Paris Olympic 2024: ಭಾರತೀಯರಿಗೆ ಇದು ಬೇಸರ ತರಿಸುವ ಸಂಗತಿಯಾಗಿದ್ದು, ಮಹಿಳೆಯರ 50 ಕೆ.ಜಿ ಕುಸ್ತಿ ವಿಭಾಗದಲ್ಲಿ ಫೈನಲ್ ಪ್ರವೇಶಿಸಿದ
ವಿನೇಶ್ ಫೋಗಾಟ್ರನ್ನು (Vinesh Phogat) ಪ್ಯಾರಿಸ್ ಒಲಿಂಪಿಕ್ಸ್ ಅನರ್ಹಗೊಳಿಸಿದೆ. ಇಂದು ಫೈನಲ್ ಪಂದ್ಯ ನಡೆಯೂವುದಕ್ಕೂ ಮುನ್ನವೇ
ಭಾರತೀಯರಿಗೆ ಈ ವಿಚಾರ ಅಚ್ಚರಿ ಜೊತೆಗೆ ಆಘಾತ ಮೂಡಿಸಿದೆ.

ನಿನ್ನೆ ವಿನೇಶ್ ಫೋಗಾಟ್ ಅವರು ಪ್ರೀಕ್ವಾರ್ಟರ್ ಫೈನಲ್ (Prequarter Final) ಹಣಾಹಣಿಯಲ್ಲಿ ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನ ಗೆದ್ದಿದ್ದ
ಯೂಯ್ ಸುಸಾಕಿಗೆ ಮಣ್ಣು ಮುಕ್ಕಿಸಿದ್ದರು. ನಾಲ್ಕು ಬಾರಿ ವಿಶ್ವ ಚಾಂಪಿಯನ್ ಆಗಿದ್ದ ಯೂಯ್ ಸುಸಾಕಿ (Yui Susaki) ಯನ್ನು ಸೋಲಿಸಿದ್ದರು.
ಕ್ವಾರ್ಟರ್ ಫೈನಲ್‌ನಲ್ಲಿ ಉಕ್ರೇನ್ ಒಕ್ಸಾನಾ ಲಿವಾಚ್ ಎದುರಿಸಿದ ವಿನೇಶ್ ಫೋಗಾಟ್ ಪರಾಕ್ರಮ ಮೆರೆದಿದ್ದರು. ಬಳಿಕ ಕ್ಯೂಬಾದ ಯುಸ್ನೆಲಿಸ್
ಗುಜ್ಮನ್ ವಿರುದ್ಧ ಪ್ರದರ್ಶನ ತೋರಿ 5-0 ಅಂತರದಲ್ಲಿ ಗೆದ್ದು ಫೈನಲ್‌ಗೆ (Final) ಲಗ್ಗೆ ಹಾಕಿದರು.

ಆದರೆ ಇಂದು ಪ್ರೀಸ್ಟೈಲ್ ಫೈನಲ್‌ನಲ್ಲಿ ಅಮೆರಿಕಾದ ಸಾರಾ ಹಿಲ್ಡೆಬ್ರಾಂಡ್ರನ್ನ ಪೋಗಟ್ ಅವರು ಎದುರಿಸಬೇಕಿತ್ತು. ಅದಕ್ಕೂ ಮುನ್ನವೇ ವಿನೇಶ್
ಪೋಗಾಟ್ರನ್ನು ಪ್ಯಾರಿಸ್ ಒಲಿಂಪಿಕ್ಸ್ (Paris Olympic) ನಿಂದ ಅತಿಯಾದ ತೂಕದ ಕಾರಣದಿಂದಾಗಿ ಅನರ್ಹಗೊಳಿಸಲಾಗಿದೆ.
ಮಾಹಿತಿ ಪ್ರಕಾರ, ವಿನೇಶ್ 100 ಗ್ರಾಂ ಹೆಚ್ಚಿದ್ದ ಕಾರಣ ಇಂದು ಸಂಜೆ ನಡೆಯಬೇಕಾಗಿದ್ದ ಫೈನಲ್ ಪಂದ್ಯದಿಂದ ಅನರ್ಹಗೊಳಿಸಲಾಗಿದೆ. ಸದ್ಯ ಈ
ವಿಚಾರ ಭಾರತೀಯರಿಗಂತೂ ಭಾರೀ ಬೇಸರ ತರಿಸಿದೆ.