Paris Olympics 2024: Vinesh Phogat Disqualified From Paris Olympics
ಪ್ಯಾರೀಸ್ ಒಲಂಪಿಕ್ಸ್ನಲ್ಲಿ (Paris Olympic) ಸೋತು ಗೆದ್ದ ಕುಸ್ತಿಪಟು ವಿನೇಶ್ ಫೋಗಟ್ನನ್ನ ಕೇವಲ 100ಗ್ರಾಂ ತೂಕ ಇವರ ವರ್ಷದ ಶ್ರಮ, ಹರಿಸಿದ ಬೆವರು, ನಡೆಸಿದ ಕಸರತ್ತು ಎಲ್ಲವನ್ನೂ ನುಂಗಿ ಹಾಕಿದೆ.
ಒಲಿಂಪಿಕ್ಸ್ನ ಕುಸ್ತಿ ಅಖಾಡದಲ್ಲಿ ಚಿನ್ನ ಗೆದ್ದು ಬರುತ್ತಾಳೆಂದು ಕಾದು ಕುಳಿತ್ತಿದ್ದ ಲಕ್ಷಾಂತರ ಭಾರತೀಯರಿಗೆ ಆಘಾತ ಮೂಡಿಸಿದೆ. ಬಂಗಾರದ ಬೇಟೆಗೆ ಕಾದು ಕುಳಿತಿದ್ದ ವಿನೇಶಾ ಫೋಗಟ್ (Vinesh Phogat), ಒಲಿಂಪಿಕ್ಸ್ನಲ್ಲಿ ಅನರ್ಹಗೊಂಡು, ಗಾಯಗೊಂಡ ಹೆಣ್ಣು ಹುಲಿಯಂತಾಗಿದ್ದಾಳೆ. ನಿಗದಿತ ತೂಕಕ್ಕಿಂತ ಕೇವಲ 100 ಗ್ರಾಂ ಹೆಚ್ಚು ತೂಕವಿದ್ದ ವಿನೇಶಾಳನ್ನು ಒಲಿಂಪಿಕ್ಸ್ನಿಂದ ಹೊರದಬ್ಬಿದ್ದಾರೆ.
ಒಲಿಂಪಿಕ್ಸ್ ಅನರ್ಹಗೊಳಿಸಿದ್ದಕ್ಕೆ ಭಾರತ ಆಕ್ರೋಶ ಹೊರಹಾಕಿದ್ದು, ತೀರ್ಪುಗಾರರ ವಿರುದ್ಧವೂ ಪ್ರತಿಭಟಿಸಿದೆ. ರಾತ್ರಿ 11.30ಕ್ಕೆ ನಡೆಯಬೇಕಿದ್ದ ಫೈನಲ್ ಪಂದ್ಯಕ್ಕೆ ಸಿದ್ಧವಾಗುತ್ತಿದ್ದ ವಿನೇಶಾ, ತೀರ್ಪುಗಾರರ ಅನರ್ಹ ಆದೇಶದಿಂದ ಕುಸಿದು ಹೋಗಿದ್ದಾಳೆ.
ವಿನೇಶಾ, 50 ಕೆಜಿ ವಿಭಾಗದಲ್ಲಿ ಸ್ಪರ್ಧಿಸಿ ಫೈನಲ್ (Final) ಪ್ರವೇಶಿಸಿದ್ದು, ಚಿನ್ನ ಗೆಲ್ಲುವ ವಿಶ್ವಾಸದಲ್ಲಿ ಬೀಗುತ್ತಿದ್ದಳು. ಭಾರತೀಯರು ಆಕೆ ಬಂಗಾರ ತೊಟ್ಟು ಬರುವುದನ್ನೇ ಕಾತುರದಿಂದ ನೋಡುತ್ತಿದ್ದರು. ಆದರೆ, ನಿನ್ನೆ ಒಂದೇ ದಿನ 3 ಕುಸ್ತಿ ಪಂದ್ಯದಲ್ಲಿ ಗೆಲುವು ಸಾಧಿಸಿದ್ದ ವಿನೇಶಾಳನ್ನು ಅನರ್ಹಗೊಳಿಸುವ ಮೂಲಕ ಭಾರತೀಯರ ಕನಸು ನುಚ್ಚು ಮಾಡಿದ್ದಾರೆ ತೀರ್ಪುಗಾರರು.
2023ರಲ್ಲಿ ರಾಷ್ಟ್ರೀಯ ಕುಸ್ತಿ ಒಕ್ಕೂಟದ ಮಾಜಿ ಮುಖ್ಯಸ್ಥ ಬ್ರಿಜ್ ಭೂಷಣ್ (Brij Bhushan) ವಿರುದ್ಧದ ಹೋರಾಟ. ಅಧ್ಯಕ್ಷನ ಕಿರುಕುಳ ಖಂಡಿಸಿ, ಆತನನ್ನು ಅಧ್ಯಕ್ಷ ಸ್ಥಾನದಿಂದ ವಜಾಗೊಳಿಸುವಂತೆ ಬಿಗಿಪಟ್ಟು ಹಿಡಿದ ವಿನಿಶಾ, ದಿಲ್ಲಿಯ ಬೀದಿಗಳಲ್ಲಿ 40 ದಿನಗಳ ಕಾಲ ಪ್ರತಿಭಟನೆ ನಡೆಸಿದಳು.
