Paris: ಭಾರತದ ಕನಸು ಭಗ್ನವಾಗಿದ್ದು, ಭಾರತಕ್ಕೆ ಒಲಿಂಪಿಕ್ಸ್ ಕ್ರೀಡಾಕೂಟದ ಕುಸ್ತಿ ವಿಭಾಗದಲ್ಲಿ ಚಿನ್ನದ ಪದಕ ಸಿಗಲಿದೆ ಎಂಬ ಕನಸು ಕನಸಾಗಿಯೇ ಉಳಿದಿದೆ. ಚಿನ್ನದ ಪದಕ ಬಿಡಿ ಈಗ ಯಾವುದೇ ಪದಕವನ್ನು ಕೂಡ ಗೆಲ್ಲದೆ ವಿನೇಶ್ ಫೋಗಟ್ #VineshPhogat ಅನರ್ಹರಾಗಿ ಹೊರ ಬಿದ್ದಿದ್ದಾರೆ. ಅದೂ ಕೇವಲ 100 ಗ್ರಾಂ ತೂಕದಿಂದ. ಆದರೆ ಈ ಬಗ್ಗೆ ಮೊದಲೇ ಸುಳಿವು ದೊರೆತಂತಿತ್ತು. ಏಕೆಂದರೆ ತನಗೆ ಕೊಡುವ ಆಹಾರದಲ್ಲಿ ಏನಾದರು ಮಿಕ್ಸ್ ಮಾಡಿ ಕೊಡಬಹುದು ಎಂದು ಅನುಮಾನವನ್ನು ವ್ಯಕ್ತಪಡಿಸಿದ್ದರು.
ಇದು ಈಗಲ್ಲ ನಾಲ್ಕು ತಿಂಗಳ ಹಿಂದೆ ವಿನೇಶ್ ಫೊಗಾಟ್ ಹೇಳಿಕೊಂಡಿದ್ದು. ಆವಾಗ ಆಕೆ ಒಲಿಂಪಿಕ್ಸ್ ನಲ್ಲಿ ಆಡಲು ಅರ್ಹತೆ ಪಡೆಯುವ ಪ್ರಯತ್ನದಲ್ಲಿದ್ದಳು. ಆವಾಗಲೇ ಆಕೆಗೆ ಭಯವಿತ್ತು ತನ್ನನ್ನು ಹೇಗಾದರೂ ಮಾಡಿ ಮುಗಿಸಲು ಷಡ್ಯಂತ್ರ ನಡೆದಿದೆ ಎಂದು. ಕುಸ್ತಿ ಫೆಡರೇಶನ ಹೊಸ ಅಧ್ಯಕ್ಷ ಬ್ರಿಜ್ ಭೂಷಣ್‍ನ ಖಾಸಾ (Brij Bhushan Khasa) ಹಾಗೂ ಅವರು ನೇಮಿಸಿರುವ ಕೋಚ್‍ಗಳೂ ಅವರಿಗೆ ಬೇಕಾದವರೇ.
vinesh phogat announced retirement news
ಹಾಗಾಗಿ ತನ್ನನ್ನು ಒಲಿಂಪಿಕ್ಸ್ ಗೆ (Paris Olympics 2024) ಹೋಗದಂತೆ ತಡೆಯಲು ಅವರು ಯಾವ ವಾಮಮಾರ್ಗವನ್ನೂ ತುಳಿಯಬಲ್ಲರು ಎಂದು ಆಕೆ ಸಾರ್ವಜನಿಕವಾಗಿಯೇ ಅವಲತ್ತುಕೊಂಡಿದ್ದಳು. ಈ ಕುರಿತಾಗಿ ಅನೇಕ ಕಡೆ ವರದಿ ಕೂಡ ಪ್ರಸಾರವಾಗಿತ್ತು. ಆದರೆ ಅವತ್ತು ಅದಾಗಲಿಲ್ಲ. ಬಹುಶ ಆಕೆ ಕೆಲ ತಿಂಗಳ ಹಿಂದೆಯಷ್ಟೆ ಮಂಡಿಗೆ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡಿರುವ ಆಕೆ ಒಲಿಂಪಿಕ್ಸ್ ನಲ್ಲಿ ಏನೂ ಸಾಧಿಸಲಿಕ್ಕಿಲ್ಲ ಎಂದು ಉಡಾಫೆ ಮಾಡಿದ್ದರು.
ಇನ್ನು ಮೊನ್ನೆ ಒಲಿಂಪಿಕ್ಸ್ ನ ಡ್ರಾ ಬಂದಾಗ ಆಕೆಯ ಪ್ರಥಮ ಸುತ್ತಿನ ಎದುರಾಳಿ ಜಪಾನಿನ ಅದ್ವಿತೀಯ, ಅಜೇಯ ಯೂಯಿ ಸುಸಾಕಿ (Yui Susaki). ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಸೋಲೆಂದರೆ ಏನೆಂದೇ ತಿಳಿಯದವಳು. ಒಲಿಂಪಿಕ್ ಚಾಂಪಿಯನ್, ವಿಶ್ವ ಚಾಂಪಿಯನ್. ಅವಳೆದುರು ವಿನೇಶ್‍ಗೆ ಯಾವ ಚಾನ್ಸೇ ಇಲ್ಲವೆಂದು ಅಂದು ಕೊಂಡಿದ್ದರು.
