವೃತ್ತಿಯು 64-ಬಿಟ್ ಫ್ಲೋಟಿಂಗ್-ಪಾಯಿಂಟ್

ಇದನ್ನು ಓದಿ : ಜಿಮೇಲ್ ಮೇಲೆ ಸೈಬರ್ ದಾಳಿ: 2.5 ಬಿಲಿಯನ್ ಬಳಕೆದಾರರಿಗೆ ಪಾಸ್‌ವರ್ಡ್ ಬದಲಾಯಿಸಲು ಗೂಗಲ್ ಸೂಚನೆ

ಕಾರ್ಯಾಚರಣೆಗಳಿಗೂ ಕೂಡ ಸಪೋರ್ಟ್‌ ಮಾಡುತ್ತದೆ. ಇದರಲ್ಲಿ ಉನ್ನತ ಮಟ್ಟದ ಪ್ರೋಗ್ರಾಮಿಂಗ್ ಲ್ಯಾಂಗ್ವೇಜ್‌(Programming language) ಅನ್ನು ಸಪೋರ್ಟ್‌ ಮಾಡಲು ಬೇಕಾದ ಎಲ್ಲಾ ಸಾಫ್ಟ್‌ವೇರ್ ಟೂಲ್‌ಗಳು ಉದಾ: ಕಂಪೈಲರ್‌ಗಳು, ಅಸೆಂಬ್ಲರ್‌ಗಳು ಮತ್ತು ಸಿಮ್ಯುಲೇಟರ್‌ಗಳನ್ನು ಇಸ್ರೋ ನಿರ್ಮಿಸಿದೆ.

Tags: Ashwini vaishnavIsroMake in IndiaPM Narendra ModiSemiconductorVikram 3201 microprocessor

Related News

ಒಂದೊಂದು ರಾಜ್ಯದಲ್ಲಿ ಒಂದೊಂದು ನಕಲಿ ಔಷಧದ ಸ್ಟಾಕ್: ನಕಲಿ ಔಷಧ ಜಾಲದ ಬೇರು ಹುಡುಕುತ್ತಿರುವ ಎಸ್‌ಐಟಿ
ಪ್ರಮುಖ ಸುದ್ದಿ

ಒಂದೊಂದು ರಾಜ್ಯದಲ್ಲಿ ಒಂದೊಂದು ನಕಲಿ ಔಷಧದ ಸ್ಟಾಕ್: ನಕಲಿ ಔಷಧ ಜಾಲದ ಬೇರು ಹುಡುಕುತ್ತಿರುವ ಎಸ್‌ಐಟಿ

September 11, 2026
ಉಚಿತ ವಿದ್ಯುತ್ ಯೋಜನೆಯ ನಡುವೆಯೂ ಬೆಸ್ಕಾಂಗೆ ₹293.62 ಕೋಟಿ ಲಾಭ: ಏಳು ವರ್ಷಗಳ ಬಳಿಕ ಬದಲಾದ ಆರ್ಥಿಕ ಚಿತ್ರಣ
ಪ್ರಮುಖ ಸುದ್ದಿ

ಉಚಿತ ವಿದ್ಯುತ್ ಯೋಜನೆಯ ನಡುವೆಯೂ ಬೆಸ್ಕಾಂಗೆ ₹293.62 ಕೋಟಿ ಲಾಭ: ಏಳು ವರ್ಷಗಳ ಬಳಿಕ ಬದಲಾದ ಆರ್ಥಿಕ ಚಿತ್ರಣ

September 11, 2026
BRICS ಶೃಂಗಸಭೆ: ದೆಹಲಿಗೆ ಪುಟಿನ್ ಆಗಮನ; ಮೋದಿ ಜೊತೆ ಮಹತ್ವದ ದ್ವಿಪಕ್ಷೀಯ ಮಾತುಕತೆ
ದೇಶ-ವಿದೇಶ

BRICS ಶೃಂಗಸಭೆ: ದೆಹಲಿಗೆ ಪುಟಿನ್ ಆಗಮನ; ಮೋದಿ ಜೊತೆ ಮಹತ್ವದ ದ್ವಿಪಕ್ಷೀಯ ಮಾತುಕತೆ

September 11, 2026
ರಾಜ್ಯಕ್ಕೆ ‘ಸೂಪರ್ ಎಲ್ ನಿನೋ’ ಬಿಸಿ: ಮಳೆ-ಬಿಸಿಲಿನ ವೈಪರೀತ್ಯದಿಂದಾಗಿ ಆರೋಗ್ಯ ಇಲಾಖೆಯಿಂದ ಹೈ ಅಲರ್ಟ್
ಪ್ರಮುಖ ಸುದ್ದಿ

ರಾಜ್ಯಕ್ಕೆ ‘ಸೂಪರ್ ಎಲ್ ನಿನೋ’ ಬಿಸಿ: ಮಳೆ-ಬಿಸಿಲಿನ ವೈಪರೀತ್ಯದಿಂದಾಗಿ ಆರೋಗ್ಯ ಇಲಾಖೆಯಿಂದ ಹೈ ಅಲರ್ಟ್

September 10, 2026

ವಿಜಯ ಟೈಮ್ಸ್‌ - ಬದಲಾವಣೆಯ ಹಾದಿ

Vijaya Times logo

ವಿಜಯ ಟೈಮ್ಸ್‌

  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ
  • ಪ್ರಮುಖ ಸುದ್ದಿ
  • ರಾಜಕೀಯ
  • ದೇಶ-ವಿದೇಶ
  • ಮನರಂಜನೆ

Quick Links

  • About Us
  • Contact Us
  • For Advertisement
  • Privacy policy
  • About Us
  • Contact Us
  • For Advertisement
  • Privacy policy

Follow Us

Facebook Twitter Instagram Youtube

Download Vijaya Times App

Android
© 2022 Vijaya Times. All rights reserved.
No Result
View All Result
  • ಹೋಮ್
  • ವಿಜಯ ಟೈಮ್ಸ್‌
    • ಪ್ರಮುಖ ಸುದ್ದಿ
    • ರಾಜ್ಯ
    • ದೇಶ-ವಿದೇಶ
    • ರಾಜಕೀಯ
  • ಕವರ್‌ ಸ್ಟೋರಿ
  • ಲೈಫ್ ಸ್ಟೈಲ್
  • ಆರೋಗ್ಯ
  • ಕ್ರೀಡೆ
  • ಮನರಂಜನೆ
    • ವೈರಲ್ ಸುದ್ದಿ

© 2022 Vijaya Times. All Rights Reserved.