Visit Channel

ಜುಲೈ 28 ರಂದು ತೆರೆಗೆ ಅಪ್ಪಳಿಸಲಿದೆ ವಿಕ್ರಾಂತ್ ರೋಣ

Vikrant Rona

ಕನ್ನಡ ಚಿತ್ರರಂಗದಲ್ಲಿ(Kannada Film Industry) ಸ್ಟಾರ್‌ ಸಿನಿಮಾಗಳ ಅಬ್ಬರ ಜೋರಾಗಿದೆ. ಈಗಾಗಲೇ ಬಿಡುಗಡೆಯಾಗಿರುವ ‘ಕೆಜಿಎಫ್-2′(KGF 2) ಭಾರತೀಯ ಚಿತ್ರರಂಗದಲ್ಲಿ ದಾಖಲೆ ಬರೆದು ಮುನ್ನುಗ್ಗುತ್ತಿರುವ ಬೆನ್ನಲ್ಲೇ, ಈಗ ಅಭಿನಯ ಚಕ್ರವರ್ತಿ, ನಟ ಕಿಚ್ಚ ಸುದೀಪ್‌(Kiccha Sudeep) ನಟನೆಯ ‘ವಿಕ್ರಾಂತ್‌ ರೋಣ’(Vikranth Rona) ಸಿನಿಮಾ ಪ್ಯಾನ್ ಇಂಡಿಯಾ(Pan India) ಮಟ್ಟದಲ್ಲಿ ತೆರೆಗೆ ಬರುತ್ತಿದೆ. ವಿಕ್ರಾಂತ್ ರೋಣನನ್ನು ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

Kannada

ಈಗಾಗಲೇ ಚಿತ್ರತಂಡ ಕೂಡ ಬಿಡುಗಡೆ ದಿನಾಂಕವನ್ನು ಘೋಷಿಸಿದೆ. ಇದೇ ಜುಲೈ 28ಕ್ಕೆ ವಿಕ್ರಾಂತ್ ರೋಣ ತೆರೆಗೆ ಅಪ್ಪಳಿಸಲಿದ್ದು, ಕಿಚ್ಚನನ್ನು ತೆರೆಯ ಮೇಲೆ ನೋಡಲು ಅಭಿಮಾನಿಗಳು ತುದಿಗಾಲಿನಲ್ಲಿ ನಿಂತಿದ್ದಾರೆ. ಈಗಾಗಲೇ ಚಿತ್ರ ತನ್ನ ಬಿಝಿನೆಸ್‌ನಿಂದ ಸುದ್ದಿ ಮಾಡಿದ್ದು, ವಿಕ್ರಾಂತ್‌ ರೋಣ ಚಿತ್ರದ ಓವರ್‌ ಸೀಸ್‌ (ವಿದೇಶಿ)ರೈಟ್ಸ್‌(Overseas Rites) ದಾಖಲೆಯ ಮೊತ್ತಕ್ಕೆ ಮಾರಾಟವಾಗಿದೆ. ಮೂಲಗಳ ಪ್ರಕಾರ, 10 ಕೋಟಿ ರೂಪಾಯಿಗೆ ಮಾರಾಟವಾಗಿದ್ದು, “ಒನ್‌ ಟ್ವೆಂಟಿ 8 ಮೀಡಿಯಾ” ಇದನ್ನು ಪಡೆದುಕೊಂಡಿದೆ.


ಬಿಡುಗಡೆಗೂ ಮುನ್ನವೇ ಇಷ್ಟೆಲ್ಲಾ ಕುತೂಹಲ ಹುಟ್ಟಿಸಿರುವ ವಿಕ್ರಾಂತ್ ರೋಣ ಸಿನಿಮಾದ ಕಥೆಯ ಎಳೆ ಹೀಗಿದೆ. ಒಂದು ವಿಚಿತ್ರ ಊರು. ಆ ವಿಚಿತ್ರ ಊರಿಗೊಂದು ಭಯಾನಕ ಕಥೆಯ ಹಿನ್ನೆಲೆ. ಭಯ ತುಂಬಿರುವ ಊರಿಗೆ ಭಯ ಎಂದರೆ ಏನು ಅಂತ ಗೊತ್ತಿಲ್ಲದ ವ್ಯಕ್ತಿ ಕಾಲಿಡುತ್ತಾನೆ. ಅವನು ಬಂದ ಮೇಲೆ ಹೊಸ ಅಧ್ಯಾಯ ಶುರುವಾಗುತ್ತದೆ. ಆ ಅಧ್ಯಾಯವೇ ‘ವಿಕ್ರಾಂತ್ ರೋಣ’ ಚಿತ್ರದ ಕಥಾಹಂದರ. ಇನ್ನು, ಚಿತ್ರದ ಎರಡು ಹಾಡುಗಳು ಈಗಾಗಲೇ ಸಿಕ್ಕಾಪಟ್ಟೆ ಸದ್ದು ಮಾಡುತ್ತಿವೆ.