ಆದರೆ ವಿನೇಶ್ ಅಸಾಧ್ಯ, ನಂಬಲಾಗದ್ದನ್ನು ಸಾಧಿಸಿದಳು. ಸುಸಾಕಿಯನ್ನು ಕೆಡವಿದಳು, ಲ್ಯಾವೀಚ್ (Lavitch) ಅವಳನ್ನೂ ಮಣಿಸಿದಳು. ಕೊನೆಗೆ ಗುಜ್ಮಾನ್ ಲೋಪೇಜ್‍ಳನ್ನೂ ಸೋಲಿಸಿ ಫೈನಲ್‍ಗೆ ಎಂಟ್ರಿ ಕೊಟ್ಟಳು. ಆಕೆಯ ಈ ಅದ್ವಿತೀಯ ಸಾಧನೆ ಯಾರೂ ಊಹಿಸಿರಲಿಲ್ಲ. ಎಲ್ಲಾ ಸರಿಯಿದ್ದರೆ ಆಕೆ ಚಿನ್ನದ ಪದಕವನ್ನು ಗೆದ್ದು ತರುತ್ತಿದ್ದಳು.
ಆದರೆ ಆಕೆ ಚಿನ್ನದ ಪದಕ ಬಿಡಿ, ಬೆಳ್ಳಿಯ ಪದಕ ತಂದಿದ್ದರೂ, ಆಕೆಯನ್ನು ತುಚ್ಚವಾಗಿ ನಡೆಸಿಕೊಂಡ, ಆಕೆಯನ್ನು ಬೀದಿಯಲ್ಲಿ ಎಳೆದಾಡಿದ, ಆಕೆಯನ್ನು ನಿಂದಿಸಿದ, ಆಕೆಯ ಸಾಧನೆಗಳನ್ನು ಅಲ್ಲಗಳೆದವರ ಮಾನ ಹರಾಜಾಗುತಿತ್ತು ಮಾತ್ರವಲ್ಲ ಇಷ್ಟೆಲ್ಲಾ ಆಗುತ್ತಿದ್ದರೂ ಮೌನ ವಹಿಸಿದ ದೊಡ್ದ ದೊಡ್ದ ಜನರ ಮಾನವೂ ಹರಾಜಾಗುತಿತ್ತು. ಹಾಗಾಗಿ ಆಕೆಯನ್ನು ಕೆಡವಲು, ಆಕೆ ಪದಕ ವಂಚಿತಳಾಗುವಂತೆ ನೋಡಿಕೊಳ್ಳಲು ಷಡ್ಯಂತ್ರ ರೂಪಿತವಾಯಿತು.
ಹನ್ನೆರಡು ಗಂಟೆಗಳಲ್ಲಿ ವಿನೇಶ್‍ಗೆ ಎರಡೂವರೆ ಕೆಜಿ ದೇಹತೂಕ ಇಳಿಸಲಾಗಲಿಲ್ಲವೆನ್ನುವುದು, ಅದರಲ್ಲೂ 2 ಕೆಜಿ ಇಳಿಸಿ, ಕೇವಲ ನೂರು ಗ್ರಾಮ್ ಉಳಿಸಿಕೊಂಡಳು ಎನ್ನುವುದು ಅದಕ್ಕೆಂದೇ ತಂತ್ರಜ್ಣಾನ, ತಾಂತ್ರಿಕರು, ಪರಿಣಿತರು, ವೈದರಿದ್ದೂ ಸಹ ಸಾಧ್ಯವಾಗಲಿಲ್ಲ ಎನ್ನುವುದು ಹಾಸ್ಯಾಸ್ಪದ ಅನ್ನಿಸದಿರದು.ದೊಡ್ಡವರ ಸಣ್ಣತನ ವಿನೇಶ್ (Vinesh Phogat Disqualification) ಎನ್ನುವ ಅಧ್ಬುತ ಕುಸ್ತಿ ಪಟುವಿನ ಭವಿಷ್ಯ ಬಲಿಯಾಯಿತಾ ಎಂಬ ಪ್ರಶ್ನೆ ಮೂಡುತ್ತದೆ. ಅದೇನೆ ಇರಲಿ ವಿನೇಶ್ ಪದಕ ಗೆಲ್ಲದಿರಬಹುದು ಆದರೆ ಕೋಟ್ಯಾಂತರ ಜನರ ಹೃದಯಗಳನ್ನು ಗೆದ್ದಿದ್ದಾಳೆ.