ಹರಿಯಾಣದ 29 ವರ್ಷದ ಕುಸ್ತಿಪಟು ವಿನೇಶ್ ಫೋಗಟ್ ಪ್ಯಾರಿಸ್ ಅಂಗಳಕ್ಕೆ ಬರುವವರೆಗೂ ಅನುಭವಿಸಿದ ಅವಮಾನ, ನೋವು ಅಷ್ಟಿಷ್ಟಲ್ಲ. ಅದಕ್ಕೆ ಕಾರಣ
ಸೋಷಿಯಲ್ ಮೀಡಿಯಾದಲ್ಲಿ (Social Media) ಆಕೆಯ ವಿರುದ್ಧ ದೊಡ್ಡ ಅಭಿಯಾನವೇ ನಡೆಯಿತು. ಆಕೆಯ ಸಾಧನೆಯನ್ನು ಕಾಲ ಕೆಳಗೆ ಹೊಸಕಿ ಹಾಕಿದರು. ಆಕೆಯನ್ನೇ ಅಪರಾಧಿ ಸ್ಥಾನದಲ್ಲಿ ನಿಲ್ಲಿಸಿದರು. ಇದಾವುದಕ್ಕೂ ಒಮ್ಮೆಯೂ ಹೆದರದ ದಿಟ್ಟೆ ವಿನೇಶಾ, ಆ ಹೋರಾಟದಲ್ಲೂ ಯಶಸ್ವಿಯಾದಳು. ಇದು ಮುಗಿಯುತ್ತಿದ್ದಂತೆ, ಮೊಣಕಾಲು ಶಸ್ತ್ರಚಿಕಿತ್ಸೆಗೆ ಒಳಗಾದರು.
ಇದೀಗ ಒಲಂಪಿಕ್ಸ್ನಲ್ಲಿ ಚಿನ್ನದ ಬೇಟೆಗೆ ಇನ್ನೊಂದೇ ಮೆಟ್ಟಿಲು ಅನ್ನುವಾಗಲೇ ವಿನೇಶಾಗೆ ದೊಡ್ಡ ಆಘಾತ ಕೊಟ್ಟಿದ್ದು ಆಕೆಯ ದೇಹದ ತೂಕ. ಫೈನಲ್ ಹಂತದಲ್ಲಿ ಆಕೆಯ ದೇಹ ತೂಕ ನಿಗದಿಗಿಂತ ಕೇವಲ 100 ಗ್ರಾಂ ಹೆಚ್ಚಿತ್ತು. ಅಷ್ಟೇ ಸಾಕಿತ್ತು ತೀರ್ಪುಗಾರರಿಗೆ. ಕುಸ್ತಿ ಅಖಾಡಕ್ಕೆ ಎಂಟ್ರಿ ಕೊಡುವಷ್ಟರಲ್ಲೇ ಅದೃಷ್ಟ ಕೈಕೊಟ್ಟಿತು. ತೀರ್ಪುಗಾರರು ಅನರ್ಹಳೆಂದು ಘೋಷಿಸಿ, ವಿನೇಶಾಳ ಕನಸು ಛಿದ್ರಗೊಳಿಸಿದರು.
ಕೊರಳಲ್ಲಿ ಪದಕ ಹೊತ್ತು ಬಂದರೆ ವಿನಿತಾಳನ್ನು ಹೆಗಲ ಮೇಲೆ ಹೊತ್ತು ಮೆರೆಸಲು ಸಜ್ಜಾಗಿದ್ದ ದೇಶದ ಕೋಟ್ಯಂತರ ಅಭಿಮಾನಿಗಳು, ಅನರ್ಹತೆ ಸುದ್ದಿ ಕೇಳುತ್ತಿದ್ದಂತೆ, ಶಾಕ್ಗೊಳಗಾಗಿದ್ದಾರೆ. ಅನರ್ಹತೆ ತೀರ್ಪು ಬಗ್ಗೆ ಹತ್ತಾರು ಅನುಮಾನದ ಮಾತುಗಳು ಕೇಳಿಬರುತ್ತಿವೆ. ಅದೇನೇ ಆಗಲಿ, ಹೋರಾಟವನ್ನೇ ಬದುಕಾಗಿಸಿಕೊಂಡೇ, ಸೆಣಸಾಡುತ್ತಲೇ ಬಂದ ವಿನೀಶಾಗೆ, ಮತ್ತೆ ಕುಸ್ತಿಯಲ್ಲಿ ಹೋರಾಡಿ ಗೆಲ್ಲುವುದು ಕಷ್ಟವೇನಲ್ಲ ಬಿಡಿ.