Actor

ಬಾಲಿವುಡ್ ನಟಿ ಜಾಕ್ವೆಲಿನ್ ಫರ್ನಾಂಡಿಸ್(Jaqueline Fernadis) ಮತ್ತು ಕಿಚ್ಚ ಹೆಜ್ಜೆ ಹಾಕಿರುವ ರಾ…ರಾ…ರಕ್ಕಮ್ಮ(Ra Ra Rakamma) ಹಾಡು ಈಗಾಗಲೇ ಭಾರಿ ವೈರಲ್ ಆಗಿದ್ದು, ಪ್ರತಿಯೊಬ್ಬರ ಬಾಯಲ್ಲಿಯೂ ನಲಿದಾಡುತ್ತಿದೆ. ಮೊದಲ ಹಾಡು ರಿಲೀಸ್ ಆಗಿ ವೈರಲ್(Viral) ಆದ ಬೆನ್ನಲ್ಲೇ, ಮತ್ತೊಂದು ಮೆಲೋಡಿ ಹಾಡು ಕೂಡ ರಿಲೀಸ್ ಆಗಿದೆ. ತಂದೆ ತನ್ನ ಮುದ್ದು ಮಗಳನ್ನು ಸಮಾಧಾನ ಮಾಡುವ ಹಾಡು ಇದಾಗಿದ್ದು, ತಂದೆ ಮಗಳಿಗಾಗಿ ಹಾಡುವ ಈ ಹಾಡು ಹೃದಯಸ್ಪರ್ಶಿಯಾಗಿದೆ.
ಅನೂಪ್‌ ಭಂಡಾರಿ ನಿರ್ದೇಶನದಲ್ಲಿ ಮೂಡಿಬರುತ್ತಿರುವ,

ಕಿಚ್ಚ ಸುದೀಪ್‌ ನಟನೆಯ ‘ವಿಕ್ರಾಂತ್‌ ರೋಣ’ 3D ಸಿನಿಮಾವಾಗಿದ್ದು, ಚಿತ್ರದಲ್ಲಿ ಜಾಕ್ವೆಲಿನ್‌ ಫ‌ರ್ನಾಂಡೀಸ್‌, ನಿರೂಪ್‌ ಭಂಡಾರಿ ಮತ್ತು ನೀತಾ ಅಶೋಕ್‌ ಮುಖ್ಯ ಪಾತ್ರದಲ್ಲಿ ನಟಿಸಿದ್ದಾರೆ. ಚಿತ್ರಕ್ಕೆ ಅಜನೀಶ್ ಲೋಕನಾಥ್ ಸಂಗೀತ ನೀಡಿದ್ದಾರೆ.

  • ಪವಿತ್ರ

Latest News

Assam
ದೇಶ-ವಿದೇಶ

500 ರೂ. ಬೆಟ್ಟಿಂಗ್ ಸೋಲಿಗೆ ಸ್ನೇಹಿತನ ಶಿರಚ್ಛೇದ ; 25 ಕಿ.ಮೀ ದೂರದ ಪೊಲೀಸ್ ಠಾಣೆಗೆ ಹೋಗಿ ಶರಣು!

ಆತನ ತಲೆಯನ್ನು ಹಿಡಿದುಕೊಂಡು ರಾತ್ರಿಯ ವೇಳೆ 25 ಕಿ.ಮೀ ದೂರವಿರುವ ಪೊಲೀಸ್ ಠಾಣೆಗೆ(Police Station) ನಡೆದು ಶರಣಾಗಿದ್ದಾನೆ ಎಂದು ಪೊಲೀಸ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

atm
ಮಾಹಿತಿ

ATM ಬಳಕೆದಾರರು ಓದಲೇಬೇಕಾದ ಸುದ್ದಿ ; RBI ನಿಯಮಗಳ ಬಗ್ಗೆ ಸರಳವಾಗಿ ತಿಳಿಯಿರಿ

ಇನ್ನು ನಿಮ್ಮ ಬ್ಯಾಂಕ್ ಹೊರತುಪಡಿಸಿ, ಬೇರೆ ಬ್ಯಾಂಕ್ ನ ಎಟಿಎಂಗಳಲ್ಲಿ ಮೆಟ್ರೋ ಸಿಟಿಗಳಲ್ಲಿ ಮೂರು ಬಾರಿ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಐದು ಬಾರಿ ಉಚಿತ ಟ್ರಾನ್ಸಾಕ್ಷನ್ ಮಾಡಬಹುದು.

BJP
ರಾಜಕೀಯ

ಮುಸ್ಲಿಂ ಏರಿಯಾದಲ್ಲಿ ಸಾವರ್ಕರ್ ಫೋಟೋ ಹಾಕಬಾರದಿತ್ತು ಎನ್ನಲು ಸಿದ್ದರಾಮಯ್ಯ ಯಾರು? : ಬಿಜೆಪಿ

ಮತ್ತೊಮ್ಮೆ ದೇಶ ವಿಭಜಿಸುವ ಕಾಂಗ್ರೆಸ್ ಪಕ್ಷದ(Congress Party) ಹಿಡನ್ ಅಜೆಂಡಾ ಸಿದ್ದರಾಮಯ್ಯ ಬಾಯಿಂದ ಬಹಿರಂಗವಾಗಿದೆ ಎಂದಿದೆ.

Fruit
ಮಾಹಿತಿ

ಬಿಪಿ, ಮದುಮೇಹ ಸೇರಿದಂತೆ ಅನೇಕ ಖಾಯಿಲೆಗಳಿಗೆ ರಾಮಬಾಣ ನೇರಳೆ ಹಣ್ಣು ; ಓದಿ ಈ ಉಪಯುಕ್ತ ಮಾಹಿತಿ

ಮಧುಮೇಹ, ಹೃದಯದ ಕಾಯಿಲೆ, ಸಂಧಿವಾತ, ಹೊಟ್ಟೆಯ ಖಾಯಿಲೆಗಳ ನಿಯಂತ್ರಣ ಮತ್ತು ನಿವಾರಣೆಗೂ ಇದು ರಾಮಬಾಣ ಎನ್ನುತ್ತದೆ ಆಯುರ್ವೇದ(Ayurveda).